ಪ್ರಯಾಣಿಕರ ಗಮನಕ್ಕೆ; ಈ ಆಪ್ಸ್‌ ಮೂಲಕ ಸುಲಭವಾಗಿ ರೈಲು ಟಿಕೆಟ್ ಬುಕ್ ಮಾಡಬಹುದು!

|

ಪ್ರಿಯ ಪ್ರಯಾಣಿಕರೇ ನೀವೇನಾದರೂ ರೈಲಿನಲ್ಲಿ ಪ್ರಯಾಣ ಮಾಡಲು ಯೋಜಿಸುತ್ತಿದ್ದೀರಾ?..ಸುಲಭವಾಗಿ ಟ್ರೈನ್ ಟಿಕೆಟ್‌ ಬುಕ್ ಮಾಡಲು ಅತ್ಯುತ್ತಮ ಅಪ್ಲಿಕೇಶನ್ ಹುಡುಕುತ್ತಿದ್ದೀರಾ? ಹೌದಾಗಿದ್ದರೇ, ಈ ನಿಮ್ಮ ಎಲ್ಲ ಹುಡುಕಾಟಕ್ಕೂ ಈಗ ಬ್ರೇಕ್ ಹಾಕಿಬಿಡಿ. ಏಕೆಂದರೇ ನಿಮ್ಮ ಬಳಿ ಇರುವ ಸ್ಮಾರ್ಟ್‌ಫೋನ್‌ ಮೂಲಕವೇ ಅತೀ ಸುಲಭವಾಗಿ ರೈಲು ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ.

ಸ್ಮಾರ್ಟ್‌ಫೋನ್

ಹೌದು, ಸ್ಮಾರ್ಟ್‌ಫೋನ್ ಮೂಲಕವೇ ತ್ವರಿತವಾಗಿ ಆನ್‌ಲೈನ್‌ನಲ್ಲಿ ಟ್ರೈನ್ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ. ಹಾಗೆಯೇ ಟಿಕೆಟ್ ಬುಕ್ ಮಾಡಲು ಹಲವು ಅಪ್ಲಿಕೇಶನ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹಾಗೂ ಆಪಲ್‌ ಆಪ್‌ ಸ್ಟೋರ್ ಲಭ್ಯ ಇವೆ. ಪ್ರಯಾಣಿಕರು ಟ್ರೈನ್ ಟಿಕೆಟ್ ಬುಕ್ ಮಾಡಿದ ನಂತರ PNR ಸ್ಟೇಟಸ್‌ ಹಾಗೂ ಟ್ರೈನ್‌ ಸ್ಟೇಟಸ್‌ ಸಹ ಚೆಕ್ ಮಾಡಬಹುದಾದ ಆಯ್ಕೆಗಳು ಇವೆ. ಹಾಗಾದರೇ ಸ್ಮಾರ್ಟ್‌ಫೋನ್ ಮೂಲಕ ಟ್ರೈನ್‌ ಟಿಕೆಟ್ ಬುಕ್ ಮಾಡಲು ಬೆಸ್ಟ್‌ ಅನಿಸುವ ಕೆಲವು ಅಪ್ಲಿಕೇಶನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

IRCTC ರೈಲ್ ಕನೆಕ್ಟ್ (IRCTC Rail Connect)

IRCTC ರೈಲ್ ಕನೆಕ್ಟ್ (IRCTC Rail Connect)

