20 ನಿಮಿಷದಲ್ಲಿ ಇನ್ಶ್ಯೂರೆನ್ಸ್ ಹಣವನ್ನು ಪಾವತಿ ಮಾಡಲಿದೆ ಬಜಾಜ್ ಅಲಿಯನ್ಜ್..! ಹೇಗೆ ಗೊತ್ತಾ...?

ಇದೇ ಮಾದರಿಯಲ್ಲಿ ಆಪ್ ಗಳು ವಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಹೊಸ ಪ್ರಯತ್ನಕ್ಕೆ ಮುಂದಾಗಿರುವ ಬಜಾಜ್ ಅಲಿಯನ್ಜ್ ಇದೇ ಮೊದಲ ಬಾರಿಗೆ ಆಪ್ ಗಳನ್ನು ಬಿಡುಗಡೆ ಮಾಡಿದೆ.

|

ಸ್ಮಾರ್ಟ್‌ಫೋನ್‌ ಬಂದ ಮೇಲೆ ನಮ್ಮ ಜೀವನ ಶೈಲಿಯೂ ಸರಳ ಮತ್ತು ಸುಲಭವಾಗುತ್ತಿದೆ. ಇದರಲ್ಲೂ ಮೊಬೈಲ್ ಆಪ್ ಗಳು ನಮ್ಮ ಎಲ್ಲ ಕೆಲಸ ಕಾರ್ಯಗಳನ್ನು ಸರಾಗ ಮಾಡಿವೆ. ಶಿಕ್ಷಣ, ಆರೋಗ್ಯ, ಪ್ರವಾಸ ಸೇರಿದಂತೆ ಎಲ್ಲಾ ಕೆಲಸ ಕಾರ್ಯಗಳಲ್ಲೂ ನೆರವಾಗುತ್ತಿವೆ. ಈಗ ಇದೇ ಮಾದರಿಯಲ್ಲಿ ಆಪ್ ಗಳು ವಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಹೊಸ ಪ್ರಯತ್ನಕ್ಕೆ ಮುಂದಾಗಿರುವ ಬಜಾಜ್ ಅಲಿಯನ್ಜ್ ಇದೇ ಮೊದಲ ಬಾರಿಗೆ ಆಪ್ ಗಳನ್ನು ಬಿಡುಗಡೆ ಮಾಡಿದೆ.

ಓದಿರಿ: ಅಮೆಜಾನ್ ನಲ್ಲಿ TV-ಹೋಮ್ ಥಿಯೇಟರ್ ಮೇಲೆ ಹಿಂದೆದೂ ಕಾಣದ ಡಿಸ್ಕೌಂಟ್...!!

ವಿಮೆ ಮಾಡಿಸುವುದು ಸರಳ:

ವಿಮೆ ಮಾಡಿಸುವುದು ಸರಳ:

ಬಜಾಜ್ ಅಲಿಯನ್ಜ್ ಬಿಡುಗಡೆ ಮಾಡಿರುವ ಆಪ್ ನಲ್ಲಿ ನೀವು ಸರಳವಾಗಿ ವಿಮೆ ಮಾಡಿಸಬಹುದಾಗಿದೆ. ಈ ಹಿಂದೆ ವಿಮೆ ಮಾಡಿಸಲು ಇದ್ದಂತಹ ತಲೆ ನೋವು ಮತ್ತು ವಿಮೆ ಹಣವನ್ನು ಪಡೆಯಬೇಕಾದರೆ ಇದಂತಹ ತೊಂದರೆಗಳನ್ನು ನಿವಾರಣೆ ಮಾಡುವ ಸಲುವಾಗಿಯೇ ಹಲವು ಆಪ್ ಅನ್ನು ಡಿಸೈನ್ ಮಾಡಿದೆ. ಇವು ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವವಹಿಸಲಿದೆ.

ಇಲ್ಲಿದೇ ಬಜಾಜ್ ಅಲಿಯನ್ಜ್ ಆಫರ್ ಗಳ ಪಟ್ಟಿ:

ಇಲ್ಲಿದೇ ಬಜಾಜ್ ಅಲಿಯನ್ಜ್ ಆಫರ್ ಗಳ ಪಟ್ಟಿ:

ಬಜಾಜ್ ಅಲಿಯನ್ಜ್ ಬಿಡುಗಡೆ ಮಾಡಿರುವ ಆಪ್ ನಲ್ಲಿ ಬಜಾಜ್ ಅಲಿಯನ್ಜ್ ನೀಡುವಂತೆ ಸೇವೆಗಳ ಪಟ್ಟಿ ಇದೆ. ಇಲ್ಲಿ ಗ್ರಾಹಕರು ತಮಗೆ ಬೇಕಾದಂತಹ ವಿಮೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಗ್ರಾಹಕರಿಗೆ ಹೆಚ್ಚಿನ ಸ್ವಾತಂತ್ರ ಇಲ್ಲಿ ದೊರೆತಿದೆ.

ಟ್ರಾವಲಿಂಗ್ ವಿಮೆಗಾಗಿ ಟ್ರಾವಲ್ ಇಜಿ ಆಪ್:

ಟ್ರಾವಲಿಂಗ್ ವಿಮೆಗಾಗಿ ಟ್ರಾವಲ್ ಇಜಿ ಆಪ್:

ಬಜಾಜ್ ಅಲಿಯನ್ಜ್ ಹೊಸದಾಗಿ ಬಿಡುಗಡೆ ಮಾಡಿರುವ ಟ್ರಾವಲ್ ಇಜಿ ಆಪ್ ನಲ್ಲಿ ಟ್ರಾವಲಿಂಗ್ ಆಪ್ ಅನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ವಿಮಾ ಕಂಪನಿಗೆ ಅಲೆಯುವ ಅವಶ್ಯಕತೆ ಇಲ್ಲ. ಇದಕ್ಕಾಗಿ ಟ್ರಾವಲ್ ಇಜಿ ಆಯ್ಕೆಯನ್ನು ನೀಡಿದೆ. ಇದದರಲ್ಲಿ ಗ್ರಾಹಕರ ಸಮಸ್ಯೆಗೆ ಪರಿಹಾರವು ದೊರೆಯಲಿದೆ.

ಟ್ರಾವಲ್ ಮಾಡುವವರು ವಿಮೆ ಮಾಡಿಸಲು ಕೇವಲ ಮೂರು ಹಂತದಲ್ಲಿ ಆಪ್ ನಲ್ಲಿ ಮಾಹಿತಿಯನ್ನು ನೀಡಿದರೆ ಸಾಕಾಗಿದೆ. ಇದಕ್ಕಾಗಿ ನಿಮ್ಮ ಪಾಸ್‌ಪೋರ್ಟ್, ಬೋರ್ಟಿಂಗ್ ಪಾಸ್ ಮತ್ತು ವಿಮಾನ ಪ್ರಯಾಣದ ಟಿಕೇಟ್ ಅನ್ನು ಆಪ್ ನಲ್ಲಿ ಸ್ಕ್ಯಾನ್ ಮಾಡಿದರೆ ಸಾಕು. ಅಲ್ಲದೇ ಅಲ್ಲಿಯೇ ತಮಗೆ ಬೇಕಾದ ಪ್ಲಾನ್ ಆಯ್ಕೆ ಮಾಡಿಕೊಂಡು ಆನ್‌ಲೈನಿನಲ್ಲಿ ವಿಮೆ ಪ್ರೀಮಿಯಮ್ ಅನ್ನು ಭರ್ತಿ ಮಾಡಬಹುದಾಗಿದೆ. ಇದಾದ ನಂತರ ನಿಮ್ಮ ಮೇಲ್ ಐಡಿಗೆ ಪಾಲಿಸಿ ಕಾಪಿಯೂ ಬಂದು ಸೇರಲಿದೆ.

ಈ ಆಪ್ ನಲ್ಲಿ ಗ್ರಾಹಕರು ಹೊಸದಾಗಿ ವಿಮೆ ಮಾಡಿಸಲು, ರಿನ್ಯೂವ್ ಮಾಡಿಸಲು, ವಿಮೆ ಕ್ಲೆಮ್ ಮಾಡಲು ಮತ್ತು ಪಾಲಿಸಿಗಳನ್ನು ವಿಲೀನ ಮಾಡಲು ಅವಕಾಶವನ್ನು ವ್ಯಾಲೆಟ್ ಆಪ್ ನಲ್ಲಿ ಅವಕಾಶ ಮಾಡಿಕೊಟ್ಟಿದೆ. ಅದುವೇ ನಿಮ್ಮ ಸ್ಮಾರ್ಟಫೋನಿನಲ್ಲಿ ಮಾಡುವ ಸ್ವಾತಂತ್ರವನ್ನು ಕಲ್ಪಿಸಿದೆ.

ಈ ಆಪ್ ಮೂಲಕ ನೀವು ವಿಮೆಯನ್ನು ಕ್ಲೆಮ್ ಮಾಡಿದರೆ ಕೆಲವೇ ನಿಮಿಷಗಳು ನಿಮ್ ಖಾತೆಗೆ ಬಂದು ಬಿಳಲಿದೆ. ಇದರಿಂದ ಕ್ಲೆಮ್ ಪ್ರೊಸೆಸ್ ಗೆ ಕತ್ತರಿ ಬಿಳಲಿಲ್ಲ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಸಮಯವೂ ಉಳಿತಾಯವಾಗಲಿದೆ.

ಇದು ವಿಮಾ ಕ್ಷೇತ್ರದಲ್ಲಿ ಕಾಂತ್ರಿ ಕಾರಕ ಬದಲಾವಣೆಯನ್ನು ತರಲಿದೆ ಎನ್ನುವುದು ಮಾರುಕಟ್ಟೆಯಲ್ಲಿ ತಜ್ಞರ ವಿಶೇಷಣೆಯಾಗಿದೆ.

ವಾಹನ ವಿಮೆಗೆ 'ಮೋಟರ್ ಆನ್ ಸ್ಪಾಟ್'(ಮೊಟರ್ OTS) :

ವಾಹನ ವಿಮೆಗೆ 'ಮೋಟರ್ ಆನ್ ಸ್ಪಾಟ್'(ಮೊಟರ್ OTS) :

ಬಜಾಜ್ ಅಲಿಯನ್ಜ್ ಲಾಂಚ್ ಮಾಡಿರುವ ಈ ಆಪ್ ಹೆಚ್ಚು ಉಪಯೋಗವಾಗುವುದು ವಾಹನ ವಿಮೆಯಲ್ಲಿ ಎಂದರೆ ತಪ್ಪಾಗುವುದಿಲ್ಲ. ಇದು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ವಾಹನದ ವಿಮೆ ಹಣವನ್ನು ಕ್ಲೆಮ್ ಮಾಡಿಕೊಳ್ಳುವ ಅವಕಾಶವನ್ನು ನೀಡುವುದಲ್ಲದೇ, ನಿಮಿಷಗಳಲ್ಲೇ ಹಣವನ್ನು ನೀಡಲಿದೆ. ಇದಕ್ಕಾಗಿಯೇ ಮೋಟರ್ ಆನ್ ಸ್ಪಾಟ್ ಆಯ್ಕೆಯನ್ನು ನೀಡಿದೆ.

ಈ ಆಯ್ಕೆಯಲ್ಲಿ ರೂ.20000ಕ್ಕಿಂತಲೂ ಕಡಿಮೆ ಹಣದ ವಿಮೆಯನ್ನು ಕ್ಲೆಮ್ ಮಾಡಿಕೊಳ್ಳಲು ಹಿಂದೆ 7 ದಿನಗಳ ಕಾಲ ಹಿಡಿಯುತ್ತಿತು. ಆದರೆ ಈಗ ಆಪ್ ನಲ್ಲಿ ನಿಮಿಷಗಳಲ್ಲಿ ಕಾರ್ಯವನ್ನು ಪೂರ್ಣಗೊಳಿಸಬಹುದಾಗಿದೆ. ಇದರಿಂದ ನಿಮ್ಮ ಸಮಯವು ಉಳಿತಾಯವಾಗಲಿದೆ.

ಇದಕ್ಕಾಗಿ ನೀವು ಓರ್ಜಿನಲ್ ಕ್ಲೆಮ್ ಹಾರ್ಡ್ ಕಾಪಿ ಹಾಗೂ ಮೆಕಾನಿಕ್ ನಿಂದ ಅಂದಾಜು ಪಟ್ಟಿ ಮತ್ತು ಡ್ಯಾಮೆಜ್ ಆಗಿರುವ ವಾಹನ ಚಿತ್ರವೊಂದನ್ನು ಅಪ್ ಲೋಡ್ ಮಾಡಬೇಕಾಗಿದೆ. ಇದನ್ನು ಮಾಡಿದರೆ ನಿಮ್ಮ ಕ್ಲೆಮ್ ಹಣ ಕ್ಷಣ ಮಾತ್ರದಲ್ಲಿ ನಿಮ್ಮ ಖಾತೆ ಬಂದು ಸೇರಲಿದೆ. ಸದ್ಯ ಈ ಆಯ್ಕೆ ಕೇವಲ ನಾಲ್ಕು ಚಕ್ರದ ವಾಹನಗಳಿಗೆ ಮಾತ್ರವೇ ಲಭ್ಯವಿದ್ದು, ದ್ವಿಚಕ್ರ ವಾಹನಗಳಿಗೆ ಶೀಘ್ರವೇ ದೊರೆಯಲಿದೆ.

ಗ್ರಾಹಕರ ಸೇವೆಗೆ 'ಬೊಯಿಂಗ್'

ಗ್ರಾಹಕರ ಸೇವೆಗೆ 'ಬೊಯಿಂಗ್'

ಬಜಾಜ್ ಅಲಿಯನ್ಜ್ ಗ್ರಾಹಕರಿಗೆ ದಿನದ 24 ಗಂಟೆಯೂ ಸೇವೆಯನ್ನು ನೀಡಬೇಕು ಎನ್ನುವ ಕಾರಣಕ್ಕೆ ಚಾಟ್ ಆಯ್ಕೆಯನ್ನು ನೀಡಿದ್ದು, ಇದಕ್ಕಾಗಿ ಬೊಯಿಂಗ್ ಎಂದು ನಾಮಕರಣ ಮಾಡಿದೆ.

ಇದರಲ್ಲಿ ಗ್ರಾಹಕರು ಚಾಟಿಂಗ್ ನಲ್ಲಿ ಕೇಳುವ ಪ್ರಶ್ನೆಗಳಿಗೆ ಆರ್ಟಿಫಿಷಿಯಲ್ ಇಂಟೆಲಿಜೆಂಟ್ ಉತ್ತರವನ್ನು ನೀಡಲಿದೆ. ಇದು ಗ್ರಾಹಕರಿಗೆ ಸುಲಭವಾಗಿ ತಮ್ಮ ಸೇವೆಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ.

ಅವುಗಳೆಂದರೆ

  • ಮೋಟಾರ್ ಕ್ಲೈಮ್ ಅನ್ನು ನೋಂದಾಯಿಸುವ ಬಗ್ಗೆ
  • ಪಾಲಿಸಿಯ ಸಾಫ್ಟ್ ಕಾಪಿ ಪಡೆಯುವ ಬಗ್ಗೆ
  • ಪಾಲಿಸಿ ಸ್ಟೆಟಸ್ ಅನ್ನು ಪರಿಶೀಲಿಸಲು (ಮೋಟಾರ್ ಮತ್ತು ಆರೋಗ್ಯ)
  • ಕ್ಲೆಮ್ ಸ್ಟೆಟನ್ ಪರಿಶೀಲಿಸಲು
  • ಹತ್ತಿರದ ಬ್ರಾಂಚ್ ಅನ್ನು ಪತ್ತೆಹಚ್ಚಲು
  • ಹತ್ತಿರದ ನೆಟ್ವರ್ಕ್ ಆಸ್ಪತ್ರೆಯನ್ನು ಪತ್ತೆಹಚ್ಚಲು
  • ಹತ್ತಿರದ ಗ್ಯಾರೇಜುಗಳನ್ನು ಪತ್ತೆ ಮಾಡಲು
  • ಈ ಸೇವೆಗಳನ್ನು ಗ್ರಾಹಕರು ತಮ್ಮ ಮೊಬೈಲ್ ನಲ್ಲಿರುವ ಆಪ್ ನಿಂದಲೇ ಪಡೆಯಬಹುದಾಗಿದೆ. ಬಜಾಜ್ ಅಲಿಯನ್ಜ್ ತನ್ನ ಗ್ರಾಹಕರಿಗೆ ಟೆಕ್ನಾಲಜಿಯ ಸಹಾಯದಿಂದ ದಕ್ಷ ಮತ್ತು ಸರಳ ಸೇವೆಯನ್ನು ನೀಡಲು ಮುಂದಾಗಿದೆ. ಈಗಾಗಲೇ ಬೇರೆ ಬೇರೆ ವಲಯದಲ್ಲಿ ಬಳಕೆಯಾಗುತ್ತಿರುವ ಅಂಶಗಳನ್ನು ವಿಮಾ ಕ್ಷೇತ್ರಕ್ಕೂ ತಂದು ಪರಿಚಯಿಸಿದೆ.

    ಪೇಪರ್ ಲೇಸ್ ಕಾರ್ಯವೈಕರಿಗೆ ಮೊದಲನೆ ಹಜ್ಜೆ ಇದಾಗಿದ್ದು, ಮುಂದಿನ ತಲೆ ಮಾರಿನ ವಿಮಾ ವಿಷಯಗಳನ್ನು ನಾವಿಲ್ಲಿ ಕಾಣಬಹುದಾಗಿದೆ.

    ಟ್ರಾವಲ್ ಇಜಿ ಮತ್ತು ಮೊಟೊ ಓಟಿಎಸ್ ಮತ್ತು ಬಜಾಜ್ ಅಲಿಯನ್ಜ್ ಇನ್ಸ್ಯೂರೆನ್ಸ್ ವ್ಯಾಲೆಟ್ ಆಪ್ ಗಳನ್ನು ಆಂಡ್ರಾಯ್ಡ್ ಗ್ರಾಹಕರು ಪ್ಲೇ ಸ್ಟೋರಿನಲ್ಲಿ ಮತ್ತು ಐಫೋನ್ ಗ್ರಾಹಕರು ಐಎಸ್ಓ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಬೊಯಿಂಗ್ ಚಾಟ್ ಸೇವೆಯೂ ಕಂಪನಿ ವೆಬ್ ಸೈಟಿನಲ್ಲಿ ಲಭ್ಯವಿದೆ.

Best Mobiles in India

Read more about:
English summary
Mobile app revolution has made our lives simpler and better. Be it education, medical, hospitality or travel, we can reach out to anything and everything with the help of our smartphones and PCs. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X