ಮೊಟೊರೊಲ ಮೊಟೊ ಎಂ ನಲ್ಲಿ ನಾನ್ ಸ್ಟಾಕ್ ಆ್ಯಂಡ್ರಾಯ್ಡ್!

ಲಿನೊವೊ ಒಡೆತನದ ಮೊಟೊರೊಲ ತನ್ನ ಹೊಸ ಮಧ್ಯಮ ಬೆಲೆಯ ಸ್ಮಾರ್ಟ್ ಫೋನ್ ಮೊಟೊ ಎಂ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.ಜನಪ್ರಿಯ ಟಿಪ್ ಸ್ಟರ್ ಆನ್ ಲೀಕ್ಸ್ ವೆಬ್ ಪುಟದ ಪ್ರಕಾರ ಇದು ಮೊಟೊರೊಲದ ಮೊಟ್ಟಮೊದಲ ನಾನ್ ಸ್ಟಾಕ್ ಆ್ಯಂಡ್ರಾಯ್ಡ್ ಫೋನಾಗಲಿದೆ

|

ಸ್ವಲ್ಪ ದಿನಗಳ ಹಿಂದಷ್ಟೇ ಲಿನೊವೊ ಒಡೆತನದ ಮೊಟೊರೊಲಾದ ಮೊಟೊ Z ಮತ್ತು Z ಪ್ಲೇ ಫೋನುಗಳು ಭಾರತೀಯ ಮಾರುಕಟ್ಟೆಯನ್ನು ತಲುಪಿದ್ದವು. ಈಗ ಕಂಪನಿಯು ಮೊಟೊ ಎಂ ಎಂಬ ಹೊಸ ಫೋನನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಮೊಟೊರೊಲ ಮೊಟೊ ಎಂ ನಲ್ಲಿ ನಾನ್ ಸ್ಟಾಕ್ ಆ್ಯಂಡ್ರಾಯ್ಡ್!

ಟೆಕ್ ಡ್ರಾಯ್ಡರ್ ಪ್ರಕಾರ ಲಿನೊವೊ ಹೊಸ ಸ್ಮಾರ್ಟ್ ಫೋನನ್ನು ನವೆಂಬರ್ 8ರಂದು 5100 ಎಂ.ಎ.ಹೆಚ್ ಬ್ಯಾಟರಿಯುಳ್ಳ ಲಿನೊವೊ ವೈಬ್ ಪಿ2 ಜೊತೆಗೆ ಬಿಡುಗಡೆಗೊಳಿಸಲು ಅಣಿಯಾಗಿದೆ. ಈ ಸ್ಮಾರ್ಟ್ ಫೋನ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದೆ, ಅದರಲ್ಲಿರುವ ಸಂಭಾವ್ಯ ವಿಶೇಷತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ.

ಓದಿರಿ: ಫೇಸ್‌ಬುಕ್‌ ಮೆಸೇಂಜರ್'ನಲ್ಲಿಯೇ ಕ್ಯಾಬ್ ಬುಕ್‌ ಮಾಡುವುದು ಹೇಗೆ?

ಜನಪ್ರಿಯ ಟಿಪ್ ಸ್ಟರ್ ಆನ್ ಲೀಕ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಮೊಟೊ ಎಂ ಫೋನಿನ ವಿಶೇಷತೆಗಳನ್ನು ಸೋರಿಕೆ ಮಾಡಿದೆ, ಹಿಂದಿನ ಸೋರಿಕೆಗಳಲ್ಲಿನ ವಿಶೇಷತೆಗಳನ್ನು ಇದು ದೃಡಪಡಿಸುತ್ತದೆ, ಕೆಲವು ಬದಲಾವಣೆಗಳಿವೆ.
ಓದಿರಿ: ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ಅಂತರ್ಜಾಲ ವೇಗಗೊಳಿಸಲು ಐದು ತಂತ್ರಗಳು.

ನವೆಂಬರ್ 8 ರಂದು ಬಿಡುಗಡೆಯಾಗಲಿರುವ ಮೊಟೊರೊಲ ಮೊಟೊ ಎಂನ ಸಂಭಾವ್ಯ ವಿಶೇಷತೆಗಳ ಬಗ್ಗೆ ಒಮ್ಮೆ ಕಣ್ಣಾಡಿಸಿ.

5.5 ಇಂಚಿನ ಫುಲ್ ಹೆಚ್.ಡಿ ಪರದೆ.

5.5 ಇಂಚಿನ ಫುಲ್ ಹೆಚ್.ಡಿ ಪರದೆ.

ಮೊದಲು ಸೋರಿಕೆಯಾಗಿದ್ದ ಸುದ್ದಿಗಳಂತೆಯೇ ಹೊಸ ಸುದ್ದಿಯೂ ಈ ಮೊಟೊ ಎಂನಲ್ಲಿ 5.5 ಇಂಚಿನ ಫುಲ್ ಹೆಚ್.ಇ 401ಪಿಪಿಐ ಪರದೆಯಿರುವುದನ್ನು ದೃಡಪಡಿಸಿದೆ.

ಹೊಸ ಮೀಡಿಯಾಟೆಕ್ ಹೆಲಿಯೋ ಪಿ15 ಎಸ್.ಒ.ಸಿ.

ಹೊಸ ಮೀಡಿಯಾಟೆಕ್ ಹೆಲಿಯೋ ಪಿ15 ಎಸ್.ಒ.ಸಿ.

ಇದು ಬಹುಮುಖ್ಯವಾದ ಬದಲಾವಣೆ. ಆನ್ ಲೀಕ್ಸ್ ಪ್ರಕಾರ ಮೊಟೊ ಎಂನಲ್ಲಿ ಹೊಸ ಮೀಡಿಯಾಟೆಕ್ ಹೆಲಿಯೋ ಪಿ15 2.2GHz ಆಕ್ಟಾ ಕೋರ್ ಪ್ರೊಸೆಸರ್ ಇರಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ ಮತ್ತು 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.

13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ ಮತ್ತು 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.

ಈ ಸುದ್ದಿ ಮೊದಲೂ ಬಂದಿತ್ತು. ಮೊಟೊ ಎಂನಲ್ಲಿ ಎಲ್.ಇ.ಡಿ ಫ್ಲಾಷ್ ಇರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ ಇರಲಿದೆ. ಜೊತೆಗೆ ಸೆಲ್ಫಿಗಳಿಗಾಗಿ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ ಇರುವುದೆಂಬ ನಿರೀಕ್ಷೆಯಿದೆ.

3050 ಎಂ.ಎ.ಹೆಚ್ ಬ್ಯಾಟರಿ.

3050 ಎಂ.ಎ.ಹೆಚ್ ಬ್ಯಾಟರಿ.

ಮುಂಚಿನ ಸುದ್ದಿಗಳ ಪ್ರಕಾರ ಮೊಟೊ ಎಂನಲ್ಲಿ 5100 ಎಂ.ಎ.ಹೆಚ್ ಬ್ಯಾಟರಿ ಇರುತ್ತದೆಂದು ಹೇಳಲಾಗಿತ್ತು. ಆದರೆ ಆನ್ ಲೀಕ್ಸ್ ನ ಟ್ವಿಟರ್ ಪೋಸ್ಟಿನ ಪ್ರಕಾರ ಮೊಟೊ ಎಂ ನಲ್ಲಿ 3050 ಎಂ.ಎ.ಹೆಚ್ ಬ್ಯಾಟರಿ ಇರಲಿದೆ. ಮೊದಲೇ ಹೇಳಿದಂತೆ ಲಿನೊವೊದ ಮತ್ತೊಂದು ಹೊಸ ಸ್ಮಾರ್ಟ್ ಫೋನ್ ವೈಬ್ ಪಿ2ನಲ್ಲಿ ದೊಡ್ಡದಾದ 5100 ಎಂ.ಎ.ಹೆಚ್ ಬ್ಯಾಟರಿ ಇರಲಿದೆ.

ಸ್ಟಾಕ್ ಆ್ಯಂಡ್ರಾಯ್ಡ್ ಗೆ ವಿದಾಯ.

ಸ್ಟಾಕ್ ಆ್ಯಂಡ್ರಾಯ್ಡ್ ಗೆ ವಿದಾಯ.

ಆನ್ ಲೀಕ್ಸ್ ಹಾಕಿರುವ ಚಿತ್ರಗಳ ಪ್ರಕಾರ ಹೊಸ ಮೊಟೊ ಎಂನಲ್ಲಿ ಸ್ಟಾಕ್ ಆ್ಯಂಡ್ರಾಯ್ಡ್ ಇರುವುದಿಲ್ಲ. ಬದಲಿಗಿದು ಆ್ಯಂಡ್ರಾಯ್ಡ್ 6.0.1 ಮಾರ್ಷ್ ಮೆಲ್ಲೊ ಆಧಾರಿತ ಲಿನೊವೊ ವೈಬ್ ಯುಐದಂತೆ ಕಾಣುತ್ತಿದೆ.

ಮೊಟೊ ಎಂನಲ್ಲಿ ಬೇರೊಂದು ಲಾಂಚರ್ ಬಳಸಿದ್ದಾರಾ ಅಥವಾ ಲಿನೊವೊ ಹೊಸ ಫೋನಿನಲ್ಲಿ ತಮ್ಮದೇ ಯುಐ ಹಾಕುತ್ತಿದ್ದಾರಾ ಎಂದು ಈ ಸಮಯಕ್ಕೆ ಹೇಳುವುದು ಸಾಧ್ಯವಾಗುತ್ತಿಲ್ಲ.

ಮೂಲ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Motorola Moto M is the upcoming smartphone from the Lenovo-owned company. The latest leaks suggest that the smartphone won't come with stock Android.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X