ಉಚಿತ ಕರೆಗಾಗಿ ಟಾಪ್ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು
ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ಸ್ಮಾರ್ಟ್‌ಫೋನ್‌ಗಳ ಸಂಪರ್ಕದಲ್ಲಿಯೇ ಇರುತ್ತಾರೆ. ಆದರೆ ನಿಮ್ಮ ಫೋನ್‌ನಲ್ಲಿ ಮಹತ್ವಪೂರ್ಣ ಫೀಚರ್‌ಗಳಿದ್ದು ನೀವು ಸಕ್ರಿಯ ಯೋಜನೆಯನ್ನು ನಿಗದಿಪಡಿಸಿಲ್ಲ ಎಂದಾದಲ್ಲಿ ನಿಮ್ಮ ಫೋನ್ ನಿಷ್ಪ್ರಯೋಜಕ ಎಂದೆನಿಸುತ್ತದೆ. ನೀವು ಸಮೀಪದ ವೈಫೈ ಬಳಿಯಲ್ಲಿದ್ದರೆ ಈ ಎಲ್ಲಾ ಸೌಲಭ್ಯಗಳನ್ನು ಆರಾಮವಾಗಿ ಬಳಸಿಕೊಳ್ಳಬಹುದು. ಆದರೆ ಸೇವೆಗಳಿಗೆ ಪಾವತಿಸದೆಯೇ ಫೋನ್ ಅನ್ನು ಬಳಸುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಓದಿರಿ: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಫೋನ್‌ಗಳ ಮೇಲೆ ಅಮೆಜಾನ್ ಆಫರ್ ಮೇಳ
ವೃಥಾ ಸೇವೆಗಳಿಗೆ ದುಡ್ಡು ಸುರಿಯದೇ ನಿಮ್ಮ ಫೋನ್‌ನಲ್ಲಿರುವ ಸೌಲಭ್ಯಗಳನ್ನೇ ಬಳಸಿಕೊಂಡು ನಿಮ್ಮ ಫೋನ್‌ನಿಂದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಅದಕ್ಕಾಗಿ ಕೆಳಗಿನ ಸ್ಲೈಡರ್‌ಗಳಲ್ಲಿ ಅಪ್ಲಿಕೇಶನ್‌ಗಳ ಮಾಹಿತಿಗಳನ್ನು ನೀಡುತ್ತಿದ್ದು ಇದು ನಿಮಗೆ ಪ್ರಯೋಜನಕಾರಿಯಾಗಲಿದೆ.
ನೀವು ಯಾವುದೇ ಓಎಸ್‌ನಲ್ಲಿರಿ, ವಾಟ್ಸಪ್‌ನಲ್ಲಿ ಸಂದೇಶ ರವಾನೆಯನ್ನು ತ್ವರಿತವಾಗಿ ಮಾಡಬಹುದಾಗಿದೆ. ಎಲ್ಲಾ ಅಪ್ಲಿಕೇಶನ್ ಸ್ಟೋರ್‌ಗಳಲ್ಲಿ ಕೂಡ ವಾಟ್ಸಾಪ್ ಲಭ್ಯವಿದೆ. ನಿಮ್ಮ ಫೋನ್‌ನಲ್ಲಿ ಒಮ್ಮೆ ನೀವು ಸ್ಕೈಪ್ ಅನ್ನು ಅಳವಡಿಸಿಕೊಂಡರೆ ಆಯಿತು, ವೈಫೈ ಸೌಲಭ್ಯವನ್ನು ಪಡೆದುಕೊಳ್ಳಿ. ಇದರಿಂದ ಸಂದೇಶ, ಕರೆ ಮತ್ತು ವೀಡಿಯೊ ಚಾಟ್ ಅನ್ನು ಮಾಡಬಹುದಾಗಿದೆ. ಐಓಎಸ್ 8.0 ಅಥವಾ ಮೇಲ್ಮಟ್ಟದ ಆವೃತ್ತಿಯ ಚಾಲನೆ ನಿಮ್ಮ ಫೋನ್‌ನಲ್ಲಿ ನಡೆಯುತ್ತಿರಬೇಕು. ಇದರಿಂದ ವೈಫೈ ಕಾಲಿಂಗ್ ಅನ್ನು ಐಫೋನ್‌ನಲ್ಲಿ ನಡೆಸಬಹುದಾಗಿದೆ. ನಿಮ್ಮ ಸೆಟ್ಟಿಂಗ್ಸ್ > ಫೋನ್ > ವೈಫೈ ಕಾಲಿಂಗ್ ಇಲ್ಲಿ ಈ ಫೀಚರ್ ಅನ್ನು ಸಕ್ರಿಯಗೊಳಿಸಬಹುದಾಗಿದೆ. ಉಚಿತ ಕರೆಗಳು, ಪಠ್ಯ ಸಂದೇಶ ರವಾನೆ ಮತ್ತು ಚಿತ್ರ ಹಂಚಿಕೆಯನ್ನು