ಇನ್‌ಶ್ಯೂರೆನ್ಸ್ ಕ್ಲೆಮ್ ಮಾಡಿದ 20 ನಿಮಿಷದಲ್ಲಿ ಹಣವನ್ನು ನೀಡಲಿದೆ ಈ ಆಪ್..!!
ಬಜಾಜ್ ಅಲೆಯನ್ಸ್ ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದ್ದು, ನೂತನವಾಗಿ ಆಪ್ ರಿಲಿಸ್ ಮಾಡಿದೆ. ಈ ಆಪ್ ನಲ್ಲಿ 20 ನಿಮಿಷದಲ್ಲಿ ವಿಮೆ ಹಣವನ್ನು ನೀವು ಪಡೆದುಕೊಳ್ಳಬಹುದಾಗಿದೆ.
ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನ್‌ಗಳು ಎಲ್ಲೆಯನ್ನು ಮೀರಿ ಕಾರ್ಯನಿರ್ವಹಿಸುತ್ತಿವೆ ಎಂದರೆ ತಪ್ಪಾಗಲಾರದು. ಕೇವಲ ಮಾತನಾಡಲು ಬಳಕೆಯಾಗುತ್ತಿದ್ದ ಫೋನ್ ಇಂದು ಎಲ್ಲಾ ವಿಷಯದಲ್ಲಿಯೂ ಸಹಾಯ ಮಾಡುವಂತೆ ಆಗಿದೆ. ಸದ್ಯ ಇದು ವಿಮಾ ಕ್ಷೇತ್ರಕ್ಕೂ ಕಾಲಿಟ್ಟಿದೆ.

ಓದಿರಿ: ಫೇಸ್ಬುಕ್ನಲ್ಲಿ ಸ್ಟಾರ್ ಆಗಬೇಕಾ, ನಿಮ್ಮ ಪೋಸ್ಟಿಗೂ ಸಾವಿರ ಲೈಕ್ಸ್ ಬೇಕಾ? ಇಲ್ಲಿದೆ ರಾಜಮಾರ್ಗ.!!!!
ಈ ಹಿಂದೆ ಒಂದು ವಾಹನದ ವಿಮೆ ಹಣವನ್ನು ಪಡೆಯಲು ಸುಮಾರು ಒಂದು ವಾರಗಳ ಕಾಲ ಹಿಡಿಯುತ್ತಿತು ಆದರೆ, ಬಜಾಜ್ ಅಲೆಯನ್ಸ್ ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದ್ದು, ನೂತನವಾಗಿ ಆಪ್ ಬಿಡುಗಡೆ ಮಾಡಿದೆ. ಈ ಆಪ್ ನಲ್ಲಿ 20 ನಿಮಿಷದಲ್ಲಿ ವಿಮೆ ಹಣವನ್ನು ನೀವು ಪಡೆದುಕೊಳ್ಳಬಹುದಾಗಿದೆ. ಇದು ವಾಹನ ಸವಾರರಿಗೆ ಭಾರಿ ಸಹಾಯ ಮಾಡಲಿದೆ.

ಬಜಾಜ್ ಅಲೆಯನ್ಸ್ ಆಪ್:
ದೇಶದಲ್ಲಿ ವಾಹನ ವಿಮೆ ಹಣವನ್ನು ಪಡೆಯುವ ಸಲುವಾಗಿ ಬಜಾಜ್ ಅಲಯನ್ಸ್ ಕಂಪೆನಿ ಹೊಸ ಆಪ್ ಬಿಡುಗಡೆ ಮಾಡಿದ್ದು, ಇದರ ಮೂಲಕ ವಾಹನ ವಿಮೆಯ ಹಣವನ್ನು ಸರಳವಾಗಿ ಪಡೆದುಕೊಳ್ಳಬಹುದಾಗಿದೆ. ಈ ಆಪ್ ಮೂಲಕ ಕೇವಲ 20 ನಿಮಿಷದಲ್ಲೇ 20 ಸಾವಿರ ರೂಪಾಯಿಗಳವರೆಗಿನ ವಿಮೆ ಹಣವನ್ನು ಸುಲಭವಾಗಿ ಪಡೆಯಬಹುದು.

ಪ್ಲೇಸ್ಟೋರಿನಲ್ಲಿ ಲಭ್ಯ:
ಬಜಾಜ್ ಅಲೆಯನ್ಸ್ ಆಪ್ ಸದ್ಯ ಪ್ಲೇ ಸ್ಟೋರಿನಲ್ಲಿ ಲಭ್ಯವಿದ್ದು, ವಿಮಾ ಗ್ರಾಹಕರು ಅದನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿದರೆ, ನೀವು ವಿಮೆ ಮಾಡಿಸಿದ ವಾಹನ ಅಪಘಾತಕ್ಕಿಡಾಗಿ ದುರಸ್ತಿಗೊಳಿಸುವ ಸಂದರ್ಭದಲ್ಲಿ ವಿಮಾ ಕಛೇರಿಗೆ ಅಲೆಯುವುದು ತಪ್ಪಲಿದೆ. ಆಪ್ ನಲ್ಲೇ ನೀವು ಹಣ ಸ್ವೀಕರಿಸಬಹುದಾಗಿದೆ.

ಉದಾಹರಣೆಗಾಗಿ:
ಈ ಹಿಂದೆ ವಿಮೆ ಸೌಲಭ್ಯ ಪಡೆದವರ ವಾಹನವೊಂದು ಅಪಘಾತದಲ್ಲಿ ಸಣ್ಣ ಪ್ರಮಾಣದಲ್ಲಿ ಹಾನಿಗೊಳಗಾಗಿರುತ್ತದೆ. ಇದರ ದುರಸ್ತಿಗೆ 20 ಸಾವಿರ ರೂಪಾಯಿ ವೆಚ್ಚ ತಗಲುತ್ತದೆ. ಈ ಸಂದರ್ಭದಲ್ಲಿ ಗ್ರಾಹಕರು ಆ ವಿಮೆ ಕಚೇರಿಗೆ ಅಲೆದು 7 ದಿನಗಳ ಬಳಿಕ ಹಣವನ್ನು ಪಡೆಯಬೇಕಾಗುತ್ತದೆ. ಆದರೆ ಈ ಕಾರ್ಯ ಆಪ್ ನಲ್ಲಿ 20 ನಿಮಿಷದಲ್ಲಿ ಆಗಲಿದೆ.

ಬಳಸುವುದು ಹೇಗೆ..?
ಈ ಆಪ್ ನಲ್ಲಿ ಪೊಲೀಸ್ ದೂರಿನ ದಾಖಲಾತಿ, ಮೆಕಾನಿಕ್ ನೀಡಿದ ಪತ್ರ, ಕಾರಿನ ಡ್ಯಾಮೆಜ್ ಚಿತ್ರವನ್ನು ಗ್ರಾಹಕರು ಅಪ್‌ಲೋಡ್ ಮಾಡಬೇಕಾಗಿದೆ. 20 ನಿಮಿಷಗಳಲ್ಲಿ ಹಣ ಗ್ರಾಹಕರ ಬ್ಯಾಂಕ್ ಖಾತೆಗೆ ಸಂದಾಯವಾಗುತ್ತದೆ. ಇದು ಸುಲಭ ಮತ್ತು ಸರಳವಾಗಿದೆ.


Click it and Unblock the Notifications








