ಸರಿಯಾಗಿ ತರಕಾರಿ ಸೇವಿಸಲು ವಿಜ್ಞಾನಿಗಳು ಲಾಂಚ್ ಮಾಡಿದ್ದಾರೆ "ವೆಜ್ ಈಜೀ'' ಆಪ್!!
ಶೇ 80 ರಷ್ಟು ಜನರು ನಿಯಮಿತವಾಗಿ ತರಕಾರಿ ಸೇವನೆ ಮಾಡುತ್ತಿಲ್ಲ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂಬುದು ತಿಳಿದುಬಂದಿದೆ.!!
ಜನರು ತರಕಾರಿಯನ್ನು ಸರಿಯಾಗಿ ಸೇವಿಸುತ್ತಿಲ್ಲ ಎನ್ನುವ ಬಗ್ಗೆ ಸಂಶೋಧನೆಯನ್ನು ನಡೆಸಿರುವ ಕಾಮನ್‌ವೆಲ್ತ್ ಸೈಂಟಿಫಿಕ್ ಆಂಡ್ ಇಂಡಸ್ಟ್ರೀಯಲ್ ರಿಸರ್ಚ್ ಆರ್ಗನೈಜೆಷನ್‌ನ ಸಂಶೋಧನಾ ವಿಭಾಗದ ವಿಜ್ಞಾನಿಗಳ ತಂಡ ಯುವಕರಲ್ಲಿ ತರಕಾರಿ ಸೇವನೆ ಬಗ್ಗೆ ಜಾಗೃತಿ ಮೂಡಿಸಲು ಈ ''ವೆಜ್ ಈಜೀ'' ಎಂಬ ಆಪ್ ಅನ್ನು ವಿನ್ಯಾಸ ಮಾಡಿದೆ.!!
ಈ ಸಂಶೋಧನಾ ವಿಭಾಗದ ಮುಖ್ಯಸ್ಥ ಮ್ಯಾನ್ನಿ ನೋಕ್ಸ್ ಮತ್ತು ಅವರ ತಂಡ 2015 ರಿಂದ 2017ರ ಆಕ್ಟೋಬರ್‌ವರೆಗೂ 1.91 ಲಕ್ಷ ಯುವಕರನ್ನು ಸಂದರ್ಶನಕ್ಕೆ ಒಳಪಡಿಸಿ ಸಂಶೋಧನೆ ನಡೆಸಿದ್ದಾರೆ. ಇವರಲ್ಲಿ ಶೇ 80 ರಷ್ಟು ಜನರು ನಿಯಮಿತವಾಗಿ ತರಕಾರಿ ಸೇವನೆ ಮಾಡುತ್ತಿಲ್ಲ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂಬುದು ತಿಳಿದುಬಂದಿದೆ.!!

ಹಾಗಾಗಿ, ಯುವಕರಲ್ಲಿ ತರಕಾರಿ ಸೇವನೆ ಬಗ್ಗೆ ಜಾಗೃತಿ ಮೂಡಿಸಲು ಈ ವೆಜ್ ಈಜೀ ಆಪ್ ಅನ್ನು ವಿನ್ಯಾಸ ಮಾಡಲಾಗಿದ್ದು, ಬಳಕೆದಾರರು ಈ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡರೆ ಯಾವ ದಿನ ಯಾವ ತರಕಾರಿಯನ್ನು ಸೇವಿಸಬೇಕು ಮತ್ತು ಎಷ್ಟು ತರಕಾರಿಯನ್ನು ಸೇವಿಸಬೇಕು ಎಂಬ ಮಾಹಿತಿಯನ್ನು ನೀಡುತ್ತದೆ ಎಂದು ತಂಡ ಹೇಳಿದೆ.!!

ಒತ್ತಡದ ಜೀವನ ಮತ್ತು ಸಮಯದ ಕೊರತೆಯಿಂದ ಜನರು ತರಕಾರಿ ಸೇವನೆ ಮಾಡುತ್ತಿಲಲ್ಲ ಮತ್ತು ಇತ್ತೀಚಿನ ದಿನಗಳಲ್ಲಿ ಯುವಕರು ತರಕಾರಿ ಸೇವನೆ ಮಾಡುವುದನ್ನು ಕಡಿಮೆ ಮಾಡಿದ್ದಾರೆ ಎಂದು ಸಂಶೋಧನಾ ವಿಭಾಗದ ಮುಖ್ಯಸ್ಥ ಮ್ಯಾನ್ನಿ ನೋಕ್ಸ್ ಅಭಿಪ್ರಾಯಪಟ್ಟಿದ್ದು, ನೀವು ಸಹ ಈ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.!!
ಓದಿರಿ: ಜಿಯೋಗಿಂತಲೂ ಏರ್‌ಟೆಲ್ ಮೇಲೆ ಪ್ರೀತಿ ಹೆಚ್ಚಾಗಲು ಇದೊಂದೇ ಕಾರಣ ಸಾಕು!!


Click it and Unblock the Notifications








