ಆಪ್‌ಗಳ ಆಟೋ ಅಪ್‌ಡೇಟ್‌ ಸ್ಟಾಪ್ : ಫೋನ್‌ ವೇಗ ಹೆಚ್ಚಳ

By Suneel
|

ಸ್ಮಾರ್ಟ್‌ಫೋನ್‌ ಹಾಗೂ ಟ್ಯಾಬ್ಲೆಟ್‌ಗಳನ್ನು ಆಗಾಗ ಒಮ್ಮೆ ಓಪೆನ್‌ ಮಾಡಿ ನೋಡಿದಾಗ ಮೊಬೈಲ್‌ ಡಾಟಾ ಆನ್‌ ಆಗಿದ್ದಲ್ಲಿ ಎಲ್ಲಾ ಅಪ್ಲಿಕೇಶನ್‌ಗಳು ಸಹ ಒಂದಾದ ನಂತರ ಒಂದು ಅಪ್‌ಡೇಟ್‌ ಆಗುತ್ತಲೇ ಇರುತ್ತವೆ. ಇದರಿಂದ ನಿಮ್ಮ ಡಾಟಾ (ಇಂಟರ್ನೆಟ್‌ ಪ್ಯಾಕ್‌) ಬಹುಬೇಗ ಖಾಲಿಯಾಗಿ ಬಿಡುತ್ತದೆ. ಕೆಲವೊಮ್ಮೆ ಮೊಬೈಲ್‌ನಲ್ಲಿನ ಆಪ್‌ಗಳನ್ನು ಅಪ್‌ಡೇಟ್‌ ಮಾಡುವುದು ಡಿವೈಸ್‌ಗಳನ್ನು ವೇಗವಾಗಿ ಬಳಸಲು ಉಪಯೋಗವಾಗುತ್ತವೆ. ಆದರೆ ಎಲ್ಲಾ ಆಪ್‌ಗಳು ಸಹ ಒಮ್ಮೆಯೇ ಆಟೋ ಅಪ್‌ಡೇಟ್‌ ಆಗುವುದರಿಂದ ನಿಮ್ಮ ಮೊಬೈಲ್‌ ಆ ಸಮಯದಲ್ಲಿ ಇತರ ಕಾರ್ಯಗಳನ್ನು ನಿರ್ವಹಿಸಿಲಾರದು. ಆದ್ದರಿಂದ ಪ್ರಾಯೋಗಿಕವಾಗಿ ಡಿವೈಸ್‌ಗಳಲ್ಲಿ ಆಟೋ ಅಪ್‌ಡೇಟ್‌ ಮಾಡುವುದಕ್ಕಿಂತ ಮ್ಯಾನುವಲ್‌ ಅಪ್‌ಡೇಟ್‌ ಉತ್ತಮ. ಹಾಗಾದರೆ ನಿಮ್ಮ ಡಿವೈಸ್‌ಗಳಲ್ಲಿ ಆಪ್‌ಗಳ ಆಟೋ ಅಪ್‌ಡೇಟ್‌ ನಿಲ್ಲಿಸುವುದು ಹೇಗೆ ಹಾಗೂ ಮ್ಯಾನುವಲ್‌ ಅಪ್‌ಡೇಟ್‌ ಮಾಡುವುದು ಹೇಗೆ ಎಂಬುದನ್ನು ಈ ಲೇಖನದಿಂದ ತಿಳಿಯಿರಿ.

ಓದಿರಿ: ಜೀವನ ಸರಳಗೊಳಿಸುವ ಇಂಟರ್ನೆಟ್ ಸೌಲಭ್ಯಗಳು

 ಆಟೋ ಅಪ್‌ಡೇಟ್‌ ನಿಲ್ಲಿಸುವುದು ಹೇಗೆ ?

ಆಟೋ ಅಪ್‌ಡೇಟ್‌ ನಿಲ್ಲಿಸುವುದು ಹೇಗೆ ?

