ಒಲಾ, ಉಬರ್‌ಗೆ ಸೆಡ್ಡುಹೊಡೆಯಲು ಬರುತ್ತಿದೆ ‘ಕ್ಯಾಬ್–10’!..ಟೈಗರ್‌ಗೂ ಮೊದಲು!!

Written By:

ಒಲಾ, ಉಬರ್ ನಂತಹ ಹಲವು ಕಂಪೆನಿಗಳು ಬೆಂಗಳೂರಿನಲ್ಲಿ ಈಗಾಗಲೇ ಕ್ಯಾಬ್‌ಸೇವೆಯನ್ನು ನೀಡುತ್ತಿದ್ದು, ಇವುಗಳಿಗೆ ಪ್ರತಿಸ್ಪರ್ಧಿಯಾಗಿ ಮತ್ತೊಂದು ಆಪ್‌ ಆಧಾರಿತ ಕ್ಯಾಬ್ ಸೇವೆ ನೀಡುವ ಕಂಪೆನಿಯೊಂದು ಹುಟ್ಟಿಕೊಂಡಿದೆ.!! 'ಅಲ್ಕಾರ್ಡ್ ಟೆಕ್ನಾಲಜೀಸ್‌' ಸಾಫ್ಟ್‌ವೇರ್‌ ಅಭಿವೃದ್ಧಿ ಕಂಪೆನಿಯ ರೂವಾರಿಗಳು 'ಕ್ಯಾಬ್-10' ಆಪ್‌ ಹುಟ್ಟುಹಾಕಿದ್ದಾರೆ.

ಮಾಜಿ ಮುಖ್ಯಮಂತ್ರಿ ನಿರ್ದೇಶನದಲ್ಲಿ ಕಾಲಿಡುತ್ತಿರುವ ''ಟೈಗರ್ ಕ್ಯಾಬ್ಸ್‌ಗೂ ಮೊದಲೇ 'ಕ್ಯಾಬ್-10' ಕ್ಯಾಬ್ ಸೇವೆಯೂ ಕಾಲಿಡಲಿದ್ದು, ಇದೇ ನವೆಂಬರ್ ವೇಳೆಗೆ 'ಕ್ಯಾಬ್-10' ಕಾರ್ಯನಿರ್ವಹಣೆ ನೀಡಲಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.ಹಾಗಾಗಿ, ಇನ್ನೇನು ಕೆಲವೇ ದಿವಸಗಳಲ್ಲಿ ಹೊಸ ಕ್ಯಾಬ್ ಸೇವೆ ಬೆಂಗಳೂರಿಗೆ ಕಾಲಿಡಲಿದ್ದು, 'ಕ್ಯಾಬ್-10' ಹೇಳುವಂತೆ ಗ್ರಾಹಕರು ಮತ್ತು ಚಾಲಕರಿಗೆ ಏನೆಲ್ಲಾ ಸೌಲಭ್ಯಗಳನ್ನು ಕಂಪೆನಿ ನೀಡುತ್ತಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶೇ 12ರಷ್ಟು ಮಾತ್ರ ಕಮಿಷನ್!!

ಶೇ 12ರಷ್ಟು ಮಾತ್ರ ಕಮಿಷನ್!!

ಇಂದು ಬಹುಪಾಲು ಕ್ಯಾಬ್ ಸೇವೆ ನೀಡುವ ಕಂಪೆನಿಗಳು ಬೆಂಗಳೂರಿನಲ್ಲಿ ಲಭ್ಯವಿದ್ದು, ಅವುಗಳು ಶೇ 20ರಿಂದ 30ರಷ್ಟು ಕಮಿಷನ್‌ ಪಡೆಯುತ್ತಿವೆ. ಇದರಿಂದ ಚಾಲಕರ ಜೀವನ ಮಟ್ಟ ಕುಸಿದಿದೆ. ಹಾಗಾಗಿ, ನಮ್ಮ ಕಂಪೆನಿಯಿಂದ ಆಪ್‌ ಹಾಗೂ ಬುಕ್ಕಿಂಗ್ ನಿರ್ವಹಣೆಗೆ ಶೇ 12ರಷ್ಟು ಮಾತ್ರ ಕಮಿಷನ್ ಪಡೆಯಲಾಗುವುದು ಎಂದು ಕಂಪೆನಿ ಹೇಳಿಕೊಂಡಿದೆ.!!

24 ಗಂಟೆಯೂ ಒಂದೇ ದರ!!

24 ಗಂಟೆಯೂ ಒಂದೇ ದರ!!

ಚಾಲಕರಿಂದ ಶೇ 12ರಷ್ಟು ಮಾತ್ರ ಕಮಿಷನ್ ಪಡೆಯುವುದಾಗಿ ಹೇಳಿಕೊಂಡಿರುವ ‘ಕ್ಯಾಬ್-10' ಪ್ರಯಾಣಿಕರಿಗೂ ಸಹ ಉತ್ತಮ ಸೇವೆಯನ್ನು ನೀಡುವ ಭರವಸೆ ನೀಡಿದೆ.!! ಬೇಡಿಕೆಗೆ ಅನುಗುಣವಾಗಿ ಬೆಲೆ ಹೆಚ್ಚಿಸದೇ, ದಿನದ 24 ಗಂಟೆಯೂ ಒಂದೇ ಪ್ರಯಾಣ ದರ ನಿಗದಿಪಡಿಸಲು ‘ಕ್ಯಾಬ್-10 ಚಿಂತನೆ ನಡೆಸುತ್ತಿದೆ.

ಅತ್ಯುತ್ತಮ ತಂತ್ರಜ್ಞರ ತಂಡ!!

ಅತ್ಯುತ್ತಮ ತಂತ್ರಜ್ಞರ ತಂಡ!!

‘ಕ್ಯಾಬ್-10' ಕಂಪೆನಿಯಲ್ಲಿ ನುರಿತ ತಂತ್ರಜ್ಞರ ತಂಡವಿದ್ದು, ಚಾಲಕರಿಗೆ ಪ್ರತ್ಯೇಕ ಉಪಕರಣ ನೀಡುವುದಾಗಿ ಕಂಪೆನಿ ತಿಳಿಸಿದೆ. ಚಾಲಕರ ನಿರ್ವಹಣೆ ಜವಾಬ್ದಾರಿಯನ್ನು ಪೂರ್ಣವಾಗಿ ಕಂಪೆನಿಯೇ ವಹಿಸಿಕೊಂಡಿದೆ. ಪ್ರಯಾಣಿಕರು ಆಪ್ ಇನ್‌ಸ್ಟಾಲ್ ಮಾಡಿಕೊಂಡರೆ, ಪ್ರಯಾಣ ದರ ಹಾಗೂ ಎಲ್ಲಾ ಮಾಹಿತಿ ಆಪ್‌ನಲ್ಲಿಯೇ ದೊತೆಯಲಿದೆ.

ಸ್ವದೇಶಿ ಕಂಪೆನಿ!!

ಸ್ವದೇಶಿ ಕಂಪೆನಿ!!

ಜಾಗತಿಕ ಪಟ್ಟಣವಾಗುತ್ತಿರುವ ಬೆಂಗಳೂರಿಗೆ ಹೊರ ದೇಶದ ಕಂಪೆನಿಗಳು ಬಂದು ಕ್ಯಾಬ್‌ ಸೇವೆ ಒದಗಿಸುತ್ತಿವೆ. ಆ ಕಂಪೆನಿಗಳು ಮಾತ್ರ ಹೆಚ್ಚು ಹಣ ಮಾಡಿಕೊಳ್ಳುತ್ತಿದ್ದು, ನಮ್ಮದೇ ಸ್ವದೇಶಿ ಕಂಪೆನಿ ಜೊತೆಗೆ ಚಾಲಕ ಮತ್ತು ಗ್ರಾಹಕರಿಗೂ ಉತ್ತಮ ಸೇವೆ ನೀಡುವುದು ನಮ್ಮ ಗುರಿ ಎಂದು ‘ಕ್ಯಾಬ್-10 ವಕ್ತಾರರು ಹೇಳಿದ್ದಾರೆ.

ಪಾನ್‌ಕಾರ್ಡ್ ಬಗ್ಗೆ ಈ 5 ವಿಷಯಗಳನ್ನು ನೀವು ತಿಳಿಯಲೇಬೇಕು!!
ಸುರಕ್ಷತೆಗೆ ಹೆಚ್ಚು ಒತ್ತು!!

ಸುರಕ್ಷತೆಗೆ ಹೆಚ್ಚು ಒತ್ತು!!

ಪ್ರಯಾಣಿಕ ಮತ್ತು ಚಾಲಕರ ಸುರಕ್ಷತೆಗೆ ‘ಕ್ಯಾಬ್-1' ಹೆಚ್ಚು ಒತ್ತು ನೀಡುವುದಾಗಿ ತಿಳಿಸಿದೆ. ಚಾಲಕರ ಪೂರ್ವಾಪರ ತಿಳಿದುಕೊಂಡೇ ಅವರನ್ನು ಕ್ಯಾಬ್‌ ಸೇವೆಗೆ ಮಾಡಿಕೊಳ್ಳಲಿದ್ದೇವೆ. ಜೊತೆಗೆ ಪ್ರಯಾಣಿಕ ಮತ್ತು ಚಾಲಕರ ಭಾಂದವ್ಯಕ್ಕೆ ಧಕ್ಕೆಯಾಗದಂತೆ ಕಂಪೆನಿಯೇ ನೋಡಿಕೊಳ್ಳುವುದಾಗಿ ಅವರು ಹೇಳಿದ್ದಾರೆ.

ಓದಿರಿ:ಇಂದಿನಿಂದ 'ನೋಕಿಯಾ 6' ಸೇಲ್!!..ಚೀನಾ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ಏಕೈಕ ಫೋನ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Bangalore will soon have another app to the Cab 10. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot