Subscribe to Gizbot

ಕಣ್ಣುಗಳ ತೊಂದರೆಗೆ ಕಂಪ್ಯೂಟರ್ ಮೊಬೈಲೇ ಕಾರಣ!!!

Written By:

ಮಾಹಿತಿ ತಂತ್ರಜ್ಞಾನದ ಬೃಹತ್‌ ಅಭಿವೃದ್ದಿಯಿಂದ ಇಂದು ಹೆಚ್ಚು ಡಿಜಿಟಲ್‌ ಉದ್ಯೋಗಿಗಳೇ ಹೆಚ್ಚಿದ್ದಾರೆ. ಅಲ್ಲದೇ ಟೆಕ್‌ ಕ್ಷೇತ್ರದ ಅಭಿವೃದ್ದಿನಿರತರು ಸಹ ತಾವು ಕೆಲಸ ನಿರ್ವಹಿಸುವುದು ಡಿಜಿಟಲ್‌ ಸಿಸ್ಟಮ್‌ಗಳಲ್ಲೇ. ಇಂದು ಪ್ರತಿಯೊಂದು ಕ್ಷೇತ್ರಗಳಲ್ಲೂ ಕಂಪ್ಯೂಟರ್ ಇಲ್ಲದೇ ಅಂದಿನ ಕೆಲಸಗಳೇ ಸಾಗದು ಎನ್ನುವಂತಾಗಿದೆ. ಕಂಪ್ಯೂಟರ್‌ ಜೊತೆಗೆ ಮಿನಿ ಕಂಪ್ಯೂಟರ್‌ಗಳಾದ ಸ್ಮಾರ್ಟ್‌ಫೋನ್‌ಗಳು ಇಂದು 24 ಗಂಟೆಯೂ ಸಹ ಕೈಯಲ್ಲೇ ಇರುತ್ತವೆ. ಈ ವಿಷಯಾನ ಹೀಗೆ ಚರ್ಚೆ ಮಾಡಲು ಕಾರಣ ಏನು ಎಂಬುದು ನಿಮಗೆ ಪ್ರಶ್ನೆ ಹುಟ್ಟುತ್ತಿರಬಹುದು.

ಓದಿರಿ :ಪ್ರಖ್ಯಾತ ಟೆಕ್‌ ಲೋಗೋಗಳ ರಹಸ್ಯ ಸಂದೇಶಗಳು ಏನು ಗೊತ್ತೇ?

ಕಾರಣ ಬೇರೇನು ಅಲ್ಲಾ. ಮೇಲೆ ತಿಳಿಸಿದಂತೆ ಬೆಳಿಗ್ಗೆ ಇಂದ ರಾತ್ರಿ ಮಲಗೋವರೆಗೂ ಸಹ ಈ ಡಿಜಿಟಲ್‌ ಸ್ಕ್ರೀನ್‌ಗಳನ್ನು ನೋಡೋ ಕಣ್ಣು ಅಧಿಕವಾದ ಆಯಾಸ ಪಡೆಯುತ್ತವೆ. ಕಣ್ಣು ಎಷ್ಟು ಮುಖ್ಯ ಎಂಬುದನ್ನು ಒಮ್ಮೆ ಕಣ್ಣು ಮುಚ್ಚಿ ಚಿಂತಿಸಿ ನಿಮಗೆ ಅರ್ಥವಾಗುತ್ತದೆ. ನಿರಂತರ ಡಿಜಿಟಲ್‌ ಸ್ಕ್ರೀನ್‌ ನೋಡುವುದರಿಂದ ಕಣ್ಣುಗಳಿಗೆ ಅಧಿಕವಾದ ಸಮಸ್ಯೆ ತಪ್ಪಿದಲ್ಲ. ಆದ್ದರಿಂದ ಇಂದಿನ ಲೇಖನದಲ್ಲಿ ಕಂಪ್ಯೂಟರ್‌ ಹಾಗೂ ಸ್ಮಾರ್ಟ್‌ಫೋನ್‌ ಬಳಸುವವರು ತಮ್ಮ ಕಣ್ಣುಗಳಿಗೆ ಆಗಬಹುದಾದ ಆಯಾಸ, ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳುವುದು ಎಂಬುದನ್ನು ಇಂದಿನ ಲೇಖನದಲ್ಲಿ ನಿಮಗಾಗಿ ತಿಳಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಂಪ್ಯೂಟರ್‌ ಕನ್ನಡಕಗಳನ್ನು ಬಳಸಿ

ಕಂಪ್ಯೂಟರ್‌ ಕನ್ನಡಕಗಳನ್ನು ಬಳಸಿ

ಕಂಪ್ಯೂಟರ್‌ನಲ್ಲಿ ಹೆಚ್ಚು ಕೆಲಸ ನಿರ್ವಹಿಸುವವರು ಕಂಪ್ಯೂಟರ್‌ ಕನ್ನಡಕಗಳನ್ನು ಬಳಸಿ. ಡಿಜಿಟಲ್‌ ಕಣ್ಣಿನ ಆಯಾಸ ಸಮಸ್ಯೆಯನ್ನು ಕಡಿಮೆ ಮಾಡುವಂತಹ ಲೆನ್ಸ್ ಮತ್ತು ಕನ್ನಡಗಳನ್ನು ಬಳಸಿ. ಹಾಗೂ ಹಾನಿಕಾರಕ ನೀಲಿ ಬೆಳಕನ್ನು ಬ್ಲಾಕ್‌ ಮಾಡಿ ನಿಮ್ಮ ದೃಷ್ಟಿಯನ್ನು ಹೆಚ್ಚಿಸಿಕೊಳ್ಳಿ.

 20-20-20 ನಿಯಮ ಪಾಲಿಸಿ

20-20-20 ನಿಯಮ ಪಾಲಿಸಿ

ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡ್‌ ಅನ್ನು ವಿರಾಮ ತೆಗೆದುಕೊಳ್ಳಿ. ವಿರಾಮದ ಸಮಯದಲ್ಲಿ 20 ಅಡಿದೂರದ ವಿಶಾಲ ಪ್ರದೇಶದ ಕಡೆಗೆ ನೋಡುವುದರ ಮೂಲಕ ಕಂಪ್ಯೂಟರ್‌ ಸ್ಕ್ರೀನ್‌ ನೋಡುವುದರಿಂದ ವಿರಾಮ ಪಡೆಯಿರಿ.

ಬೆಳಕನ್ನು ಕಡಿಮೆಗೊಳಿಸಿ

ಬೆಳಕನ್ನು ಕಡಿಮೆಗೊಳಿಸಿ

ನೀವು ಕೆಲಸ ಮಾಡುವ ಸ್ಥಳದಲ್ಲಿ ಬೆಳಕು ಪ್ರತಿಫಲನ ಹೊಂದಿ ಕಣ್ಣಿಗೆ ಚುಚ್ಚುವಂತ ಬೆಳಕು ನಿರ್ಮಾಣವಾಗದಂತೆ ವ್ಯವಸ್ಥೆಹೊಂದಿ.

ಹೈ-ಫೈವ್‌

ಹೈ-ಫೈವ್‌

ಕಂಪ್ಯೂಟರ್‌ ಸ್ಕ್ರೀನ್‌ ನಿಮಗೆ ಉತ್ತಮವಾಗಿ ಮಾಹಿತಿ ಕಾಣುವಂತಹ ಅಂತರದಲ್ಲಿ ಕುಳಿತುಕೊಳ್ಳಿ.

ಅಕ್ಷರಗಳ ಗಾತ್ರ ಹಿಗ್ಗಿಸಿ

ಅಕ್ಷರಗಳ ಗಾತ್ರ ಹಿಗ್ಗಿಸಿ

ಕಂಪ್ಯೂಟರ್‌ನಲ್ಲಿ ಅಕ್ಷರಗಳು ಶುದ್ಧವಾಗಿ ಕಾಣುವಂತೆ ಮಾಡಲು ಅಕ್ಷರಗಳ ಗಾತ್ರ ಹಿಗ್ಗಿಸಿ ಕಾರ್ಯನಿರ್ವಹಿಸಿ.

 ಡಿಸ್‌ಪ್ಲೇ ಅಪ್‌ಗ್ರೇಡ್‌ ಮಾಡಿ

ಡಿಸ್‌ಪ್ಲೇ ಅಪ್‌ಗ್ರೇಡ್‌ ಮಾಡಿ

ನಿವೇನಾದರೂ ಇನ್ನು ಸಹ ಹಳೆ ಶೈಲಿಯ ಕಂಪ್ಯೂಟರ್‌ಗಳನ್ನೇ ಬಳಸುತ್ತಿದ್ದರೆ ಅವುಗಳ ಟ್ಯೂಬ್‌ ಸ್ಟೈಲ್‌ ಮಾನಿಟರ್‌ ಅನ್ನು ಬದಲಿಸಿ. LCD (Liquid crystal display) ಡಿಸ್‌ಪ್ಲೇಗಳನ್ನು ಲ್ಯಾಪ್‌ಟಾಪ್‌ ಕಂಪ್ಯೂಟರ್‌ಗಳಲ್ಲಿ ಬಳಸುತ್ತಿದ್ದು, ಅವುಗಳು ಕಣ್ಣಿಗೆ ಉತ್ತಮವಾಗಿವೆ. ಹಾಗೂ ಪ್ರತಿಫಲನ ಮೇಲ್ಮೈಗೆ ವಿರುದ್ಧವಾಗಿವೆ.

ನಿಮ್ಮ ಕಂಪ್ಯೂಟರ್‌ ಡಿಸ್‌ಪ್ಲೇ ಸೆಟ್ಟಿಂಗ್‌ ವ್ಯವಸ್ಥೆ

ನಿಮ್ಮ ಕಂಪ್ಯೂಟರ್‌ ಡಿಸ್‌ಪ್ಲೇ ಸೆಟ್ಟಿಂಗ್‌ ವ್ಯವಸ್ಥೆ

ಕಣ್ಣಿನ ಸಮಸ್ಯೆ ನಿವಾರಣೆಗೆ ಡಿಸ್‌ಪ್ಲೇ ಸೆಟ್ಟಿಂಗ್ ಅನ್ನು ವ್ಯವಸ್ಥೆಗೊಳಿಸಿ.
* Brightness- ನೀವು ಇರುವ ಪ್ರದೇಶದ ಸುತ್ತಲ ಬೆಳಕಿನಷ್ಟೆ ಪ್ರಮಾಣ ನಿಮ್ಮ ಕಂಪ್ಯೂಟರ್‌ನ ಬ್ರೈಟ್ನೆಸ್‌ ಇರಲಿ. ಅದನ್ನು ಸರಿಯಾಗಿ ಹೊಂದಿಸಿ.
* ಹೆಚ್ಚು ಕಾಲ ಟೈಪ್‌ ಮಾಡುವ ಡಾಕುಮೆಂಟ್‌ಗಳಿಗೆ ಬಿಳಿ ಪರದೆಯ ಮೇಲೆ ಕಪ್ಪು ಪ್ರಿಂಟ್‌ ಇರುವಂತೆ ನೋಡಿಕೊಳ್ಳಿ.
* ಬಣ್ಣದ ಟೆಂಪರೇಚರ್- ನೀಲಿ ಬಣ್ಣವನ್ನು ಕಡಿಮೆ ಮಾಡುವುದರೊಂದಿಗೆ ಕಣ್ಣುಗಳಿಗೆ ಆಗಬಹುದಾದ ಸಮಸ್ಯೆ ನಿವಾರಿಸಬಹುದಾಗಿದೆ.

ಹೆಚ್ಚಾಗಿ ಕಣ್ಣು ಮಿಟುಕಿಸುವುದು ಒಳ್ಳೆಯದು

ಹೆಚ್ಚಾಗಿ ಕಣ್ಣು ಮಿಟುಕಿಸುವುದು ಒಳ್ಳೆಯದು

ಕಂಪ್ಯೂಟರ್ ಮುಂದೆ ಕುಳಿತಾಗ ಹೆಚ್ಚು ಕಣ್ಣು ಮಿಟುಕಿಸುವುದರಿಂದ ತೇವಾಂಶ ಕಣ್ಣಿನಲ್ಲಿ ಒಣಗುವುದನ್ನು ತಡೆಯಬಹುದಾಗಿದೆ. ಕಂಪ್ಯೂಟರ್ ಮುಂದೆ ಕುಳಿತಾಗ ಹೆಚ್ಚು ಕಣ್ಣು ಮಿಟುಕಿಸುವುದು ಬಹಳ ಮುಖ್ಯ. ಕಣ್ಣಿನ ವ್ಯಾಯಾಮ ಮಾಡಿ.

ಕಣ್ಣಿನ ಪರೀಕ್ಷೆ ನಡೆಸಿ

ಕಣ್ಣಿನ ಪರೀಕ್ಷೆ ನಡೆಸಿ

ಕಂಪ್ಯೂಟರ್ ಕೆಲಸ ನಿರ್ವಹಿಸಲು ಪ್ರಾರಂಭಿಸಿದ ಮೇಲೆ ನಿಮ್ಮ ದೃಷ್ಟಿಯಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಿದ್ದರೆ, ಒಮ್ಮೆ ಕಣ್ಣಿನ ಪರೀಕ್ಷೇ ಮಾಡಿಸಿ.

 ಡಿಜಿಟಲ್‌ ಡಿವೈಸ್‌ ಬಳಕೆ ಕಡಿಮೆ ಮಾಡಿ

ಡಿಜಿಟಲ್‌ ಡಿವೈಸ್‌ ಬಳಕೆ ಕಡಿಮೆ ಮಾಡಿ

ಕಣ್ಣಿನ ಸುರಕ್ಷತೆಗಾಗಿ ದಿನದ ಕೊನೆಯಲ್ಲಿ ಮಲಗುವ ವೇಳೆಯಾದರೂ ಸ್ವಲ್ಪ ಹೊತ್ತು ಪ್ರಿಂಟ್‌ ಆದ ಪುಸ್ತಕಗಳನ್ನು ಓದಿ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಪ್ರಪಂಚದಲ್ಲೇ ಸುಂದರವಾದ ವಾಲ್‌ಪೇಪರ್‌ಗಳು ಯಾವುವು ಗೊತ್ತೇ ?

ಏಲಿಯನ್‌ಗಳು ನಾಶ : ಸಂಶೋಧನೆಯಿಂದ ಸ್ಪಷ್ಟ ಉತ್ತರ

2016ರ ಹೆಚ್ಚು ಬೇಡಿಕೆ ಇರುವ ಟಾಪ್‌ ಉದ್ಯೋಗಗಳು

3G ಡೇಟಾ ಸಂಪರ್ಕವನ್ನು 4G ಗೆ ವೇಗಗೊಳಿಸುವುದು ಹೇಗೆ ?

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Computer Eye Strain: 10 Steps for Relief. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot