Subscribe to Gizbot

ಎಲ್ಲಿದ್ದರೂ ಉಚಿತ ವೈಫೈ ಸಂಪರ್ಕಿಸುವ ವೈಫೈಯರ್‌ ಆಪ್‌

Written By:

ಕರ್ನಾಟಕ ಸರ್ಕಾರವು ಸರ್ಕಾರಿ ಬಸ್‌ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ ಒದಗಿಸುವ ಯೋಜನೆಯನ್ನು ಜಾರಿಗೊಳಿಸಿದೆ. ಅಲ್ಲದೇ ಕೇಂದ್ರ ಸರ್ಕಾರವು ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಆದರೂ ಸಹ ಇಂದಿಗೂ ಬಹುಸಂಖ್ಯಾತರಿಗೆ ಉಚಿತ ವೈಫೈ ಪಡೆಯಲು ಆಗುತ್ತಿಲ್ಲ.

ಓದಿರಿ: ಫೇಸ್‌ಬುಕ್‌ನಲ್ಲಿ ಇವರುಗಳಿಂದ ಅಪಾಯ ಕಟ್ಟಿಟ್ಟ ಬುತ್ತಿ

ಈ ಹಿನ್ನೆಲೆಯಲ್ಲಿ ಉಚಿತ ವೈಫೈ ಸೇವೆಯ ಸಂಪರ್ಕವನ್ನು ಸ್ವಯಂ ಆಗಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಅವರು ಎಲ್ಲೇ ಇದ್ದರೂ ಸಹ ಶೀಘ್ರವಾಗಿ ಕಲ್ಪಿಸುವ ಹೊಸ ಮೊಬೈಲ್‌ ಅಪ್ಲಿಕೇಶನ್‌ ಅಭಿವದ್ದಿಗೊಂಡಿದೆ. ನೀವು ಎಲ್ಲೇ ಇದ್ದರೂ ಸಹ ಸಾರ್ವಜನಿಕ ವೈಫೈ ಅನ್ನು ಬಹುಬೇಗ ಆಪ್‌ ಸ್ವಯಂ ಆಗಿ ಕನೆಕ್ಟ್‌ ಮಾಡುತ್ತದೆ. ಹಾಗಾದರೆ ಆ ಆಪ್‌ ಯಾವುದು ಎಂದು ತಿಳಿಯಲು ಈ ಲೇಖನ ಓದಿ. ಅಪ್ಲಿಕೇಶನ್‌ನ ವಿಶೇಷ ಫೀಚರ್‌ಗಳನ್ನು ಸಹ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೈಫೈಯರ್(WiFire)

ವೈಫೈಯರ್(WiFire)

ವೈಫೈಯರ್‌ ಎಂಬ ಹೊಸ ಅಪ್ಲಿಕೇಶನ್‌ ಸ್ವಯಂ ಆಗಿ ನೀವು ಎಲ್ಲೇ ಹೋದರೂ ಸಹ ಅದು ಉಚಿತ ವೈಫೈ ಹಾಟ್‌ಸ್ಪಾಟ್‌ಗಳನ್ನು ಮಾತ್ರ ನಿಮಗೆ ಸಂಪರ್ಕ ಕಲ್ಪಿಸುತ್ತದೆ.

ಪಾಸ್‌ವರ್ಡ್‌

ಪಾಸ್‌ವರ್ಡ್‌

ಯಾವುದೇ ಪಾಸ್‌ವರ್ಡ್‌, ಬಳಕೆದಾರರ ಹೆಸರು ಇತರ ಮಾಹಿತಿ ನೀಡದೆ ಉಚಿತವಾಗಿ ಸಂಪರ್ಕ ಕಲ್ಪಿಸುವ ಹೊಸ ಅಪ್ಲಿಕೇಶನ್‌ ವೈಫೈಯರ್‌ಆಗಿದೆ.

ಸಾರ್ವಜನಿಕ ವೈಫೈ

ಸಾರ್ವಜನಿಕ ವೈಫೈ

ನೀವು ಇರುವ ಸ್ಥಳಗಳಲ್ಲಿ ಯಾವುದಾದರೂ ಸಾರ್ವಜನಿಕ ವೈಫೈ ಹಾಟ್‌ಸ್ಪಾಟ್‌ ಇದ್ದರೆ ಸರ್ಚ್‌ ಮಾಡಿ ನಿಮಗೆ ಸಂಪರ್ಕ ಕಲ್ಪಿಸುವ ಅತ್ಯುತ್ತಮ ಉಪಯೋಗಿ ಆಪ್‌ ವೈಫೈಯರ್‌.

ಉಚಿತ ವೈಫೈ ನೆಟ್‌ವರ್ಕ್‌ಗಳು

ಉಚಿತ ವೈಫೈ ನೆಟ್‌ವರ್ಕ್‌ಗಳು

* ವಿಮಾನ ನಿಲ್ದಾಣಗಳು-ದೆಹಲಿ, ಬಾಂಬೆ, ಬೆಂಗಳೂರು, ಕೊಲ್ಕತ್ತಾ, ಚನ್ನೈ, ಹೈದಾರಾಬಾದ್‌
* ಸಾರ್ವಜನಿಕ ಹಾಟ್‌ಸ್ಪಾಟ್‌ಗಳು- ಟಾಟಾ ಡೊಕೊಮೊ ಮತ್ತು ಓಜೋನ್‌
* ರೆಸ್ಟೋರೆಂಟ್‌ಗಳು ಮತ್ತು ಕೆಫೆ - ಕೆಎಫ್‌ಸಿ, ಮ್ಯಾಕ್‌ಡೊನಾಲ್ಡ್‌, ಸ್ಟಾರ್ಟ್‌ಬಕ್ಸ್‌ ಮತ್ತು ಇತರೆ ಹಲವು

ವೈಫೈಯರ್‌ ಫೀಚರ್‌

* ಸ್ವಯಂ ಆಗಿ ವೈಫೈಯರ್‌ ಪಾಸ್‌ವರ್ಡ್‌ ತೆಗೆದುಕೊಳ್ಳದೆ ವೈಫೈ ಸಂಪರ್ಕ ತೆಗೆದುಕೊಳ್ಳುತ್ತದೆ.
* ಸಾರ್ವಜನಿಕ ಹಾಟ್‌ಸ್ಪಾಟ್‌ಗಳಲ್ಲಿ ಆಪ್‌ ನಿಮ್ಮ ನಂಬರ್‌ ಅನ್ನು ಸ್ವಯಂ ಆಗಿ ಟೈಪಿಸಿ ಒಮ್ಮೆ ಟ್ಯಾಪ್‌ ಮಾಡುವ ಮೂಲಕ ಪಾಸ್‌ವರ್ಡ್ ಅನ್ನು ತೆಗೆದುಕೊಳ್ಳುತ್ತದೆ.
* ಉಚಿತ ವೈಫೈ ಸ್ಥಳಗಳನ್ನು ಆಪ್‌ನ ಮ್ಯಾಪ್‌ನಲ್ಲಿ ಸರ್ಚ್‌ ಮಾಡಬಹುದಾಗಿದೆ.
* ಇದನ್ನು ಬಳಸುವುದರ ಮೂಲಕ ಅಂಕಗಳನ್ನು ಪಡೆದು ಉಚಿತ ಬಹುಮಾನಗಳನ್ನು ಪಡೆಯಬಹುದು ಎನ್ನಲಾಗಿದೆ.

ಬೆಂಗಳೂರು

ಬೆಂಗಳೂರು

ವೈಫೈಯರ್‌ ಉಚಿತ ವೈಫೈಯನ್ನು ಸಂಪರ್ಕಿಸುವ ಸೌಲಭ್ಯವು ಪ್ರಸ್ತುತದಲ್ಲಿ ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಲಭ್ಯವಿದೆ. ಅದನ್ನು ಬಿಟ್ಟರೆ ದೆಹಲಿ, ಮುಂಬೈ, ಕೊಲ್ಕತ್ತಾ, ಚೆನ್ನೈ ಮತ್ತು ಹೈದಾರಾಬಾದ್‌ನಲ್ಲಿ ಆಪ್‌ ಸೇವೆ ಇದೆ. ಭಾರತದಾದ್ಯಂತ ಈ ಸೇವೆ ಆಪ್‌ ಮೂಲಕ ಮುಂದಿನ ದಿನಗಳಲ್ಲಿ ಅಭಿವೃದ್ದಿಗೊಳ್ಳಲಿದೆ.

ಪ್ರವಾಸಿಗರಿಗೆ ಅತ್ಯುತ್ತಮ ಆಪ್‌

ಪ್ರವಾಸಿಗರಿಗೆ ಅತ್ಯುತ್ತಮ ಆಪ್‌

ಆಗಾಗ ಪ್ರವಾಸ ಹೋಗುವವರಿಗೆ ಈ ಆಪ್‌ ಅಧಿಕ ರೀತಿಯಲ್ಲಿ ಸಹಾಯವಾಗುತ್ತದೆ. ಎಲ್ಲಿ ಹೋದರು ಸಹ ವೈಫೈಯರ್‌ ಆಪ್‌ ಮುಖಾಂತರ ಉಚಿತ ವೈಫೈ ಸಂಪರ್ಕ ಪಡೆಯಬಹುದಾಗಿದೆ.

ಕಾಲೇಜು ವಿದ್ಯಾರ್ಥಿಗಳಿಗಾಗಿ

ಕಾಲೇಜು ವಿದ್ಯಾರ್ಥಿಗಳಿಗಾಗಿ

ಮಾಹಿತಿಯನ್ನು ಇಂಟರ್ನೆಟ್‌ನಿಂದ ಪಡೆಯಲು ಕಾಲೇಜು ವಿದ್ಯಾರ್ಥಿಗಳು ಹೋದಲ್ಲೆಲ್ಲಾ ವೈಫೈಯರ್‌ ಹೆಚ್ಚಿನ ರೀತಿಯಲ್ಲಿ ಅವರಿಗೆ ಅನುಕೂಲವಾಗಲಿದೆ.

ವೈಫೈ ಸಂಪರ್ಕ

ವೈಫೈ ಸಂಪರ್ಕ

ವೈಫೈಯರ್ ಆಪ್‌ ನಿಮ್ಮ ಹತ್ತಿರದಲ್ಲಿ ಇರುವ ಯಾವುದೇ ಸಾರ್ವಜನಿಕ ವೈಫೈ ಸಂಪರ್ಕವನ್ನು ಪಡೆದ ತಕ್ಷಣ ನಿಮಗೆ ನೋಟಿಫಿಕೇಶನ್‌ ನೀಡುತ್ತದೆ. ವೈಫೈಯರ್ ಆಪ್‌ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯವಿದ್ದು, ಯಾರು ಬೇಕಾದರು ಪಡೆಯಬಹುದಾಗಿದೆ.
ವೈಫೈಯರ್‌ ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Automatically connect to free Wi-Fi around you by WiFire App. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot