Home
Apps

ದೇಶಿ ಮ್ಯೂಸಿಕ್ ಪ್ರಿಯರ ಮನಕ್ಕೆ ಲಗ್ಗೆ ಇಡಲಿದೆ 'ಯುಟ್ಯೂಬ್ ಮ್ಯೂಸಿಕ್‌'..!!

ಭಾರತೀಯ ಮ್ಯೂಸಿಕ್ ಸ್ಟ್ರಿಮಿಂಗ್ ಮಾರುಕಟ್ಟೆ ವಿಶಾಲವಾಗಿ ಬೆಳೆಯುತ್ತಿದ್ದು, ವಿಶ್ವ ಮಟ್ಟದ ಮ್ಯೂಸಿಕ್‌ ಕಂಪನಿಗಳನ್ನು ತನ್ನತ್ತ ಸೆಳೆಯುತ್ತಿದೆ. ಇತ್ತೀಚಿಗಷ್ಟೆ ಸ್ವೀಡಿಷ್ ಮೂಲದ ಜನಪ್ರಿಯ ಮ್ಯೂಸಿಕ್ ಕಂಪನಿ 'ಸ್ಪಾಟಿಫೈ', ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟು ಜನಮನ್ನಣೆ ಪಡೆಯುತ್ತಿದೆ. ಸ್ಪಾಟಿಫೈ ಎಂಟ್ರಿ ಕೊಟ್ಟಿರುವ ಬೆನ್ನಲೇ ಇದೀಗ ಗೂಗಲ್ ಮ್ಯೂಸಿಕ್ ಪ್ರಿಯರಿಗೆ ಒಂದು ಅಚ್ಚರಿಯನ್ನು ನೀಡಿದೆ.

ದೇಶಿ ಮ್ಯೂಸಿಕ್ ಪ್ರಿಯರ ಮನಕ್ಕೆ ಲಗ್ಗೆ ಇಡಲಿದೆ 'ಯುಟ್ಯೂಬ್ ಮ್ಯೂಸಿಕ್‌'..!!

ಹೌದು, ಗೂಗಲ್ ಒಡೆತನದ ಯೂಟ್ಯೂಬ್‌ ಅಧಿಕೃತವಾಗಿ 'ಯೂಟ್ಯೂಬ್‌ಮ್ಯೂಸಿಕ್' ಅನ್ನು ಲಾಂಚ್‌ ಮಾಡಿದೆ. ಇದರಲ್ಲಿ ನೇರ ಮ್ಯೂಸಿಕ್‌ ಕಾರ್ಯಕ್ರಮಗಳು ಮತ್ತು ವಿಡಿಯೋ ಹಾಡುಗಳು ಲಭ್ಯವಾಗಲಿವೆ. ಭಾರತದಾದ್ಯಂತ ಇರುವ ಲಕ್ಷಾಂತರ ಮ್ಯೂಸಿಕ್‌ ಪ್ರಿಯ ಅಭಿಮಾನಿಗಳಿಗೆ, ದೇಶಿಯ ಮತ್ತು ವಿಶ್ವಮಟ್ಟದ ಮ್ಯೂಸಿಕ್ ಅನುಭವವನ್ನು ನೀಡುವ ಭರವಸೆಯನ್ನು ಹೊಂದಿರುವುದಾಗಿ ಯೂಟ್ಯೂಬ್ ಮ್ಯೂಸಿಕ್‌ನ ಮುಖ್ಯಸ್ಥ ಲೈಯರ್ ಕೋಹೆನ್ ಹೇಳಿದ್ದಾರೆ.

ದೇಶಿ ಮ್ಯೂಸಿಕ್ ಪ್ರಿಯರ ಮನಕ್ಕೆ ಲಗ್ಗೆ ಇಡಲಿದೆ 'ಯುಟ್ಯೂಬ್ ಮ್ಯೂಸಿಕ್‌'..!!

ಯೂಟ್ಯೂಬ್ ಮ್ಯೂಸಿಕ್ ಸ್ಟ್ರಿಮಿಂಗ್ ಎರಡು ಮಾದರಿಯಲ್ಲಿ ದೊರೆಯುವಂತೆ ಮಾಡಿದ್ದು, ಯೂಟ್ಯೂಬ್ ಮ್ಯೂಸಿಕ್ ಜಾಹಿರಾತು ಸಹಿತವಾಗಿದೆ ಮತ್ತು ಯೂಟ್ಯೂಬ್ ಪ್ರೀಮಿಯಮ್ ಇದು ಜಾಹಿರಾತು ಮುಕ್ತವಾಗಿದೆ. ಸ್ಪಾಟಿಫೈ ಮ್ಯೂಸಿಕ್‌ ಸ್ಟ್ರಿಮಿಂಗ್‌ಗೆ ಸೆಡ್ಡು ಹೊಡೆಯಲು ಮುಂದಾಗಿದೆ. ಹಾಗಾದರೇ ಯೂಟ್ಯೂಬ್ ಮ್ಯೂಸಿಕ್ ಕುರಿತಂತೆ ಇನ್ನಷ್ಟು ಕುತೂಹಲಕಾರಿ ಮಾಹಿತಿಗಳನ್ನು ತಿಳಿಯಲು ಮುಂದೆ ಓದಿರಿ.

