ಐಓಎಸ್‌ ಬಳಕೆದಾರರು ಮಿಸ್‌ಮಾಡಬಾರದ 6 ಆಪ್‌ಗಳು

By Suneel
|

ಟೆಕ್‌ ಕ್ಷೇತ್ರದಲ್ಲಿ ಈ ತಿಂಗಳು ಸಾಮಾಜಿಕ ಜಾಲತಾಣ ಬಳಕೆದಾರರಿಗೆಲ್ಲಾ ಬಂಪರ್‌ ಕೊಡುಗೆ ಒದಗಿರುವುದು ಬಹುಶಃ ಮಾಹಿತಿ ಅಪ್‌ಡೇಟ್‌ ಮಾಡಿಕೊಳ್ಳುವವರಿಗೆ ತಿಳಿದಿದೆ. ಫೇಸ್‌ಬುಕ್‌ 12 ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡು ವಿಶೇಷ ವೀಡಿಯೋ ಫೀಚರ್‌ ಲಾಂಚ್‌ ಮಾಡಿತು. ಹಾಗೆ ಟ್ವಿಟರ್ ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಇನ್ನೇನೋ ಅತಿಹೆಚ್ಚು ಅಚ್ಚು ಮೆಚ್ಚಾಗುವ ಹೊಸ ಟೈಮ್‌ಲೈನ್‌ ಅನ್ನು ಲಾಂಚ್‌ ಮಾಡಲು ಹೊರಟಿದೆ.

ಓದಿರಿ : ಕಣ್ಣುಗಳ ತೊಂದರೆಗೆ ಕಂಪ್ಯೂಟರ್ ಮೊಬೈಲೇ ಕಾರಣ!!!

ಆದರೆ ನಾವು ಈಗ ಹೇಳಲು ಹೊರಟಿರುವ ವಿಷಯ ಅಂದ್ರೆ ಈ ವಾರದಲ್ಲಿ ಕೆಲವು ಅತ್ಯುತ್ತಮ ಅಪ್ಲಿಕೇಶನ್‌ಗಳು ಅಭಿವೃದ್ದಿಗೊಂಡಿವೆ. ಆ ಅಪ್ಲಿಕೇಶನ್‌ಗಳನ್ನು ಯಾರೂ ಸಹ ಮಿಸ್‌ ಮಾಡಿಕೊಳ್ಳುವ ಹಾಗಿಲ್ಲ. ಅತ್ಯುತ್ತಮ ಉಪಯೋಗಿ ಆಪ್‌ಗಳನ್ನು ನಾವು ನಿಮಗೆ ತಿಳಿಸುತ್ತಿದ್ದು, ಅವು ಯಾವುವು ಎಂದು ತಿಳಿಯಲು ಲೇಖನದ ಸ್ಲೈಡರ್‌ಗಳನ್ನು ಓದಿ.

 ಏರ್‌ಮೇಲ್‌ (AirMail)

ಏರ್‌ಮೇಲ್‌ (AirMail)

ಈ ಆಪ್‌ ಅನ್ನು ಪ್ರಖ್ಯಾತ ಮ್ಯಾಕ್‌ ಇಮೇಲ್‌ ಕ್ಲೈಂಟ್‌ ಅಭಿವೃದ್ದಿಗಾರರು ಅಭಿವೃದ್ದಿಪಡಿಸಿದ್ದಾರೆ. ಈ ಆಪ್‌ ಅನ್ನು ಐಓಎಸ್ ಫೋನ್‌ಗಳಿಗಾಗಿ ಅಭಿವೃದ್ದಿಪಡಿಸಲಾಗಿದೆ. ಈ ಆಪ್‌ ಎಲ್ಲಾ ಪ್ರಾಥಮಿಕ ಖಾತೆಗಳ ನೋಟಿಫಿಕೇಶನ್‌ಗಳನ್ನು, ಕಡತಗಳನ್ನು, ಫಿಲ್ಟರ್‌ಗಳನ್ನು ನಿರ್ವಹಣೆ ಮಾಡುತ್ತದೆ. ಇದು ಹೆಚ್ಚು ಮೇಲ್‌ಬಾಕ್ಸ್‌ ಆಗಿ ಕೆಲಸ ನಿರ್ವಹಿಸುತ್ತದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

 ಹಾಪ್‌ಶಾಟ್‌ (HopShot)

ಹಾಪ್‌ಶಾಟ್‌ (HopShot)

ಹಾಪ್‌ಶಾಟ್‌ ಗೇಮ್‌ ಆಪ್‌. ಇದು ಹೆಚ್ಚು ಕ್ಯೂಟ್‌ ಆಫ್‌ ಆಗಿದ್ದು, ಇದರಲ್ಲಿ ಒಂದು ಸರಳ ಟಾಸ್ಕ್‌ ಇರುತ್ತದೆ. ಉತ್ತಮವಾಗಿ ಮನರಂಜಿಸಬಲ್ಲ ಗೇಮ್‌ ಆಪ್‌ ಆಗಿದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಪ್ಲೇಗ್ರೌಂಡ್‌ (PlayGround)

ಪ್ಲೇಗ್ರೌಂಡ್‌ (PlayGround)

ಈ ಅಪ್ಲಿಕೇಶನ್‌ನಲ್ಲಿ ನಿಮಗಿಷ್ಟವಾದ ಹಾಡನ್ನು ಸಂಗೀತದ ಇನ್ಸ್ಟ್ರುಮೆಂಟ್‌ಗಳಿಂದ ಪ್ಲೇ ಮಾಡಿ ನಂತರ ಅದನ್ನು ಉಳಿಸಿ ಇತರರಿಗೆ ಹಂಚಬಹುದಾಗಿದೆ. ನಿಮ್ಮ ಸೃಜನಶೀಲತೆಗೆ ಅವಕಾಶ ಮಾಡಿಕೊಡುತ್ತದೆ. ಅಲ್ಲದೇ ಉತ್ತಮ ಮನರಂಜನೆಯೂ ಇದರಿಂದ ಸಿಗುತ್ತದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಸೊಫ್ಲೋ (SoFlow)

ಸೊಫ್ಲೋ (SoFlow)

ಸೊಫ್ಲೋ ಆಪ್‌ ನಿಮ್ಮ ಎಲ್ಲಾ ಸಾಮಾಜಿಕ ಜಾಲತಾಣಗಳ ಸ್ಟ್ರೀಮ್‌ಗಳನ್ನು ಒಂದು ಕಡೆ ಸೇರಿಸುತ್ತದೆ. ಫೇಸ್‌ಬುಕ್‌, ಟ್ವಿಟರ್, ಇನ್ಸ್ಟಗ್ರಾಂ ಖಾತೆಗಳಿಗೆ ಈ ಆಪ್‌ಅನ್ನು ಕನೆಕ್ಟ್‌ ಮಾಡಿ. ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಸ್ಟ್ರೀಮ್‌ಗಳನ್ನು ಒಂದು ಕಡೆ ಸೇರಿಸಲು ಉತ್ತಮ ಆಪ್‌ ಆಗಿದೆ.
ಆಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಸ್ಪೋರ್ಟ್ಸ್‌ ಇಲ್ಲುಸ್ಟ್ರೇಟೆಡ್‌ (Sports IIIustrated)

ಸ್ಪೋರ್ಟ್ಸ್‌ ಇಲ್ಲುಸ್ಟ್ರೇಟೆಡ್‌ (Sports IIIustrated)

ಸ್ಪೋರ್ಟ್‌ ಇಲ್ಲುಸ್ಟ್ರೇಟೆಡ್‌ ಆಪ್‌ ನಿಮಗೆ ನಿರಂತರ ನ್ಯೂಸ್‌ಗಳನ್ನು ನೀಡುತ್ತದೆ. ಅಲ್ಲದೇ ನಿಮಗೆ ಇಷ್ಟವಾದ ಕ್ರೀಡೆಯ ಟೀಮ್‌ನ ವೀಡಿಯೋವನ್ನು ನೋಡಬಹುದಾಗಿದೆ. ಅಲ್ಲದೇ ಕ್ರೀಡೆ ಇರುವ ದಿನಾಂಕದ ಸ್ಕೋರ್‌ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.
ಆಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ರಿಫೋರ್ಟರ್‌ ಕ್ಯಾಮೆರಾ (Reporter Camera)

ರಿಫೋರ್ಟರ್‌ ಕ್ಯಾಮೆರಾ (Reporter Camera)

ಈ ಆಪ್‌ ನಿಮ್ಮ ಫೋಟೋಗಳನ್ನು ವಯಕ್ತಿಕವಾಗಿ ಇರಿಸಲು ಸಹಾಯ ಮಾಡುತ್ತದೆ. ಅಲ್ಲದೇ ವಿವಿಧ ಕ್ಯಾಮೆರಾ ನಿಯಂತ್ರಣ ಫೀಚರ್‌, ಎಡಟಿಂಗ್‌ ಫೀಚರ್‌ಗಳನ್ನು ಹೊಂದಿದೆ. ಅಲ್ಲದೇ ಫೋಟೋಗಳನ್ನು ಹೈಡ್‌ ಮಾಡಬಹುದಾಗಿದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಗಿಜ್‌ಬಾಟ್‌

ಗಿಜ್‌ಬಾಟ್‌

ನಾನು ಅಪ್ಲಿಕೇಶನ್ ಬಳಸಿ ಉಚಿತ ಕರೆಮಾಡಿನಾನು ಅಪ್ಲಿಕೇಶನ್ ಬಳಸಿ ಉಚಿತ ಕರೆಮಾಡಿ

ಕಂಪ್ಯೂಟರ್‌ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಸುವುದು ಹೇಗೆ?ಕಂಪ್ಯೂಟರ್‌ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಸುವುದು ಹೇಗೆ?

ಮೊಬೈಲ್‌ನಿಂದಲೇ ದೂರು ಸಲ್ಲಿಸಲು ಅಪ್ಲಿಕೇಶನ್‌ಮೊಬೈಲ್‌ನಿಂದಲೇ ದೂರು ಸಲ್ಲಿಸಲು ಅಪ್ಲಿಕೇಶನ್‌

ಟ್ರೆಂಡಿಂಗ್‌ನಲ್ಲಿ ಹುಚ್ಚಾ ಅಪ್ಲಿಕೇಶನ್‌ಟ್ರೆಂಡಿಂಗ್‌ನಲ್ಲಿ ಹುಚ್ಚಾ ಅಪ್ಲಿಕೇಶನ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
6 apps can't-miss in this week. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X