Home
Apps

ನಿಮ್ಮ ಆಂಡ್ರೊಯಿಡ್ ಮತ್ತು ಐಒಎಸ್ ಡಿವೈಜ್ ಫುಲ್ ಚಾರ್ಜ್ ಆದಾಗ ಎಚ್ಚರಿಸುವ 5 ಆಪ್‍ಗಳು

ಈ ಆಪ್‍ಗಳು ನಿಮಗೆ ಬ್ಯಾಟರಿ ತುಂಬಿದಾಗ ಎಚ್ಚರಿಸುವುದಷ್ಟೆ ಅಲ್ಲಾ ಇನ್ನೂ ಹೆಚ್ಚಿನದನ್ನು ಮಾಡುತ್ತದೆ.

By Prateeksha

ನಾವು ಸ್ವಲ್ಪ ಚಾರ್ಜ್ ಆದ ಕೂಡಲೆ ಮೊಬೈಲ್ ಹತ್ತಿರ ಓಡಲು ನೋಡುತ್ತೇವೆ ಇಲ್ಲಾ ಚಾರ್ಜ್ ಮಾಡುವಾಗ ಉಪಯೋಗಿಸುತ್ತೇವೆ. ಇದು ಫೋನಿನ ಜೀವಿತಾವಧಿಯ ಮೇಲೆ ಪರಿಣಾಮ ಬೀರುತ್ತದೆ.

ನಿಮ್ಮ ಆಂಡ್ರೊಯಿಡ್ ಮತ್ತು ಐಒಎಸ್ ಡಿವೈಜ್ ಫುಲ್ ಚಾರ್ಜ್ ಆದಾಗ ಎಚ್ಚರಿಸುವ 5 ಆಪ್‌

ಲಿ-ಒನ್ ಬ್ಯಾಟರಿಗಳ ಚಾರ್ಜಿಂಗ್ ಸೈಕಲ್ ಗೆ ಮಿತಿ ಇದ್ದರೂ ಕೂಡ ಅದರೊಳಗೆ ಪರಮಾವಧಿ ಮುಟ್ಟಿದ ಮೇಲೆ ಬ್ಲೊಕ್ ಮಾಡುವ ಸಕ್ರ್ಯುಟ್ ಇದ್ದರೂ ಕೂಡ ಫೋನ್ 100% ಆದ ಕೂಡಲೆ ತೆಗೆಯುವುದು ಒಳ್ಳೆಯದು.

ಓದಿರಿ: ರಿಲಾಯನ್ಸ್ 'ಜಿಯೋಟಿವಿ' ಆಪ್‌ ಓಪನ್‌ ಸಮಸ್ಯೆ ಪರಿಹಾರಕ್ಕಾಗಿ ಈ ಸಲಹೆಗಳು

ಆದರೆ ಸಮಸ್ಯೆಯೇನೆಂದರೆ ಫೋನ್ ಸಂಪೂರ್ಣ ಚಾರ್ಜ್ ಆಗಿದೆಯೆಂದು ತಿಳಿಯುವುದು ಹೇಗೆ, ಇಲ್ಲಿವೆ ಅದಕ್ಕಾಗಿ ಈ ಕೆಳಗಿನ 5 ಆಪ್‍ಗಳು ನಿಮಗೆ ಸಹಾಯ ಮಾಡಲು.

ಫುಲ್ ಅಲಾರ್ಮ್ ಆಂಡ್ ಥೆಫ್ಟ್ ಅಲಾರ್ಮ್

ಫುಲ್ ಅಲಾರ್ಮ್ ಆಂಡ್ ಥೆಫ್ಟ್ ಅಲಾರ್ಮ್

ಇದು ಪ್ರಚಲಿತ ದಲ್ಲಿರುವ ಆಪ್. ಈ ಆಪ್ ನಿಮ್ಮ ಫೋನ್ ಅನ್ನು ರಕ್ಷಿಸುತ್ತದೆ ಜೊತೆಗೆ ಥೆಫ್ಟ್ ಅಲಾರ್ಮ್ ಮೂಲಕ ಆಂಡ್ರೊಯಿಡ್ ಫೋನ್ ಅನ್ನು ಓವರ್ ಚಾರ್ಜಿಂಗ್ ಆಗುವುದನ್ನು ತಡೆಯುತ್ತದೆ. ಇದು ಸ್ವಲ್ಪ ದೊಡ್ಡದೆನುವಷ್ಟು 16.4 ಎಮ್‍ಬಿ ಸೈಜ್ ಹೊಂದಿದೆ. ಗೂಗಲ್ ಸ್ಟೋರ್ ನಿಂದ ಸುಲಭವಾಗಿ ಡೌನ್‍ಲೋಡ್ ಮಾಡಬಹುದು. ನೀವು ಮಾಡಬೇಕಾಗಿರುವುದಿಷ್ಟೆ ಆಪ್ ನ ಟೊಗಲ್ ಬಟನ್ ಎನೆಬಲ್ ಮಾಡಿ ಚಾರ್ಜ್ ಮಾಡುವಾಗ. ಚಾರ್ಜ್ ಆದ ಮೇಲೆ ಅಲಾರ್ಮ್ ಹೊಡೆಯುತ್ತದೆ. ಆಗ ಸ್ಟೊಪ್ ಅಲಾರ್ಮ್ ಬಟನ್ ಒತ್ತಿದರೆ ಸಾಕು.

ಬ್ಯಾಟರಿ 100% ಅಲಾರ್ಮ್

ಬ್ಯಾಟರಿ 100% ಅಲಾರ್ಮ್

ಈ ಆಪ್ ಬ್ಯಾಟರಿ ಚಾರ್ಜಿಂಗ್ ಸ್ಟೇಟಸ್ ನ ಅಪ್‍ಡೇಟ್ಸ್ ಅನ್ನು ನೀಡುತ್ತದೆ ನೋಟಿಫಿಕೇಷನ್ ಮತ್ತು ಹೋಮ್ ಸ್ಕ್ರೀನ್ ವಿಡ್ಜೆಟ್ ಮೂಲಕ. ಇದರ ಸರಳ ಡಿಜೈನ್ ನಿಂದಾಗಿ ಬಳಕೆದಾರ ಇದರ ದನಿಯನ್ನು ಬೇಕಾದಂತೆ ಸರಿಪಡಿಸಿಕೊಳ್ಳಬಹುದು, ಬೇಕಾದ ಧ್ವನಿ ಹಾಕಬಹುದು,ಅಲರ್ಟ್ ಅನ್ನು ಸ್ನೂಜ್ ಮೇಲೆ ಇಡಬಹುದು. ಜಾಹಿರಾತುಗಳನ್ನು ತೆಗೆದುಹಾಕಬಹುದು. ಇದರ ಬೆಲೆ ಕೇವಲ 60 ರೂ. ಗಳು. ನಿಮಗೆ ಬ್ಯಾಟರಿ ಮಟ್ಟ ಎಷ್ಟು ಬೇಕೆಂದು ನಿಗದಿ ಪಡಿಸಿದರೆ ಅಲ್ಲಿ ತಲುಪಿದಾಗ ಎಚ್ಚರಿಸುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬ್ಯಾಟರಿ ಫುಲ್ ಅಲಾಮ್

ಬ್ಯಾಟರಿ ಫುಲ್ ಅಲಾಮ್

ಈ ಆಪ್ 4 ಚೆಕ್‍ಬೊಕ್ಸ್ ನೊಂದಿಗೆ ಬರುತ್ತದೆ. ಈ ಚೆಕ್‍ಬೊಕ್ಸ್ ಬಳಕೆದಾರನಿಗೆ ನೋಟಿಫೈರ್ ನಿಲ್ಲಿಸಲು, ನೊಟಿಫೈ ಅಲರ್ಟ್ ಮಾಡಲೊಂದು ದನಿ ಬ್ಯಾಟರಿ 100% ಮುಟ್ಟಿದಾಗ, ಅಲರ್ಟ್ ನೋಟಿಫಿಕೇಷನ್ ಕಳಿಸಲು ಮತ್ತು ವೈಬ್ರೇಷನ್ ಎನೆಬಲ್/ಡಿಸೆಬಲ್ ಮಾಡಲು. ಈ ಆಪ್ ನ ಸೈಜ್ 5.95 ಎಮ್‍ಬಿ ಇದ್ದು ಉಚಿತವಾಗಿ ಗೂಗಲ್ ಸ್ಟೋರ್ ನಿಂದ ಡೌನ್‍ಲೋಡ್ ಮಾಡಬಹುದು.

ಬ್ಯಾಟರಿ ಎಚ್‍ಡಿ+

ಬ್ಯಾಟರಿ ಎಚ್‍ಡಿ+

ಈ ಆಪ್ ಕೇವಲ ಆಪಲ್ ಉತ್ಪನ್ನಗಳಾದ ಐಫೋನ್, ಐಪೊಡ್ ಅಥವಾ ಐಪ್ಯಾಡ್ ಗಳಿಗಾಗಿ. ಇದರ ಡಿಜೈನ್ ನಿಂದಾಗಿ ಎಷ್ಟು ಗಂಟೆ ಉಳಿದಿದೆ ಸಂಗೀತ ಕೇಳಲು, ವೀಡಿಯೊ ನೋಡಲು, ಫೋನಿನಲ್ಲಿ ಮಾತನಾಡಲು ಇತ್ಯಾದಿ ಎಂದು ಗೊತ್ತಾಗುತ್ತದೆ.

ಫುಲ್ ಚಾರ್ಜ್ ಅಲರ್ಟ್ ವಿತ್ ಸಿಡಿಯಾ

ಫುಲ್ ಚಾರ್ಜ್ ಅಲರ್ಟ್ ವಿತ್ ಸಿಡಿಯಾ

ಈ ಆಪ್ ನಿಂದ ನಿಮ್ಮ ಐಒಎಸ್ ಡಿವೈಜ್ ಅನ್ನು ವೈಬ್ರೇಟ್ ಅಥವಾ ಶಬ್ದದ ಮೂಲಕ ಎಚ್ಚರಿಕೆ ಪಡೆಯಬಹುದು ಬ್ಯಾಟರಿ ಪೂರ್ತಿಯಾದಾಗ. ಒಂದಕ್ಕಿಂತ ಹೆಚ್ಚಿನ ವಿಜುವಲ್ ಮತ್ತು ಅಲರ್ಟ್ ಕೊಂಬಿನೇಷನ್ ಇಟ್ಟುಕೊಳ್ಳಬಹುದು. ಈ ಆಪ್ ಉಪಯೋಗಿಸಲು ಜೇಲ್‍ಬ್ರೋಕನ್ ಐಒಎಸ್ ಡಿವೈಜ್ ಬೇಕು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here are the apps that can protect your phone and Android smartwatch battery from overcharging.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+