Home
Apps

ಆನ್‌ಲೈನ್‌ ಶಾಪಿಂಗ್‌ ಮಾಡಲು ಇಲ್ಲಿವೇ ನೋಡಿ ಬೆಸ್ಟ್‌ ವೆಬ್‌ಸೈಟ್‌ಗಳು!

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಶಾಪಿಂಗ್ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದು, ಅನೇಕ ವೆಬ್‌ಸೈಟ್‌ಗಳು ಆನ್‌ಲೈನ್‌ ಮಾರುಕಟ್ಟೆ ಸೃಷ್ಠಿಸಿವೆ. ಅದರಲ್ಲಿಯೂ ಕೋವಿಡ್‌ ನಂತರ ಆನ್‌ಲೈನ್‌ ಮೂಲಕ ಖರೀದಿ ಮಾಡುವ ಅಭ್ಯಾಸ ಅಧಿಕವಾಗಿದೆ. ಅನೇಕ ಇ ಕಾಮರ್ಸ್‌ ತಾಣಗಳು ಇದ್ದರೂ, ಕೆಲವು ಮಾತ್ರ ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿವೆ.

ಹೌದು, ಪ್ರಸ್ತುತ ಹಲವು ಆನ್‌ಲೈನ್‌ ಇ ಕಾಮರ್ಸ್‌ ತಾಣಗಳು ಇವೆ. ಅದಾಗ್ಯೂ, ಅಮೆಜಾನ್‌, ಫ್ಲಿಪ್‌ಕಾರ್ಟ್‌, ಮಿಶೋ ಹಾಗೂ ಮಂತ್ರಾ ನಂತಹ ಕೆಲವು ಇ ಕಾಮರ್ಸ್‌ ತಾಣಗಳಲ್ಲಿ ಹೆಚ್ಚಿನ ಜನರ ಶಾಪಿಂಗ್ ಮಾಡುತ್ತಾರೆ. ಹಾಗಾದರೇ ಸದ್ಯ ಹೆಚ್ಚು ಜನಪ್ರಿಯತೆ ಪಡೆದಿರುವ 5 ಆನ್‌ಲೈನ್‌ ಇ ಕಾಮರ್ಸ್‌ ತಾಣಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಆನ್‌ಲೈನ್‌ ಶಾಪಿಂಗ್‌ ಮಾಡಲು ಇಲ್ಲಿವೇ ನೋಡಿ ಬೆಸ್ಟ್‌ ವೆಬ್‌ಸೈಟ್‌ಗಳು!

ಅಮೆಜಾನ್‌ (Amazon) ಇ ಕಾಮರ್ಸ್‌

ಅಮೆಜಾನ್‌ ತಾಣವು ಇ ಕಾಮರ್ಸ್‌ ದಿಗ್ಗಜ ಸಂಸ್ಥೆಯಾಗಿ ಕಾಣಿಸಿಕೊಂಡಿದ್ದು, ಈ ತಾಣದಲ್ಲಿ ಎಲ್ಲ ಬಗೆಯ ಉತ್ಪನ್ನಗಳು ಖರೀದಿಗೆ ಲಭ್ಯ. ಫ್ಯಾಶನ್‌, ಎಲೆಕ್ಟ್ರಾನಿಕ್, ಲ್ಯಾಪ್‌ಟಾಪ್‌, ಮೊಬೈಲ್, ಸ್ಟೇಷನರಿ ಸೇರಿದಂತೆ ಇತರೆ ಎಲ್ಲ ವಿಭಾಗದ ವಸ್ತುಗಳು ದೊರೆಯುತ್ತವೆ. ಹಬ್ಬ, ವಿಶೇಷ ದಿನಗಳಂದು ಏನಾದರೊಂದು ವಿಶೇಷ ಆಫರ್‌ ಲಭ್ಯ ಮಾಡಿತ್ತದೆ. ಅಲ್ಲದೇ ಇದರಲ್ಲಿ ಫ್ರಿ ಡೆಲಿವರಿ ಆಯ್ಕೆಗಳು ಇದೆ.

ಇನ್ನು ಅಮೆಜಾನ್‌ ಇ ಕಾಮರ್ಸ್‌ ತಾಣವು ಟಿಕೆಟ್‌ ಬುಕಿಂಗ್, ಅಮೆಜಾನ್‌ ಪೇ ಯುಪಿಐ ಪೇಮೆಂಟ್‌ ಸೇವೆ, ಟೂ ವಿಲ್ಹರ್ ಬುಕಿಂಗ್, ಗ್ರೋಜರಿ ಉತ್ಪನ್ನಗಳ ಖರೀದಿಗೂ ಅತ್ಯುತ್ತಮ ವೇದಿಕೆಯಾಗಿ ಕಾಣಿಸಿಕೊಂಡಿದೆ. ಹಾಗೆಯೇ ಇದರಲ್ಲಿ ಭಿನ್ನ ಮಾದರಿಯ ಪೇಮೆಂಟ್‌ ಆಯ್ಕೆಗಳನ್ನು ಒದಗಿಸಿದ್ದು,

ಫ್ಲಿಪ್‌ಕಾರ್ಟ್ (Flipkart) ಇ ಕಾಮರ್ಸ್‌

ಫ್ಲಿಪ್‌ಕಾರ್ಟ್ ಸಹ ದಿಗ್ಗಜ ಇ ಕಾಮರ್ಸ್‌ ವೆಬ್‌ಸೈಟ್‌ಗಳ ಪೈಕಿ ಒಂದಾಗಿದೆ. ಈ ತಾಣವು ಸಹ ಗ್ರಾಹಕರನ್ನು ಸೆಳೆಯಲು ಒಂದಿಲ್ಲೊಂದು ರಿಯಾಯಿತಿ ನೀಡುತ್ತಾ ಮುನ್ನಡೆದಿದೆ. ಈ ವೆಬ್‌ಸೈಟ್‌ನಲ್ಲಿಯೂ ಎಲ್ಲ ಬಗೆಯ ಉತ್ಪನ್ನಗಳು ಗ್ರಾಹಕರ ಖರೀದಿಗೆ ಲಭ್ಯವಾಗಲಿವೆ. ಕೆಲವು ವಿಶೇಷ ದಿನಗಳಲ್ಲಿ, ಹಬ್ಬದ ಸಂದರ್ಭಗಳಲ್ಲಿ ಅಧಿಕ ರಿಯಾಯಿತಿ/ ಡಿಸ್ಕೌಂಟ್‌ ನೀಡುತ್ತದೆ.

ಅದೇ ರೀತಿ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಟ್ರಾವೆಲ್‌ ಟಿಕೆಟ್ ಬುಕಿಂಗ್, ಅಮೆಜಾನ್‌ ಪೇ ಯುಪಿಐ ಪೇಮೆಂಟ್‌ ಸೇವೆ ಪಡೆಯಬಹುದು, ಟೂ ವಿಲ್ಹರ್ ಬುಕಿಂಗ್ ಆಯ್ಕೆ ಇದೆ, ಗ್ರೋಜರಿ ಉತ್ಪನ್ನಗಳಿಗೂ ಉತ್ತಮ. ಹಾಗೆಯೇ ಇದರಲ್ಲಿ ಭಿನ್ನ ಮಾದರಿಯ ಪೇಮೆಂಟ್‌ ಆಯ್ಕೆಗಳನ್ನು ಒದಗಿಸಿದೆ.

ಮೀಶೋ (Meesho) ಇ ಕಾಮರ್ಸ್‌ ವೆಬ್‌ಸೈಟ್‌

ಮೀಶೋ ಇ ಕಾಮರ್ಸ್‌ ತಾಣವು ಇತ್ತೀಚಿಗೆ ಜನಪ್ರಿಯ ಪಡೆದ ತಾಣಗಳಲ್ಲಿ ಒಂದಾಗಿದೆ. ಇದರಲ್ಲಿ ಖರೀದಿದಾರರು ಎಲ್ಲ ಬಗೆಯ ಉತ್ಪನ್ನಗಳನ್ನು ಖರೀದಿ ಮಾಡಲು ಅವಕಾಶ ಇದೆ. ಹಾಗೆಯೇ ಮೀಶೋ ತಾಣವು ಸಣ್ಣ ಪುಟ್ಟ ಉತ್ಪಾದಕರನ್ನೂ ತಮ್ಮ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಪ್ರೋತ್ಸಾಹಿಸುತ್ತದೆ ಜೊತೆಗೆ ವೇದಿಕೆ ಸಹ ಕಲ್ಪಿಸುತ್ತದೆ. ಇನ್ನು ಈ ವೆಬ್‌ಸೈಟ್‌ನಲ್ಲಿಯೂ ಗ್ರಾಹಕರಿಗೆ ಬೊಂಬಾಟ್‌ ಡಿಸ್ಕೌಂಟ್‌, ರಿಯಾಯಿತಿ ಕೊಡುಗೆಗಳು ಲಭ್ಯ ಆಗಲಿವೆ.

ಟಾಟಾ ಕ್ಲಿಕ್‌ (Tata CLIQ) ಇ ಕಾಮರ್ಸ್‌

ದೇಶದ ಟಾಟಾ ಗ್ರೂಪ್‌ ಒಡೆತನದ ಟಾಟಾ ಕ್ಲಿಕ್‌ ಇ ಕಾಮರ್ಸ್‌ ತಾಣವು ಇತ್ತೀಚಿಗೆ ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಈಗಾಗಲೇ ಆನ್‌ಲೈನ್‌ ಶಾಪಿಂಗ್‌ ಪ್ರಿಯರ ಗಮನ ಸೆಳೆದಿದೆ. ಈ ಪ್ಲಾಟ್‌ಫಾರ್ಮ್‌ ಫ್ಯಾಷನ್, ಗೃಹೋಪಯೋಗಿ ಉತ್ಪನ್ನಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು ಸೇರಿದಂತೆ ಇತರೆ ವಿಭಾಗಗಳ ಉತ್ಪನ್ನಗಳನ್ನು ತನ್ನ ಮಾರುಕಟ್ಟೆಯಲ್ಲಿ ಲಭ್ಯ ಮಾಡಿದೆ. ಇದರಲ್ಲಿಯೂ ಗ್ರಾಹಕರು ರಿಯಾಯಿತಿ ಕೊಡುಗೆ ಪಡೆಯಬಹುದು.

ಮೈಂತ್ರಾ (Myntra) ವೆಬ್‌ಸೈಟ್‌

ಈ ವೆಬ್‌ಸೈಟ್‌ ಫ್ಯಾಶನ್‌ ಉತ್ಪನ್ನಗಳಿಗೆ ಒಂದು ಅತ್ಯುತ್ತಮ ಖರೀದಿಯ ತಾಣವಾಗಿದೆ. ಇದರಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗಾಗಿ ಭಿನ್ನ ಶ್ರೇಣಿಯ ಬಟ್ಟೆಯ ಆಯ್ಕೆಗಳನ್ನು ಕಾಣಬಹುದಾಗಿದೆ. ಇದರಲ್ಲಿ ಬಟ್ಟೆಗಳನ್ನು ಹೊರತುಪಡಿಸಿ ಸುಗಂಧ ದ್ರವ್ಯಗಳು, ಸನ್‌ಗ್ಲಾಸ್‌ ಉತ್ಪನ್ನಗಳು ಮತ್ತು ಇತರೆ ಫ್ಯಾಶನ್‌ ಉತ್ಪನ್ನಗಳನ್ನು ಖರೀದಿ ಮಾಡಬಹುದಾಗಿದೆ. ಇನ್ನು ಈ ತಾಣವು ಕೆಲವು ಆಯ್ದ ಉತ್ಪನ್ನಗಳಿಗೆ ಆಕರ್ಷಕ ರಿಯಾಯಿತಿ ಲಭ್ಯ ಮಾಡುತ್ತದೆ.

Best Mobiles in India

English summary
5 Best Online Shopping Apps in India 2024. check apps list is here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+