ರಿಲಾಯನ್ಸ್ 'ಜಿಯೋಟಿವಿ' ಆಪ್‌ ಓಪನ್‌ ಸಮಸ್ಯೆ ಪರಿಹಾರಕ್ಕಾಗಿ ಈ ಸಲಹೆಗಳು

By Suneel
|

ರಿಲಾಯನ್ಸ್ ಜಿಯೋ 4G ಸಿಮ್ ಬಳಕೆದಾರರು ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ. ಜಿಯೋಟಿವಿ(JioTV) ಆಪ್‌ನಿಂದ ಲೈವ್‌ ಟಿವಿ ಚಾನೆಲ್‌ಗಳನ್ನು ನೋಡಬಹುದು. ಈ ಆಪ್‌ ಒಂದು ರೀತಿಯಲ್ಲಿ, ಗೇಮ್ ಚೇಂಜರ್‌ ಆಗಿದ್ದು, ಮೊಬೈಲ್‌ ಅಥವಾ ಟ್ಯಾಬ್ಲೆಟ್‌ಗಳಲ್ಲಿ ಟಿವಿ ಚಾನೆಲ್‌ಗಳನ್ನು ಆನ್‌ಲೈನ್‌ನಲ್ಲಿ ನೋಡಲು ಉತ್ತಮ ಅವಕಾಶ ನೀಡಿದೆ.

ಜಿಯೋ ಬಳಕೆದಾರರು ಹೆಚ್ಚಿದಂತೆಲ್ಲಾ ಜಿಯೋಟಿವಿ ಆಪ್‌ ಬಳಕೆದಾರರು ಸ್ಟ್ರೀಮಿಂಗ್ ಪ್ರೊಸೆಸ್‌ನಲ್ಲಿ ಹೆಚ್ಚು ಸಮಸ್ಯೆ ಅನುಭವ ಪಡೆಯುತ್ತಿದ್ದಾರೆ. ಸ್ಟ್ರೀಮಿಂಗ್ ಮಾಡುವ ಸಂದರ್ಭದಲ್ಲಿ 'Unable to process your request please try again later' ಅಥವಾ 'Please wait while we load JioTV for you' ಎಂಬ ಪಾಪಪ್ ನೋಟಿಫಿಕೇಶನ್ ಪಡೆಯುತ್ತಿದ್ದಾರೆ. ಅಂದಹಾಗೆ ಗ್ರಾಹಕರು, ಜಿಯೋಟಿವಿ ಆಪ್‌ ಆಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಸರಿಯಾಗಿ ಓಪನ್‌ ಆಗದೇ ಸಂಪೂರ್ಣ ದೂರನ್ನು ಹೊಂದಿದ್ದಾರೆ.

ರಿಲಾಯನ್ಸ್ ಜಿಯೋ ಸಿಮ್ ಮೆನೆಗೆ ಡೆಲಿವರಿ ಪಡೆಯುವುದು ಹೇಗೆ?

ಜಿಯೋಟಿವಿ ಸರಿಯಾಗಿ ವರ್ಕ್‌ ಆಗದ ಸಮಸ್ಯೆಯನ್ನು ನೀವು ಹೊಂದಿದ್ದಲ್ಲಿ, ಚಿಂತಿಸದಿರಿ. ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಜಿಯೋಟಿವಿ ಸ್ಟ್ರೀಮಿಂಗ್ ಸಮಸ್ಯೆಗೆ ಪರಿಹಾರವನ್ನು ನೀಡುತ್ತಿದೆ. ಈ ಟ್ರಿಕ್ಸ್‌ನಿಂದ ಟಿವಿ ಚಾನೆಲ್‌ ಸ್ಟ್ರೀಮಿಂಗ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಲೈವ್‌ ಚಾನೆಲ್‌ ನೋಡಬಹುದು. ಟ್ರಿಕ್ಸ್‌ಗಳಿಗಾಗಿ ಮುಂದೆ ಓದಿರಿ.

ಇಂಟರ್ನೆಟ್ ಕನೆಕ್ಟ್ ಪಡೆಯಿರಿ

ಇಂಟರ್ನೆಟ್ ಕನೆಕ್ಟ್ ಪಡೆಯಿರಿ

ಮೊದಲಿಗೆ ಜಿಯೋ ಮೊಬೈಲ್ ಇಂಟರ್ನೆಟ್ ಅಥವಾ ಜಿಯೋಫೈ ಹಾಟ್‌ಸ್ಪಾಟ್‌ಗೆ ಸಂಪರ್ಕ ಪಡೆಯಿರಿ.

ನಿಖರ ವೇಗದ ಪರಿಶೀಲನೆ ನಡೆಸಿ

ನಿಖರ ವೇಗದ ಪರಿಶೀಲನೆ ನಡೆಸಿ

ನಿಖರ ವೇಗದ ಪರಿಶೀಲನ ನಡೆಸಿ. ಕೆಲವು ವೇಳೆ ಕಡಿಮೆ ವೇಗದ ಇಂಟರ್ನೆಟ್ ಸಂಪರ್ಕದಿಂದ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಇಂಟರ್ನೆಟ್ ಸಂಪರ್ಕ ವೇಗ ಪರಿಶೀಲನೆಗಾಗಿ ಸ್ಪೀಡ್‌ ಟೆಸ್ಟ್‌ ಆಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿ ಬಳಸಿ ಅಥವಾ ಯಾವುದಾದರೂ ಆನ್‌ಲೈನ್‌ ಟೂಲ್‌ ಬಳಸಿ.

ಅಪ್‌ಡೇಟ್‌ ಚೆಕ್‌ ಮಾಡಿ

ಅಪ್‌ಡೇಟ್‌ ಚೆಕ್‌ ಮಾಡಿ

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಆಗಾಗ ಜಿಯೋಟಿವಿ ಅಪ್‌ಡೇಟ್‌ ಚೆಕ್‌ ಮಾಡಿ. ಹೊಸ ಅಪ್‌ಡೇಟ್ ಇದ್ದಲ್ಲಿ, ಕಡ್ಡಾಯವಾಗಿ ಆಪ್ ಅಪ್‌ಡೇಟ್‌ ಮಾಡಿ.

ಜಿಯೋಟಿವಿ ಆಪ್‌ ಡಾಟಾ ಮತ್ತು ಕ್ಯಾಶೆ ಕ್ಲಿಯರ್ ಮಾಡಿ ಡಿವೈಸ್ ರೀಸ್ಟಾಟ್ ಮಾಡಿ

ಜಿಯೋಟಿವಿ ಆಪ್‌ ಡಾಟಾ ಮತ್ತು ಕ್ಯಾಶೆ ಕ್ಲಿಯರ್ ಮಾಡಿ ಡಿವೈಸ್ ರೀಸ್ಟಾಟ್ ಮಾಡಿ

ತದನಂತರವು ಸಹ ನಿಮಗೆ ಜಿಯೋಟಿವಿ ಆಪ್‌ನಿಂದ ಸಮಸ್ಯೆ ಇದ್ದಲ್ಲಿ ಈ ಪ್ರಿಕ್ರಿಯೆ ಫಾಲೋ ಮಾಡಿ.
Settings-App Setting-JioTV-Clear the app data and cache ಕ್ಲಿಕ್‌ ಮಾಡಿ ನಂತರ ಡಿವೈಸ್ ರೀಸ್ಟಾರ್ಟ್‌ ಮಾಡಿ.

ಆಪ್‌ ಓಪನ್ ಮಾಡಿ ಮತ್ತು ಸೈನ್‌ ಇನ್‌ ನೌ ಸ್ಕಿಪ್‌ ಮಾಡಿ

ಆಪ್‌ ಓಪನ್ ಮಾಡಿ ಮತ್ತು ಸೈನ್‌ ಇನ್‌ ನೌ ಸ್ಕಿಪ್‌ ಮಾಡಿ

ಡಿವೈಸ್‌ ರೀಸ್ಟಾರ್ಟ್‌ ಮಾಡಿದ ನಂತರ, ಆಪ್‌ ಓಪನ್ ಮಾಡಿ ನಂತರ 'ಸೈನ್‌ ಇನ್‌ ನೌ' ಎಂಬುದನ್ನು ಸ್ಕಿಪ್‌ ಮಾಡಿ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಜಿಯೋಟಿವಿ ಆಪ್‌ನಲ್ಲಿ ಲೈವ್‌ ಚಾನೆಲ್‌ ಅನ್ನು ಯಾವುದೇ ಸಮಸ್ಯೆ ಇಲ್ಲದೇ ನೋಡಬಹುದು.
ನಂತರವು ಸಹ ಸ್ಟ್ರೀಮಿಂಗ್ ಸಮಸ್ಯೆ ಇದ್ದಲ್ಲಿ, ಅದು ಸರ್ವರ್‌ ಸಮಸ್ಯೆ ಆಗಿರುತ್ತದೆ. ಇಂತಹ ಸಮಸ್ಯೆಗಳು ಕೆಲವು ಸಮಯದ ನಂತರ ಸರಿಯಾಗುತ್ತವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
5 Easy Steps to Resolve Reliance JioTV App Not Opening Issue. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X