IRCTC ಆಪ್‌ ಇಲಾಖೆಯ ಅಧಿಕೃತ ರೈಲು ಬುಕಿಂಗ್ ಅಪ್ಲಿಕೇಶನ್ ಆಗಿದೆ. ಈ ಆಪ್‌ ಆಂಡ್ರಾಯ್ಡ್ ಮತ್ತು ಐಓಎಸ್‌ ಬಳಕೆದಾರರಿಬ್ಬರಿಗೂ ಲಭ್ಯವಿದೆ. ಅಪ್ಲಿಕೇಶನ್ ಸರಳ ವಿನ್ಯಾಸ ಮತ್ತು ಬಳಸಲು ಸುಲಭವಾದ ಇಂಟರ್ಫೇಸ್ ಅನ್ನು ಹೊಂದಿದೆ. ಸೀಟ್ ಲಭ್ಯತೆ, ತತ್ಕಾಲ್ ರೈಲು ಟಿಕೆಟ್, PNR ಸ್ಟೇಟಸ್‌ ಮತ್ತು ಆನ್‌ಲೈನ್‌ನಲ್ಲಿ ರೈಲು ಟಿಕೆಟ್ ಕಾಯ್ದಿರಿಸಲು ಈ ಅಪ್ಲಿಕೇಶನ್ ಉತ್ತಮ ಅನಿಸುತ್ತದೆ.

Ixigo ಟ್ರೈನ್ಸ್

ಪ್ರಮುಖ ರೈಲು ಟಿಕೆಟ್ ಬುಕಿಂಗ್ ಆಪ್ಸ್‌ಗಳ ಪೈಕಿ Ixigo ಅಪ್ಲಿಕೇಶನ್‌ ಸಹ ಒಂದಾಗಿದೆ. ಈ ಆಪ್‌ನಲ್ಲಿ ಪ್ರಯಾಣಿಕರು ರೈಲು ಟಿಕೆಟ್ ಕಾಯ್ದಿರಿಸಬಹುದಾಗಿದೆ. ಟ್ರೈನ್ ಲೈವ್ ಸ್ಟೇಟಸ್‌ ಟ್ರಾಕಿಂಗ್ ಮಾಡಬಹುದಾಗಿದ್ದು, ಹಾಗೆಯೇ PNR ಸ್ಟೇಟಸ್‌ ಸಹ ಪರಿಶೀಲಿಸಬಹುದಾಗಿದೆ. ಇನ್ನು ಈ ಆಪ್‌ ಆಂಡ್ರಾಯ್ಡ್ ಮತ್ತು ಐಫೋನ್ ಎರಡೂ ಡಿವೈಸ್‌ಗಳಲ್ಲಿಯೂ ಲಭ್ಯವಿದೆ. ಹಾಗೆಯೇ ಈ ಆಪ್‌ನಲ್ಲಿ ವಿಮಾನಗಳು, ಬಸ್ಸುಗಳು, ಹೋಟೆಲ್‌ಗಳು ಮತ್ತು ಕ್ಯಾಬ್‌ಗಳನ್ನು ಸಹ ಕಾಯ್ದಿರಿಸಬಹುದು.

ರೈಲು ಯಾತ್ರಾ (RailYatra)

ರೈಲು ಯಾತ್ರಾ (RailYatra)

ರೈಲು ಯಾತ್ರಾ ಆಪ್‌ ರೈಲು ಟಿಕೆಟ್ ಕಾಯ್ದಿರಿಸಲು ಭಾರತೀಯ ರೈಲ್ವೆಯ ಮತ್ತೊಂದು ಅತ್ಯುತ್ತಮ ಅಪ್ಲಿಕೇಶನ್ ಆಗಿದೆ. ಈ ರೈಲು ಯಾತ್ರಾ ಆಪ್‌ ಅಪ್ಲಿಕೇಶನ್ ಐಫೋನ್, ಆಂಡ್ರಾಯ್ಡ್ ಮತ್ತು ವಿಂಡೋಸ್‌ನಲ್ಲಿ ಲಭ್ಯವಿದೆ. ಸೀಟ್ ಲಭ್ಯತೆ, ಟಿಕೆಟ್ ಶುಲ್ಕ ಮತ್ತು ಟ್ರೈನ್ ಲೈವ್ ಸ್ಟೇಟಸ್‌ ಜೊತೆಗೆ ಟ್ರೈನ್ ಆಗಮನ / ನಿರ್ಗಮನವನ್ನು ಪರಿಶೀಲಿಸಲು ಈ ಅಪ್ಲಿಕೇಶನ್ ಅನ್ನು ಬಳಸಬಹುದು. ಇನ್ನು ಈ ಆಪ್‌ನಲ್ಲಿ ಸ್ಟೇಷನ್ ಹತ್ತಿರದ ಆಸ್ಪತ್ರೆಯ ಬಗ್ಗೆ ಮಾಹಿತಿ ಪಡೆಯಲು, ಮೆಡಿಕಲ್ ಎಮರ್ಜೆನ್ಸಿ ಎಂಬ ವಿಶೇಷ ಆಯ್ಕೆ ಇದೆ.

ಕನ್ಫರ್ಮ್ ಟಿಕೆಟ್ (ConfirmTkt)

ಕನ್ಫರ್ಮ್ ಟಿಕೆಟ್ (ConfirmTkt)

ಕನ್ಫರ್ಮ್ ಟಿಕೆಟ್ ರೈಲ್ವೆಯ ಇಲಾಖೆಯ ಅಧಿಕೃತ IRCTCಯ ಪಾಲುದಾರ ರೈಲು ಅಪ್ಲಿಕೇಶನ್ ಆಗಿದೆ. ಈ ಆಪ್‌ ಸಹ ಎಲ್ಲಾ ಅಗತ್ಯ ಫೀಚರ್ಸ್‌/ಸೇವೆಗಳ ಆಯ್ಕೆ ಹೊಂದಿದೆ. ಈ ಆಪ್‌ನಲ್ಲಿ ಸುಲಭವಾಗಿ IRCTC ಟಿಕೆಟ್‌ ಹಾಗೂ ತತ್ಕಾಲ್ ಟಿಕೆಟ್‌ಗಳ ಸರ್ಚ್ ಮಾಡಬಹುದು. ರನ್ನಿಂಗ್ ಟ್ರೈನಿನ ಲೈವ್ ಸ್ಟೇಟಸ್‌ ಚೆಕ್ ಮಾಡಬಹುದಾಗಿದೆ. ಹಾಗೆಯೇ ರೈಲು ವೇಳಾಪಟ್ಟಿಯನ್ನು ತೋರಿಸುವ ಆಯ್ಕೆಯನ್ನು ಇದು ಒಳಗೊಂಡಿದೆ.

ಮೇಕ್ ಮೈ ಟ್ರಿಪ್- (MakeMyTrip)

ಮೇಕ್ ಮೈ ಟ್ರಿಪ್- (MakeMyTrip)

ಒಂದೇ ಆಪ್‌ನಲ್ಲಿ ರೈಲು, ಹೋಟೆಲ್, ಫ್ಲೈಟ್, ಬಸ್, ಕ್ಯಾಬ್ ಮತ್ತು ಇನ್ನೂ ಹೆಚ್ಚಿನ ಸೇವೆಗಳನ್ನು ಕಾಯ್ದಿರಿಸುವುದಕ್ಕೆ ಮೇಕ್‌ ಮೈ ಟ್ರಿಪ್ ಆಪ್‌ ಒಂದು ಉತ್ತಮ ನಿಲುಗಡೆ. ಈ ಆಪ್‌ನಲ್ಲಿ ರೈಲು ಟಿಕೆಟ್ ಬುಕ್ ಮಾಡಲು ಆಯ್ಕೆ ಜೊತೆಗೆ ಟ್ರೈನ್ ವೇಳಾಪಟ್ಟಿಗಳನ್ನು ಸಹ ಪರಿಶೀಲಿಸಬಹುದು. ಹಾಗೆಯೇ ಟ್ರೈನ್‌ ಲೈವ್ ರನ್ನಿಂಗ್ ಸ್ಟೇಟಸ್‌ ಅನ್ನು ತಿಳಿಯಬಹುದಾಗಿದೆ. PNR ಸ್ಟೇಟಸ್‌ ಸಹ ಚೆಕ್ ಮಾಡಬಹುದಾಗಿದೆ.

Best Mobiles in India

English summary
5 Best Apps For Booking Train Tickets Online 2021.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X