Subscribe to Gizbot

ನೀವಿರುವಲ್ಲಿಯೇ ಆಹಾರ ಪಡೆಯಲು ಟಾಪ್‌ ಆಪ್‌ಗಳು

Written By:

ತಂತ್ರಜ್ಞಾನ ಅಭಿವೃದ್ದಿಯಿಂದ ಇಂದು ಸಮಸ್ಯೆಗಳನ್ನು ನಾವು ಬಹುಬೇಗ ಇತರರ ಆಧಾರವನ್ನು ನೆಚ್ಚಿಕೊಳ್ಳದೇ ಬಗೆಹರಿಸಿಕೊಳ್ಳುತ್ತಿದ್ದೇವೆ. ಸಮಯವನ್ನು ಉಳಿಸಿಕೊಳ್ಳುತ್ತಿದ್ದೇವೆ. ನಮಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಎಲ್ಲಿ ಹೋಗಬೇಕೆಂದು ಕುಳಿತಲ್ಲಿಯೇ ತಿಳಿಯುತ್ತಿದ್ದೇವೆ. ಒಂದಲ್ಲಾ ಒಂದು ರೀತಿ ಇಂದು ಸ್ಮಾರ್ಟ್‌ಫೋನ್‌ಗಳು ದಿನನಿತ್ಯ ಜೀವನದಲ್ಲಿ ನಾವು ಪಡೆಯ ಬೇಕಾದ ಸೇವೆಗಳನ್ನು ಕುಳಿತಲ್ಲಿಗೆ ತರುತ್ತಿವೆ ಎಂಬುದಂತು ಸತ್ಯ.

ಓದಿರಿ: ಆಪ್‌ಗಳ ಆಟೋ ಅಪ್‌ಡೇಟ್‌ ಸ್ಟಾಪ್ : ಫೋನ್‌ ವೇಗ ಹೆಚ್ಚಳ

ಸ್ಮಾರ್ಟ್‌ಫೋನ್‌ಗಳ ಸ್ಮಾರ್ಟ್‌ ಸೇವೆಗೆ ಉದಾಹರಣೆಯಾಗಿ ಮೊಬೈಲ್‌ ಬ್ಯಾಕಿಂಗ್‌, ಮೊಬೈಲ್‌ ಶಾಪಿಂಗ್‌ ಪ್ರಾಥಮಿಕ ಉದಾಹರಣೆ. ಇತರರ ಖಾತೆಗೆ ಹಣ ಕಟ್ಟಲು ಬ್ಯಾಂಕ್‌ನಲ್ಲಿ ಹೋಗಿ ನಿಲ್ಲುವುದನ್ನು ಸ್ಮಾರ್ಟ್‌ಫೋನ್‌ ತಪ್ಪಿಸಿವೆ. ಶಾಪಿಂಗ್‌ಗಾಗಿ ಮಾಲ್‌ಗಳಿಗೆ ಹೋಗಿ ಸುತ್ತಲು ಆಗದ ಹಾಗೂ ಸಮಯವು ಇಲ್ಲದವರಿಗೆ ಆನ್‌ಲೈನ್‌ ಶಾಪಿಂಗ್ ವ್ಯವಸ್ಥೆಯಲ್ಲಿ ಉಪಯೋಗವಾಗಿವೆ. ಈಗ ತಿಳಿಯ ಬೇಕಾಗಿರುವ ಮಾಹಿತಿ ನಿಮ್ಮ ಮನೆಯ ಬಾಗಿಲಿಗೆ ನೆಚ್ಚಿನ ಆಹಾರ ತಂದುಕೊಡಲು ಉಪಯುಕ್ತವಾದ ಉತ್ತಮ ಅಪ್ಲಿಕೇಶನ್‌ಗಳು. ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಭಾರತದಾದ್ಯಂತ ಆಹಾರ ಸೇವೆ ಒದಗಿಸುವ ಟಾಪ್‌ 8 ಮೊಬೈಲ್‌ ಅಪ್ಲಿಕೇಶನ್‌ಗಳ ಬಗ್ಗೆ ಮಾಹಿತಿ ನೀಡುತ್ತಿದೆ. ಈ ಅಪ್ಲಿಕೇಶನ್‌ಗಳಲ್ಲಿ ಆಹಾರ ಬುಕ್‌ ಮಾಡಿದರೆ ನಿಮ್ಮ ಮನೆಬಾಗಿಲಿಗೆ ಆಹಾರವನ್ನು ರಿಯಾಯಿತಿ ದರದೊಂದಿಗೆ ತಂದುಕೊಡಲಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಒಎಸ್, ಆಂಡ್ರಾಯ್ಡ್‌, ವಿಂಡೋಸ್‌ ಫೋನ್‌ಗೆ ಲಭ್ಯ

ಫುಡ್‌ಪಾಂಡ (Foodpanda)

ಫುಡ್‌ಪಾಂಡ ಅಪ್ಲಿಕೇಶನ್‌ ಭಾರತದಲ್ಲಿ ಆಹಾರ ವಿತರಣೆ ಮಾಡುವ ಪ್ರಖ್ಯಾತ ಅಪ್ಲಿಕೇಶನ್‌ ಆಗಿದೆ. ಭಾರತದ ದೊಡ್ಡ ನಗರಗಳ ರೆಸ್ಟೋರೆಂಟ್‌ಗಳ ಡಾಟಾ ಮಾಹಿತಿ ಹೊಂದಿದ್ದು, ಈ ಆಪ್‌ನಲ್ಲಿ ನಿಮಗೆ ಇಷ್ಟವಾದ ಆಹಾರಗಳನ್ನು ಪಟ್ಟಿ ಮಾಡಿ ಬುಕ್‌ ಮಾಡಬಹುದಾಗಿದೆ.

ಐಒಎಸ್,

ಐಒಎಸ್, ಆಂಡ್ರಾಯ್ಡ್‌, ವಿಂಡೋಸ್‌ ಫೋನ್‌, ವಿಂಡೋಸ್‌ 8 ಗಳಿಗೆ ಆಪ್‌ ಲಭ್ಯ

ಜಸ್ಟ್‌ ಈಟ್‌ (Just Eat)

ಫುಡ್‌ಪಾಂಡ್ ಆಪ್‌ಗಿಂತ ಕೆಲವು ಸೇವೆಗಳಲ್ಲಿ ವಿಭಿನ್ನವಾಗಿದೆ. ಆಹಾರ ನಿಮ್ಮ ಮನೆಬಾಗಿಲಿಗೆ ಬಂದ ನಂತರ ಹಣವನ್ನು ನೀಡಬಹುದಾಗಿದೆ. ಇದು ಭಾರತದ 9 ಪ್ರಮುಖ ನಗರಗಳಲ್ಲಿ ಸೇವೆ ನೀಡುತ್ತಿದೆ.

ಆಂಡ್ರಾಯ್ಡ್‌

ಆಪ್‌ ಐಒಎಸ್ ಮತ್ತು ಆಂಡ್ರಾಯ್ಡ್‌ಗಳಿಗೆ ಲಭ್ಯ.

ಟೇಸ್ಟಿಖಾನ (TastyKhana)

ಇದು ಇತ್ತೀಚಿನ ಆನ್‌ಲೈನ್‌ ಫುಡ್‌ ವಿತರಣೆ ಮಾಡುವ ಆಪ್‌. ಭಾರತದಾದ್ಯಂತ ದೊಡ್ಡ ನಗರಗಳ 7000 ರೆಸ್ಟೋರೆಂಟ್‌ಗಳ ಡಾಟಾ ಬೇಸ್‌ ಹೊಂದಿದೆ.

ಆಂಡ್ರಾಯ್ಡ್‌ ಡಿವೈಸ್‌ಗಳಿಗೆ ಆಪ್‌ ಲಭ್ಯ.

ಟ್ರಾವೆಲ್‌ಖಾನ (TravelKhana)

ಇದು ಪ್ರಖ್ಯಾತ ರೈಲು ಮಾರ್ಗಗಳ ಡಾಟಾ ಬೇಸ್‌ ಹೊಂದಿದ್ದು, ಟ್ರಾವೆಲ್‌ ಮಾಡುವವರು ತಾವಿರುವ ಸ್ಟೇಷನ್‌ನಲ್ಲಿ ಈ ಆಪ್‌ನಲ್ಲಿ ಆಹಾರ ಬುಕ್‌ ಮಾಡಿದರೆ ಸೇವೆಯು ನೀವಿರುವ ಸ್ಟೇಷನ್‌ಗಳಿಗೆ ತಲುಪುತ್ತದೆ.

ಆಂಡ್ರಾಯ್ಡ್‌ ಡಿವೈಸ್‌

ಐಒಎಸ್, ಆಂಡ್ರಾಯ್ಡ್‌, ವಿಂಡೋಸ್‌ ಫೋನ್‌ಗಳಿಗೆ ಆಪ್‌ ಲಭ್ಯ.

ಡೊಮಿನೋಸ್‌ ಪಿಜ್ಜಾ (Domino's Pizza)

ಸುಲಭವಾಗಿ ಪಿಜ್ಜಾ ಕಾಯ್ದಿರಿಸಬಹುದಾಗಿದೆ.

ವಿಂಡೋಸ್‌ ಫೋನ್‌

ಐಒಎಸ್, ಆಂಡ್ರಾಯ್ಡ್‌, ವಿಂಡೋಸ್‌ ಫೋನ್‌ಗಳಿಗೆ ಆಪ್‌ ಲಭ್ಯ.

ಫಾಸೊ (Faaso's)

ಇದು ಭಾರತದ ಇತರೆ ನಗರಗಳಲ್ಲದೇ ಬೆಂಗಳೂರಿನಲ್ಲೂ ಸಹ ಆಹಾರ ವಿತರಣೆ ಸೇವೆ ನೀಡುತ್ತಿದೆ.

ಐಒಎಸ್

ಐಒಎಸ್, ಆಂಡ್ರಾಯ್ಡ್‌, ವಿಂಡೋಸ್‌ ಫೋನ್‌ಗಳಿಗೆ ಆಪ್‌ ಲಭ್ಯ.

ಜೊಮಟೊ (Zomato)

ಭಾರತದ ಜನಪ್ರಿಯ ಫುಡ್‌ ಡಿಲಿವರಿ ಆಪ್‌ನಲ್ಲಿ ಈ ಆಪ್‌ ಸಹ ಮುನ್ನಡೆಯಲ್ಲಿದೆ. ಇದರ ಸೇವೆ ಭಾರತದ ನಗರ ಹಾಗು ಪಟ್ಟಣಗಳನ್ನು ಆವರಿಸಿದೆ. ಇದನ್ನು ಫೇಸ್‌ಬುಕ್‌ನಲ್ಲೂ ಫಾಲೋ ಮಾಡಬಹುದಾಗಿದೆ.

ಆಂಡ್ರಾಯ್ಡ್‌

ಐಒಎಸ್, ಆಂಡ್ರಾಯ್ಡ್‌, ವಿಂಡೋಸ್‌ ಫೋನ್‌ಗಳಿಗೆ ಆಪ್‌ ಲಭ್ಯ.

ಟೈಮ್‌ಸಿಟಿ (Time City)

ಟೈಮ್ಸ್‌ ಆಫ್‌ ಇಂಡಿಯಾದ ಆಪ್‌ ಟೈಮ್‌ಸಿಟಿ. ಇದು ಭಾರತದ 10 ದೊಡ್ಡ ನಗರಗಳಲ್ಲಿ ಸೇವೆ ನೀಡುತ್ತಿದೆ. ಜೊಮಾಟೊ ಆಪ್‌ ಸೇವೆಯ ರೀತಿಯಲ್ಲಿಯೇ ಇದು ಸಹ ಹೊಲಿಕೆಯಾಗಿದೆ. ಕೇವಲ ಆಹಾರ ಮಾತ್ರವಲ್ಲದೇ ಇತರ ಕಾರ್ಯಗಳ ಬಗ್ಗೆಯೂ ಮಾಹಿತಿ ನೀಡುತ್ತದೆ.

ಆಂಡ್ರಾಯ್ಡ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Below you’ll find a list of the most popular and impressive apps that you can use to quickly and securely get your favourite food delivered to your doorstep with the help of your smartphone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot