ಭಾರತೀಯ ಪೇಮೆಂಟ್ ಲೋಕಕ್ಕೆ ಆಪಲ್ ಶೀಘ್ರವೇ ಎಂಟ್ರಿ..!
ಈಗಾಗಲೇ ಗೂಗಲ್ ಸೇರಿದಂತೆ ಹಲವು ಕಂಪನಿಗಳು ಭಾರತದಲ್ಲಿ ಪೇಮೆಂಟ್ ಆಪ್‌ಗಳನ್ನು ಲಾಂಚ್ ಮಾಡಿದ್ದು, ಈ ಹಿನ್ನಲೆಯಲ್ಲಿ ಭಾರತದ ಪೇಮೆಂಟ್ ಮಾರುಕಟ್ಟೆಗೆ ಆಪಲ್ ಸಹ ಪ್ರವೇಶಿಸಲಿದ್ದು, ಮೊಬೈಲ್ ಪೇಮೆಂಟ್ ಅನ್ನು ಇನ್ನಷ್ಟು ಸುಲಭ ಮಾಡಲಿದೆ.
ಆಪಲ್ ಈ ಬಾರಿ ಭಾರತೀಯರಿಗೆ ಹೊಸದೊಂದು ಸೇವೆಯನ್ನು ನೀಡಲು ಮುಂದಾಗಿದೆ. ಜಾಗತೀಕವಾಗಿ ಅದರಲ್ಲೂ ಅಮೆರಿಕಾದಲ್ಲಿ ಹೆಚ್ಚು ಖ್ಯಾತಿಯನ್ನು ಗಳಿಸಿಕೊಂಡಿರುವ ಆಪಲ್ ಪೇ ಸೇವೆಯನ್ನು ಭಾರತದಲ್ಲೂ ಪರಿಚಯಿಸಲು ಮುಂದಾಗಿದೆ.

ಓದಿರಿ: ಜಿಯೋ ಫೋನ್ ಬೇಕೆ..? OLXನಲ್ಲಿ ಸೇಲ್..! ಬೆಲೆ ಎಷ್ಟು..?
ಈಗಾಗಲೇ ಗೂಗಲ್ ಸೇರಿದಂತೆ ಹಲವು ಕಂಪನಿಗಳು ಭಾರತದಲ್ಲಿ ಪೇಮೆಂಟ್ ಆಪ್‌ಗಳನ್ನು ಲಾಂಚ್ ಮಾಡಿದ್ದು, ಈ ಹಿನ್ನಲೆಯಲ್ಲಿ ಭಾರತದ ಪೇಮೆಂಟ್ ಮಾರುಕಟ್ಟೆಗೆ ಆಪಲ್ ಸಹ ಪ್ರವೇಶಿಸಲಿದ್ದು, ಮೊಬೈಲ್ ಪೇಮೆಂಟ್ ಅನ್ನು ಇನ್ನಷ್ಟು ಸುಲಭ ಮಾಡಲಿದೆ.

ಆಪ್‌ಗಳಿಗೆ ಭರ್ಜರಿ ಸ್ಪರ್ಧೆ
ಆಪಲ್ ಪೇ ಈಗಾಗಲೇ ಮೊಬೈಲ್ ಪೇಮೆಂಟ್ ಸೇವೆ ಮೆಕ್ಯಾನಿಸಮ್ ಅನ್ನು ಬದಲಾಯಿಸಿದ್ದು, ಸದ್ಯ ಕಾರ್ಯಚಟುವಟಿಕೆಯನ್ನು ನಡೆಸುತ್ತಿರುವ ಪೇಮೆಂಟ್ ಆಪ್ ಗಳಿಗಿಂತ ಬೇರೆ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಪ್‌ಗಳಿಗೆ ಭರ್ಜರಿ ಸ್ಪರ್ಧೆಯನ್ನು ನೀಡಲಿದೆ.

ಆಪಲ್ ಸಹ ಮಾರುಕಟ್ಟೆಗೆ
ಈಗಾಗಲೇ ಸ್ಯಾಮ್‌ಸಂಗ್, ಗೂಗಲ್‌ಗಳು ತಮ್ಮದೇ ಪೇಮೆಂಟ್ ಆಪ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಶೀಘ್ರವೇ ಅಮೆಜಾನ್ ಸಹ ಅಮೆಜಾನ್ ಪೇ ಎನ್ನುವ ಪೇಮೆಂಟ್ ಆಪ್ ಅನ್ನು ಬಿಡುಗಡೆ ಮಾಡಲಿದೆ. ಹೀಗಾಗಿ ಆಪಲ್ ಸಹ ಮಾರುಕಟ್ಟೆಗೆ ಪ್ರವೇಶಿಸಲು ಮುಂದಾಗಿದೆ.

ವಾಟ್ಸ್‌ಆಪ್ ನಿಂದ ಪೇಮೆಂಟ್ ಆಪ್
ವಾಟ್ಸ್‌ಆಪ್ ಸಹ ಪೇಮೆಂಟ್ ಆಪ್ ಬಿಡುಗಡೆ ಮಾಡಲಿದೆ. ಫೇಸ್‌ಬುಕ್ ಈ ಕುರಿತು ಈಗಾಗಲೇ ಮಾಹಿತಿಯನ್ನು ನೀಡಿದೆ. ಹಾಗಾಗಿ ಭಾರತೀಯ ಮೊಬೈಲ್ ಪೇಮೆಂಟ್ ಲೋಕದಲ್ಲಿ ಭರ್ಜರಿ ಸ್ಪರ್ಧೆಯನ್ನು ಕಾಣುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.


Click it and Unblock the Notifications



