ಐಫೋನಿನ ಈ ಹೊಸ ಫೀಚರ್ಸ್ ಏನು ಗೊತ್ತಾ?
ಜಗತ್ಪ್ರಸಿದ್ದ ತಂತ್ರಜ್ಞಾನ ಸಂಸ್ಥೆ ಆಪಲ್ ತನ್ನ ಐಫೋನ್ ಗ್ರಾಹಕರಿಗೆ ನಿರಂತರವಾಗಿ ನೂತನ ಫೀಚರ್ಸ್‌ಗಳನ್ನು ಅಪ್‌ಗ್ರೇಡ್ ಮಾಡಿಕೊಳ್ಳುತ್ತಲೇ ಇರುತ್ತದೆ. ಆದರೆ, ಭಾರತೀಯರಿಗೆ ಇದೀಗ ಆಪಲ್ ನಿಡಿರುವ ಸಿಹಿಸುದ್ದಿ ಏನೆಂದರೆ, ಭಾರತೀಯ ಐಫೋನ್ ಬಳಕೆದಾರರಿಗಾಗಿಯೇ ಆಪಲ್ 'ಟರ್ನ್ ಟು ಟರ್ನ್ ನೇವಿಗೇಷನ್' ಸೌಲಭ್ಯವನ್ನು ಅಪ್‌ಗ್ರೇಡ್ ಮಾಡಿಕೊಂಡಿದೆ.

ಇದೀಗ ಭಾರತದಲ್ಲಿ ಆಪಲ್ ಸಂಸ್ಥೆ ನೀಡಿರುವ ನೂತನ ಟರ್ನ್ ಟು ಟರ್ನ್ ನೇವಿಗೇಷನ್ ಫೀಚರ್ ಐಫೋನ್ ಪ್ರೇಮಿಗಳಗೆ ಖುಷಿ ತಂದಿದ್ದು, ಆಪಲ್ 'iOS' ಮತ್ತು 'ಮ್ಯಾಕ್ OS' ಬಳಕೆದಾರರು ಸೇರಿದಂತೆ, 'ಕಾರ್‌ಪ್ಲೇ' ಆಯ್ಕೆಯಿಂದ ಕಾರಿನಲ್ಲೂ ಸಹ ಈ ಹೊಸ ಟರ್ನ್ ಟು ಟರ್ನ್ ನೇವಿಗೇಷನ್ ಅನ್ನು ಬಳಕೆ ಮಾಡಬಹುದಾಗಿದೆ ಎಂದು ಆಪಲ್ ಸಂಸ್ಥೆ ತಿಳಿಸಿದೆ.

ಆಪಲ್‌ನ ಈ ಹೊಸ ಟರ್ನ್ ಟು ಟರ್ನ್ ನೇವಿಗೇಷನ್ ಫೀಚರ್ ಬಳಕೆದಾರ ಅಗತ್ಯತೆಗಳಿಗೆ ಅನುಗುಣವಾಗಿ ಸಿದ್ದವಾಗಿದ್ದು, ಇನ್ಮುಂದೆ ಆಪಲ್ ಬಳಕೆದಾರರು ತಾವು ಇರುವ ಸ್ಥಳದಿಂದ ತಲುಪಬೇಕಾದ ಸ್ಥಳದ ನಡುವಿನ ಅಂತರವನ್ನು ತಿಳಿದುಕೊಳ್ಳುವುದರ ಜತೆಗೆ ತಮ್ಮ ನಿಗದಿತ ಜಾಗಕ್ಕೆ ತಲುಪಲು ತೆಗೆದುಕೊಳ್ಳುವ ಸಮಯದ ಕುರಿತಾದ ಮಾಹಿತಿ ಇದರಲ್ಲಿ ದೊರಕಲಿದೆ.

ಗೂಗಲ್‌ನ ಮ್ಯಾಪ್ ಸೇವೆಯಲ್ಲಿ ನೀಡಿರುವಂತೆಯೇ, ಈ ಆಪಲ್ ನೇವಿಗೇಷನ್ ಸೇವೆಯಲ್ಲಿಯೂ ಪ್ರಮುಖ ಕ್ಯಾಬ್ ಸರ್ವೀಸ್ ಪ್ರವೈಡರ್‌ಗಳಾದ ಉಬರ್ ಹಾಗೂ ಓಲಾದಲ್ಲಿ ಕ್ಯಾಬ್‌ಗಳ ಸೇವೆಗಳನ್ನು ಸುಲಭವಾಗಿ ಪಡೆದುಕೊಳ್ಳಲು ಆಪಲ್ ಅನುಮಿಸಿದೆ. ಇದು ಹೊಸ ನೇವಿಗೇಷನ್ ಫೀಚರ್ಸ್ ಅನ್ನು ಬಳಸುವ ಐಫೋನ್ ಬಳಕೆದಾರರಿಗೆ ಸಿಕ್ಕಿರುವ ವಿಶೇಷ ಫೀಚರ್ ಆಗಿದೆ.
ದೇಶದ ಪ್ರಮುಖ ನಗರ ಪ್ರದೇಶಗಳು, ವಾಣಿಜ್ಯ ಸ್ಥಳಗಳು, ಸೇರಿದಂತೆ ಇತರೆ ಮುಖ್ಯ ಲೋಕೆಷನ್‌ಗಳನ್ನು ಮ್ಯಾಪಿಂಗ್‌ನಲ್ಲಿ ಗುರುತುಮಾಡಲಾಗಿದ್ದು, ದೇಶದಲ್ಲಿ ತನ್ನ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಆಪಲ್ ಮುಂದಾಗಿದೆ. ಪ್ರಸ್ತುತ ಛತ್ತೀಸಗಢ್, ಮುಂಬೈ ಮತ್ತು ದೆಹಲಿ ಸೇರಿದಂತೆ ಭಾರತದ ಪ್ರಮುಖ ನಗರಗಳು ಮತ್ತು ಸ್ಥಳಗಳಲ್ಲಿ ನೇವಿಗೇಷನ್ ಸೌಲಭ್ಯ ಲಭ್ಯವಿದೆ.


Click it and Unblock the Notifications