ಭಾರತದಲ್ಲಿ ಆ್ಯಪಲ್ ಸಿರಿಯ ಜೊತೆಗೆ ಸಲೀಸಾಗಿ ಕಾರ್ಯನಿರ್ವಹಿಸುವ ಐದು ತಂತ್ರಾಂಶಗಳು.

Written By:

ಆ್ಯಪಲ್ ತನ್ನ ಐ.ಒ.ಎಸ್ ಹತ್ತರಲ್ಲಿ ತಂದ ಪ್ರಮುಖ ಬದಲಾವಣೆಯೆಂದರೆ ಸಿರಿಯನ್ನು ಥರ್ಡ್ ಪಾರ್ಟಿ ಆ್ಯಪ್ ಗಳು ಉಪಯೋಗಿಸುವಂತೆ ಮಾಡಿರುವುದು. ಕಾರ್ಯನಿರ್ವಹಣೆಯ ವಿಷಯದಲ್ಲಿ ಸಿರಿಯ ಕೆಲಸ ಈ ಮುಂಚೆ ಸೀಮಿತವಾಗಿತ್ತು. ಆ್ಯಪಲ್ ನ ತಂತ್ರಾಂಶಗಳೊಟ್ಟಿಗಷ್ಟೇ ಅದು ಕಾರ್ಯನಿರ್ವಹಿಸುತ್ತಿತ್ತು, ಹೀಗಾಗಿ ಅದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪವರ್ಡ್ ವರ್ಚುಯಲ್ ಅಸಿಸ್ಟೆಂಟ್ಸ್ ವಿಭಾಗದಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿರಲಿಲ್ಲ.

ಭಾರತದಲ್ಲಿ ಆ್ಯಪಲ್ ಸಿರಿಯ ಜೊತೆಗೆ ಸಲೀಸಾಗಿ ಕಾರ್ಯನಿರ್ವಹಿಸುವ ಐದು ತಂತ್ರಾಂಶಗಳು.

ಈ ತಂತ್ರಜ್ಞಾನವನ್ನು ಮೊದಲಿಗೆ ಪರಿಚಯಿಸಿದ ಕಂಪನಿ ಆ್ಯಪಲ್. ಆದರೆ ಅದರಿಂದ ಹೆಚ್ಚು ಉಪಯುಕ್ತತೆಯನ್ನು ಪಡೆಯಲು ಆ್ಯಪಲ್ ಗೆ ಸಾಧ್ಯವಾಗಿರಲಿಲ್ಲ. ಪರಿಣಾಮವಾಗಿ ಈ ರೇಸಿನಲ್ಲಿ ಗೂಗಲ್ ಆ್ಯಪಲ್ ಅನ್ನು ಹಿಂದಿಕ್ಕಿ ಹಲವು ಕಾರ್ಯಗಳನ್ನು ಸಾಧಿಸಿತ್ತು.

ಓದಿರಿ: ಅದ್ಭುತ ಪರಿಕಲ್ಪನೆಯ 'ನೋಕಿಯಾ ಪ್ರಿಸ್ಮ್' ಫೋನ್: ರಹಸ್ಯ ಮಾಹಿತಿ ಬಹಿರಂಗ!

ಆದರೆ ಐ.ಒ.ಎಸ್ 10ರ ಬಿಡುಗಡೆಯೊಂದಿಗೆ ಚಿತ್ರಣ ಬದಲಾಗುವ ನಿರೀಕ್ಷೆಯಿದೆ. ಈಗ ಥರ್ಡ್ ಪಾರ್ಟಿ ಆ್ಯಪ್ ಗಳು ಆ್ಯಪಲ್ ನ ಸಿರಿಯ ಉಪಯೋಗ ಪಡೆದುಕೊಳ್ಳಬಹುದು, ಮೊದಲಿಗಿಂತ ಹೆಚ್ಚು ಪ್ರಯೋಜನಕಾರಿ.

ಓದಿರಿ: ಮೊಟೊರೊಲ ಮೊಟೊ ಎಂ ನಲ್ಲಿ ನಾನ್ ಸ್ಟಾಕ್ ಆ್ಯಂಡ್ರಾಯ್ಡ್!

ಆ್ಯಪಲ್ ಸಿರಿಯ ಜೊತೆಗೆ ಸಲೀಸಾಗಿ ಕಾರ್ಯನಿರ್ವಹಿಸುವ ಐದು ತಂತ್ರಾಂಶಗಳೆಡೆಗೆ ಗಮನಹರಿಸೋಣ. ನಿಮ್ಮ ಕೆಲಸ ಮಾಡಲು ಸಿರಿಗೆ ಹೇಳಿದರಾಯಿತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಪ್.

ವಾಟ್ಸಪ್.

ದಿನನಿತ್ಯ ಉಪಯೋಗಿಸುವ ತಂತ್ರಾಂಶಗಳಲ್ಲಿ ವಾಟ್ಸಪ್ ಬಹುಮುಖ್ಯವಾದುದು ಎನ್ನುವುದರಲ್ಲಿ ಅನುಮಾನಗಳಿಲ್ಲ. ಈ ಮೆಸೇಜಿಂಗ್ ಆ್ಯಪ್ ನಲ್ಲಿ ನೀವು ಸಿರಿಯನ್ನು ಬಳಸಿ ಮೆಸೇಜು ಕಳುಹಿಸಲು ಅಥವಾ ಕರೆ ಮಾಡಲು ಆದೇಶ ನೀಡಬಹುದು. ಈ ಮುಂಚಿನಂತೆ ಸಂದೇಶ ಬರೆದು ಅದನ್ನು ನಿಮ್ಮ ಸಂಪರ್ಕ ಪಟ್ಟಿಯಲ್ಲಿರುವವರಿಗೆ ಕಳುಹಿಸುವ ಅಗತ್ಯತೆಯಿಲ್ಲ. ಸಿರಿಗೆ ಆದೇಶ ನೀಡುವ ಮೂಲಕ ಮಾಡಬಹುದು. ವಾಹನ ಚಲಾಯಿಸುವಾಗ ಇದು ಬಹಳ ಉಪಯುಕ್ತ.

