Home
Apps

ಮಾಹಿತಿ ಸರ್ಚ್ ಮಾಡಲು ಗೂಗಲ್‌ ಬಿಟ್ರೇ, ಇಲ್ಲಿವೇ ನೋಡಿ 5 ಬೆಸ್ಟ್‌ ಬ್ರೌಸರ್‌ಗಳು!

ಪ್ರಸ್ತುತ ಯಾವುದೇ ಮಾಹಿತಿ ತಿಳಿಯ ಬೇಕಿದ್ದರೇ ಎಲ್ಲರಿಗೂ ಮೊದಲಿಗೆ ನೆನಪಾಗುವುದೇ ಗೂಗಲ್ ಸರ್ಚ್‌ ಇಂಜಿನ್/ಕ್ರೋಮ್‌. ಬಳಕೆದಾರರು ಕ್ರೋಮ್‌ ಸರ್ಚ್‌ನಲ್ಲಿ ಏನೇ ಮಾಹಿತಿ ಬಗ್ಗೆ ಸರ್ಚ್‌ ಮಾಡಿದರೂ ಗೂಗಲ್‌ ಫಲಿತಾಂಶ ಒದಗಿಸುತ್ತದೆ. ಗೂಗಲ್‌ನಂತೆ ಕಾರ್ಯ ನಿರ್ವಹಿಸುವ ಇತರೆ ಹಲವು ವೆಬ್‌ ಬ್ರೌಸರ್‌ಗಳು ಇವೆ. ವೆಬ್‌ ಬ್ರೌಸರ್‌ಗಳು ಸೇರಿದಂತೆ ಹಲವು ಥರ್ಡಪಾರ್ಟಿ ಆಪ್‌ಗಳ ಕಣ್ಣು ಬಳಕೆದಾರರ ಸರ್ಚ್‌ ಮೇಲಿರುತ್ತದೆ. ಆದರೆ ಗೂಗಲ್ ಹೆಚ್ಚು ಬಳಕೆಯಲ್ಲಿ ಕಾಣಿಸಿಕೊಂಡಿದೆ.

ಗೂಗಲ್‌

ಹೌದು, ಸದ್ಯ ಫೋನ್ ಬಳಕೆದಾರರಿಗೆ ಹಲವಾರು ಸರ್ಚ್/ವೆಬ್‌ ಬ್ರೌಸರ್‌ ಆಪ್‌ಗಳು ಲಭ್ಯ ಇವೆ. ಆದರೆ ಅನೇಕ ಬಳಕೆದಾರರ ಗೂಗಲ್‌ ಸಂಸ್ಥೆಯ ಕ್ರೋಮ್‌ ಆಪ್‌ ಅನ್ನು ಬಳಕೆ ಮಾಡುತ್ತಾರೆ. ಆದರೆ ಗೂಗಲ್‌ ಸರ್ಚ್ ಇಂಜಿನ್/ಕ್ರೋಮ್‌ ಹೊರತುಪಡಿಸಿ ಇತರೆ ಹಲವು ವೆಬ್‌ ಬ್ರೌಸರ್‌ಗಳು ತಮ್ಮದೇ ಆದ ಬಳಕೆದಾರರ ವರ್ಗವನ್ನು ಹೊಂದಿವೆ. ಕೆಲವು ವೆಬ್‌ ಬ್ರೌಸರ್‌ಗಳು ಜಾಹಿರಾತು ಮುಕ್ತವಾಗಿದ್ದು, ಮತ್ತೆ ಕೆಲವು ವೆಬ್‌ ಬ್ರೌಸರ್‌ಗಳು ಬಳಕೆದಾರರ ಖಾಸಗಿತನ ಕಾಪಾಡುವ ಫೀಚರ್ಸ್‌ಗಳನ್ನು ಪಡೆದಿವೆ. ಹಾಗಾದರೇ ಗೂಗಲ್ ಹೊರತು ಪಡಿಸಿ ಜನಪ್ರಿಯತೆ ಪಡೆದಿರುವ ಇತರೆ 5 ವೆಬ್‌ ಬ್ರೌಸರ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸಫಾರಿ ವೆಬ್‌ ಬ್ರೌಸರ್‌

ಸಫಾರಿ ವೆಬ್‌ ಬ್ರೌಸರ್‌

ಸಫಾರಿ ವೆಬ್‌ಬ್ರೌಸರ್‌ ಆಪಲ್‌ ಸಂಸ್ಥೆಯು ಅಭಿವೃದ್ದಿ ಪಡೆಸಿದ್ದು, ಬಳಕೆದಾರರಿಂದ ಉತ್ತಮ ಸರ್ಚ್‌ ಇಂಜಿನ ಎನಿಸಿಕೊಂಡಿದೆ. ಗೂಗಲ್ ವೆಬ್‌ ಬ್ರೌಸರ್‌ಗಿಂತ ಉತ್ತಮ ಸುರಕ್ಷತೆಯ ಆಯ್ಕೆಗಳನ್ನು ಒಳಗೊಂಡಿದೆ. ಆಯಂಟಿ ಫಿಂಗರ್‌ಪ್ರಿಂಟ್ ಪ್ರೊಟೆಕ್ಷನ್‌ ಆಯ್ಕೆ ಇದ್ದು, ಜಾಹಿರಾತು ಕಂಪನಿಗಳು ನಿಮ್ಮ ಸರ್ಚ್‌ ಮಾಹಿತಿಯನ್ನು ಟ್ರಾಕ್‌ ಮಾಡುವುದನ್ನು ತಡೆಯಲಿದೆ. ನಿಮ್ಮ ಇ-ಮೇಲ್‌ ಹೈಡ್‌ ಮಾಡುವ ಆಯ್ಕೆ ಸಹ ಇದೆ.

ಬ್ರೇವ್‌ ವೆಬ್‌ ಬ್ರೌಸರ್‌

ಬ್ರೇವ್‌ ವೆಬ್‌ ಬ್ರೌಸರ್‌

ಬ್ರೇವ್‌ ಸಾಫ್ಟ್‌ವೇರ್‌ Inc ನವರು ಈ ವೆಬ್‌ ಬ್ರೌಸರ್‌ ಅನ್ನು ಅಭಿವೃದ್ದಿಪಡೆಸಿದ್ದು, ಇದೊಂದು ಓಪೆನಸೋರ್ಸ್‌ ಬ್ರೌಸರ್‌ ಆಗಿದೆ. ಜಾಹಿರಾತು ಬ್ಲಾಕ್‌ ಮಾಡುವ ಮತ್ತು ಟ್ರಾಕ್‌ ಮಾಡುವುದನ್ನು ತಡೆಯುವ ಆಯ್ಕೆ ಇದೆ. ಎಷ್ಟು ಜಾಹಿರಾತುದಾರರು ಮತ್ತು ಟ್ರಾಕರ್ಸ್‌ಗಳು ಬ್ಕಾಕ್‌ ಆಗಿದ್ದಾರೆ ಎಂಬುದನ್ನು ನೋಡಬಹುದಾಗಿದೆ. ಪ್ರೈವೆಸಿ ಸೆಟ್ಟಿಂಗ್‌ನಲ್ಲಿ ಆಯ್ಕೆಗಳಿವೆ.

ಎಪಿಕ್ ವೆಬ್‌ ಬ್ರೌಸರ್‌

ಎಪಿಕ್ ವೆಬ್‌ ಬ್ರೌಸರ್‌

ಎಪಿಕ್‌ ವೆಬ್‌ ಬ್ರೌಸರ್‌ ಸುರಕ್ಷತೆಗೆ ಬೆಸ್ಟ್‌ ವೆಬ್‌ ಬ್ರೌಸರ್ ಎನಿಸಿಕೊಂಡಿದೆ. ಈ ಬ್ರೌಸರ್‌ ಸರ್ಚ್‌ನ ಅಡ್ರೆಸ್‌ ಬಾರ್‌ ಮತ್ತು ಯುಆರ್‌ಎಲ್‌ ಟ್ರಾಕಿಂಗ್ ತೆಗೆದು ಹಾಕಲಿದ್ದು, ಹೀಗಾಗಿ ಬಳಕೆದಾರರ ಮಾಹಿತಿಯನ್ನು ಥರ್ಡ್‌ಪಾರ್ಟಿ ಸೈಟ್‌ಗಳು ಟ್ರಾಕ್‌ ಮಾಡಲು ಆಗದು. ಈ ವೆಬ್‌ ಬ್ರೌಸರ್‌ ಬಳಕೆದಾರರ ಪಾಸ್‌ವರ್ಡ್‌ಗಳನ್ನು ಸೇವ್ ಮಾಡಿಕೊಳ್ಳುವುದಿಲ್ಲ. ಇದನ್ನು ಹಿಡೆನ್‌ ರಿಫ್ಲೇಕ್ಸ್‌ ಸಾಫ್ಟ್‌ವೇರ್‌ ಸಂಸ್ಥೆ ಅಭಿವೃದ್ದಿ ಮಾಡಿದೆ.

ಟಾರ್‌(Tor) ವೆಬ್‌ ಬ್ರೌಸರ್‌

ಟಾರ್‌(Tor) ವೆಬ್‌ ಬ್ರೌಸರ್‌

ಈ ಟಾರ್‌ ವೆಬ್‌ ಬ್ರೌಸರ್‌ ಫೈರ್‌ಫೋಕ್ಸ್‌ ಸಂಸ್ಥೆಯದಾಗಿದ್ದು, 2002ರಲ್ಲಿ ಶುರುವಾಗಿದೆ. ಈ ವೆಬ್‌ ಬ್ರೌಸರ್‌ನಲ್ಲಿ ಬಳಕೆದಾರರು ಏನಾದರೂ ಸರ್ಚ್‌ ಮಾಡಿದರೇ ಕುಕ್ಕಿಸ್‌ಗಳು ಆಟೋಮ್ಯಾಟಿಕ್ ಆಗಿ ಡಿಲೀಟ್‌ ಆಗಲಿವೆ. ಥರ್ಡ್‌ಪಾರ್ಟಿ ಸೈಟ್‌ಗಳು ಟ್ರಾಕ್‌ ಮಾಡದಂತೆ ಆಗಲಿದೆ. ಡಾರ್ಕ್‌ವೆಬ್‌ ಆಕ್ಸಸ್‌ ಮಾಡುವ ಸೌಲಭ್ಯವು ಈ ವೆಬ್‌ ಬ್ರೌಸರ್‌ನಲ್ಲಿ ಬಳಕೆದಾರರಿಗೆ ಸಿಗಲಿದೆ.

ಫೈರ್‌ಫೊಕ್ಸ್‌ ವೆಬ್‌ ಬ್ರೌಸರ್‌

ಫೈರ್‌ಫೊಕ್ಸ್‌ ವೆಬ್‌ ಬ್ರೌಸರ್‌

ಮೊಜಿಲ್ಲಾ ಕಾರ್ಪೊರೇಶನ ಸಂಸ್ಥೆಯು ಫೈರ್‌ಫೊಕ್ಸ್‌ ವೆಬ್‌ ಬ್ರೌಸರ್ ಅನ್ನು ಅಭಿವೃದ್ದಿ ಮಾಡಿದೆ. ಟ್ರಾಕ್‌ ಮಾಡುವ ಮೂಲಗಳನ್ನು ಬ್ಲಾಕ್‌ ಮಾಡುವ ಆಯ್ಕೆಯು ಈ ವೆಬ್‌ ಬ್ರೌಸರ್‌ನಲ್ಲಿ ಬಳಕೆದಾರಿಗೆ ಲಭ್ಯ. ಫೈರ್‌ಫೊಕ್ಸ್‌ನಲ್ಲಿ ಬಳಕೆದಾರರ ಆನ್‌ಲೈನ್‌ ಸರ್ಚ್‌ ಸುರಕ್ಷಿತವಾಗಿರಲಿದ್ದು, ಜಾಹಿರಾತು ಕಂಪನಿಗಳಿಗೆ ಮಾಹಿತಿ ಸೋರಿಕೆಯಾಗದು. ಕಂಟೆಟ್‌ ಬ್ಲಾಕ್‌ ಆಯ್ಕೆಯು ಸಹ ಇದೆ.

Best Mobiles in India

English summary
5 Best Google Chrome Alternatives You Should Use.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+