ಹೊಸ ವರ್ಷದ ನಿರ್ಧಾರಕ್ಕೆ ಸಾಥ್ ನೀಡುವ ಉಚಿತ ಅಪ್ಲಿಕೇಶನ್ಸ್

By Shwetha
|

ಹೊಸ ವರ್ಷವೆಂಬುದು ಹೊಸತನದ ಹೊಸ ಮುನ್ನುಡಿಯನ್ನು ನಮ್ಮ ಜೀವನದಲ್ಲಿ ಬರೆಯುವಂತಿರುತ್ತದೆ. ಹೊಸ ಹೊಸ ಆಲೋಚನೆಗಳು, ನಿರ್ಧಾರಗಳು ಹೀಗೆ ಪ್ರತಿಯೊಂದರಲ್ಲೂ ಹೊಸತನದ ಛಾಯೆ ಎದ್ದುಕಾಣುತ್ತಿರುತ್ತದೆ. ಹೊಸ ವರ್ಷಕ್ಕಾಗಿ ನೀವು ಕೈಗೊಳ್ಳುವ ನಿರ್ಧಾರಗಳು ನಿಮ್ಮ ಜೀವನವನ್ನೇ ಬದಲಾಯಿಸುವಂತಿರಬೇಕು. ನೀವು ತೆಗೆದುಕೊಳ್ಳುವ ನಿರ್ಧಾರಗಳನ್ನು ನಿಮಗೆ ಕೈಗೂಡಿಸುವಂತಿರಬೇಕು.

ಓದಿರಿ: ಆಂಡ್ರಾಯ್ಡ್ ಅಪ್ಲಿಕೇಶನ್‌ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ಟೆಕ್ ಯೋಜನೆಗಳು ನಿಮ್ಮ ನಿರ್ಧಾರಗಳನ್ನು ಈಡೇರಿಸುವಲ್ಲಿ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನೋಡಲಿದ್ದು ಉಚಿತ ಅಪ್ಲಿಕೇಶನ್‌ಗಳ ರೂಪದಲ್ಲಿ ಇವುಗಳು ಬಂದಿವೆ. ಬನ್ನಿ ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್ ಮೂಲಕ ಪರಿಶೀಲಿಸೋಣ.

ಇನ್ನಷ್ಟು ಕಲಿಯುವ ನಿರ್ಧಾರ

ಇನ್ನಷ್ಟು ಕಲಿಯುವ ನಿರ್ಧಾರ

ಕ್ಯುರೋಸಿಟಿ ಅಪ್ಲಿಕೇಶನ್ ಇದಕ್ಕೆ ನಿಮಗೆ ಬೆಂಬಲವನ್ನು ನೀಡಲಿದೆ. ನಿಮಗೆ ಹೆಚ್ಚುವರಿ ಜ್ಞಾನವನ್ನು ಈ ಉಚಿತ ಅಪ್ಲಿಕೇಶನ್ ನೀಡಲಿದ್ದು ನಿಮ್ಮನ್ನು ಅಪ್‌ಟು ಡೇಟ್ ಆಗಿ ಇರಿಸುತ್ತದೆ.

ಹೆಚ್ಚು ಉಳಿಸುವ ನಿಮ್ಮ ನಿರ್ಧಾರ

ಹೆಚ್ಚು ಉಳಿಸುವ ನಿಮ್ಮ ನಿರ್ಧಾರ

ಮೇವಿಲೋಪ್ಸ್ ಅಪ್ಲಿಕೇಶನ್ ಈ ನಿಟ್ಟಿನಲ್ಲಿ ಸಹಕಾರಿಯಾಗಿದೆ. ನಿಮ್ಮ ಮುಂದಿನ ಆರ್ಥಿಕ ಭವಿಷ್ಯಕ್ಕಾಗಿ ಹೆಚ್ಚು ಉಳಿಸುವ ನಿರ್ಧಾರ ನಿಮ್ಮದು ಎಂದಾದಲ್ಲಿ ಈ ಅಪ್ಲಿಕೇಶನ್ ನಿಮಗೆ ಸಹಾಯ ಮಾಡಲಿದೆ. ಹಣವನ್ನು ಹೇಗೆ ಉಳಿತಾಯ ಮಾಡಬೇಕು ಎಂಬ ಯೋಜನೆ ಈ ಅಪ್ಲಿಕೇಶನ್‌ನಲ್ಲಿ ನಿಮಗೆ ಲಭ್ಯ.

ಹೆಚ್ಚಿನ ವಿಶ್ರಾಂತಿ

ಹೆಚ್ಚಿನ ವಿಶ್ರಾಂತಿ

ಹೆಡ್‌ ಸ್ಪೇಸ್ ಅಪ್ಲಿಕೇಶನ್ ನಿಮಗೆ ಹೆಚ್ಚಿನ ವಿಶ್ರಾಂತಿಯನ್ನು ನೀಡುವಲ್ಲಿ ಸಹಕಾರಿಯಾಗಿದೆ. 60 ನಿಮಿಷಗಳಲ್ಲಿ ನಿಮ್ಮನ್ನು ರಿಲ್ಯಾಕ್ಸ್ ಅನ್ನಾಗಿ ಈ ಅಪ್ಲಿಕೇಶನ್ ಮಾಡುತ್ತದೆ. ನಿಮ್ಮ ಒತ್ತಡ ಜೀವನದಲ್ಲಿ ಆಗಾಗ್ಗೆ ಬ್ರೇಕ್ ತೆಗೆದುಕೊಳ್ಳುವಂತೆ ಇದು ಸಲಹೆ ಕೂಡ ಮಾಡುತ್ತದೆ.

ಕೆಟ್ಟ ಅಭ್ಯಾಸವನ್ನು ತ್ಯಜಿಸುವುದು

ಕೆಟ್ಟ ಅಭ್ಯಾಸವನ್ನು ತ್ಯಜಿಸುವುದು

ನಿಮ್ಮ ಹೊಸ ವರ್ಷದ ನಿರ್ಧಾರ ಕೆಟ್ಟ ಅಭ್ಯಾಸವನ್ನು ತ್ಯಜಿಸುವುದು ಎಂದರೆ ಹ್ಯಾಬಿಟ್ ಆರ್‌ಪಿಜಿ ಸಹಕಾರಿಯಾಗಲಿದೆ.

ಇನ್ನಷ್ಟು ಓದುವುದು

ಇನ್ನಷ್ಟು ಓದುವುದು

ರೀಡ್‌ಮೀ ಅಪ್ಲಿಕೇಶನ್ ನಿಮ್ಮ ಹೆಚ್ಚುವರಿ ಓದಿನ ತುಡಿತವನ್ನು ಈಡೇರಿಸುವುದು ಖಂಡಿತ. ತ್ವರಿತ ಓದಿಗೆ ಈ ಅಪ್ಲಿಕೇಶನ್ ಸಹಕಾರಿ.

ನಿಮ್ಮ ಕೆಲಸದಿಂದ ಬ್ರೇಕ್

ನಿಮ್ಮ ಕೆಲಸದಿಂದ ಬ್ರೇಕ್

ನೀವು ಇಷ್ಟಮಾಡುತ್ತಿರುವ ಕೆಲಸ ಯಾವುದೇ ಆಗಿರಲಿ ಸ್ಟ್ಯಾಂಡ್ ಅಪ್ ಅಪ್ಲಿಕೇಶನ್ ನಿಮ್ಮ ಕೆಲಸದಿಂದ ನಿಮಗೆ ಬ್ರೇಕ್ ನೀಡುತ್ತದೆ.

ಆರೋಗ್ಯಕರ ಆಹಾರ

ಆರೋಗ್ಯಕರ ಆಹಾರ

ಯಮ್ಮಿಲಿ ರೆಸಿಪಿ ಅಪ್ಲಿಕೇಶನ್ ಶಕ್ತಿಯುತ ಹುಡುಕಾಟ ಫೀಚರ್ ಅನ್ನು ಹೊಂದಿದ್ದು ನಿಮಗೆ ಆರೋಗ್ಯಕಾರಿ ಆಹಾರವನ್ನು ಹುಡುಕಾಡಲು ಸಹಾಯ ಮಾಡುತ್ತದೆ.

ಸಂಘಟಿತರಾಗುವುದು

ಸಂಘಟಿತರಾಗುವುದು

ನೀವು 2016 ಕ್ಕೆ ಸಂಘಟಿತತಾಗಿರಬೇಕು ಎಂಬ ಆಲೋಚನೆ ನಿಮ್ಮ ಮನದಲ್ಲಿ ಮೂಡಿದೆ ಎಂದಾದಲ್ಲಿ ಈ ಅಪ್ಲಿಕೇಶನ್ ಸರ್ವವಿಧದಲ್ಲಿ ಸಹಾಯವಾಗುತ್ತದೆ. 24 ಮಿ ಎಂಬುದು ಈ ಅಪ್ಲಿಕೇಶನ್ ಹೆಸರಾಗಿದೆ.

ಸಮಯಕ್ಕೆ ಸರಿಯಾಗಿರುವುದು

ಸಮಯಕ್ಕೆ ಸರಿಯಾಗಿರುವುದು

2016 ಕ್ಕೆ ಸಮಯಕ್ಕೆ ಸರಿಯಾಗಿ ಇರಬೇಕು ಹೆಚ್ಚು ಪಂಕ್ಚುವಲ್ ನೀವಾಗಿರಬೇಕು ಎಂಬುದು ನಿಮ್ಮ ನಿರ್ಧಾರವಾಗಿದೆ ಎಂದಾದಲ್ಲಿ ಇಂಟರಪ್ಟೀವ್ ಅಪ್ಲಿಕೇಶನ್ ಎಲ್ಲಾ ವಿಧದಲ್ಲೂ ಸಹಕಾರಿಯಾಗಲಿದೆ.

Best Mobiles in India

English summary
We are introducing you to nine free apps that'll provide you a few shortcuts and get you closer to accomplishing your goals.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X