ಗ್ರಾಹಕರಿಗೆ ಗೊತ್ತಿರಬೇಕಾದ ಉಬರ್ ಡ್ರೈವರ್ ಆ್ಯಪ್ ನ ಐದು ವಿಶೇಷಣಗಳು.

|

ನಗರಗಳಲ್ಲಿ ಸಂಚರಿಸಲು ಕ್ಯಾಬ್ ಬುಕ್ ಮಾಡುವುದಕ್ಕಿರುವ ಅತ್ಯುತ್ತಮ ಸೇವೆಗಳಲ್ಲಿ ಉಬರ್ ಕೂಡ ಒಂದು. ನಿಮಿಷಗಳಲ್ಲಿ ಪ್ರಯಾಣಿಕರಿಗೆ ಕ್ಯಾಬ್ ಸಿಗುತ್ತದೆ, ಗೆಳೆಯರೊಂದಿಗೆ ಹಣವನ್ನು ಹಂಚಿಕೊಳ್ಳಬಹುದು, ಬೇಕಾದ ಸಮಯಕ್ಕೆ ಕ್ಯಾಬ್ ಬರುವಂತೆ ಮಾಡಬಹುದು, ಉಬರ್ ಬಳಸದವರು ಡ್ರೈವರ್ ಗೆ ಹಣ ಕೊಟ್ಟು ಪಯಣಿಸುವ ಕೋರಿಕೆಯನ್ನೂ ಮುಂದಿಡಬಹುದು.

ಗ್ರಾಹಕರಿಗೆ ಗೊತ್ತಿರಬೇಕಾದ ಉಬರ್ ಡ್ರೈವರ್ ಆ್ಯಪ್ ನ ಐದು ವಿಶೇಷಣಗಳು.

ಆದರೆ ಉಬರ್ ಆ್ಯಪ್ ನಲ್ಲಿ ಕೆಲವು ದುರ್ಬಲತೆಗಳೂ ಇದೆ. ಇದು ಮೂಲತಃ ಡ್ರೈವರ್ ಗಳ ಬಳಕೆಗೆ ತಯಾರಿಸಲಾದ ಆ್ಯಪ್, ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ತಯಾರಿಸಲಾಗಿಲ್ಲ. ಕಾರಣ ಉಬರ್ ಆ್ಯಪ್ ಅನ್ನು ದಿನನಿತ್ಯ ಬಳಸುವವರು ಡ್ರೈವರ್ ಗಳೇ ಹೊರತು ಪ್ರಯಾಣಿಕರಲ್ಲ. ಡ್ರೈವರ್ ಗಳಿಗೆ ಯಾವುದೇ ತೊಂದರೆಯಾಗದಂತೆ ಆ್ಯಪ್ ಅನ್ನು ತಯಾರಿಸಲಾಗಿದೆ.

ಓದಿರಿ: ನಿಮ್ಮದೇ ಏರ್‌ಟೆಲ್ ಸಂಖ್ಯೆಗೆ 3ಜಿಬಿ "ಫ್ರಿ" ಇಂಟರ್ನೆಟ್ ಪಡೆದುಕೊಳ್ಳಲು ಹೀಗೆ ಮಾಡಿ

ಬಳಕೆದಾರರನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವಿಸುವ ಉಬರ್ ಡ್ರೈವರ್ ಆ್ಯಪ್ ನ ಐದು ವಿಶೇಷತೆಗಳನ್ನು ಇಲ್ಲಿ ಪಟ್ಟಿ ಮಾಡುತ್ತಿದ್ದೇವೆ. ನಾಣ್ಯದ ಮತ್ತೊಂದು ಬದಿಯನ್ನು ಗ್ರಾಹಕರು ಅರಿತುಕೊಳ್ಳಬಹುದು.

ಓದಿರಿ: ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ವೆಲ್ಕಮ್ ಆಫರ್ ಡಿಸೆಂಬರ್ 3 ಕ್ಕೆ ಅಂತ್ಯ

ಜೊತೆಗೆ ನಮ್ಮ ಚಾಲಕ ಮಿತ್ರರು ಕೂಡ ಉಬರ್ ಆ್ಯಪ್ ಅನ್ನು ಸರಿಯಾಗಿ ಅರ್ಥೈಸಿಕೊಳ್ಳಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಾಲಕನ ಡೆಸ್ಟಿನೇಷನ್.

ಚಾಲಕನ ಡೆಸ್ಟಿನೇಷನ್.

