ಆಪಲ್ ಪರಿಚಯಿಸಲಿದೆ ಈ ಎರಡು ಹೊಸ ಆಪ್ಸ್. !
ಫೋಟೋಗ್ರಫಿಯನ್ನು ಬಹುತೇಕರು ಇಷ್ಟಪಡುತ್ತಾರೆ ಆದರೆ ಎಲ್ಲರೂ ಡಿಎಸ್ಎಲ್ಆರ್ ಕ್ಯಾಮೆರಾ ಬಳಸಿ ಪೋಟೋಗ್ರಫಿ ಮಾಡೊದಿಲ್ಲ. ಈಗ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಅತ್ಯುತ್ತಮ ಕ್ಯಾಮೆರಾ ಫೀಚರ್ಸ್ ಇದ್ದು, ಅದರೊಂದಿಗೆ ಅನೇಕ ಉತ್ತಮ ಪೋಟೋ ಎಡಿಟಿಂಗ್ ಅಪ್ಲಿಕೇಶನ್‌ಗಳು ಸಹ ಲಭ್ಯ ಇವೆ. ಇದೀಗ ಆಪಲ್ ಸಂಸ್ಥೆ ಕೂಡ ತನ್ನ ಬಳಕೆದಾರರಿಗೆ ಫೋಟೋ ಎಡಿಟಿಂಗ್ ಮಾಡಲು ಹೊಸ ಫೋಟೋ ಎಡಿಟ್ ಆಪ್‌ಗಳನ್ನು ಪರಿಚಯಿಸುತ್ತಿದೆ.

ಹೌದು, ತನ್ನದೇ ಆದ ಹಲವು ವಿಶೇಷ ಅಪ್ಲಿಕೇಶನ್‌ಗಳನ್ನು ನೀಡುವ ಮೂಲಕ ಬಳಕೆದಾರರಿಂದ ಮೆಚ್ಚುಗೆಗಳಿಸಿಕೊಂಡಿರುವ ಆಪಲ್, ಇದೀಗ ತನ್ನ ಬಳಕೆದಾರರಿಗೆ ಪೋಟೋಗ್ರಫಿ ಆಪ್‌ಗಳನ್ನು ಪರಿಚಯಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಬಳಕೆದಾರರಿಗೆ ಮೊಬೈಲ್ ಕ್ಯಾಮೆರಾದಲ್ಲಿ ಹೊಸತನವನ್ನು ಪರಿಚಯಿಸಬೇಕೆನ್ನುವ ಉದ್ದೇಶವನ್ನು ಹೊಂದಿರುವ ಆಪಲ್ ತನ್ನ ಐಪೋನ್ ಬಳಕೆದಾರರಿಗೆ ಸಂತಸದ ಸಮಾಚಾರವನ್ನು ತಿಳಿಸಿದೆ.

ಆಪಲ್ ಇದೀಗ "ಫುಜಿಯಾನ್" ಮತ್ತು "ಟ್ರೂಡೆಪ್ತ್" ಎಂಬ ಎರಡು ಫ್ಯಾನ್ಸಿ ಫೋಟೋ ಎಡಿಟ್ ಮಾಡುವ ಅಪ್ಲಿಕೇಶನ್‌ಗಳನ್ನು ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಪರಿಚಯಿಸಲಿದೆ ಎಂದು ಹೇಳಲಾಗಿದ್ದು, ಈ ಅಪ್ಲಿಕೇಶನ್‌ಗಳಲ್ಲಿ ಬೇರೆ ಬೇರೆ ಫೋಟೋಗಳನ್ನು ಸೇರಿಸುವ ಮತ್ತು ಪೊರ್ಟ್ರೇಟ್ ಮೋಡ್‌ನಂತಹ ವಿಶೇಷ ಎಡಿಟಿಂಗ್ ಆಯ್ಕೆಗಳನ್ನು ಈ ಆಪ್‌ಗಳು ಹೊಂದಿರಲಿವೆ ಎಂದು ಪ್ರಮುಖ ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ.

ಐಫೋನಿನ ಹೊಸ ಫೋಟೋ ಎಡಿಟಿಂಗ್ ಆಪ್ 'ಫುಜಿಯಾನ್'ನಲ್ಲಿ ಫೋಟೋ ಬ್ಲೆಂಡ್ ಮಾಡುವ ಆಯ್ಕೆ ಒದಗಿಸಲಾಗುತ್ತದೆ ಎಂದು ಹೇಳಲಾಗಿದ್ದು, ,ಪ್ರಖ್ಯಾತ ಫೋಟೋಗ್ರಾಫ್‌ರ್ಸ್ ತೆಗೆದಿರುವ ಫೋಟೋಗಳನ್ನು ಎಡಿಟಿಂಗ್ ಬ್ಯಾಕ್‌ಸೈಡ್‌ನಲ್ಲಿ ಬಳಸಬಹುದಾದ ಆಯ್ಕೆ ಇರುತ್ತದೆ ಎನ್ನಲಾಗುತ್ತಿದೆ. ಇದರೊಂದಿಗೆ ಡಸ್ಟ್ ಓವರ್‌ಲೇ, ಲೈಟ್ ಲಿಕ್ ಮತ್ತು ಕಲರ್ ಫಿಲ್ಟರ್ ಆಯ್ಕೆಗಳು ಬಳಕೆದಾರರಿಗೆ ಲಭ್ಯ ಇರಲಿವೆ. ಐಫೋನ್ 8 ಪ್ಲಸ್, ಎಕ್ಸ್, ಎಕ್ಸ್ ಆರ್, ಮತ್ತು ಎಕ್ಸ್‌ಎಸ್ ಮಾದರಿಗಳಲ್ಲಿ ಈ ಆಪ್ ಲಭ್ಯವಿದೆ ಎನ್ನಲಾಗಿದೆ.

ಇನ್ನು ಟ್ರೂಡೆಪ್ತ್ ಎಂಬ ಎಡಿಟಿಂಗ್ ಆಪ್ ಅನ್ನು ಸಹ ಆಪಲ್ ಪರಿಚಯಿಸಲಿದ್ದು, ಈ ಆಪ್ ಮೂಲಕ ಫೋಟೋ ತೆಗೆಯುವಾಗ ವ್ಯಕ್ತಿಯನ್ನು ಆಟೋಮೇಟಿಕ್ ಆಗಿ ಗುರುತಿಸಿಕೊಂಡು ಐಪೋನಿನ ಎರಡು ಕ್ಯಾಮೆರಾಗಳು ವ್ಯಕ್ತಿಯ ಫೋಟೋ ಸೆರೆಹಿಡಿಯಲಿವೆ. ಮತ್ತು ಸಿಲೊಯೆಟ್ ಸಹಾಯದಿಂದ ಆ ಫೋಟೋದಲ್ಲಿನ ಬ್ಯಾಕ್ ಗ್ರೌಂಡ್ ಅನ್ನು ಬದಲಾಯಿಸುವ ಚತುರತೆ ಈ ಆಪ್‌ಗಿದೆ ಎಂದು ಹೇಳಲಾಗಿದೆ.


Click it and Unblock the Notifications