ನಿಮ್ಮ ಮಕ್ಕಳು ಸ್ಮಾರ್ಟ್‌ಫೋನಿನಲ್ಲಿ ಗೇಮ್ ಆಡುತ್ತಿದ್ದರೇ ನೀವು ಈ ಸ್ಟೋರಿ ಓದಲೇ ಬೇಕು.!!

ಮಕ್ಕಳು ಭಯಂಕರ ಗೇಮ್‌ಗಳನ್ನು ಮೊಬೈಲ್‌ನಲ್ಲಿ ಆಡುತ್ತಿದ್ದು, ಇದರಿಂದ ಅವರ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಿಮ್ಮ ಮಕ್ಕಳ ಕೈಗೆ ಸ್ಮಾರ್ಟ್‌ಪೋನ್ ನೀಡುವ ಮುನ್ನ ಎಚ್ಚರ.

|

ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನ್ ಮಕ್ಕಳ ಕೈಗೆ ಸುಲಭವಾಗಿ ಸಿಗುತ್ತಿದ್ದು, ಮಕ್ಕಳು ಸ್ಮಾರ್ಟ್‌ಫೋನಿಗೆ ಅಂಟಿಕೊಂಡಿರುತ್ತಾರೆ. ಇದರ ನಡುವೆಯೇ ಮಕ್ಕಳು ಭಯಂಕರ ಗೇಮ್‌ಗಳನ್ನು ಮೊಬೈಲ್‌ನಲ್ಲಿ ಆಡುತ್ತಿದ್ದು, ಇದರಿಂದ ಅವರ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಿಮ್ಮ ಮಕ್ಕಳ ಕೈಗೆ ಸ್ಮಾರ್ಟ್‌ಪೋನ್ ನೀಡುವ ಮುನ್ನ ಎಚ್ಚರ.

ನಿಮ್ಮ ಮಕ್ಕಳು ಸ್ಮಾರ್ಟ್‌ಫೋನಿನಲ್ಲಿ ಗೇಮ್ ಆಡುತ್ತಿರುವರೇ?

ಓದಿರಿ: ಸ್ವಾತಂತ್ರ್ಯ ದಿನಾಚರಣೆಗೆ ನೋಕಿಯಾ ದಿಂದ ಬಂಪರ್ ಗಿಫ್ಟ್.!

ಇತ್ತೀಚೆಗೆ ಭಾರತದಲ್ಲಿ ಮಕ್ಕಳು ಬ್ಲೂ ವೇಲ್ ಎನ್ನುವ ಆಟವೊಂದನ್ನು ಆಡುತ್ತಿದ್ದು, ಇದು ಮಕ್ಕಳ ಆತ್ಮಹತ್ಯೆಗೆ ಪ್ರಚೋದಿಸುವಂತಹ ಆಟವಾಗಿದೆ. ಈಗಾಗಲೇ ಮುಂಬೈನಲ್ಲಿ ಓರ್ವ ಬಾಲಕ ಈ ಗೇಮ್‌ನಿಂದಾಗಿ ಕಟ್ಟಡದಿಂದ ಜಿಗಿದು ಮೃತಪಟ್ಟಿದ್ದು, ಇಬ್ಬರು ಬಾಲಕರು ಶಾಲಾ ಕಟ್ಟಡದಿಂದ ಜಿಗಿಯಲು ಯತ್ನಿಸಿದಾಗ ಅವರನ್ನು ರಕ್ಷಿಸಲಾಗಿದೆ.

10ನೇ ತರಗತಿಯ ವಿದ್ಯಾರ್ಥಿ ಬಲಿ:

10ನೇ ತರಗತಿಯ ವಿದ್ಯಾರ್ಥಿ ಬಲಿ:

ಇಬ್ಬರು ಮಕ್ಕಳು ಶಾಲಾ ಕಟ್ಟಡದಿಂದ ಜಿಗಿಯುವ ಸಂದರ್ಭದಲ್ಲಿ ಅದನ್ನು ನೋಡಿದ ಸಹಪಾಠಿಗಳು ಅವರನನು ರಕ್ಷಿಸಿದ್ದು, ಈ ಘಟನೆ ಮಾಸುವ ಮುನ್ನವೇ ಮಿಡ್ನಾಪುರದಲ್ಲಿ 10ನೇ ತರಗತಿಯ ವಿದ್ಯಾರ್ಥಿ ‘ಬ್ಲೂ ವೇಲ್' ಗೇಮ್ ಮುಗಿಸಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಆಟವನ್ನು ಕಂಪ್ಲಿಟ್ ಮಾಡದೇ ಆತ್ಮಹತ್ಯೆಗೆ ಶರಣು:

ಆಟವನ್ನು ಕಂಪ್ಲಿಟ್ ಮಾಡದೇ ಆತ್ಮಹತ್ಯೆಗೆ ಶರಣು:

ಆತ್ನಹತ್ಯೆಗೆ ಶರಣಾದ ವಿದ್ಯಾರ್ಥಿ ಬ್ಲೂ ವೇಲ್ ಆಟದ ಕೊನೆಯ ಹಂತವವನ್ನು ಫೂರ್ಣಗೊಳಿಸಲು ವಿಫಲನಾದ ಸಂದರ್ಭದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ಲಾಸ್ಟಿಕ್ ಕವರ್‌ ಅನ್ನು ತಲೆಗೆ ಹಾಕಿಕೊಂಡು ಉಸಿರಾಡಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ ಎಂದು ವರದಿ ಮಾಡಲಾಗಿದೆ.

‘ಬ್ಲೂ ವೇಲ್' ಆಟ ನಿಷೇಧಕ್ಕೆ ತೀವ್ರ ಒತ್ತಾಯ:

‘ಬ್ಲೂ ವೇಲ್' ಆಟ ನಿಷೇಧಕ್ಕೆ ತೀವ್ರ ಒತ್ತಾಯ:

ಈ ಆಟದಿಂದಾಗಿ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಮಕ್ಕಳು ಪ್ರಾಣ ಕಳೆದುಕೊಳ್ಳಲು ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಈ ಆಟ ನಿಷೇಧಿಸಲು ಭಾರಿ ಒತ್ತಾಯ ಕೇಳಿ ಬರುತ್ತಿರುತ್ತಿದೆ. ಈಗಾಗಲೇ ಇಬ್ಬರು ವಿದ್ಯಾರ್ಥಿಗಳು ಈ ಆಟಕ್ಕೆ ಬಲಿಯಾಗಿದ್ದು, ಇನ್ನಷ್ಟು ಬಾಲಕರು ಈ ಆಟಕ್ಕೆ ಬಲಿಯಗುವ ಮುಂಚೆ ಈ ಆಟವನ್ನು ನಿ‍ಷೇಧಕ್ಕೆ ಒತ್ತಾಯ ಹೆಚ್ಚಾಗಿದೆ.

ಮಕ್ಕಳ ಬಗ್ಗೆ ಎಚ್ಚರವಹಿಸಿ:

ಮಕ್ಕಳ ಬಗ್ಗೆ ಎಚ್ಚರವಹಿಸಿ:

ನಿಮ್ಮ ಮಕ್ಕಳ ಕೈಗೆ ಸ್ಮಾರ್ಟ್‌ಫೋನ್ ನೀಡಿದ ನಂತರದಲ್ಲಿ ಅವರು ಫೋನಿನಲ್ಲಿ ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡಿರಿ. ಅವರು ಮೊಬೈಲ್ ಹಿಂತಿರುಗಿಸಿದ ಮೇಳೆ ಯಾವ ಆಪ್ ಬಳಕೆ ಮಾಡುತ್ತಿದ್ದರು ಎಂಬುದನ್ನು ನೋಡಿರಿ. ಅಲ್ಲದೇ ಬೇರದೆ ಆಪ್ ಗಳನ್ನು ಇನ್‌ಸ್ಟಾಲ್ ಮಾಡಿಕೊಂಡಿದ್ದರೇ ಅದನ್ನು ಆನ್‌ಇನ್ಟಾಲ್ ಮಾಡಿ.

ಸುರಕ್ಷತೆ ವಹಿಸಿ:

ಸುರಕ್ಷತೆ ವಹಿಸಿ:

ಮಕ್ಕಳಿಗೆ ಸ್ಮಾರ್ಟ್‌ಫೋನ್ ನೀಡುವ ಸಂದರ್ಭದಲ್ಲಿ ಚೇಲ್ಡ್ ಲಾಕ್ ಬಳಕೆ ಮಾಡಿಕೊಳ್ಳಿ, ಅವರು ಯಾವ ಆಯ್ಕೆಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂಬುದನ್ನು ನೀವೇ ನಿರ್ಧರಿಸಿ. ಈ ಆಯ್ಕೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇರಲಿದೆ. ಇಲ್ಲವೇ ಪ್ಲೇ ಸ್ಟೋರಿನಲ್ಲಿ ಹಲವು ಆಪ್‌ಗಳು ದೊರೆಯಲಿದೆ. ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ.

Best Mobiles in India

Read more about:
English summary
Reports of teenagers committing suicide after playing the Blue Whale challenge does not stand to be completely true as no direct connection have been established so far between the deaths in Russia, India and Europe and the mysterious challenge whose origins are in Moscow. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X