ಉಬರ್.

ಉಬರ್.

ಶೀಘ್ರವಾಗಿ ವಿಮಾನ ನಿಲ್ದಾಣಕ್ಕೆ ಹೋಗಬೇಕಾ? "ಗೆಟ್ ಎ ರೈಡ್ ಟು ದಿ ಏರ್ ಪೋರ್ಟ್" ಎಂದು ಸಿರಿಗೆ ಹೇಳಿ, ಸಿರಿಯ ಯುಐನಲ್ಲಿ ಯುಬರ್ ಆ್ಯಪ್ ನ ಪ್ರಿವ್ಯೀವ್ ಬರುತ್ತದೆ. ಅಲ್ಲಿರುವ ಆಯ್ಕೆಗಳಿಂದ ನಿಮಗೆ ಬೇಕಾದ್ದನ್ನು ಆಯ್ದುಕೊಂಡರೆ ಆಯ್ತು. ಜೊತೆಗೆ ನಿಮ್ಮ ಕಾರನ್ನು ಟ್ರ್ಯಾಕ್ ಮಾಡಲು, ಚಾಲಕನಿಗೆ ಕರೆ ಮಾಡಲು ನೀವು ಆ್ಯಪ್ ತೆರೆಯದೇ ಸಿರಿಯನ್ನೇ ಬಳಸಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಿಂಕ್ಡ್ ಇನ್.

ಲಿಂಕ್ಡ್ ಇನ್.

ವಾಟ್ಸಪ್ ಅಷ್ಟೇ ಅಲ್ಲ, ನಿಮ್ಮ ಲಿಂಕ್ಡ್ ಇನ್ ಸಂಪರ್ಕಗಳಿಗೆ ಸಂದೇಶಗಳನ್ನು ಕಳುಹಿಸಲು ಮೆಸೇಜು ಟೈಪಿಸುವ ಅಗತ್ಯವಿಲ್ಲ. "ಸೆಂಡ್ ಎ ಲಿಂಕ್ಡ್ ಇನ್" ಎಂದು ಹೇಳಿ ಯಾರಿಗೆ ಕಳುಹಿಸಬೇಕೆಂದು ಹೇಳಿ ನಿಮ್ಮ ಸಂದೇಶವನ್ನು ತಿಳಿಸಿದರೆ ಆಯಿತು.

ಪಿಂಟರೆಸ್ಟ್.

ಪಿಂಟರೆಸ್ಟ್.

ಪಿಂಟರೆಸ್ಟ್ ನಲ್ಲಿ ನಿಮಗಿಷ್ಟವಾದ ವಸ್ತುಗಳನ್ನು ಹುಡುಕುವುದು ಈಗ ಸುಲಭದ ಕೆಲಸ. ಸಿರಿಗೆ "ಶೋ ಮಿ ಫುಡ್ ಫೋಟೋಸ್ ಫ್ರಮ್ ಪಿಂಟರೆಸ್ಟ್" ಎಂದು ಹೇಳಿದರಾಯಿತು, ಅದಕ್ಕೆ ಸಂಬಂಧಿಸಿದ ಎಲ್ಲಾ ಚಿತ್ರಗಳು ಪರದೆಯಲ್ಲಿ ಮೂಡುತ್ತದೆ.

ಸ್ಕೈಪ್.

ಸ್ಕೈಪ್.

ಮೈಕ್ರೋಸಾಫ್ಟಿನ ಸ್ಕೈಪ್ ಮೂಲಕ ನೀವು ಸಂದೇಶಗಳನ್ನು ಕಳುಹಿಸಬಹುದು, ವೀಡಿಯೋ ಕರೆಗಳನ್ನು ಮಾಡಬಹುದು. "ಕಾಲ್ --ವ್ಯಕ್ತಿಯ ಹೆಸರು--ಆನ್ ಸ್ಕೈಪ್" ಎಂದು ಹೇಳಿದರೆ ಆಯಿತು, ಉಳಿದಿದ್ದನ್ನು ಸಿರಿ ನೋಡಿಕೊಳ್ಳುತ್ತದೆ.

ಗಮನಿಸಿ: ಈ ತಂತ್ರಾಂಶಗಳು ಸಿರಿಯ ಜೊತೆಗೆ ಕಾರ್ಯನಿರ್ವಹಿಸಲು ಕೆಲವು ಸೆಟ್ಟಿಂಗ್ಸ್ ಬದಲಿಸಬೇಕು. ಸೆಟ್ಟಿಂಗ್ಸ್ ಗೆ ಹೋಗಿ > ಸಿರಿ > ಆ್ಯಪ್ ಸಪೋರ್ಟ್ ಗೆ ಹೋಗಿ ಅನುಮತಿ ಕೊಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Apple opened up Siri for third-party apps with iOS 10. Here are the most frequently used apps on your iPhone that work seamlessly with Siri.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot