ಇಂಟರ್ನೆಟ್ ಆಕ್ಸೆಸ್ ಇಲ್ಲದೇ 'ಓಲಾ' ಕ್ಯಾಬ್‌ ಬುಕ್‌ ಮಾಡುವುದು ಹೇಗೆ?

By Suneel
|

ಡಿಜಿಟಲ್‌ ಇಂಡಿಯಾ ಅಭಿಯಾನದಿಂದ ದೈನಂದಿನ ಎಲ್ಲಾ ಸೇವೆಗಳು ಸಹ ಭಾರತದ ಜನತೆಗೆ ಸುಲಭವಾಗಿ ಉಚಿತವಾಗಿ ಸಿಗಲಿದೆ ಎಂದು ಎಲ್ಲರೂ ಸಹ ಹೇಳುತ್ತಾರೆ. ಆದರೆ ಹೆಸರಲ್ಲೇ ಇರುವ ಡಿಜಿಟಲ್‌ ಸೇವೆಗೆ ಹಣ ಪಾವತಿಸಬೇಕು ಎಂಬುದನ್ನು ಮರೆಯುವ ಹಾಗಿಲ್ಲ. ಅಂದಹಾಗೆ ಭಾರತದ ಅತಿದೊಡ್ಡ ಕ್ಯಾಬ್ ಸಂಗ್ರಹ ಸೇವೆಯ 'ಓಲಾ' ಕ್ಯಾಬ್‌ಬುಕ್‌ ಮಾಡುವ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಸ್ಮಾರ್ಟ್‌ಫೋನ್‌ನಲ್ಲಿ ಆಪ್‌ ಹೊಂದಿರುವವರು ಇಂಟರ್ನೆಟ್ ಕನೆಕ್ಷನ್‌ ಇಲ್ಲದಿದ್ದರೂ ಸಹ ಓಲಾ ಕ್ಯಾಬ್ ಬುಕ್‌ ಮಾಡಬಹುದು.

<strong>'ಓಲಾ</strong>'</a>(Ola) ತನ್ನ ಆಪ್‌ನಲ್ಲಿ ಹೊಸ <strong>ಆಪ್‌ಲೈನ್‌</strong> ಫೀಚರ್ ಅಭಿವೃದ್ದಿಪಡಿಸಿದ್ದು, ಪ್ರಯಾಣಿಕರು ಇಂಟರ್ನೆಟ್ ಕನೆಕ್ಷನ್‌ ಇಲ್ಲದಿದ್ದರೂ ಕ್ಯಾಬ್ ಬುಕ್‌ ಮಾಡಬಹುದು ಎಂದು ಹೇಳಿದೆ.  ಅಂದಹಾಗೆ ಇಂಟರ್ನೆಟ್ ಕನೆಕ್ಷನ್‌ ಇಲ್ಲದಿದ್ದರೂ <strong><a href=ಓಲಾ ಕ್ಯಾಬ್‌" title="'ಓಲಾ'(Ola) ತನ್ನ ಆಪ್‌ನಲ್ಲಿ ಹೊಸ ಆಪ್‌ಲೈನ್‌ ಫೀಚರ್ ಅಭಿವೃದ್ದಿಪಡಿಸಿದ್ದು, ಪ್ರಯಾಣಿಕರು ಇಂಟರ್ನೆಟ್ ಕನೆಕ್ಷನ್‌ ಇಲ್ಲದಿದ್ದರೂ ಕ್ಯಾಬ್ ಬುಕ್‌ ಮಾಡಬಹುದು ಎಂದು ಹೇಳಿದೆ. ಅಂದಹಾಗೆ ಇಂಟರ್ನೆಟ್ ಕನೆಕ್ಷನ್‌ ಇಲ್ಲದಿದ್ದರೂ ಓಲಾ ಕ್ಯಾಬ್‌" loading="lazy" width="100" height="56" />'ಓಲಾ'(Ola) ತನ್ನ ಆಪ್‌ನಲ್ಲಿ ಹೊಸ ಆಪ್‌ಲೈನ್‌ ಫೀಚರ್ ಅಭಿವೃದ್ದಿಪಡಿಸಿದ್ದು, ಪ್ರಯಾಣಿಕರು ಇಂಟರ್ನೆಟ್ ಕನೆಕ್ಷನ್‌ ಇಲ್ಲದಿದ್ದರೂ ಕ್ಯಾಬ್ ಬುಕ್‌ ಮಾಡಬಹುದು ಎಂದು ಹೇಳಿದೆ. ಅಂದಹಾಗೆ ಇಂಟರ್ನೆಟ್ ಕನೆಕ್ಷನ್‌ ಇಲ್ಲದಿದ್ದರೂ ಓಲಾ ಕ್ಯಾಬ್‌

ಇನ್ನು 2ಜಿ ನಲ್ಲೂ ಓಲಾ ಓಡಾಟಇನ್ನು 2ಜಿ ನಲ್ಲೂ ಓಲಾ ಓಡಾಟ

ಇಂಟರ್ನೆಟ್ ಕನೆಕ್ಷನ್‌ ಇಲ್ಲದೇ ಓಲಾ ಕ್ಯಾಬ್‌ ಬುಕ್‌ ಹೇಗೆ?

ಇಂಟರ್ನೆಟ್ ಕನೆಕ್ಷನ್‌ ಇಲ್ಲದೇ ಓಲಾ ಕ್ಯಾಬ್‌ ಬುಕ್‌ ಹೇಗೆ?

* ಈ ಫೀಚರ್ ಓಲಾ ಆಪ್‌ ಓಪನ್ ಆದ ತಕ್ಷಣ ಸ್ವಯಂಕೃತವಾಗಿ ಇಂಟರ್ನೆಟ್ ಕನೆಕ್ಷನ್‌ ಇಲ್ಲದಿದ್ದರೂ ವರ್ಕ್‌ ಆಗುತ್ತದೆ ಎಂದು ಓಲಾ ಹೇಳಿದೆ.

* ಬಳಕೆದಾರರು ತಮ್ಮ ಸ್ಥಳವನ್ನು (Current Location) ಓಲಾ ಆಪ್‌ನ ಜಿಪಿಎಸ್‌ ಮೂಲಕ, ಮುಂಚೆಯೇ ಲೋಡ್‌ ಆಗಿರುವ ಎಸ್‌ಎಂಎಸ್‌ಗಳ ಮೂಲಕ ಸುಲಭವಾಗಿ ಬುಕ್‌ ಮಾಡಬಹುದು.

ಇಂಟರ್ನೆಟ್ ಕನೆಕ್ಷನ್‌ ಇಲ್ಲದೇ ಓಲಾ ಕ್ಯಾಬ್‌ ಬುಕ್‌ ಹೇಗೆ?

ಇಂಟರ್ನೆಟ್ ಕನೆಕ್ಷನ್‌ ಇಲ್ಲದೇ ಓಲಾ ಕ್ಯಾಬ್‌ ಬುಕ್‌ ಹೇಗೆ?

* ಮೇಲಿನ ಹಂತಗಳನ್ನು ನಿರ್ವಹಿಸಿದ ನಂತರ ಬಳಕೆದಾರರು ಹತ್ತಿರದ ಕ್ಯಾಬ್‌ಗಳ ವಿವರಗಳನ್ನು ಪಡೆಯುತ್ತಾರೆ. ಈ ವಿವರದಲ್ಲಿ ಮೈಕೋ, ಮಿನಿ, ಪ್ರೈಮ್‌ ಮತ್ತು ಲಕ್ಸುರಿ ಕೆಟಗರಿ ಕ್ಯಾಬ್‌ಗಳ ವಿವರವು ಸಹ ಇರುತ್ತದೆ.

* ಬಳಕೆದಾರ ಒಮ್ಮೆ ರೈಡ್‌ ಅನ್ನು ಖಚಿತಪಡಿಸಿದರೆ, ನಂತರ ಡ್ರೈವರ್‌ ವಿವರದೊಂದಿಗೆ ರೈಡ್‌ ಖಚಿತದ ಬಗ್ಗೆ ಮತ್ತೊಮ್ಮೆ ಮೆಸೇಜ್‌ ಬರುತ್ತದೆ.

* ಬಳಕೆದಾರರು ಆಫ್‌ಲೈನ್‌ನಲ್ಲಿ ಓಲಾ ಕ್ಯಾಬ್‌ ಬುಕ್‌ ಮಾಡಿ ರೈಡ್‌ ಮಾಡಬಹುದು. ತದನಂತರ ಇಂಟರ್ನೆಟ್ ಅನ್ನು ಆನ್‌ ಮಾಡಿದರೆ ರೈಡ್‌ ಮಾಡಿದ ವಿವರ ಸ್ವಯಂಕೃತವಾಗಿ ಆಪ್‌ನಲ್ಲಿ ಸ್ಟೋರ್‌ ಆಗುತ್ತದೆ.

 ಓಲಾ ಕ್ಯಾಬ್‌ ಆಫ್‌ಲೈನ್‌ ಫೀಚರ್‌ ಎಲ್ಲೆಲ್ಲಿ ಲಭ್ಯ?

ಓಲಾ ಕ್ಯಾಬ್‌ ಆಫ್‌ಲೈನ್‌ ಫೀಚರ್‌ ಎಲ್ಲೆಲ್ಲಿ ಲಭ್ಯ?

ಪ್ರಸ್ತುತದಲ್ಲಿ ಓಲಾ ಆಪ್‌ನಲ್ಲಿ ಇಂಟರ್ನೆಟ್‌ ಕನೆಕ್ಷನ್‌ ಇಲ್ಲದೇ ಕ್ಯಾಬ್‌ ಬುಕ್ ಮಾಡುವ ಫೀಚರ್ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ ಲಭ್ಯವಿದೆ. ಮುಂದಿನ ದಿನಗಳಲ್ಲಿ 102 ಸಿಟಿಗಳಲ್ಲಿ ಫೀಚರ್‌ ಅನ್ನು ಜಾರಿಗೊಳಿಸುವ ಬಗ್ಗೆ ಓಲಾ ತಿಳಿಸಿದೆ.

ಓಲಾ ಆಪ್‌ ಹೊಸ ಫೀಚರ್

ಓಲಾ ಆಪ್‌ ಹೊಸ ಫೀಚರ್

ಅಂದಹಾಗೆ ಓಲಾ ಆಪ್‌ನ ಹೊಸ ಫೀಚರ್ ಭಾರತದಲ್ಲಿ ಎಲ್ಲೆಲ್ಲಿ ಕಡಿಮೆ ಗುಣಮಟ್ಟದ ಇಂಟರ್ನೆಟ್‌ ಸೇವೆ ಇದೆ ಎಂಬುದನ್ನು ಸಹ ಪತ್ತೆ ಹಚ್ಚುವ ಉದ್ದೇಶವನ್ನು ಹೊಂದಿದೆಯಂತೆ. ಅಲ್ಲದೇ ಇಂಡೋರ್ ಮತ್ತು ನಾಗ್ಪುರ'ಗಳಲ್ಲಿ ಪರೀಕ್ಷೆ ನಡೆಸಿದೆಯಂತೆ.

 ಆಫ್‌ಲೈನ್‌ ಫೀಚರ್‌ ಮತ್ತು ಹೊಸ ಫೀಚರ್‌ಗಳು

ಆಫ್‌ಲೈನ್‌ ಫೀಚರ್‌ ಮತ್ತು ಹೊಸ ಫೀಚರ್‌ಗಳು

ಓಲಾ ತನ್ನ ಹೊಸ ಆಫ್‌ಲೈನ್‌ ಕ್ಯಾಬ್‌ ಬುಕ್‌ ಫೀಚರ್‌ನಿಂದ ಉತ್ತಮ ಅನುಭವ ನೀಡಲಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ 3 ಹೊಸ ಫೀಚರ್‌ಗಳನ್ನು ಪರಿಚಯಿಸಿತ್ತು. ಓಲಾ ಹಾಟ್‌ಸ್ಪಾಟ್ ಐಡೆಂಟಿಟಿ ಎಂಟ್ರೀಸ್ ಮತ್ತು ಪ್ರಖ್ಯಾತ ಸ್ಥಳಗಳಾದ ಮಾಲ್‌, ಏರ್‌ಪೋರ್ಟ್ ಮತ್ತು ರೆಸಿಡೆಂಸಿಯಲ್‌ ಕಾಲೋನಿ ನಿರ್ಗಮನ, ಬಳಕೆದಾರರು ತಮ್ಮ ರೈಡ್‌ ಮಾರ್ಗವನ್ನು ಚಾಲಕರಿಗೆ ಶೇರ್‌ ಮಾಡುವ ಫೀಚರ್‌ಗಳು ಇತ್ತೀಚಿನ ಹೊಸ ಫೀಚರ್‌ಗಳಾಗಿವೆ.

Best Mobiles in India

Read more about:
English summary
You Can Now Book An Ola Cab Even Without Internet Access. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X