Subscribe to Gizbot

ಶಿಯೋಮಿ MIUI 9 ವಿಶೇಷತೆಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..!

Posted By: gizbot

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಶಿಯೋಮಿ ಸ್ಮಾರ್ಟ್ ಫೋನ್ ಹಾವಳಿಯೂ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಶಿಯೋಮಿ ತನ್ನದೇ ನೂತನ MIUI 9 ಬಿಡುಗಡೆ ಮಾಡಿದ್ದು, ಇದು ಮಿ ಸ್ಮಾರ್ಟ್ ಫೋನ್ ಗಳ ಕಾರ್ಯಕ್ಷಮತೆಯನ್ನು ಏರಿಕೆ ಮಾಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಹೊಸದಾಗಿ ಬಿಡುಗಡೆಯಾಗಿರುವ MIUI 9 ಕುರಿತ ಮಾಹಿತಿಯೂ ಇಲ್ಲಿದೆ.

ಶಿಯೋಮಿ MIUI 9 ವಿಶೇಷತೆಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..!

ಈಗಾಗಲೇ ಎಲ್ಲಾ ಶಿಯೋಮಿ ಫೋನ್ ಗಳು ಈ ಹೊಸ ಆಪ್ ಡೇಟ್ ದೊರೆತಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ MIUI 9 ವಿಶೇಷತೆಗಳ ಕುರಿತ ಸಂಪೂರ್ಣ ಮಾಹಿತಿಯೂ ಈ ಮುಂದಿನಂತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಯಾಚ್ ಕ್ಲಿಯರ್:

ಕ್ಯಾಚ್ ಕ್ಲಿಯರ್:

ಈ ಆಯ್ಕೆಯನ್ನು ಎಲ್ಲಾ ಮಾದರಿಯ ಸ್ಮಾರ್ಟ್ ಫೋನಿನಲ್ಲಿಯೂ ಕಾಣಬಹುದಾಗಿದೆ. ಆದರೆ ಇದು ಶಿಯೋಮಿ ಫೋನ್ಗಳಲ್ಲಿ ಕೊಂಚ ಭಿನ್ನವಾಗಿ ಕಾಣಿಸಿಕೊಂಡಿದ್ದು, ನಿಮ್ಮ ಸ್ಮಾರ್ಟ್ ಫೋನಿನಲ್ಲಿರುವ ಕ್ಯಾಚ್ ಡೇಟಾವನ್ನು ತೆಗೆದು ಹಾಕಲಿದೆ.

MIUI ಕ್ಲಿನರ್

MIUI ಕ್ಲಿನರ್

ಇದು ಬೇಕಿರದ ಡೇಟಾಗಳನ್ನು ಇಲ್ಲವೇ ಫೈಲ್ ಗಳನ್ನು ನಿಮ್ಮ ಸ್ಮಾರ್ಟ್ ಫೋನಿನಿಂದ ತೆಗೆದು ಹಾಕುವ ಕಾರ್ಯವನ್ನು ಮಾಡಲಿದೆ. ಅಲ್ಲದೇ ಇದು ಶಿಯೋಮಿ ಫೋನ್ ಗಳಿಗೆ ಮಾತ್ರವೇ ದೊರೆಯುವ ಆಪ್ ಆಗಿದೆ. ಇದರಲ್ಲಿಯೇ ಸೆಕ್ಯೂರಿಟಿ ಸೇವೆಯನ್ನು ಸಹ ನೀವು ಪಡೆದುಕೊಳ್ಳಬಹುದಾಗಿದೆ.

ಡೀಪ್ ಕ್ಲಿನರ್:

ಡೀಪ್ ಕ್ಲಿನರ್:

ಇದಲ್ಲದೇ ನೀವು ಡೀಪ್ ಕ್ಲಿಯರ್ ಸೇವೆಯನ್ನು ಪಡೆದುಕೊಳ್ಳಬಹುದಾಗಿದ್ದು, ಇದು ನಿಮ್ಮ ಡಿವೈಸ್ ನಲ್ಲಿರುವ ಸ್ಟೋರೆಜ್ ಕೆಪಾಸಿಟಿಯನ್ನು ಹೆಚ್ಚು ಮಾಡಲಿದೆ. ಇದರಿಂದಾಗಿ ನಿಮ್ಮ ಮೊಬೈಲ್ ವೇಗವಾಗಿ ಕಾರ್ಯನಿರ್ವಹಿಸಲು ಶಕ್ತವಾಗಲಿದೆ.

MI ಕ್ಲೌಡ್:

MI ಕ್ಲೌಡ್:

ಇದಲ್ಲದೇ ನಿಮ್ಮ ಫೋಟೋಗಳು ಮತ್ತು ವಿಡಿಯೋಗಳು ನಿಮ್ಮ ನೆನಪಿನ ಅಂಗಳದಲ್ಲಿಯೆ ಉಳಿಯುವ ಸಲುವಾಗಿ ಮಿ ಕ್ಲೌಡ್ ಸೇವೆಯನ್ನು ನೀಡುತ್ತಿದೆ. ಇದರಲ್ಲಿ ಬಳಕೆದಾರರಿಗೆ ಹೆಚ್ಚಿನ ಆಯ್ಕೆಯೂ ದೊರೆಯಲಿದೆ ಎನ್ನಲಾಗಿದೆ. ಇದಲ್ಲಿ ಎಲ್ಲಾ ಡೇಟಾವನ್ನು ಸೇವ್ ಮಾಡಿ ಇಟ್ಟು ಕೊಳ್ಳಬಹುದಾಗಿದೆ.

ಮೈಕ್ರೋ ಎಸ್ ಡಿ:

ಮೈಕ್ರೋ ಎಸ್ ಡಿ:

ಇದನ್ನು ನೀವು ಸೆಕೆಂಡರಿ ಸಿಮ್ ಕಾರ್ಡ್ ಮಾದರಿಯಲ್ಲಿ ಬಳಕೆ ಮಾಡಿಕೊಳ್ಳಬಹುದು ಇಲ್ಲವೇ ನಿಮ್ಮ ಸ್ಟೋರೆಜ್ ಕೆಪಾಸಿಟಿಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿಯೂ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ನಿಮಗೆ ಬೇಕಾದ ವಿಡಿಯೋ, ಪೋಟೋಗಳನ್ನು ಸ್ಟೋರ್ ಮಾಡಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ವಿಶ್ವದ ಮೊದಲ ಆಂಡ್ರಾಯ್ಡ್ ಎಲೆಕ್ಟ್ರಾನಿಕ್ ಸ್ಮಾರ್ಟ್ ಸ್ಕೂಟರ್: ಒಂದೇ ಚಾರ್ಜ್‌ನಲ್ಲಿ ಎಷ್ಟು ಮೈಲೆಜ್..?

English summary
5 MIUI 9 tricks to get more storage on Xiaomi devices. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot