Just In
- 5 hrs ago
ಮೆಸೆಂಜರ್ಗಾಗಿ ಕೆಲವು ಫೀಚರ್ಸ್ ಪರಿಚಯಿಸಿದ ಮೆಟಾ; ಬಳಕೆದಾರರಿಗೆ ಸಾಕಷ್ಟು ಅನುಕೂಲ!
- 6 hrs ago
ಟೆಲಿಗ್ರಾಮ್ನಲ್ಲಿರುವ ಈ ಆಯ್ಕೆಯು ವಾಟ್ಸಾಪ್ಗಿಂತ ಭಿನ್ನವಾಗಿದೆ! ಇದರ ಲಾಭವೇನು?
- 7 hrs ago
ಸ್ಪ್ಯಾಮ್ ಕರೆಗಳನ್ನು ನಿರ್ಬಂಧಿಸುವುದು ಹೇಗೆ ಗೊತ್ತಾ?..ಈ ಕ್ರಮಗಳನ್ನು ಅನುಸರಿಸಿ!
- 8 hrs ago
ಹೊಸ ಚಾರ್ಜರ್ ಲಾಂಚ್!..ಇದ್ರಲ್ಲಿ ಒಂದೇ ವೇಳೆ 3 ಡಿವೈಸ್ ಚಾರ್ಜ್ ಸಾಧ್ಯ!
Don't Miss
- Movies
BBK9: ನೇಹಾ ಗೌಡ ಜೊತೆ ಬಿಗ್ ಬಾಸ್ ಸೀಸನ್ 9ರ ಸಪ್ಪೆ ಹೊಟೇಲ್ ಗ್ಯಾಂಗ್ ಪ್ರತ್ಯಕ್ಷ..!
- News
ಹೊಸ ಘಟಕ, ಪದಾಧಿಕಾರಿ ಘೋಷಣೆ, ಶೀಘ್ರವೇ ಚುನಾವಣೆ ಅಭ್ಯರ್ಥಿ ಆಯ್ಕೆ ಆರಂಭ: AAP
- Sports
ಟೆಸ್ಟ್ನಲ್ಲೂ ನಂಬರ್ 1 ಸ್ಥಾನದ ಮೇಲೆ ಕಣ್ಣಿಟ್ಟ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ
- Finance
Union Budget 2023: ತೆರಿಗೆದಾರರಿಗೆ ದೀರ್ಘಾವಧಿ ತೆರಿಗೆ ವಿನಾಯಿತಿ ಘೋಷಿಸಿ: KPMG
- Lifestyle
ಆ್ಯಪಲ್ ಶೇಪ್ನ ದೇಹ ಹೊಂದಿರುವವರಿಗೆ ಹೆಚ್ಚಾಗಿ ಕಾಯಿಲೆ ಬೀಳುತ್ತಾರೆ, ಏಕೆ?
- Automobiles
ವಧುವನ್ನು ಮನೆಗೆ ಕರೆದೊಯ್ಯಲು ತಂದೆಯ ಹಳೆಯ ಮಾರುತಿ 800 ಕಾರು ಬಳಿಸಿದ ಕೆನಡಾದ ಎನ್ಆರ್ಐ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿಮ್ಮ ಭಾವನೆಗಳಿಗೆ ಆಪ್ತಜೀವ ಬೇಕೆ.? ಈ ಆಪ್‌ಗಳಲ್ಲಿ ಹುಡುಕಿ ನೋಡಿ.!!
ಮನುಷ್ಯ ಸಂಘಜೀವಿ. ತನ್ನ ಸುತ್ತಮುತ್ತಲಿನ ಎಲ್ಲರೊಂದಿಗೆ ಸ್ನೇಹಮಯಿ ಆಗಿದ್ದರೂ, ತನ್ನ ಸಂತೋಷ, ದುಃಖ, ನೋವಿನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಒಂದು ಆಪ್ತ ಜೀವ ಬೇಕು ಎಂದೆನಿಸಿರದೇ ಇರದು. ಮಹಿಳೆ ಅಥವಾ ಪುರುಷ ಎಂಬ ಲಿಂಗ ಭೇದವಿಲ್ಲದೇ ಯಾರೇ ಆಗಲಿ, ನನಗೊಂದು ಆಪ್ತಜೀವ ಇರಬೇಕು ಎಂದು ಬಯಸುತ್ತಾರೆ ಮತ್ತು ಅದು ಸಹಜ ಕೂಡ. ಇದು ಸ್ಮಾರ್ಟ್‌ಯುಗ ಆಗಿರುವುದರಿಂದ ಆಪ್ತರನ್ನು ಹುಡುಕುವುದೇನು ಕಷ್ಟವಲ್ಲ. ಅದಕ್ಕೂ ಸಹ ಆಪ್‌ಗಳಿವೆ.!

