ಬೆಂಗಳೂರಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಸಾಧ್ಯವೇ ಇಲ್ಲ: ಬಂದಿದೆ ಹೊಸ ಆಪ್..!

|

ಇತ್ತೀಚಿಗಷ್ಟೆ ISI ಗುಣಮಟ್ಟದ ಹೆಲ್ಮೆಟ್ ಧರಿಸುವುದು ಕಡ್ಡಾಯ ಎನ್ನುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿ ನಂತರ ತಾಂತ್ರಿಕ ಕಾರಣಗಳಿಂದ ಈ ನಿಯಮವನ್ನು ಸದ್ಯಕ್ಕೆ ಕೈ ಬಿಟ್ಟಿರುವ ಸಂಚಾರಿ ಪೊಲೀಸರು, ಮತ್ತೊಂದು ಮಾದರಿಯಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವವರ ಮೇಲೆ ಹದ್ದಿನ ಕಣ್ಣಿಡಲು ಮುಂದಾಗಿದ್ದು, ಇದಕ್ಕೆ ಹೊಸದೊಂದು ಆಪ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದರ ಮೂಲಕ ಹದ್ದಿನ ಕಣ್ಣಿಡಲು ಮುಂದಾಗಿದ್ದಾರೆ.

ಬೆಂಗಳೂರಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಸಾಧ್ಯವೇ ಇಲ್ಲ: ಬಂದಿದೆ ಹೊಸ ಆಪ್..!

ಬೆಂಗಳೂರು ನಗರ ಸಂಚಾರಿ ಪೊಲೀಸರು ಹೊಸದಾಗಿ ಟ್ರಾಫಿಕ್ ವಯಲೇಷನ್ ರೆಕಾರ್ಡಿಂಗ್ ಮೊಬೈಲ್ ಆಪ್ ಅಭಿವೃದ್ಧಿಪಡಿಸಿದ್ದು, ಈ ಮೂಲಕ ರಾಜರೋಷವಾಗಿ ಸಂಚಾರಿ ಪೊಲೀಸ್ ಪೇದಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ವಾಹನ ಚಾಲನೆ ಮಾಡುವರಿಗೆ ತಕ್ಕ ಶಾಸ್ತಿಯನ್ನು ಮಾಡಲು ಪೊಲೀಸರು ಮುಂದಾಗಿದ್ದಾರೆ.

ಓದಿರಿ: ಇಷ್ಟು ಕಡಿಮೆ ಬೆಲೆಗೆ 4 ಕ್ಯಾಮೆರಾ, ಗ್ಲಾಸ್ ಡಿಸೈನ್ ಇರುವ ಸ್ಮಾರ್ಟ್‌ಫೋನ್..!

ಸಂಚಾರಿ ಪೇದೆಗಳಿಗೆ ಸ್ಮಾರ್ಟ್ ಆಪ್:

ಸಂಚಾರಿ ಪೇದೆಗಳಿಗೆ ಸ್ಮಾರ್ಟ್ ಆಪ್:

ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವ ಅಧಿಕಾರ ಮತ್ತು ಅವಕಾಶ ಎಎಸ್​ಐ ಮತ್ತು ಎಸ್​ಐಗಳಿಗೆ ಮಾತ್ರ ಇದೆ. ಇದಕ್ಕಾಗಿ ಎಎಸ್​ಐ ಮತ್ತು ಎಸ್​ಐಗಳ ಬಳಿ ಡಿವೈಸ್ ವೊಂದನ್ನು ಕಾಣಬಹುದಾಗಿದೆ. ಆದರೆ ಪೊಲೀಸ್ ಪೇದೆಗಳಿಗೆ ರೀತಿಯಲ್ಲಿ ಸ್ಥಳದಲ್ಲಿಯೇ ದಂಡ ವಿಧಿಸುವ ಅವಕಾಶಗಳಿಲ್ಲ. ಇನ್ನು ಮುಂದೆ ಪೊಲೀಸ್ ಪೇದೆಗಳು ತಮ್ಮ ಸ್ಮಾರ್ಟ್​ಫೋನ್​ನಲ್ಲಿ ನಿಯಮ ಉಲ್ಲಂಘಿಸುತ್ತಿರುವ ವಾಹನಗಳ ಫೋಟೋ ತೆಗೆದು ಕಳುಹಿಸುವ ಆಪ್‌ವೊಂದನ್ನು ನಿರ್ಮಾಣ ಮಾಡಲಾಗಿದೆ.

ಹೊಸ ಆಪ್:

ಹೊಸ ಆಪ್:

ಪೊಲೀಸ್ ಪೇದೆಗಳು ಈ ಹೊಸ ಆಪ್‌ನಲ್ಲಿ ಫೋಟೋ ತೆಗೆದು ಆಪ್‌ಲೋಡ್ ಮಾಡಿದರೆ ಸಾಕು. ವಾಹನದ ನಂಬರ್, ನಿಯಮ ಉಲ್ಲಂಘಿಸಿದ ಸಮಯ, ಮಾಲೀಕರ ಹೆಸರು ಸೇರಿ ವಾಹನದ ಎಲ್ಲಾ ಮಾಹಿತಿ ಸ್ವಯಂಚಾಲಿತವಾಗಿ ದಾಖಲಾಗುತ್ತದೆ. ಇದು ನೇವಾಗಿ ಸಂಚಾರ ವಿಭಾಗಕ್ಕೆ ತಲುಪುತ್ತದೆ. ಅಲ್ಲಿಂದಲೇ ವಾಹನ ಮಾಲೀಕರಿಗೆ ನೋಟಿಸ್ ಜಾರಿಯಾಗಲಿದೆ.

How to Sharing a Mobile Data Connection with Your PC (KANNADA)
ಇನಷ್ಟು ಬಿಗಿ:

ಇನಷ್ಟು ಬಿಗಿ:

ನಗರದಲ್ಲಿ ಕೆಲವು ಮಂದಿ ಮಾತ್ರವೇ ಸಂಚಾರಿ ನಿಯಮಗಳನ್ನು ಸರಿಯಾದ ರೀತಿಯಲ್ಲಿ ಫಾಲೋ ಮಾಡುತ್ತಿದ್ದರೆ, ಉಳಿದಂತೆ ಸಾಕಷ್ಟು ಮಂದಿ ಇದನ್ನು ಪಾಲಿಸುವ ಮನಸ್ಸು ಮಾಡುತ್ತಿಲ್ಲ ಈ ಹಿನ್ನಲೆಯಲ್ಲಿ ಸಂಚಾರಿ ಪೊಲೀಸರು ದಂಡದ ಅಸ್ತ್ರವನ್ನು ಬಳಕೆ ಮಾಡಿದ್ದು, ಈ ಮೂಲಕ ಸಂಚಾರ ನಿಮಯದ ಅರಿವು ಮೂಡಿಸಲು ಮುಂದಾಗಿದ್ದಾರೆ.

Best Mobiles in India

English summary
bengaluru traffic police new app. to knwo more vsiti kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X