Subscribe to Gizbot

ವಿಶ್ವದ ಮೊದಲ ಆಂಡ್ರಾಯ್ಡ್ ಎಲೆಕ್ಟ್ರಾನಿಕ್ ಸ್ಮಾರ್ಟ್ ಸ್ಕೂಟರ್: ಒಂದೇ ಚಾರ್ಜ್‌ನಲ್ಲಿ ಎಷ್ಟು ಮೈಲೆಜ್..?

Written By:

ಮಾರುಕಟ್ಟೆಯಲ್ಲಿರುವ ಎಲ್ಲಾ ವಸ್ತುಗಳು ಸ್ಮಾರ್ಟ್ ಆಗುತ್ತಿದ್ದು, ಇದೇ ಮಾದರಿಯಲ್ಲಿ ಮಾರುಕಟ್ಟೆಗೆ ಆಂಡ್ರಾಯ್ಡ್ ಕಾರ್ಯಚರಣೆಯನ್ನು ಹೊಂದಿರುವ ಸ್ಮಾರ್ಟ್‌ ಸ್ಕೂಟರ್ ಕಾಣಿಸಿಕೊಳ್ಳಲಿದೆ. ಫ್ರೆಂಚ್ ಮೂಲದ ಎಲೆಕ್ಟ್ರಾನಿಕ್ ಕಂಪನಿ ಆರ್ಚೋಸ್ ವಿಶ್ವದ ಮೊದಲ ಆಂಡ್ರಾಯ್ಡ್ ಎಲೆಕ್ಟ್ರಾನಿಕ್ ಸ್ಮಾರ್ಟ್ ಸ್ಕೂಟರ್ ಅನ್ನು ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಲಾಂಚ್ ಮಾಡುವುದಾಗಿ ತಿಳಿಸಿದೆ. ಈ ಸ್ಕೂಟರ್ ಸೆಪ್ಟಂಬರ್ ವೇಳೆಗೆ ಮಾರುಕಟ್ಟೆಯಲ್ಲಿ ದೊರೆಯಲಿದೆ.

ವಿಶ್ವದ ಮೊದಲ ಆಂಡ್ರಾಯ್ಡ್ ಎಲೆಕ್ಟ್ರಾನಿಕ್ ಸ್ಮಾರ್ಟ್ ಸ್ಕೂಟರ್

ಈಗಾಗಲೇ ವಿದೇಶಿಯ ಮಾರುಕಟ್ಟೆಯಲ್ಲಿ ಸ್ಕೂಟರ್ ಬಳಕೆಯೂ ಹೆಚ್ಚಾಗುತ್ತಿದೆ. ಅಲ್ಲದೇ ವಾಹನಗಳಿಂದ ಉಂಟಾಗುತ್ತಿರುವ ಮಾಲಿನ್ಯವು ಅಧಿಕವಾಗುತ್ತಿರುವ ಹಿನ್ನಲೆಯಲ್ಲಿ ಬೈಕ್ ಮತ್ತು ಬೈಸಿಕಲ್ ಗಿಂತಲೂ ಸ್ಕೂಟರ್ ಹೆಚ್ಚು ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಆರ್ಚೋಸ್ ಕಂಪನಿಯೂ ಆಂಡ್ರಾಯ್ಡ್ ಮೂಲಕ ಕಾರ್ಯನಿರ್ವಹಿಸುವ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಬಿಡುಗಡೆಗೂ ಮುನ್ನವೇ ಈ ಸ್ಕೂಟರ್ ಹೆಚ್ಚಿನ ಸದ್ದು ಮಾಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಂಡ್ರಾಯ್ಡ್ ಒರಿಯೋ:

ಆಂಡ್ರಾಯ್ಡ್ ಒರಿಯೋ:

ಆರ್ಚೋಸ್ ಕಂಪನಿಯೂ ತನ್ನ ಆಂಡ್ರಾಯ್ಡ್ ಸ್ಕೂಟರ್ ಗೆ ಸಿಟಿ ಕನೆಕ್ಟ್ ಎಂದು ನಾಮಕರಣ ಮಾಡಿದ್ದು, ಇದು ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ ಈ ಸ್ಕೂಟರ್‌ನಲ್ಲಿ ನೀವು 5 ಇಂಚಿನ ಟಚ್ ಪ್ಯಾನಲ್ ಕಾಣಬಹುದಾಗಿದೆ. ಅಲ್ಲದೇ ಇದರಲ್ಲಿ 1GB RAM ಮತ್ತು 8GB ಇಂಟರ್ನಲ್ ಮೊಮೊರಿಯನ್ನು ಅಳವಡಿಸಲಾಗಿದೆ.

ಉತ್ತಮ ಡಿಸ್‌ಪ್ಲೇ:

ಉತ್ತಮ ಡಿಸ್‌ಪ್ಲೇ:

ಆರ್ಚೋಸ್ ಕಂಪನಿಯ ಸಿಟಿ ಕನೆಕ್ಟ್ ಸ್ಕೂಟರ್‌ನಲ್ಲಿ ನೀವು IPS ಡಿಸ್‌ಪ್ಲೇಯನ್ನು ನೋಡಬಹುದಾಗಿದ್ದು, ಗೊರಿಲ್ಲ ಗ್ಲಾಸ್ ಸುರಕ್ಷತೆ ಸಹ ಇದಕ್ಕಿದೆ. ಕ್ವಾಡ್ ಕೋರ್ ಪ್ರೋಸೆಸರ್ ನೊಂದಿಗೆ Wi-Fi, GPS ಮತ್ತು 3G ಕನೆಕ್ಟಿವಿಟಿಯನ್ನು ಇದರಲ್ಲಿ ನೀವು ಪಡೆದುಕೊಳ್ಳಬಹುದಾಗಿದೆ.

ಸ್ಕೂಟರ್ ವಿನ್ಯಾಸ:

ಸ್ಕೂಟರ್ ವಿನ್ಯಾಸ:

ಸಿಟಿ ಕನೆಕ್ಟ್ ಸ್ಮಾರ್ಟ್ ಸ್ಕೂಟರ್ 13 KG ತೂಕವನ್ನು ಹೊಂದಿದ್ದು, 8.5 ಇಂಚಿನ ಪಂಚರ್ ಪ್ರೂಫ್ ವಿಲ್‌ಗಳನ್ನು ಹೊಂದಿದೆ. ಅಲ್ಲದೇ ಉತ್ತಮವಾದ ಹ್ಯಾಂಡಲ್ ಗಳನ್ನು ಹೊಂದಿದೆ. ಇದಲ್ಲದೇ 250W ಮೋಟರ್ ಅನ್ನು ಕಾಣಬಹುದಾಗಿದ್ದು, ಇದರೊಂದಿಗೆ 6000mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

ಒಂದು ಚಾರ್ಜ್‌ನಲ್ಲಿ 25Km ಪ್ರಯಾಣ:

ಒಂದು ಚಾರ್ಜ್‌ನಲ್ಲಿ 25Km ಪ್ರಯಾಣ:

ಸಿಟಿ ಕನೆಕ್ಟ್ ಸ್ಮಾರ್ಟ್ ಸ್ಕೂಟರ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ ನಗರ ಪ್ರದೇಶದಲ್ಲಿ 25Km ಪ್ರಯಾಣ ಮಾಡಬಹುದಾಗಿದೆ. ಅಲ್ಲದೇ ಈ ಸ್ಕೂಟರ್ ಎಷ್ಟು ದೂರ ಸಾಗಲಿದೆ ಎಂಬುದನ್ನು ಮೊದಲೇ ತಿಳಿಸಲಿದೆ ಎನ್ನಲಾಗಿದೆ ಮತ್ತು ಆಪ್ ಹಾಕಿಕೊಂಡು ಮೊಬೈಲ್ ಮೂಲಕವೇ ಇದನ್ನು ನಿಯಂತ್ರಿಸಬಹುದಾಗಿದೆ.

ಬೆಲೆ:

ಬೆಲೆ:

ಸಿಟಿ ಕನೆಕ್ಟ್ ಸ್ಮಾರ್ಟ್ ಸ್ಕೂಟರ್ ಅನ್ನು ಸದ್ಯ ವಿದೇಶಿಯ ರಸ್ತೆಗಳಿಗೆ ಸರಿ ಹೊಂದುವಂತೆ ನಿರ್ಮಿಸಲಾಗಿದೆ. ಆದರೆ ಭಾರತದಲ್ಲಿಯೂ ಸ್ಕೂಟರ್ ಬಳಕೆ ಅಧಿಕವಾಗುತ್ತಿರುವ ಹಿನ್ನಲೆಯಲ್ಲಿ ಇಲ್ಲಿಗೆ ತಕ್ಕಂತೆ ನಿರ್ಮಿಸುವ ಸಾಧ್ಯತೆ ಇದೆ. ಇದರ ಬೆಲೆ ರೂ.40000ದ ವರೆಗೂ ಇದೆ ಎನ್ನಲಾಗಿದ್ದು, ಶೀಘ್ರವೇ ಈ ಕುರಿತು ಮಾಹಿತಿ ಹೊರಬರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?

ಓದಿರಿ: ವಾಟ್ಸ್‌ಆಪ್ ಪೇಮೆಂಟ್‌ಗೆ ಸೆಡ್ಡು: ಗೂಗಲ್ ತೇಜ್‌ನಲ್ಲಿ ಹೊಸ ಕೊಡುಗೆ...!

English summary
World's First Android Powered Electric Scooter Archos Citee Connect. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot