Home
Apps

ಮತ್ತೆ ಬರಲಿದೆ 'ಆಯಂಗ್ರಿ ಬರ್ಡ್‌'.! ಬೇಟೆಗೆ ಸಿದ್ಧರಾಗಿ.!!

ವಿಡಿಯೋ ಗೇಮ್ಸ್‌ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಗೇಮ್ಸ್‌ ಆಡುವ ದೊಡ್ಡ ಬಳಗೆವೇ ಇದೆ ಅದಕ್ಕಾಗಿಯೇ ಹೊಸ ಹೊಸ ಗೇಮ್ಸ್‌ ಲಾಂಚ್ ಆಗುತ್ತಲೇ ಇವೆ. ಆದರೆ ಲಾಂಚ್ ಆದ ಎಲ್ಲಾ ಗೇಮ್ಸ್‌ ಜನಪ್ರಿಯವಾಗುವುದಿಲ್ಲ ಇನ್ನೂ ಕೆಲವು ಗೇಮ್ಸ್‌ ಮರೆಯಲು ಅಸಾಧ್ಯವಾಗಿರುತ್ತವೆ. 2010ರಲ್ಲಿ ಬಹುತೇಕ ಎಲ್ಲರ ಸ್ಮಾರ್ಟ್‌ಫೋನ್‌ಗಳಲ್ಲಿ ಭರ್ಜರಿ ಗದ್ದಲ ಮಾಡಿದ್ದ ಗೇಮ್‌ 'ಆಯಂಗ್ರಿ ಬರ್ಡ್‌. ಇಸ್ ಬ್ಯಾಕ್‌.!

ಮತ್ತೆ ಬರಲಿದೆ 'ಆಯಂಗ್ರಿ ಬರ್ಡ್‌'.! ಬೇಟೆಗೆ ಸಿದ್ಧರಾಗಿ.!!

ಹೌದು, ಗೇಮ್ಸ್‌ ಪ್ರಿಯರ ನೆಚ್ಚಿನ ಗೇಮ್ಸ್‌ ಲಿಸ್ಟ್‌ನಲ್ಲಿ ಇವತ್ತಿಗೂ ಆಯಂಗ್ರಿ ಬರ್ಡ್‌ ಗೇಮ್‌ ಸ್ಥಾನಪಡೆದಿದ್ದು, ಭಾರೀ ಕುತೂಹಲ ಭರಿತ ಹಂತಗಳನ್ನು ಒಳಗೊಂಡಿದ್ದ ಈ ಗೇಮ್ ಆಟಗಾರರಲ್ಲಿ ಕ್ರೇಜ್‌ ಮೂಡಿಸಿತ್ತು. ಆಯಂಗ್ರಿ ಬರ್ಡ್‌ ಗೇಮ್ ಎಲ್ಲ ವಯೋಮಾನದವರಿಗೂ ಇಷ್ಟವಾಗಿತ್ತು ಆದರಲ್ಲೂ ಮಕ್ಕಳಿಗೆ ಟಾಪ್‌ ಫೇವರೆಟ್. ಇದೀಗ Angry Birds AR: Isle of Pigs ಹೆಸರಿನಿಂದ ಮತ್ತೆ ಮೊಬೈಲ್‌ಗಳಲ್ಲಿ ಕಾಣಿಸಿಕೊಳ್ಳಲಿದೆ.

ಮತ್ತೆ ಬರಲಿದೆ 'ಆಯಂಗ್ರಿ ಬರ್ಡ್‌'.! ಬೇಟೆಗೆ ಸಿದ್ಧರಾಗಿ.!!

ರೆಸಲ್ಯೂಶನ್ ಗೇಮ್ಸ್‌ ಸಂಸ್ಥೆ ಅಭಿವೃದ್ದಿ ಪಡೆಸಿರುವ ಆಯಂಗ್ರಿ ಬರ್ಡ್‌ ಗೇಮ್‌ನ ಹೊಸ ಅವತರಣಿಕೆ ಆಪಲ್ ಫೋನ್‌ಗಳಲ್ಲಿ ಮಾತ್ರ ದೊರೆಯಲಿದ್ದು, ಇದೇ ಏಪ್ರಿಲ್ 11 ರಂದು ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ಈ ಆಟದಲ್ಲಿ ದುಷ್ಟ ಹಸಿರು ಹಂದಿಗಳು ಮೊಟ್ಟೆಗಳನ್ನು ಕದ್ದಿರುತ್ತವೆ ಆ ಕದ್ದ ಮೊಟ್ಟೆಗಳನ್ನು ಉಳಿಸುವ ಕೆಲಸ ಆಟಗಾರರದಾಗಿರುತ್ತದೆ. ಹೀಗೆ ಹಲವು ಹಂತಗಳನ್ನು ಎದುರಿಸಬೇಕಾಗಿರುತ್ತದೆ.

ಈ ಆಟವು ರೋಚಕವಾಗಿದ್ದು, ನೈಜ ಪಾತ್ರಗಳು ಎದುರಾದಂತಹ ಅನುಭವ ಆಗಲಿದೆ. ಎದುರಾಳಿಗಳು ನಾವಿದ್ದ ಸ್ಥಳದಲ್ಲಿಯೇ ಇದ್ದಾರೆ ಎಂದೆನಿಸುವುದು, ಕಾಟರ್‌ ಬಿಲ್ಲನಿಂದ ಎದುರಾಳಿಗಳನ್ನು ನಾಶಮಾಡುವ ಸನ್ನಿವೇಶಗಳು ಕುತೂಹಲ ಭರಿತವಾಗಿರುತ್ತವೆ. ವಾಸ್ತವತೆಗೆ ಹತ್ತಿರವಾಗುವಂತೆ ಗೇಮ್‌ ಅನ್ನು ಅಭಿವೃದ್ದಿಪಡಿಸಲಾಗಿದೆ ಎಂದು ರೆಸಲ್ಯೂಶನ್ ಗೇಮ್ಸ್‌ ಕಂಪನಿ ತಿಳಿಸಿದೆ.

ಮತ್ತೆ ಬರಲಿದೆ 'ಆಯಂಗ್ರಿ ಬರ್ಡ್‌'.! ಬೇಟೆಗೆ ಸಿದ್ಧರಾಗಿ.!!

ಹೊಸ ಆಯಂಗ್ರಿ ಬರ್ಡ್‌ ಗೇಮ್‌ ಆಪಲ್‌ ಆಪ್‌ ಸ್ಟೋರ್‌ನಲ್ಲಿ ಲಭ್ಯವಿದ್ದು, ಐಫೋನ್ 6s ಫೋನಿನಲ್ಲಿ ಮುಂಗಡ ಆರ್ಡರ್‌ಗೆ ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕಂಪನಿಯ ಐಪೋಡ್‌ ಪ್ರೋ ಮಾದರಿಯ ಸೇರಿದಂತೆ ಐಪೋಡ್ 5 ಜನರೇಷನ್ ಮತ್ತು ಐಫೋಡ್ 6 ಜನರೇಷನ್ ಮಾದರಿಯ ಡಿವೈಸ್‌ಗಳಲ್ಲಿಯೂ ದೊರೆಯಲಿದೆ. ಇದೇ ಏಪ್ರಿಲ್ 11 ರಂದು ರಿಲೀಸ್‌ ಆಗಲಿರುವ ಈ ಗೇಮ್‌ ಉಚಿತವಾಗಿರಲಿದೆ.

Best Mobiles in India

English summary
The new game, called Angry Birds AR: Isle of Pigs, will task gamers with saving stolen eggs from greedy green pigs.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+