Home
Apps

ವಾಟ್ಸಪ್‌ ಸೇರಿಕೊಳ್ಳಲಿವೆ ನೀವು ನಿರೀಕ್ಷಿಸುತ್ತಿದ್ದ 5 ಹೊಸ ಫೀಚರ್ಸ್‌!

ಫೇಸ್‌ಬುಕ್ ಒಡೆತನದ ಜನಪ್ರಿಯ ಮೆಸೆಜಿಂಗ್ ಸೇವೆ ವಾಟ್ಸಪ್‌ ಈ ವರ್ಷ ಹಲವು ಹೊಸ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದ್ದು, ಬಳಕೆದಾರರಿಗೆ ಮತ್ತಷ್ಟು ಖಾಸಗಿತನವನ್ನು ಕಾಪಾಡುವುದರ ಜೊತೆಗೆ ಸುಳ್ಳು ಸುದ್ದಿ ಶೇರ್‌ ಆಗದಂತೆ ತಡೆಯಲು ಜಾಗೃತಿ ಮೂಡಿಸಿತ್ತು. ಆದರೆ ಇದೀಗ ಮತ್ತಷ್ಟು ಹೊಸ ಕೂಲ್‌ ಫೀಚರ್ಸ್‌ಗಳು ವಾಟ್ಸಪ್‌ ಅಪ್‌ಡೇಟ್‌ ವರ್ಷನ್‌ನಲ್ಲಿ ಸೇರಿಸಿಕೊಳ್ಳಲಿವೆ.

ವಾಟ್ಸಪ್‌ ಸೇರಿಕೊಳ್ಳಲಿವೆ ನೀವು ನಿರೀಕ್ಷಿಸುತ್ತಿದ್ದ 5 ಹೊಸ ಫೀಚರ್ಸ್‌!

ಹೌದು, ವಾಟ್ಸಪ್‌ ಆಪ್‌ ಸದ್ಯದಲ್ಲಿಯೇ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಲಿದ್ದು, ಇತ್ತೀಚಿಗಷ್ಟೆ ಗ್ರೂಪ್‌ಗೆ ಸೇರ ಸೇರಿಸುವ ಆಯ್ಕೆಯಲ್ಲಿ ನಿಯಂತ್ರಣ ಮಾಡಬಹುದಾದ ಆಯ್ಕೆಯನ್ನು ಬಿಡುಗಡೆ ಮಾಡಿದೆ. ಈಗ ಬಳಕೆದಾರಿಗೆ ಖಾಸಗಿತನಕ್ಕೆ ಅನಕೂಲವಾಗುವ ನೂತನ ಫೀಚರ್ಸ್‌ಗಳನ್ನು ಪರಿಚಯಿಸಲಿದ್ದು, ಅಪ್‌ಡೇಟ್‌ ವರ್ಷನ್‌ನಲ್ಲಿ ಈ ಆಯ್ಕೆಗಳು ದೊರೆಯಲಿವೆ. ಹಾಗಾದಾರೇ ವಾಟ್ಸಪ್‌ ಸೇರಲಿರುವ ಐದು ಹೊಸ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಫ್ರಿಕ್ವೆಟ್ಲಿ ಫಾರ್ವರ್ಡ್‌ ಮೆಸೆಜ್‌

ಫ್ರಿಕ್ವೆಟ್ಲಿ ಫಾರ್ವರ್ಡ್‌ ಮೆಸೆಜ್‌

ವಾಟ್ಸಪ್‌ನಲ್ಲಿ ಗ್ರೂಪ್‌ಗಳ ಸಂಖ್ಯೆಗಳಿಗೆನು ಕಡಿಮೆ ಇಲ್ಲ. ಒಂದೇ ಮೆಸೆಜ್‌ ಅನ್ನು ಅನೇಕ ಬಾರಿ ಫಾರ್ವರ್ಡ್‌ ಮಾಡುತ್ತಲೆ ಇರುತ್ತಾರೆ. ಇದರಿಂದ ಸುಳ್ಳು ಸುದ್ದಿ ಹಂಬುವ ಸಾಧ್ಯತೆಗಳಿರುತ್ತವೆ. ಆದರೆ ಈ ಹೊಸ ಫ್ರಿಕ್ವೆಟ್ಲಿ ಫಾರ್ವರ್ಡ ಆಯ್ಕೆಯಿಂದ ಮೆಸೆಜ್‌ ಎಷ್ಟು ಬಾರಿ ಫಾರ್ವರ್ಡ್‌ ಆಗಿದೆ ಎಂಬುದನ್ನು ತಿಳಿಯಬಹುದಾಗಿದ್ದು, ಅತೀ ಹೆಚ್ಚು ಬಾರಿ ಫಾರ್ವರ್ಡ್‌ ಆಗಿರುವ ಮೆಸೆಜ್‌ ಫ್ರಿಕ್ವೆಟ್ಲಿ ಫಾರ್ವರ್ಡ್‌ ಎಂದು ಗುರುತಿಸಿಕೊಳ್ಳಲಿದೆ.