ಕೆಲವೊಂದು ಸಲ ನೀವು ರೈಡ್ ಬುಕ್ ಮಾಡಿರುತ್ತೀರಿ, ಆದರೆ ಡ್ರೈವರ್ ಅದನ್ನು ನಿರಾಕರಿಸಿಬಿಡುತ್ತಾರೆ. ಇದು ಬಳಕೆದಾರರಿಗೆ ಕಿರಿಕಿರಿ ಉಂಟುಮಾಡುತ್ತದೆ ಎನ್ನುವುದನ್ನು ಉಬರ್ ಅರಿತಿದೆ; ತನ್ನ ಬ್ರಾಂಡ್ ಹೆಸರಿಗೂ ಇದು ಕುಂದುಂಟುಮಾಡುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ಉಬರ್ ಚಾಲಕರು ತಮ್ಮಿಷ್ಟದ ಜಾಗವನ್ನು (ಡೆಸ್ಟಿನೇಷನ್) ಆಯ್ದುಕೊಳ್ಳುವ ಸೌಲಭ್ಯವಿದೆ. ದಿನಕ್ಕೆರಡು ಬಾರಿ, ಚಾಲಕರು ತಮ್ಮ ಜಾಗವನ್ನು ಆಯ್ದುಕೊಳ್ಳಬಹುದು, ಆಗ ಉಬರ್ ಆ್ಯಪ್ ಆ ಹಾದಿಯಲ್ಲಿರುವ ಬುಕಿಂಗ್ ಅನ್ನಷ್ಟೇ ತೋರಿಸುತ್ತದೆ. ಇದರಿಂದಾಗಿ ಡ್ರೈವರ್ ನಿರಾಕರಿಸುವುದು ಮತ್ತು ಆಫ್ ಲೈನ್ ಆಗುವುದರ ತೊಂದರೆ ತಪ್ಪಿಸಬಹುದು ಎನ್ನುತ್ತದೆ ಉಬರ್.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫಾರ್ವರ್ಡ್ ಡಿಸ್ಪ್ಯಾಚ್.

ಫಾರ್ವರ್ಡ್ ಡಿಸ್ಪ್ಯಾಚ್.

ಈ ವಿಶೇಷತೆಯು ಚಾಲಕರಿಗೆ ಮತ್ತು ಪ್ರಯಾಣಿಕರಿಬ್ಬರಿಗೂ ಅನುಕೂಲಕರ. ಪ್ರಸಕ್ತ ಬುಕಿಂಗ್ ನ ನಿಗದಿತ ಜಾಗದ ಸಮೀಪಕ್ಕೆ ಬರಲು ಇನ್ನು ಕೆಲ ನಿಮಿಷಗಳಿರುವಾಗ ಮುಂದಿನ ಬುಕಿಂಗ್ ಕೋರಿಕೆಯನ್ನು ಚಾಲಕರು ಇದರಲ್ಲಿ ಒಪ್ಪಿಕೊಳ್ಳಬಹುದು. ಚಾಲಕರ ಕಾಯುವಿಕೆಯ ಸಮಯ ಇದರಿಂದಾಗಿ ಕಡಿಮೆಯಾಗುತ್ತದೆ.

ಜೊತೆಗೆ ಪ್ರಯಾಣಿಕರಿಗೆ ಅತಿ ಶೀಘ್ರದಲ್ಲಿ ಕಾರು ಲಭಿಸುತ್ತದೆ.

ಕೋರಿಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವುದು.

ಕೋರಿಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವುದು.

ಹೆದ್ದಾರಿಗಳಲ್ಲಿ ಕಾರು ಚಲಾಯಿಸುವುದು ಖುಷಿಯ ಸಂಗತಿಯೇ ಇರಬಹುದು ಆದರೆ ನಗರಗಳ ವಾಹನ ದಟ್ಟಣೆಯ ರಸ್ತೆಗಳಲ್ಲಿ 12 ಘಂಟೆಗಳ ಕಾಲ ಕಾರು ಚಲಾಯಿಸುವುದು ಕಷ್ಟದ ಸಂಗತಿಯೇ ಹೌದು. 'ಪಾಸ್ ರಿಕ್ವೆಷ್ಟ್' ಆಯ್ಕೆಯು ಡ್ರೈವರ್ ಗೆ ಅಗತ್ಯವಾಗಿ ಬೇಕಾದ ವಿಶ್ರಾಂತಿ ಮತ್ತು ಊಟದ ಸಮಯವನ್ನು ನೀಡುತ್ತದೆ. ಈ ಅವಧಿಯಲ್ಲಿ ಅವರು ತಮ್ಮ ವಾಹನಕ್ಕೆ ಪೆಟ್ರೋಲ್ / ಡೀಸೆಲ್ ತುಂಬಿಸಿಕೊಳ್ಳಬಹುದು.

ಉಬರ್ ಪ್ರಕಾರ ಇದರಿಂದಾಗಿ ಚಾಲಕರು ತಮ್ಮ ಪ್ರಯಾಣಿಕರನ್ನು ನಿಗದಿತ ಜಾಗಕ್ಕೆ ಬಿಟ್ಟ ನಂತರ ಆ್ಯಪ್ ನಿಂದ ಲಾಗ್ ಆಫ್ ಆಗಬಹುದು, ಬುಕಿಂಗ್ ಅನ್ನು ನಿರಾಕರಿಸುವುದಕ್ಕಿಂತ ಇದು ಉತ್ತಮ. ಮತ್ತೆ ಈ ಬಟನ್ ಅನ್ನು ಒತ್ತುವುದರ ಮೂಲಕ ಹೊಸ ಬುಕಿಂಗ್ ಗಳನ್ನು ಪಡೆದುಕೊಳ್ಳಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೀಟ್ ಮ್ಯಾಪ್ಸ್.

ಹೀಟ್ ಮ್ಯಾಪ್ಸ್.

ಈ ವಿಶೇಷತೆಯನ್ನು ಚಾಲಕರ ಸಮಯವನ್ನುಳಿಸಲು ಮತ್ತು ಅವರು ಬುಕಿಂಗ್ ಅನ್ನು ಕಳೆದುಕೊಳ್ಳದಿರಲು ತಯಾರಿಸಲಾಗಿದೆ. ಈ ಹೀಟ್ ಮ್ಯಾಪಿನಲ್ಲಿ ಚಾಲಕರಿಗೆ ತಮಗೆ ಬುಕಿಂಗ್ ಸಿಗಬಹುದಾದ ಜಾಗವನ್ನು ತೋರಿಸಲಾಗುತ್ತದೆ. ಬುಕಿಂಗ್ ಗಾಗಿ ಹೆಚ್ಚಿನ ಸಮಯ ಕಾಯುವುದು ಮತ್ತು ಪೆಟ್ರೋಲನ್ನು ದುಂದು ಮಾಡುವುದು ಇದರಿಂದ ತಪ್ಪುತ್ತದೆ. ಪ್ರಯಾಣಿಕರಿಗೂ ಸುಲಭವಾಗಿ ಬುಕಿಂಗ್ ಸಿಗುತ್ತದೆ.

ದಿನನಿತ್ಯದ ವರದಿಗಳು.

ದಿನನಿತ್ಯದ ವರದಿಗಳು.

ದಿನದ ಕೊನೆಗೊಂದು ರಿಪೋರ್ಟ್ ಕಾರ್ಡ್ ಸಿಕ್ಕರೆ ಹೇಗೆ? ತಮ್ಮ ಚಾಲನೆ ಹೇಗಿತ್ತು, ನಗರದ ಉಳಿದ ಚಾಲಕರಿಗೆ ಹೋಲಿಸಿದರೆ ಅದು ಉತ್ತಮವಾಗಿತ್ತಾ ಎಂಬಂತಹ ಮಾಹಿತಿಗಳನ್ನು ಈ ವಿಶೇಷತೆಯು ಚಾಲಕರಿಗೆ ನೀಡುತ್ತದೆ. ಸುರಕ್ಷಿತ ಆರಾಮ ಚಾಲನೆಗೆ ಕೆಲವು ಸಲಹೆಗಳನ್ನೂ ನೀಡಲಾಗುತ್ತದೆ.

ಮೊಬೈಲನ್ನು ಡ್ಯಾಷ್ ಬೋರ್ಡಿನ ಮೇಲಿನ ಸ್ಟ್ಯಾಂಡಿಗೆ ಸಿಕ್ಕಿಸುವುದು ಕೈಯಲ್ಲಿಟ್ಟುಕೊಳ್ಳುವುದಕ್ಕಿಂತ ಉತ್ತಮ ಎಂಬಂತಹ ಸಲಹೆಗಳು ಡ್ರೈವರ್ ಆ್ಯಪ್ ಗೆ ಬರುತ್ತದೆ. ವಾಹನದ ವೇಗದ ಬಗ್ಗೆಯೂ ಚಾಲಕರಿಗೆ ಎಚ್ಚರಿಕೆ ಕೊಡುತ್ತದೆ.

ವಿಶ್ರಾಂತಿ ತೆಗೆದುಕೊಳ್ಳಬೇಕಾದ ಅಗತ್ಯತೆಯ ಬಗ್ಗೆಯೂ ಚಾಲಕರಿಗೆ ನೆನಪಿಸುತ್ತದೆ.

ಜೊತೆಗೆ ಆಟೋ ಪೈಲಟ್ ಆಯ್ಕೆಯೂ ಇದೆ. ಇದರಿಂದ ಚಾಲಕರು ತಮ್ಮ ಮುಂದಿನ ಟ್ರಿಪ್ ಅನ್ನು ಆಟೋಮ್ಯಾಟಿಕ್ ಆಗಿ ಆಯ್ದುಕೊಳ್ಳಬಹುದು. ಇದರಿಂದಾಗಿ ಚಾಲನೆಯ ಸಮಯದಲ್ಲಿ ಅವರ ಚಿತ್ತ ಅತ್ತಿತ್ತಾಗುವುದಿಲ್ಲ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Most Read Articles
Best Mobiles in India

Read more about:
English summary
Uber has specially designed a number of features for drivers that helps them in daily use. Here's the list of all such features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more