ವೈಬರ್ ಮೂಲಕ ನಡೆಸಬಹುದಾಗಿದೆ. ಯಾವುದೇ ರಿಜಿಸ್ಟ್ರೇಶನ್, ಆಹ್ವಾನ ಇದಕ್ಕೆ ಬೇಕಾಗಿಲ್ಲ. ತನ್ನ ಸೇವೆಗಳಲ್ಲಿ ಉಚಿತ ಕರೆ ಸೇವೆಯನ್ನು ಒದಗಿಸಿರುವ ಫೇಸ್‌ಬುಕ್ ಮೆಸೆಂಜರ್ ಉತ್ತಮ ಸೇವೆಗಳನ್ನು ಈ ಅಪ್ಲಿಕೇಶನ್‌ನಿಂದ ಪಡೆದುಕೊಳ್ಳಬಹುದಾಗಿದೆ. ಸ್ಕೈಪ್‌ಗೆ ಗೂಗಲ್ ಪ್ರತಿಯಾಗಿ ನೀಡಿದ ಉತ್ತರವಾಗಿದೆ ಈ ಸೇವೆ. ಸಂದೇಶ ರವಾನೆ ಮಾತ್ರವಲ್ಲದೆ ಉಚಿತ ಕರೆಗಳನ್ನು ಇದರ ಮೂಲಕ ನಿಮಗೆ ಮಾಡಬಹುದಾಗಿದೆ. ಹತ್ಉ ಜನರೊಂದಿಗೆ ವೀಡಿಯೊ ಚಾಟ್ ಕೂಡ ನಡೆಸಬಹುದಾಗಿದೆ. ಈ ಅಪ್ಲಿಕೇಶನ್ ಬಳಸಿಕೊಂಡು ಉಚಿತ ಕರೆ ಮತ್ತು ಸಂದೇಶ ರವಾನೆ ಸೌಲಭ್ಯವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಗುಂಪು ಕರೆ ಸೌಲಭ್ಯವಿದ್ದು ಒಂದೇ ಸಮಯಕ್ಕೆ ಬಹುಜನರಿಗೆ ಕರೆಮಾಡಲು ಬಯಸುವವರು ಇದನ್ನು ಬಳಸಬಹುದಾಗಿದೆ. ಆಂಡ್ರಾಯ್ಡ್‌ನಲ್ಲಿ ಉಚಿತ ಕರೆಗಳನ್ನು ಮಾಡಲು ಲೈನ್ ಇನ್ನೊಂದು ಉಚಿತ ಅಪ್ಲಿಕೇಶನ್ ಆಗಿದೆ. 400 ಮಿಲಿಯನ್ ಬಳಕೆದಾರರು ಇದರ ಸೇವೆಯನ್ನು ಬಳಸಿಕೊಳ್ಳುತ್ತಿದ್ದು ಸ್ವಲ್ಪ ದರದಲ್ಲೇ ಲೈನ್ ಬಳಸದೇ ಇರುವವರಿಗೂ ಕರೆಯನ್ನು ಮಾಡಬಹುದಾಗಿದೆ. ಇದು ಸ್ಥಳೀಯ ನಿಬಂಧನೆಗಳನ್ನು ಹೊಂದಿದೆ. ನೀವು ಯುಎಸ್ ಅಥವಾ ಕೆನಡಾ ವಾಸಿಗಳಾಗಿದ್ದಲ್ಲಿ ಯಾರಿಗೆ ಬೇಕಾದರೂ ಇದನ್ನು ಬಳಸಿ ಕರೆಮಾಡಬಹುದಾಗಿದೆ. ಆದರೆ ಈ ಸ್ಥಳದಿಂದ ಹೊರಗಿದ್ದವರಿಗೆ ನೀವು ಕರೆಮಾಡುತ್ತಿದ್ದೀರಿ ಎಂದಾದಲ್ಲಿ ಸ್ವಲ್ಪ ಹಣವನ್ನು ಪಾವತಿಸಬೇಕಾಗುತ್ತದೆ. ಮೇಲೆ ತಿಳಿಸಿರುವ ಅಪ್ಲಿಕೇಶನ್‌ಗಳು ಹೊಂದಿರುವ ಅದೇ ಫೀಚರ್‌ಗಳನ್ನು ಈ ಮೆಸೆಂಜರ್ ಒಳಗೊಂಡಿದೆ. ನಿಂಬೂಸ್ ಬಳಕೆದಾರರಿಗೆ ನೀವು ಉಚಿತ ಕರೆಗಳನ್ನು ಈ ಅಪ್ಲಿಕೇಶನ್ ಮುಖಾಂತರ ಮಾಡಬಹುದಾಗಿದೆ. ಆದರೆ ಉತ್ತಮ ಧ್ವನಿ ಗುಣಮಟ್ಟವನ್ನು ಈ ಅಪ್ಲಿಕೇಶನ್ ಹೊಂದಿಲ್ಲ.
ವಾಟ್ಸಾಪ್

ಸ್ಕೈಪ್

ಐಫೋನ್ ವೈಫೈ ಕಾಲಿಂಗ್

ವೈಬರ್

ಫೇಸ್‌ಬುಕ್ ಮೆಸೆಂಜರ್

ಗೂಗಲ್ ಹ್ಯಾಂಗ್‌ಔಟ್ಸ್

ಟಾಕ್

ಲೈನ್

ಮ್ಯಾಜಿಕ್ ಆಪ್

ನಿಂಬೂಸ್ ಮೆಸೆಂಜರ್


Click it and Unblock the Notifications








