ಮಕ್ಕಳ ಸ್ಮಾರ್ಟ್‌ಪೋನ್ ಬಳಕೆ ನಿಯಂತ್ರಿಸಲು ಆಪಲ್ ಬಳಕೆದಾರರಿಗಿನ್ನು ಸಾಧ್ಯ!!

ಸ್ಮಾರ್ಟ್‌ಫೋನ್‌ಗಳಿಗೆ ಮಕ್ಕಳು ದಾಸರಾಗುತ್ತಿರುವುದನ್ನು ತಡೆಯುವ ಸಲುವಾಗಿ ಆಪಲ್ ಸಂಸ್ಥೆ ಮುಂದಾಗಿದೆ. ಹಾಗಾಗಿ, ತನ್ನ ಮುಖ್ಯ ವೆಬ್‌ಪೇಜ್‌ನಲ್ಲಿ ಫ್ಯಾಮಿಲೀಸ್ ಎಂಬ ಹೊಸ ಪೇಜ್ ಅನ್ನು ಪೋಷಕರಿಗಾಗಿಯೇ ತೆರೆದಿದೆ.!

|

ಸ್ಮಾರ್ಟ್‌ಫೋನ್‌ಗಳಿಗೆ ಮಕ್ಕಳು ದಾಸರಾಗುತ್ತಿರುವುದನ್ನು ತಡೆಯುವ ಸಲುವಾಗಿ ಆಪಲ್ ಸಂಸ್ಥೆ ಮುಂದಾಗಿದೆ. ಹಾಗಾಗಿ, ತನ್ನ ಮುಖ್ಯ ವೆಬ್‌ಪೇಜ್‌ನಲ್ಲಿ ಫ್ಯಾಮಿಲೀಸ್ ಎಂಬ ಹೊಸ ಪೇಜ್ ಅನ್ನು ಪೋಷಕರಿಗಾಗಿಯೇ ತೆರೆದಿದೆ.! ಈ ಫ್ಯಾಮಿಲೀಸ್ ಪೇಜ್‌ನಲ್ಲಿ ಮಕ್ಕಳನ್ನು ಸ್ಕ್ರೀನ್ ಅಡಿಕ್ಷನ್ ನಿಂದ ದೂರವಿರಿಸಲು ಸಾಧ್ಯ ಎಂದು ಆಪಲ್ ಕಂಪೆನಿ ತಿಳಿಸಿದೆ.!!

ಪೋಷಕರು ತಮ್ಮ ಮಕ್ಕಳ ಸಾಧನಗಳಲ್ಲಿ ಗೌಪ್ಯತೆ ನಿಯಂತ್ರಣಗಳನ್ನು ಹೊಂದಿಸಲು ನಾವು ಸುಲಭಗೊಳಿಸಿದ್ದೇವೆ. ನೀವು ಬಯಸುವ ರೀತಿಯಲ್ಲಿಯೇ ಮಕ್ಕಳು ಆಪಲ್ ಸಾಧನಗಳನ್ನು ಬಳಸುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ನಿರಂತರವಾಗಿ ಹೊಸ ವೈಶಿಷ್ಟ್ಯಗಳನ್ನು ವಿನ್ಯಾಸಗೊಳಿಸುತ್ತೇವೆ ಎಂದು ಆಪಲ್ ಕಂಪೆನಿ ಹೇಳಿಕೊಂಡಿದೆ.!!

ಮಕ್ಕಳ ಸ್ಮಾರ್ಟ್‌ಪೋನ್ ಬಳಕೆ ನಿಯಂತ್ರಿಸಲು ಆಪಲ್ ಬಳಕೆದಾರರಿಗಿನ್ನು ಸಾಧ್ಯ!!

ಆಪಲ್ ಸ್ಮಾರ್ಟ್‌ಪೋನ್ ಬಳಕೆದಾರರು ಫ್ಯಾಮಿಲೀಸ್ ಪೇಜ್‌ನಲ್ಲಿರುವ ''ಫೈಂಡ್ ಮೈ ಫ್ರೆಂಡ್ಸ್'' ವೈಶಿಷ್ಟ್ಯದಿಂದ ಮಕ್ಕಳು ಯಾವ ಪ್ರದೇಶಕ್ಕೆ ಹೋಗಿದ್ದಾರೆ, ಎಷ್ಟು ದೂರ ಸಂಚರಿಸಿದ್ದಾರೆ, ಎಷ್ಟು ಸಮಯ ಪ್ರಯಾಣ ಮಾಡಿದ್ದಾರೆ ಎಂಬೆಲ್ಲಾ ಮಾಹಿತಿಯನ್ನು ಪೋಷಕರು ಕ್ಷಣಮಾತ್ರದಲ್ಲಿ ಪಡೆಯಬಹುದಾದ ವೈಶಿಷ್ಟ್ಯವನ್ನು ಆಪಲ್ ಕಂಪೆನಿ ತಂದಿದೆ.!!

ಮಕ್ಕಳ ಸ್ಮಾರ್ಟ್‌ಪೋನ್ ಬಳಕೆ ನಿಯಂತ್ರಿಸಲು ಆಪಲ್ ಬಳಕೆದಾರರಿಗಿನ್ನು ಸಾಧ್ಯ!!

ಇನ್ನು ಫ್ಯಾಮಿಲೀಸ್ ಪೇಜ್‌ನಲ್ಲಿರುವ ಆಸ್ಕ್ ಟು ಬೈ( Ask To Buy) ಆಯ್ಕೆಯ ಮೂಲಕ ಪೋಷಕರು ತಮ್ಮ ಮಕ್ಕಳು ಬಳಕೆ ಮಾಡಬಹುದಾದ ಆಪ್ ಗಳಿಗೆ ನಿರ್ಬಂಧ ವಿಧಿಸಿ ಹೊಸ ಆಪ್ ಗಳನ್ನು ಖರೀದಿ ಮಾಡದಂತೆ ತಡೆಯಬಹುದಾಗಿದೆ. ಇದರಿಂದ ಮಕ್ಕಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಆಪಲ್ ಬಳಕೆದಾರರು ಹೊಂದಲಿದ್ದಾರೆ.!!

ಮಕ್ಕಳ ಸ್ಮಾರ್ಟ್‌ಪೋನ್ ಬಳಕೆ ನಿಯಂತ್ರಿಸಲು ಆಪಲ್ ಬಳಕೆದಾರರಿಗಿನ್ನು ಸಾಧ್ಯ!!

ಇಷ್ಟು ಮಾತ್ರವಲ್ಲದೇ ಪೋಷಕರು ಪೂರ್ವಾನುಮತಿ ನೀಡಿದ ವೆಬ್‌ಸೈಟ್‌ಗಳನ್ನಷ್ಟೇ ತಮ್ಮ ಮಕ್ಕಳು ಬಳಕೆ ಮಾಡಬಹುದಾದಂತಹ ಆಯ್ಕೆಯನ್ನೂ ಸಹ ಫ್ಯಾಮಿಲೀಸ್ ಪೇಜ್‌ ಒದಗಿಸಿದೆ. ಮಕ್ಕಳನ್ನು ಸ್ಕ್ರೀನ್ ಅಡಿಕ್ಷನ್‌ನಿಂದ ದೂರವಿರಿಸುವ ನಿಟ್ಟಿನಲ್ಲಿ ಮತ್ತಷ್ಟು ಸುಧಾರಿತ ಕ್ರಮಗಳನ್ನು ಕೈಗೊಳ್ಳುವುದಾಗಿ ಆಪಲ್ ಕಂಪೆನಿ ತಿಳಿಸಿದೆ.!!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಓದಿರಿ: ನಾಳೆಯಿಂದ ''ಶಿಯೋಮಿ ರೆಡ್‌ ಮಿ 5'' ಮೊದಲ ಸೇಲ್ ಆರಂಭ!!..ಖರೀದಿಸಲು ಭಾರೀ ಕೊಡುಗೆಗಳು!!

Best Mobiles in India

English summary
Another app management feature lets users automatically block in-app purchases. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X