ವಾಟ್ಸಪ್‌ ಪ್ರೊಡೆಕ್ಟ್‌ ಕ್ಯಾಟಲಾಗ್

ವಾಟ್ಸಪ್‌ ಪ್ರೊಡೆಕ್ಟ್‌ ಕ್ಯಾಟಲಾಗ್

ವಾಟ್ಸಪ್‌ ಪ್ರೊಡೆಕ್ಟ್‌ ಕ್ಯಾಟಲಾಗ್ ಆಯ್ಕೆಯು ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಬಾರಿ ಅನುಕೂಲವಾಗಲಿದ್ದು, ವ್ಯಾಪಾರಸ್ಥರು ನೇರವಾಗಿ ವಾಟ್ಸಪ್‌ನಲ್ಲಿ ಅವರ ಉತ್ಪನ್ನಗಳನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡಲಿದೆ. ಉತ್ಪನ್ನಗಳ ಕ್ಯಾಟಲಾಗ್‌ ಫೋಟೊವನ್ನು ವಾಟ್ಸಪ್‌ ಪ್ರೊಫೈಲ್‌ ಆಗಿ ಇಡಬಹುದಾಗಿದ್ದು, ಗ್ರಾಹಕರಿಗೆ ನೋಡಲು ಅನುಕೂಲವಾಗಲಿದೆ.

ಸ್ಟಿಕ್ಕರ್ ನೋಟಿಫಿಕೇಶ್ ಪ್ರಿವ್ಯೂವ್

ಸ್ಟಿಕ್ಕರ್ ನೋಟಿಫಿಕೇಶ್ ಪ್ರಿವ್ಯೂವ್

ಆಪ್‌ ಟ್ರಾಕರ್‌ ಪ್ರಕಾರ ವಾಟ್ಸಪ್‌ ಬೇಟಾ 2.19.130 ವರ್ಷನ್‌ನಲ್ಲಿ ಈ ಸ್ಟಿಕ್ಕರ್ ನೋಟಿಫಿಕೇಶ್ ಪ್ರಿವ್ಯೂವ್ ಆಯ್ಕೆ ಸೇರಿಕೊಳ್ಳಲಿದ್ದು, ಬಳಕೆದಾರರಿಗೆ ನೋಟಿಫಿಕೇಶನ್ ಬಾರ್‌ನಲ್ಲಿಯೇ ಮೆಸೆಜ್‌ ಮತ್ತು ಸ್ಟಿಕ್ಕರ್‌ಗಳ ಕಾಣಿಸಿಕೊಳ್ಳಲಿವೆ. ಬಂದಿರುವ ಸ್ಟಿಕ್ಕರ್‌ ಮೆಸೆಜ್‌ ಅನ್ನು ನೋಟಿಫಿಕೇಶನ್‌ನಲ್ಲಿ ಪ್ರಿವ್ಯೂವ್‌ ಮಾಡಬಹುದು. ಸದ್ಯ ಈ ಸೇವೆ ಐಎಸ್‌ಓ ಡಿವೈಸ್‌ಗಳಲ್ಲಿ ಇದೆ.

ಇನ್‌ ಆಪ್‌ ಬ್ರೌಸರ್‌

ಇನ್‌ ಆಪ್‌ ಬ್ರೌಸರ್‌

ವಾಟ್ಸಪ್‌ ವೆಬ್‌ ಆಪ್‌ ಬಳಸುವಾಗ ಬಳಕೆದಾರರು ವೆಬ್‌ಆಪ್‌ ಅನ್ನು ಬಿಟ್ಟು ಬೇರೆ ಬ್ರೌಸರ್‌ ಅನ್ನು ತೆರೆಯಬಹುದಾಗಿದೆ. ವೆಬ್‌ಲಿಂಕ್‌ ಕ್ಲಿಕ್‌ ಮಾಡಿ ಹೊಸ ಬ್ರೌಸರ್‌ ಅನ್ನು ಓಪೆನ್‌ ಮಾಡಬಹುದಾಗಿದೆ. 2.19.74 ವರ್ಷನ್‌ನಲ್ಲಿ ಈ ಆಯ್ಕೆಯು ದೊರೆಯಲಿದೆ.

ಡಾರ್ಕ್‌ ಮೋಡ್‌

ಡಾರ್ಕ್‌ ಮೋಡ್‌

ವಾಟ್ಸಪ್‌ ನಲ್ಲಿ ಸಹ ಡಾರ್ಕ್‌ ಮೋಡ್‌ ಆಯ್ಕೆ ಸೇರಿಕೊಳ್ಳಲಿದ್ದು, ಹೆಚ್ಚು ಪ್ರಖರ ಬೆಳಕನ್ನು ತಗ್ಗಿಸುತ್ತದೆ. ರಾತ್ರಿ ಹೊತ್ತಿನಲ್ಲಿ ಡಾರ್ಕ್‌ ಮೋಡ್ ಆಯ್ಕೆಯನ್ನು ಬಳಕೆದಾಕೆದಾರರು ಬಳಸಬಹುದಾಗಿದೆ. ಸ್ಕ್ರೀನ್‌ ಕಪ್ಪು ಬಣ್ಣದಲ್ಲಿರಲಿದ್ದು, ಅಕ್ಷರಗಳು ಬಿಳಿ ಬಣ್ಣದಲ್ಲಿ ಕಾಣಿಸಿಕೊಳ್ಳಲಿವೆ.

Best Mobiles in India

English summary
5 unreleased WhatsApp features you should be excited about.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+