Subscribe to Gizbot

ಅಮೆಜಾನ್ ನಲ್ಲಿ TV-ಹೋಮ್ ಥಿಯೇಟರ್ ಮೇಲೆ ಹಿಂದೆದೂ ಕಾಣದ ಡಿಸ್ಕೌಂಟ್...!!

Written By:

ದೇಶದಲ್ಲಿ GST ಜಾರಿ ಮಾಡಲು ಕೇಂದ್ರ ಸರಕಾರವೂ ಅಂತಿಮ ಹಂತದ ತಯಾರಿಯಲ್ಲಿ ಇರುವ ಮಾದರಿಯಲ್ಲೇ ಆನ್‌ಲೈನ್‌ ಶಾಪಿಂಗ್ ತಾಣಗಳು ತಮ್ಮಲಿರುವ ಸ್ಟಾಕ್ ಅನ್ನು ಕ್ಲಿಯರ್ ಮಾಡಿಕೊಳ್ಳುವ ಸಲುವಾಗಿ ಭರ್ಜರಿ ಆಫರ್ ನೀಡಲು ಮಂದಾಗಿವೆ. ಇದೇ ಮಾದರಿಯಲ್ಲಿ ಕೆಲವು ದಿನಗಳ ಹಿಂದೆ ಸ್ಮಾರ್ಟ್‌ಫೋನ್ ಗಳ ಮೇಲೆ ಆಫರ್ ನೀಡಿದ್ದ ಅಮೆಜಾನ್ ಈ ಬಾರಿ ಟಿವಿ ಸೇರಿದಂತೆ ಗೃಹ ಬಳಕೆಯ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿ ಘೋಷಣೆ ಮಾಡಿದೆ.

ಅಮೆಜಾನ್ ನಲ್ಲಿ TV-ಹೋಮ್ ಥಿಯೇಟರ್ ಮೇಲೆ ಹಿಂದೆದೂ ಕಾಣದ ಡಿಸ್ಕೌಂಟ್...!!

ಓದಿರಿ: ಮುಗಿತೂ ಜಿಯೋ 4G ಲ್ಯಾಪ್ಟಾಪ್ ಕತೆ: ಫ್ಲಿಪ್ ಕಾರ್ಟ್ ನಿಂದ ರೂ.999ಕ್ಕೆ ಲ್ಯಾಪ್ಟಾಪ್..!!

ಕೇವಲ ರಿಯಾಯಿತಿಗಳನ್ನು ಮಾತ್ರವಲ್ಲದೇ ಎಕ್ಸ್ ಚೇಂಜ್ ಆಫರ್, ಕ್ಯಾಷ್ ಬ್ಯಾಕ್, ಇಎಂಐ ಆಯ್ಕೆ ಸೇರಿದಂತೆ ಹಲವು ಕೊಡುಗೆಗಳನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಗೃಹ ಉಪಯೋಗಿ ವಸ್ತುಗಳನ್ನು ಖರೀದಿಸಬೇಕು ಎನ್ನುವ ಪ್ಲಾನ್ ಮಾಡಿದ್ದರೇ ಇದು ಖರೀದಿಸಲು ಉತ್ತಮ ಸಮಯ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್ ಟಿವಿ ಮೇಲೆ ಆಫರ್:

ಸ್ಮಾರ್ಟ್ ಟಿವಿ ಮೇಲೆ ಆಫರ್:

ಪಾನಸೋನಿಕ್ 40 ಇಂಚಿನ FHD LED ಸ್ಮಾರ್ಟ್‌ಟಿವಿ ಬೆಲೆ ರೂ.46,900ಗಳಾಗಿದ್ದು, ಅಮೆಜಾನ್ ನಲ್ಲಿ ರೂ.31,998ಕ್ಕೆ ಲಭ್ಯವಿದೆ.

ಇದೆ ಮಾದರಿಯಲ್ಲಿ LGಯ 43 ಇಂಚಿನ FHD ಸ್ಮಾರ್ಟ್‌ LED IPS ಟಿವಿ ಬೆಲೆ ರೂ.54,900ಗಳಾಗಿದ್ದು, ಅಮೆಜಾನ್ ನಲ್ಲಿ ರೂ.41,400ಕ್ಕೆ ದೊರೆಯುತ್ತಿದೆ.

ಸಾನ್ಯೋ ಕಂಪನಿಯ 49 ಇಂಚಿನ FHD LED IPS ಟಿವಿ ರೂ. 32,490 ಗಳಿಗೆ ಅಮೆಜಾನ್ ನಲ್ಲಿ ಮಾರಾಟವಾಗುತ್ತಿದೆ.

ಸಾಮಾನ್ಯ ಟಿವಿ ಮೇಲೆ ಆಫರ್:

ಸಾಮಾನ್ಯ ಟಿವಿ ಮೇಲೆ ಆಫರ್:

ಸ್ಯಾಮ್ ಸಂಗ್ ನ 32 ಇಂಚಿನ HD LED ಟಿವಿ ಬೆಲೆ ರೂ. 28,900 ಆಗಿದ್ದು, ಅಮೆಜಾನ್ ನಲ್ಲಿ ರೂ.18,990ಗಳಿಗೆ ಅಮೆಜಾನ್ ನಲ್ಲಿ ದೊರೆಯುತ್ತಿದೆ.

ಇದೇ ಮಾದರಿಯಲ್ಲಿ TCL, BPL ಮತ್ತು ಮೈಕ್ರೋ ಮಾಕ್ಸ್ ಟಿವಿಗಳ ಮೇಲೆಯೂ ಭರ್ಜರಿ ಆಫರ್ ಕಾಣಬಹುದಾಗಿದೆ.

ಹೋಮ್ ಥಿಯೇಟರ್ ಮೇಲೆ ಆಫರ್:

ಹೋಮ್ ಥಿಯೇಟರ್ ಮೇಲೆ ಆಫರ್:

ಟಿವಿ ಜೊತೆಗೆ ಹೋಮ್ ಥಿಯೇಟರ್ ಗಳ ಮೇಲೆಯೂ ಅಮೆಜಾನ್ ಆಫರ್ ಘೋಷಣೆ ಮಾಡಿದೆ. ಸೋನಿ DAV-TZ145 ಹೋಮ್ ಥಿಯೇಟರ್ ರೂ. 10,819ಗೆ ದೊರೆಯುತ್ತಿದ್ದು, ಟ್ರೋನಿಕಾ ಬ್ಲೂಟೂತ್ 4.1 ಹೋಮ್ ಥಿಯೇಟರ್ ರೂ. 2,327ಕ್ಕೆ ದೊರೆಯುತ್ತಿದೆ.

ಸ್ಪೀಕರ್ ಗಳ ಮೇಲೆಯೂ ಆಫರ್ ಇದೆ:

ಸ್ಪೀಕರ್ ಗಳ ಮೇಲೆಯೂ ಆಫರ್ ಇದೆ:

F&D E200 ಪ್ಲಸ್ ಸೌಂಡ್ ಬಾರ್ ಸ್ಪೀಕರ್ ರೂ.1749ಕ್ಕೆ ದೊರೆಯುತ್ತಿದೆ.

ಹಾಗೇ ಫಿಲಿಪ್ಸ್ ಕಂಪನಿಯ HTL2163B/12 ಬ್ಲೂಟೂತ್ ಸೌಂಡ್ ಬಾರ್ ರೂ.10,600ಕ್ಕೆ ದೊರೆಯುತ್ತಿದೆ.

ಇದಲ್ಲದೇ JBL GO ವೈರ್ಲೈಸ್ ಬ್ಲೂಟೂತ್ ಸ್ಪೀಕರ್ ರೂ.1,999ಕ್ಕೆ ದೊರೆಯುತ್ತದೆ.

ಫಿಲಿಪ್ಸ್ BT50B ಪೋರ್ಟಬಲ್ ವೈಲ್ ಲೈಸ್ ಬ್ಲೂಟೂತ್ ಸ್ಪೀಕರ್ ರೂ.1,198ಕ್ಕೆ ದೊರೆಯುತ್ತಿದೆ. ಇದಲ್ಲದೇ ಹೆಡ್ ಫೋನ್‌ಗಳ ಮೇಲೆಯೂ ಆಫರ್ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
As part of its 'Pre-GST Sale', Amazon India is currently offering heavy discounts and lucrative offers on TVs, air conditioners, refrigerators, and speakers among other categories. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot