ಇನ್ನು ಮುಂದೆ ಟ್ರೈನ್ ಟಿಕೇಟ್‌ಗಾಗಿ ವೆಯ್ಟಿಂಗ್ ಲಿಸ್ಟ್‌ನಲ್ಲಿ ಕಾಯುವ ಅಗತ್ಯವಿಲ್ಲ: ಅದಕ್ಕಾಗಿಯೇ ಈ ಆಪ್..!
ಭಾರತೀಯ ರೈಲ್ವೆ ಡಿಜಿಟಲ್ ಕಡೆಗೆ ಹೆಚ್ಚು ವಾಲುತ್ತಿದ್ದು, ಟಿಕೇಟ್ ಬುಕಿಂಗ್ ಗಾಗಿ ತನ್ನ ವೆಬ್ ಸೈಟ್ ಮತ್ತು ಆಪ್ ಅನ್ನು ಅನಾವರಣಗೊಳಿಸಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯವನ್ನು ನೀಡಲು ಮುಂದಾಗಿದೆ. ಸರಳ ಮತ್ತು ಸುರಕ್ಷಿತ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತಿದೆ.

ಓದಿರಿ: ರಿಲಯನ್ಸ್ BIG TV ಖರೀದಿಸಿದ ದೈತ್ಯ ಮೀಡಿಯಾ ಕಂಪನಿ..!
ಇದೇ ಮಾದರಿಯಲ್ಲಿ ಭಾರತೀಯ ರೈಲ್ವೆ ವೈಟಿಂಗ್ ಲಿಸ್ಟ್ ಟಿಕೇಟ್ ಕನ್ಫರ್ಮೇಷನ್ ಅಗಲಿದೆಯೇ ಇಲ್ಲವೇ ಎಂದನ್ನು ತಿಳಿಸಿಕೊಡುವ ಮಾದರಿಯಲ್ಲಿ ತನ್ನ ಆಪ್ ಅನ್ನು ಸಿದ್ಧಪಡಿಸಿದೆ. ಇದರಿಂದಾಗಿ ಪ್ರಯಾಣಿಕರು ಕೊನೆಯ ಕ್ಷಣದಲ್ಲಿ ಪ್ರಯಾಣ ಮಾಡಲು ಸಾಧ್ಯವಾಗದೆ ಇರುವ ಪರಿಸ್ಥಿತಿಯನ್ನು ನಿವಾರಿಸಲು ಈ ಕ್ರಮಕ್ಕೆ ಮುಂದಾಗಿದೆ.

ವೈಟಿಂಗ್ ಲಿಸ್ಟ್ ಟಿಕೇಟ್:
ರೈಲ್ವೆ ಪ್ರಯಾಣಿಕರಿಗೆ ಟಿಕೇಟ್ ವೈಟಿಂಗ್ ಲಿಸ್ಟ್ ಸಾಕಷ್ಟು ಭಾರಿ ತೊಂದರೆಯನ್ನು ಸೃಷ್ಟಿಸುತ್ತದೆ. ಕೆಲವೊಮ್ಮೆ ಟಿಕೇಟ್ ಕನ್ಫರ್ಮ್ ಆದರೆ ಇನ್ನು ಕೆಲವು ಭಾರಿ ಆಗುವುದೇ ಇಲ್ಲ ಇದರಿಂದಾಗಿ ಪ್ರಯಾಣವು ಅನಿಶ್ಚಿತತೆಯಿಂದ ಕೂಡಿರುತ್ತಿತ್ತು. ಸದ್ಯ ಈ ಸಮಸ್ಯೆಗೇ IRCTC ಆಪ್ ಪರಿಹಾರವನ್ನು ನೀಡಲಿದೆ ಎನ್ನಲಾಗಿದೆ.

ಮೊದಲೇ ತಿಳಿಸಲಿದೆ:
IRCTC ಆಪ್ ನಲ್ಲಿ ಟಿಕೇಟ್ ಬುಕ್ ಮಾಡುವವರಿಗೆ ವೈಟಿಂಗ್ ಲಿಸ್ಟ್ ಇದ್ದರೆ ನಿಮ್ಮ ಟಿಕೇಟ್ ಕನ್ಫರ್ಮ್ ಆಗಲಿದೆಯೇ ಅಥಾವ ಇಲ್ಲವೇ ಎಂಬುದನ್ನು ಮೊದಲೇ ನಿಮಗೆ ತಿಳಿಸಲಿದೆ ಎನ್ನಲಾಗಿದೆ. ಇದರಿಂದಾಗಿ ನೀವು ನಿಮ್ಮ ಪ್ರಯಾಣವನ್ನು ಸರಿಯಾದ ರೀತಿಯಲ್ಲಿ ಪ್ಲಾನ್ ಮಾಡಬಹುದು.

ದಿನಕ್ಕೆ 13 ಲಕ್ಷ ಟಿಕೇಟ್ ಬುಕ್:
ದೇಶದಲ್ಲಿ ಅತೀ ಹೆಚ್ಚು ಮಂದಿ ಅವಲಂಬಿಸಿರುವ ಸಾರಿಗೆ ರೈಲ್ಬೆ. ಈ ಹಿನ್ನಲೆಯಲ್ಲಿ ಪ್ರತಿ ನಿತ್ಯ ಸರಿ ಸುಮಾರು 13 ಲಕ್ಷ ಟಿಕೇಟ್ ಬುಕ್ ಆಗಲಿದೆ. ಇದಕ್ಕಾಗಿ ಪ್ರಯಾಣಿಕ ಸ್ನೇಹಿಯಾಗಿ ಆಪ್ ರೂಪಿಸಲಾಗಿದೆ.


ಪ್ರಯಾಣಿಕ ಸ್ನೇಹಿಯಾಗಿ:
ಈಗಾಗಲೇ ರೈಲ್ವೆ ಪ್ರಯಾಣಿಕ ಸ್ನೇಹಿಯಾಗಿ ಕಾರ್ಯನಿರ್ವಹಿಸಲು ಮುಂದಾಗಿದೆ. ಜನ ಸಾಮಾನ್ಯರು ತಮ್ಮ ಪ್ರಯಾಣವನ್ನು ಸುಖಕರವಾಗಿಸಲು ಬೇಕಾದ ಎಲ್ಲಾ ಅನುಕೂಲಗಳನ್ನು ಮಾಡಿಕೊಡುತ್ತಿದೆ. ಇದರಕ್ಕಾಗಿ ಆಪ್ ಮತ್ತು ವೆಬ್ ಸೈಟಿನಲ್ಲಿ ಭಾರೀ ಬದಲಾವಣೆಯನ್ನು ಮಾಡಿದೆ ಎನ್ನಲಾಗಿದೆ.


Click it and Unblock the Notifications