ಸ್ಪಾಟಿಫೈ ವಿರುದ್ಧ ನೇರ ಪೈಪೋಟಿ

ಸ್ಪಾಟಿಫೈ ವಿರುದ್ಧ ನೇರ ಪೈಪೋಟಿ

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಟೈಮ್ಸ್‌ ಇಂಟರ್ನೆಟ್ ಇಡೆತನದ 'ಗಾನಾ', ಅಮೆಜಾನ್ ಮತ್ತು ರಿಲಾಯನ್ಸ್‌ ಕಂಪನಿಯ 'ಜಿಯೋ ಸಾವನ್‌', ಸೇರಿದಂತೆ ಇತ್ತೀಚಿಗಷ್ಟೆ ಎಂಟ್ರಿಕೊಟ್ಟಿರುವ 'ಸ್ಪಾಟಿಫೈ' ಮ್ಯೂಸಿಕ್ ಸ್ಟ್ರಿಮಿಂಗ್ ಕಂಪನಿಗಳಿಗೆ ಇದೀಗ ಯೂಟ್ಯೂಬ್ ಮ್ಯೂಸಿಕ್ ಭಾರೀ ಟಾಂಗ್‌ ಕೊಡಲಿದೆ ಎನ್ನಲಾಗುತ್ತಿದೆ. ಗ್ರಾಹಕರ ಬೇಡಿಕೆಗಳನುಸಾರ ಸಂಪೂರ್ಣ ಹೊಸತನದಲ್ಲಿ ಗುರುತಿಸಿಕೊಳ್ಳಲಿದೆ.

ಯಾವೆಲ್ಲಾ ಮ್ಯೂಸಿಕ್ ಇರಲಿವೆ?

ಯಾವೆಲ್ಲಾ ಮ್ಯೂಸಿಕ್ ಇರಲಿವೆ?

ಯೂಟ್ಯೂಬ್ ಮ್ಯೂಸಿಕ್ ನಲ್ಲಿ ಎಲ್ಲ ಹಾಡುಗಳು, ಅಲ್ಬಮ್ ಹಾಡುಗಳು, ವೈಯಕ್ತಿಕ್ ಪ್ಲೇಲಿಸ್ಟ್‌ಗಳು ಮತ್ತು ನೇರ ಮ್ಯೂಸಿಕ್‌ ಕಾರ್ಯಕ್ರಮಗಳ ಗ್ರಾಹಕರಿಗೆ ದೊರೆಯಲಿದ್ದು, ಇದರೊಂದಿಗೆ ವಿಡಿಯೋ ಮ್ಯೂಸಿಕ್ ಹಾಡುಗಳು ಸಹ ಲಭ್ಯವಾಗಲಿವೆ. ಗ್ರಾಹಕರ ಬೇಡಿಕೆಯ ಅನುಸಾರ ಬದಲಾವಣೆಗಳನ್ನು ಮಾಡಿಕೊಳ್ಳುಲಾಗುವುದು ಎಂದು ಯೂಟ್ಯೂಬ್ ಮ್ಯೂಸಿಕ್ ಹೇಳಿದೆ.

ಪ್ರೀಮಿಯಮ್‌ ಸದಸ್ಯತ್ವ

ಪ್ರೀಮಿಯಮ್‌ ಸದಸ್ಯತ್ವ

ಯೂಟ್ಯೂಬ್ ಮ್ಯೂಸಿಕ್‌ ಉಚಿತ ಸೇವೆಯಾಗಿದ್ದು, ಆದರೆ ಯೂಟ್ಯೂಬ್ ಮ್ಯೂಸಿಕ್‌ನ ಪ್ರೀಮಿಯಮ್ ಮಾದರಿ ಸೇವೆಯ ಸದಸ್ಯತ್ವ ಪಡೆಯಲು ಪ್ರತಿ ತಿಂಗಳಿಗೆ 99ರೂ.ಗಳು ಶುಲ್ಕವನ್ನು ನಿಗದಿ ಮಾಡಲಾಗಿದೆ. ಪ್ರೀಮಿಯಮ್‌ ಸೇವೆಯಲ್ಲಿ ಆಫ್‌ಲೈನ್ ಡೌನ್‌ಲೋಡ್‌ ಸೌಲಭ್ಯದ ಆಯ್ಕೆ ದೊರೆಯಲಿದೆ ಮತ್ತು ಸಂಪೂರ್ಣ ಜಾಹಿರಾತು ಮುಕ್ತವಾಗಿರುವ ಸೇವೆ ಲಭ್ಯವಾಗಲಿದೆ. ಗೂಗಲ್ ಪ್ಲೇ ಮ್ಯೂಸಿಕ್ ಸದಸ್ಯತ್ವ ಪಡೆದವರು ಯುಟ್ಯೂಬ್ ಮ್ಯೂಸಿಕ್‌ ಪ್ರೀಮಿಯಮ್‌ ಸೇವೆಯನ್ನು ಉಚಿತವಾಗಿ ಆಕ್ಸ್‌ಸ್ ಮಾಡಬಹುದಾಗಿದೆ.

Best Mobiles in India

English summary
Google-owned YouTube has officially launched its music streaming services YouTube Music (ad-supported) and YouTube Music Premium (ad-free).to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+