ಆ್ಯಂಡ್ರಾಯ್ಡ್ ಟ್ಯಾಬ್ಲೆಟ್ಟಿನಲ್ಲಿ ವಾಟ್ಸಪ್ ಉಪಯೋಗಿಸುವುದು ಹೇಗೆ?
ಕೆಲವು ದಿನಗಳ ಹಿಂದೆ ಆ್ಯಪಲ್ ಐಪ್ಯಾಡ್ ನಲ್ಲಿ ವಾಟ್ಸಪ್ ಉಪಯೋಗಿಸುವುದರ ಬಗ್ಗೆ ತಿಳಿಸಿದ್ದೆವು. ಪ್ರಪಂಚದ ಅತ್ಯಂತ ಜನಪ್ರಿಯ ಮೆಸೇಜಿಂಗ್ ತಂತ್ರಾಂಶವು ಆ್ಯಂಡ್ರಾಯ್ಡ್ ಮತ್ತು ಐ.ಒ.ಎಸ್ ಎರಡರಲ್ಲೂ ಲಭ್ಯ. ಆದರೆ ಟ್ಯಾಬ್ಲೆಟ್ / ಐಪ್ಯಾಡ್ ಅನ್ನು ಬೆಂಬಲಿಸುವ ಅಧಿಕೃತ ಆವೃತ್ತಿ ಇಲ್ಲಿಯವರೆಗೆ ಲಭ್ಯವಿಲ್ಲ.

ಓದಿರಿ: ಇಂಟರ್ನೆಟ್ ಆಕ್ಸೆಸ್ ಇಲ್ಲದೇ 'ಓಲಾ' ಕ್ಯಾಬ್ ಬುಕ್ ಮಾಡುವುದು ಹೇಗೆ?
ಆದರೂ ನಿಮ್ಮ ಆ್ಯಂಡ್ರಾಯ್ಡ್ ಫೋನಿನಲ್ಲಿ ವಾಟ್ಸಪ್ ಅನ್ನು ಉಪಯೋಗಿಸಬಹುದು! ಕೆಳಗಿನ ಹಂತಗಳನ್ನು ಪಾಲಿಸಿ.
ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 1: ನಿಮ್ಮ ಟ್ಯಾಬ್ಲೆಟ್ಟಿನಲ್ಲಿ ಬ್ರೌಸರ್ ತೆರೆಯಿರಿ.
ಆ್ಯಂಡ್ರಾಯ್ಡ್ ಟ್ಯಾಬ್ಲೆಟ್ಟಿನಲ್ಲಿ ವಾಟ್ಸಪ್ ಉಪಯೋಗಿಸಲು ಬ್ರೌಸರ್ ತೆರೆಯಿರಿ.

ಹಂತ 2: web.whatsapp.comಗೆ ಭೇಟಿ ಕೊಡಿ.
ಸರ್ಚ್ ಬಾರ್ ನಲ್ಲಿ web.whatsapp.com ಅನ್ನು ಟೈಪಿಸಿ. ವಾಟ್ಸಪ್ಪಿನ ಅಧಿಕೃತ ವೆಬ್ ಪುಟಕ್ಕೆ ನೀವು ಹೋಗುತ್ತೀರಿ. ಕಾರಣ ವೆಬ್ ಆವೃತ್ತಿಯನ್ನು ಪಿಸಿ/ಮ್ಯಾಕ್ ಗಷ್ಟೇ ತಯಾರಿಸಲಾಗಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 3: ಡೆಸ್ಕ್ ಟಾಪ್ ಸೈಟ್ ಅನ್ನು ಕೋರಿಕೊಳ್ಳಿ.
ಅಧಿಕೃತ ವಾಟ್ಸಪ್ ವೆಬ್ ಪುಟಕ್ಕೆ ಹೋದ ನಂತರ. ಬಲ ಮೇಲ್ತುದಿಯಲ್ಲಿರುವ ಮೂರು ಲಂಬ ಚುಕ್ಕೆಗಳ ಮೇಲೆ ಕ್ಲಿಕ್ಕಿಸಿ. ಕೆಳಗೆ ಸ್ಕ್ರಾಲ್ ಮಾಡಿದಾಗ ರಿಕ್ವೆಷ್ಟ್ ಡೆಸ್ಕ್ ಟಾಪ್ ಆಯ್ಕೆ ಕಾಣುತ್ತದೆ. ಅದರ ಮೇಲೆ ಕ್ಲಿಕ್ಕಿಸಿ.

ಹಂತ 4: ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ.
ಈಗ ನಿಮ್ಮ ಸ್ಮಾರ್ಟ್ ಫೋನಿನಲ್ಲಿ ವಾಟ್ಸಪ್ ತೆರೆದು ಟ್ಯಾಬ್ಲೆಟ್ಟಿನಲ್ಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ.
ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 5: ಖುಷಿಯಾಗಿ ಮೆಸೇಜು ಮಾಡಿ.
ಮೇಲಿನ ಎಲ್ಲಾ ಹಂತಗಳನ್ನು ನೀವು ಸರಿಯಾಗಿ ಪಾಲಿಸಿದ್ದರೆ ನಿಮ್ಮ ವಾಟ್ಸಪ್ ಸಂದೇಶಗಳು ಟ್ಯಾಬ್ಲೆಟ್ಟಿನಲ್ಲಿ ಮೂಡುತ್ತವೆ. ನಿಮ್ಮ ಗೆಳೆಯರೊಂದಿಗೆ, ಕುಟುಂಬದವರೊಂದಿಗೆ ಆ್ಯಂಡ್ರಾಯ್ಡ್ ಟ್ಯಾಬ್ಲೆಟ್ಟಿನಿಂದ ಮೆಸೇಜುಗಳನ್ನು ಕಳುಹಿಸಿರಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