ಗೂಗಲ್‌ ಪ್ಲೇ ಅನ್ನು ಡಿವೈಸ್‌ನಲ್ಲಿ ಓಪೆನ್‌ ಮಾಡಿ, ಸರ್ಚ್‌ ಬಾರ್‌ನ ಎಡಭಾಗದಲ್ಲಿ ಸ್ವೈಪ್‌ ಮಾಡಿ ಸೆಟ್ಟಿಂಗ್ಸ್ ಆಯ್ಕೆ ಮಾಡಿರಿ.

ಆಟೋ ಅಪ್‌ಡೇಟ್‌ ನಿಲ್ಲಿಸುವುದು ಹೇಗೆ ?

ಆಟೋ ಅಪ್‌ಡೇಟ್‌ ನಿಲ್ಲಿಸುವುದು ಹೇಗೆ ?

ಸೆಟ್ಟಿಂಗ್ಸ್‌ನಲ್ಲಿ ಆಟೋ ಅಪ್‌ಡೇಟ್ ಆಪ್ಸ್‌ ಎಂಬಲ್ಲಿ ಕ್ಲಿಕ್‌ ಮಾಡಿ.

ಆಟೋ ಅಪ್‌ಡೇಟ್‌ ನಿಲ್ಲಿಸುವುದು ಹೇಗೆ ?

ಆಟೋ ಅಪ್‌ಡೇಟ್‌ ನಿಲ್ಲಿಸುವುದು ಹೇಗೆ ?

ಆಟೋ ಅಪ್‌ಡೇಟ್‌ ಆಪ್ಸ್‌ ಆಯ್ಕೆ ಮಾಡಿದ ನಂತರ ಅಲ್ಲಿ ನಿಮಗೆ 3 ಆಯ್ಕೆಗಳು ಕಾಣುತ್ತವೆ. ಅವುಗಳಲ್ಲಿ Do not auto-update apps ಎಂಬಲ್ಲಿ ಕ್ಲಿಕ್‌ ಮಾಡಿ.

ಆಟೋ ಅಪ್‌ಡೇಟ್‌ ನಿಲ್ಲಿಸುವುದು ಹೇಗೆ ?

ಆಟೋ ಅಪ್‌ಡೇಟ್‌ ನಿಲ್ಲಿಸುವುದು ಹೇಗೆ ?

ನೀವು ಆಯ್ಕೆ ಮಾಡಿದ ಈ ಫೀಚರ್‌ ಅನ್ನು ಯಾವಾಗ ಬೇಕಾದರೂ ಸಹ ಬದಲಿಸಬಹುದಾಗಿದೆ. ಹಾಗೂ ಗೂಗಲ್‌ ಪ್ಲೇ ಓಪೆನ್‌ ಮಾಡಿದಾಗ ಮ್ಯಾನುವಲ್‌ ಆಗಿ ನಿಮಗೆ ಬೇಕಾದ ಆಪ್‌ಗಳನ್ನು ಮಾತ್ರ ಆಗಾಗ ಅಪ್‌ಡೇಟ್‌ ಮಾಡಬಹುದಾಗಿದೆ.

ಆಟೋ ಅಪ್‌ಡೇಟ್‌ ನಿಲ್ಲಿಸುವುದು ಹೇಗೆ ?

ಆಟೋ ಅಪ್‌ಡೇಟ್‌ ನಿಲ್ಲಿಸುವುದು ಹೇಗೆ ?

ಡಾಟಾ ಉಳಿಸಲು ಆಟೋ ಅಪ್‌ಡೇಟ್‌ ಆಪ್‌ ಆಯ್ಕೆಯಲ್ಲಿ Auto-update apps over Wi-Fi only ಆಯ್ಕೆ ಮಾಡಿ.

ಅಪ್ಲಿಕೇಶನ್‌ಗಳ ಮ್ಯಾನುವಲ್‌ ಅಪ್‌ಡೇಟ್‌ ಹೇಗೆ ?

ಅಪ್ಲಿಕೇಶನ್‌ಗಳ ಮ್ಯಾನುವಲ್‌ ಅಪ್‌ಡೇಟ್‌ ಹೇಗೆ ?

ಆಟೋ ಅಪ್‌ಡೇಟ್‌ ಡಿಸೇಬಲ್‌ ಮಾಡಿದ ನಂತರ ನಿಮ್ಮ ಡಿವೈಸ್‌ನಲ್ಲಿನ ಆಪ್‌ಗಳನ್ನು ಮ್ಯಾನುವಲ್‌ ಆಗಿ ಅಪ್‌ಡೇಟ್‌ ಮಾಡಬಹುದು. ಗೂಗಲ್‌ ಪ್ಲೇ ಸ್ಟೋರ್‌ ಓಪೆನ್‌ ಮಾಡಿದ ನಂತರ ಎಡಭಾಗದಲ್ಲಿ ಸ್ವೈಪ್‌ ಮಾಡಿ. ಮೈ ಆಪ್ಸ್‌ ಮತ್ತು ಗೇಮ್ಸ್‌ ಎಂಬಲ್ಲಿ ಕ್ಲಿಕ್‌ ಮಾಡಿ.

ಅಪ್ಲಿಕೇಶನ್‌ಗಳ ಮ್ಯಾನುವಲ್‌ ಅಪ್‌ಡೇಟ್‌ ಹೇಗೆ ?

ಅಪ್ಲಿಕೇಶನ್‌ಗಳ ಮ್ಯಾನುವಲ್‌ ಅಪ್‌ಡೇಟ್‌ ಹೇಗೆ ?

ಮೈ ಆಪ್ಸ್ ಮತ್ತು ಗೇಮ್ಸ್‌ ಎಂಬಲ್ಲಿ ಕ್ಲಿಕ್ ಮಾಡಿದ ನಂತರ ನಿಮ್ಮ ಡಿವೈಸ್‌ನಲ್ಲಿರುವ ಎಲ್ಲಾ ಆಪ್‌ಗಳು ನಿಮಗೆ ಪ್ರದರ್ಶನಗೊಳ್ಳುತ್ತವೆ. ಅಲ್ಲಿ ಅಪ್‌ಡೇಟ್‌ ಆದ ಹಾಗೂ ಇತ್ತೀಚೆಗೆ ಇನ್ಸ್ಟಾಲ್‌ ಆದ ಆಪ್‌ಗಳು ಎಂದು ಪ್ರದರ್ಶನವಾಗುತ್ತದೆ.

ಅಪ್ಲಿಕೇಶನ್‌ಗಳ ಮ್ಯಾನುವಲ್‌ ಅಪ್‌ಡೇಟ್‌ ಹೇಗೆ ?

ಅಪ್ಲಿಕೇಶನ್‌ಗಳ ಮ್ಯಾನುವಲ್‌ ಅಪ್‌ಡೇಟ್‌ ಹೇಗೆ ?

ನಿಮ್ಮ ಡಿವೈಸ್‌ನಲ್ಲಿನ ಎಲ್ಲಾ ಆಪ್‌ಗಳು ಅಪ್‌ಡೇಟ್‌ ಆಗಲು "ಅಪ್‌ಡೇಟ್‌ ಆಲ್‌" ಎಂಬಲ್ಲಿ ಕ್ಲಿಕ್‌ ಮಾಡಿ. ಅಥವಾ ನಿಮ್ಮ ಆಸಕ್ತಿಯ ಯಾವುದಾದರೂ ಕೆಲವು ಆಪ್‌ಗಳನ್ನು ಅಪ್‌ಡೇಟ್‌ ಮಾಡಲು ಆಪ್‌ನಲ್ಲಿ ಅಪ್‌ಡೇಟ್‌ ಎಂಬಲ್ಲಿ ಟ್ಯಾಪ್‌ ಮಾಡಿ.

Most Read Articles
Best Mobiles in India

English summary
As a general rule, apps you have installed from Google Play will download updates automatically (called auto-update apps) in order to improve their performance on your tablet or smartphone. Generally speaking, this is a good thing, but it can also slow down your phone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more