ಸ್ವಾತಂತ್ರ್ಯ ದಿನಾಚರಣೆಗೆ ನೋಕಿಯಾ ದಿಂದ ಬಂಪರ್ ಗಿಫ್ಟ್.!
ನೋಕಿಯಾ ತನ್ನ ಬಳಕೆದಾರಿಗೆ ಆಚ್ಚರಿಯ ಉಡುಗೊರೆಯೊಂದನ್ನು ನೀಡಲು ಮುಂದಾಗಿದೆ. ನೋಕಿಯಾ 5 ಸ್ಮಾರ್ಟ್‌ಫೋನ್ ಆಗಸ್ಟ್ 15 ರಿಂದ ಆಫ್‌ಲೈನ್ ಮಾರುಕಟ್ಟೆಯಲ್ಲಿ ದೊರೆಯಲಿದೆ ಎನ್ನಲಾಗಿದೆ.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನೋಕಿಯಾ ತನ್ನ ಬಳಕೆದಾರರಿಗೆ ಆಚ್ಚರಿಯ ಉಡುಗೊರೆಯೊಂದನ್ನು ನೀಡಲು ಮುಂದಾಗಿದೆ. ನೋಕಿಯಾ 5 ಸ್ಮಾರ್ಟ್‌ಫೋನ್ ಆಗಸ್ಟ್ 15 ರಿಂದ ಆಫ್‌ಲೈನ್ ಮಾರುಕಟ್ಟೆಯಲ್ಲಿ ದೊರೆಯಲಿದೆ ಎನ್ನಲಾಗಿದೆ.

ಓದಿರಿ: ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ 'ಪ್ರಜಾಕೀಯ': ದೇಶದಲ್ಲೇ #UPPI ಟ್ರೆಂಡ್.!
ಈ ಕುರಿತು ಭಾರತದಲ್ಲಿ ನೋಕಿಯಾ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಹಕ್ಕು ಪಡೆದಿರುವ HDM ಗ್ಲೂಬಲ್ ಸಂಸ್ಥೆಯೂ ಮಾಹಿತಿಯನ್ನು ನೀಡಿದೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿಯೇ ಈ ಫೋನ್‌ಅನ್ನು ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಲಾಗಿದೆ.

ಮುಂಗಡ ಬುಕ್ಕಿಂಗ್ ಆಗಿದೆ:
ಈಗಾಗಲೇ ನೋಕಿಯಾ 5 ಸ್ಮಾರ್ಟ್‌ಫೋನ್ ಮುಂಗಡ ಬುಕಿಂಗ್ ಜುಲೈ 7 ರಿಂದಲೇ ಆರಂಭವಾಗಿದ್ದು, ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು. ಹೈದ್ರಾಬಾದ್, ಕೊಲ್ಕತ್ತಾ ಮತ್ತು ಪುಣೆ ನಗರಗಲ್ಲಿ ಈ ಸ್ಮಾರ್ಟ್‌ಪೋನ್ ದೊರೆಯಲಿದೆ.

ಬಜೆಟ್ ಬೆಲೆ:
ನೋಕಿಯಾ 5 ಸ್ಮಾರ್ಟ್‌ಫೋನ್ ಆಫ್ ಲೈನ್ ಮಾರುಕಟ್ಟೆಯಲ್ಲಿ ಮಾತ್ರವೇ ದೊರೆಯಲಿದ್ದು, ಬೆಲೆ ರೂ.12,899ಕ್ಕೆ ದೊರೆಯಲಿದೆ. ಈಗಾಗಲೇ ನೋಕಿಯಾ 3 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಆಗಸ್ಟ್ 23 ರಿಂದ ನೋಕಿಯಾ 6 ಮಾರುಕಟ್ಟೆಯಲ್ಲಿ ದೊರೆಯಲಿದೆ.

ಆಂಡ್ರಾಯ್ಡ್ 7.1.1:
ನೋಕಿಯಾ 5 ಸ್ಮಾರ್ಟ್‌ಫೋನಿಗೆ ಆಂಡ್ರಾಯ್ಡ್ 7.1.1 ಆಪ್‌ಡೇಟ್ ದೊರೆಯಲಿದೆ. ಅಲ್ಲದೇ ಆಂಡ್ರಾಯ್ಡ್ O ಆಪ್‌ಡೇಟ್ ಸಹ ನೋಕಿಯಾ 5 ಸ್ಮಾರ್ಟ್‌ಫೋನಿಗೆ ದೊರೆಯಲಿದೆ ಎಂದು ಕಂಪನಿ ತಿಳಿಸಿದೆ.

ನೋಕಿಯಾ 5 ವಿಶೇಷತೆ:
ನೋಕಿಯಾ 5 ಸ್ಮಾರ್ಟ್‌ಪೋನ್ ನಲ್ಲಿ 2GB RAM ಮತ್ತು 16GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ, ಇದಲ್ಲದೇ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವು ಇದೆ.

ಉತ್ತಮ ಕ್ಯಾಮೆರಾ ಇದೆ:
ಇದಲ್ಲದೇ ನೋಕಿಯಾ 5 ಸ್ಮಾರ್ಟ್‌ಪೋನ್ ನ ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು LED ಫ್ಲಾಷ್ ನೊಂದಿಗೆ ಕಾಣಬಹುದಾಗಿದೆ. ಮುಂಭಾಗದಲ್ಲಿ 8MP ಕ್ಯಾಮೆರಾ ನೀಡಲಾಗಿದೆ.


Click it and Unblock the Notifications