ಹೌದು, ನಿಮ್ಮ ಭಾವನೆ ಮತ್ತು ಅಭಿರುಚಿಗಳಿಗೆ ಸರಿ ಹೊಂದುವಂತಹ ಆಪ್ತರನ್ನು ಹುಡಕಲು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅನೇಕ ಡೇಟಿಂಗ್ ಆಪ್‌ಗಳು ಲಭ್ಯವಿದ್ದು, ಯುವಜನತೆ ಡೇಟಿಂಗ್ ಆಪ್‌ಗಳತ್ತ ಹೆಚ್ಚು ವಾಲುತ್ತಿದೆ. ಪ್ರಸ್ತುತ ಬ್ಯೂಸಿ ಲೈಫ್ ಸ್ಟೈಲ್‌ನಿಂದಾಗಿ ಬಹುತೇಕರು ತಮಗೆ ಸರಿ ಹೊಂದುವ ಆಪ್ತರನ್ನು ಹುಡಕಲು ಈ ಡೇಟಿಂಗ್ ಆಪ್‌ಗಳ ಮೊರೆಹೋಗುತ್ತಿದ್ದಾರೆ. ಇದರಿಂದ ಡೇಟಿಂಗ್ ಆಪ್‌ಗಳಲ್ಲಿ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದು, ಭಾರೀ ಜನಪ್ರಿಯಗೊಳ್ಳುತ್ತಿವೆ.

ಸಮಾನ ವಯಸ್ಸು ಮತ್ತು ಸಮಾನ ಅಭಿರುಚಿಗಳು ಪರಸ್ಪರ ನಡುವೆ ಆಪ್ತತೆಯನ್ನು ಗಟ್ಟಿಗೊಳಿಸುತ್ತದೆ. ಹಾಗಾಗಿ ಡೇಟಿಂಗ್ ಆಪ್‌ಗಳಲ್ಲಿ ಅಭಿರುಚಿಗಳನ್ನು ನಮೂದಿಸುವ ಮೂಲಕ ನಿಮ್ಮ ಪ್ರೊಫೇಲ್ ರಚಿಸಿಕೊಳ್ಳವುದಕ್ಕೆ ಅವಕಾಶ ನೀಡಲಾಗಿರುವುದು ಆ ಆಧಾರದ ಮೇಲೆ ನಿಮಗೆ ಸರಿಹೊಂದುವ ಆಪ್ತರ ಆಯ್ಕೆಗಳನ್ನು ಆಪ್‌ನಲ್ಲಿ ಒದಗಿಸಲಾಗುತ್ತದೆ. ಅಂಥಹ ಕೆಲವು ಜನಪ್ರಿಯ ಡೇಟಿಂಗ್ ಆಪ್‌ಗಳ ಬಗ್ಗೆ ಕಿರುಮಾಹಿತಿ ನೀಡಿದ್ದು, ಅವುಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಟಿಂಡರ್ (Tinder)
ಭಾರತದಲ್ಲಿ ಹೆಚ್ಚು ಜನಪ್ರಿಯತೆ ಹೊಂದುತ್ತಿರುವ ಈ ಟಿಂಡರ್ ಡೇಟಿಂಗ್ ಆಪ್ ಉಚಿತವಾಗಿದ್ದು, ನಿಮ್ಮ ಲೋಕೆಶನ್ ಆಧಾರದ ಮೇಲೆ ಸುತ್ತಮುತ್ತಲಿನ ಇತರೆ ಫ್ರೊಫೇಲ್‌ಗಳ ಆಯ್ಕೆ ಬರುತ್ತವೆ. ಎಡಕ್ಕೆ ಸರಿಸುತ್ತಾ ಮುಂದಿನ ಪ್ರೋಫೇಲ್‌ಗಳನ್ನು ನೋಡಬಹುದು. ಬಳಕೆದಾರರು ಒಂದು ದಿನಕ್ಕೆ ನಿಯಮಿತ ಪ್ರೋಫೇಲ್‌ಗಳನ್ನು ಮಾತ್ರ ನೋಡಬಹುದಾಗಿದ್ದು, ಹೆಚ್ಚಿನ ಪ್ರೋಫೇಲ್ ನೋಡಲು ಇಚ್ಚಿಸಿದರೇ ದರ ನೀಡಬೇಕಾಗುತ್ತದೆ. ಓಕೆ ಆದ ಪ್ರೋಫೇಲ್ ಬಳಕೆದಾರರೊಂದಿಗೆ ಚಾಟ್ ಮಾಡಲು ಅನುಮತಿ ಸಿಗುತ್ತದೆ. ಇನ್ನೂ ಈ ಆಪ್‌ಗೆ ಬಳಕೆದಾರರು ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ಲಾಗ್‌ಇನ್ ಆಗಬಹುದು ಅಥವಾ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಬಹುದು.

ಟ್ರೂಲೀ ಮ್ಯಾಡ್ಲೀ (TrulyMadly)
ಟ್ರೂಲೀ ಮ್ಯಾಡ್ಲೀ ಉತ್ತಮ ಡೇಟಿಂಗ್ ಆಪ್ ಆಗಿದ್ದು, ಬಳಕೆದಾರರು ನೀಡಿರುವ ಪ್ರೋಫೇಲ್‌ಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಪ್ರೋಫೇಲ್‌ಗಳ ಖಚಿತತೆಗಾಗಿ ಗುರುತಿನ ಪುರಾವೆಯನ್ನು ಕೇಳಲಾಗುತ್ತದೆ. ನಿಮ್ಮ ಪ್ರೋಫೇಲ್ ಆಧಾರದ ಮೇಲೆ ನಿಮಗೆ ಸರಿಹೊಂದುವಂತಹ ಪ್ರೊಫೇಲ್‌ಗಳನ್ನು ನೀಡುತ್ತಾರೆ, ನಿಮ್ಮ ಅಭಿರುಚುಗೆ ಮ್ಯಾಚ್ ಆದ ಬಳಕೆದಾರರೊಂದಿಗೆ ಪ್ರತ್ಯಕವಾಗಿ ಸಂದೇಶ ಮಾಡಲು ಅನುಮತಿ ಪಡೆಯುತ್ತಿರಿ. ನಿಮ್ಮ ಪ್ರೋಫೇಲ್ ಸುರಕ್ಷತೆ ಇದ್ದು, ಯಾರು ಡೌನಲೋಡ್ ಮಾಡಿಕೊಳ್ಳಲು ಅವಕಾಶ ನೀಡಿಲ್ಲ. ಅನುಚಿತ ವರ್ತನೆಗೆ ತೋರಿಸಬಾರದೆಂದು ಬಳಕೆದಾರರ ಮೇಲೆ ನಿಗಾ ಇಡಲಾಗಿರುತ್ತದೆ.

ಹ್ಯಾಪನ್ (Happn)
ಈ ಹ್ಯಾಪನ್ ಸಹ ಲೋಕೆಷನ್ ಆಧಾರಿತ ಡೇಟಿಂಗ್ ಆಪ್ ಆಗಿದ್ದು, ಇದರ ಫ್ರೋಫೇಲ್ ಮ್ಯಾಚಿಂಗ್ ಸ್ವಲ್ಪ ಭಿನ್ನವಾಗಿದೆ. ನಿಮ್ಮ ನಿಜ ಜೀವನದಲ್ಲಿ ಕಂಡಿರುವ ವ್ಯಕ್ತಿಗಳು ಹ್ಯಾಪನ್ ಆಪ್‌ನಲ್ಲಿ ಪ್ರೋಫೇಲ್ ಹೊಂದಿದ್ದಾರಾ ಎಂದು ತಿಳಿಯಬಹುದು, ಹೊಂದಿದ್ದರೆ ನೀವು ಅವರಿಗೆ ಹ್ಯಾಪನ್ ಆಪ್ ಮೂಲಕ ರೀಕ್ವೆಸ್ಟ್ ಕಳುಹಿಸಬಹುದು ನಿಮ್ಮ ರೀಕ್ವೆಸ್ಟ್ ಅವರು ಸ್ವೀಕರಿಸಿದರೇ ನೀವು ಅವರೊಂದಿಗೆ ಮಾತಾಡುವ ಅವಕಾಶ ಇದೆ.

ವೂ (Woo)
ವೂ ಡೇಟಿಂಗ್ ಆಪ್ ವಿದ್ಯಾವಂತ ಪ್ರೋಫೆಶನಲ್‌ಗಳಿಗೆ ಮಾತ್ರ. ಇಲ್ಲಿ ವಾಯಿಸ್ ಮೂಲಕ ಪರಿಚಯ ಮಾಡಿಕೊಳ್ಳುವ ಅವಕಾಶವಿದೆ. ಮಹಿಳೆಯರು ತಮ್ಮ ಹೆಸರು, ನಂಬರ್ ಮತ್ತು ಲೋಕೆಷನ್‌ಗಳನ್ನು ಶೇರ್‌ಮಾಡದೇ ಧ್ವನಿ ಮೂಲಕ ತಮ್ಮನ್ನ ಪರಿಚಯಿಸಿಕೊಳ್ಳಬಹುದಾಗಿದೆ. ಈ ಆಪ್ ಅನಲ್ಲಿಯೂ ಸಹ ಎಡಕ್ಕೆ, ಬಲಕ್ಕೆ ಸರಿಸುವ ಮೂಲಕ ಪ್ರೋಫೇಲ್‌ಗಳ ವೀಕ್ಷಣೆ ಮಾಡಬಹುದಾಗಿದ್ದು, ಪರಸ್ಪರ ಒಪ್ಪಿದ ಪ್ರೋಫೇಲ್ ಬಳಕೆದಾರರು ಚಾಟ ಮಾಡವ ಮತ್ತು ಮಾತನಾಡುವ ಅವಕಾಶ ಇರಲಿದೆ.

ಒಕ್ಕುಪಿಡ್ (OkCupid )
ಒಕ್ಕುಪಿಡ್ ಡೇಟಿಂಗ್ ಆಪ್ ಅಂತರಾಷ್ಟ್ರೀಯ ಮಟ್ಟದ ಡೇಟಿಂಗ್ ಆಪ್ ಆಗಿದ್ದು, ಒಟ್ಟು 113 ರಾಷ್ಟ್ರಗಳಲ್ಲಿ ನೆಟವರ್ಕ್ ಹೊಂದಿದೆ. ಈ ಆಪ್‌ನಲ್ಲಿ ಬಳಕೆದಾರರನ್ನು ಖಚಿತಪಡಿಸಿಕೊಳ್ಳಲು ಹಲವು ಪ್ರಶ್ನೇಗಳನ್ನು ಕೇಳಲಾಗುತ್ತದೆ ಮತ್ತು ಸರ್ಚ ಸೆಕ್ಷನ್ ಮೂಲಕ ನಿಮಗೆ ಸರಿಯಾಗಿ ಮ್ಯಾಚ್ ಆಗುವ ಆಪ್ತರನ್ನು ಹುಡುಕಿಕೊಳ್ಳಬಹುದಾಗಿದೆ. ಈ ಡೇಟಿಂಗ್ ಆಪ್‌ನಲ್ಲಿಯೂ ಸಹ ನಿಮ್ಮ ಪ್ರೋಫೇಲ್‌ಗೆ ಸುರಕ್ಷತೆಗೆ ಗಮನ ನೀಡಲಾಗುತ್ತದೆ.

ಕೊನೆಯ ಮಾತು.
ಅನೇಕ ಡೇಟಿಂಗ್ ಆಪ್‌ಗಳು ದೊರೆಯುತ್ತಿವೆ ಮತ್ತು ಅವುಗಳು ಸಾಕಷ್ಟು ಸುರಕ್ಷತೆ ನೀಡುತ್ತಿವೆ ನಿಜ, ಆದರೆ ಪ್ರೋಫೇಲ್‌ಗಳ ದುರ್ಬಳಕೆ ಮಾಡಿಕೊಳ್ಳುವುದು ಮತ್ತು ಮೋಸ ಮಾಡುವ ಸಾಧ್ಯತೆಗಳನ್ನು ಸಹ ತಳ್ಳಿಹಾಕುವಂತಿಲ್ಲಾ. ಹೀಗಾಗಿ ನೀವು ಡೇಟಿಂಗ್ ಆಪ್‌ಗಳನ್ನು ಬಳಸುವ ಮುನ್ನ ಎಚ್ಚರವಹಿಸಿ. ಏಕೆಂದರೇ ಭಾವನೆಗಳಿಗೆ ಧಕ್ಕೆ ಆದರೆ ಸುಧಾರಿಸುವುದು ಕಷ್ಟ ಮತ್ತು ಅವಸರದಲ್ಲಿ ಆಪ್ತರನ್ನು ಪಡೆಯಲು ಸಾಧ್ಯವಿಲ್ಲ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470