ಸ್ಮಾರ್ಟ್‌ಫೋನಿನಲ್ಲಿ ಫೋಟೋ ಎಡಿಟ್‌ಗೆ ಈ ಆಪ್‌ಗಳು ಅತ್ಯುತ್ತಮ.!

|

ಸ್ಮಾರ್ಟ್‌ಫೋನ್‌ಗಳ ಮೂಲಕ ಫೋಟೋ ಸೆರೆಹಿಡಿದಿರುತ್ತಿರಿ ಆದರೆ ಎಷ್ಟೋ ಸಲ ನೀವು ಕ್ಲಿಕ್ಕಿಸಿದ ಫೋಟೋಗಳು ಚೆನ್ನಾಗಿ ಮೂಡಿಬಂದಿರುವುದಿಲ್ಲ. ಅಂಥ ಫೋಟೋಗಳನ್ನು ಎಡಿಟಿಂಗ್ ಆಪ್‌ಗಳ ಮೂಲಕ ಅತ್ಯುತ್ತಮವಾಗಿಸಬಹುದು. ಅದಕ್ಕಾಗಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅನೇಕ ಎಡಿಟಿಂಗ್ ಆಪ್ಸ್‌ಗಳು ಲಭ್ಯವಿದ್ದು, ಫೋಟೋ ಎಡಿಟಿಂಗ್‌ಗೆ ವಿವಿಧ ಹೊಸ ಫೀಚರ್ಸ್‌ಗಳನ್ನು ಒಳಗೊಂಡಿವೆ.

ಸ್ಮಾರ್ಟ್‌ಫೋನಿನಲ್ಲಿ ಫೋಟೋ ಎಡಿಟ್‌ಗೆ ಈ ಆಪ್‌ಗಳು ಅತ್ಯುತ್ತಮ.!

ಬಹುತೇಕ ಅತ್ಯುತ್ತಮ ಫೋಟೋ ಎಡಿಟಿಂಗ್ ಆಪ್‌ಗಳು ಉಚಿತವಾಗಿ ಲಭ್ಯವಿದ್ದು, ಅತೀ ಸರಳ ಎಡಿಟಿಂಗ್ ಆಯ್ಕೆಗಳನ್ನು ಹೊಂದಿವೆ. ಬಳಕೆದಾರರು ಎಡಿಟ್‌ ಮಾಡಿದ ಫೋಟೋಗಳನ್ನು ಗ್ಯಾಲರಿಯಲ್ಲಿ ಸೇವ್‌ ಮಾಡಿಕೊಳ್ಳುವ ಅವಕಾಶವನ್ನು ನೀಡಿದ್ದು, ಇದರೊಂದಿಗೆ ಎಡಿಟ್‌ ಫೋಟೋವನ್ನು ನೇರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡುವ ಆಯ್ಕೆಗಳನ್ನು ಸಹ ಒದಗಿಸಿವೆ.

ಸ್ಮಾರ್ಟ್‌ಫೋನಿನಲ್ಲಿ ಫೋಟೋ ಎಡಿಟ್‌ಗೆ ಈ ಆಪ್‌ಗಳು ಅತ್ಯುತ್ತಮ.!

ಬೇಸಿಕ್ ಎಡಿಟಿಂಗ್ ಫೀಚರ್ಸ್‌ಗಳಾದ ಕ್ರಾಪ್‌, ಬ್ಲರ್‌, ಕಲರ್‌, ಬ್ರೈಟ್ನೆಸ್‌ ಆಯ್ಕೆಗಳು ಸೇರಿದಂತೆ ಇನ್ನೂ ಹೊಸತನದ ಎಡಿಟಿಂಗ್ ಫೀಚರ್ಸ್‌ಗಳನ್ನು ಹೊಂದಿದ್ದು, ಬಳಕೆದಾರರು ಅತೀ ಸುಲಭವಾಗಿ ಫೋಟೋಗಳನ್ನು ಎಡಿಟ್‌ ಮಾಡಬಹುದಾಗಿದೆ. ಹಾಗಾದರೇ ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಿಗೆ ಅತ್ಯುತ್ತಮ ಫೋಟೋ ಎಡಿಟಿಂಗ್ ಆಪ್‌ಗಳ ಯಾವುವು ಹಾಗೂ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿವೆ ಎಂಬುದನ್ನು ನೋಡೋಣ ಬನ್ನಿರಿ.

ಫೋಟೋಶಾಪ್‌ ಎಕ್ಸ್‌ಪ್ರೆಸ್‌

ಫೋಟೋಶಾಪ್‌ ಎಕ್ಸ್‌ಪ್ರೆಸ್‌

'ಫಿಕ್ಸ್‌ಆರ್ಟ್‌ ಫೋಟೋ ಸ್ಟುಡಿಯೊ' ಈ ವರ್ಷದ ಅತ್ಯುತ್ತಮ ಫೋಟೋ ಎಡಿಟಿಂಗ್ ಆಪ್‌ ಎನಿಸಿಕೊಂಡಿದ್ದು, ಕ್ಯಾಮೆರಾ ಫೀಚರ್‌ನೊಂದಿಗೆ ಹಲವು ಎಡಿಟಿಂಗ್ ಟೂಲ್ಸ್‌ಗಳನ್ನು ಹೊಂದಿದೆ. ಕೋಲಾಜ್‌, ಡ್ರಾ, ಫ್ರೆಮ್‌, ಸ್ಟೀಕರ್‌ ಇನ್ನು ಕೆಲವು ವಿಶೇಷ ಆಯ್ಕೆಗಳನ್ನು ಒದಗಿಸಿದ್ದು, AI ಕೃತಕ್‌ ಬುದ್ಧಿಮತ್ತೆ ಸಾಮರ್ಥ್ಯವನ್ನು ಹೊಂದಿದೆ. ಆಟೋಮ್ಯಾಟಿಕ್ ಆಗಿ ಫೋಟೋಗಳ ಗುಣಮಟ್ಟವನ್ನು ವೃದ್ಧಿಸುವ ಆಯ್ಕೆಗಳು ಸಹ ಇವೆ. ಸಾಮಾಜಿಕ ಜಾಲತಾಣಗಳಿಗೆ ನೇರವಾಗಿ ಶೇರ್‌ ಮಾಡಬಹುದಾಗಿದೆ.

ಫೋಟರ್‌ ಫೋಟೋ ಎಡಿಟರ್‌

ಫೋಟರ್‌ ಫೋಟೋ ಎಡಿಟರ್‌

ಈ ಆಪ್‌ ತನ್ನ ಫೀಚರ್ಸ್‌ ಮತ್ತು ಎಡಿಟಿಂಗ್ ಟೂಲ್‌ಗಳಿಂದ ಉತ್ತಮ ಆಪ್‌ ಎಂದು ಗುರುತಿಸಿಕೊಂಡಿದ್ದು, ಅತ್ಯುತ್ತಮ ಎಡಿಟಿಂಗ್‌ಗಾಗಿ ಹಲವಾರು ಫೋಟೋ ಫೀಲ್ಟರ್‌ ಮತ್ತು ಎಫೆಕ್ಟ್‌ಗಳ ಆಯ್ಕೆಯನ್ನು ನೀಡಿದೆ. ಬ್ರೈಟ್ನೆಸ್‌, ಎಕ್ಸ್‌ಫೋಜರ್‌ ಕಾಂಟ್ರಾಸ್ಟ್‍ ಆಯ್ಕೆಗಳೊಂದಿಗೆ 10 ಎಡಿಟಿಂಗ್‌ ಫೀಚರ್ಸ್‌ಗಳನ್ನು ಕಸ್ಟಮೈಸ್ ಮಾಡಿಕೊಳ್ಳಬಹುದಾಗಿದೆ. ಇದರೊಂದಿಗೆ ಹಲವಾರು ನೂತನ ಕೋಲಾಜ್‌ ಮಾದರಿಗಳು ಇವೆ. ಈ ಆಪ್‌ ಅನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಫೋಟೋ ಡೈರೆಕ್ಟರ್

ಫೋಟೋ ಡೈರೆಕ್ಟರ್

ಬಳಕೆದಾರಿಗೆ ಹೊಸ ಬಗೆಯ ಎಡಿಟಿಂಗ್ ಆಯ್ಕೆಗಳನ್ನು ಒದಗಿಸಿ ಸ್ಪೆಷಲ್ ಆಪ್‌ ಎಂದು ಗುರುತಿಸಿಕೊಂಡಿರುವ ಫೋಟೋ ಡೈರೆಕ್ಟರ್‌. ಫೋಟೋದಲ್ಲಿ ಬೇಡವಾದ ಭಾಗವನ್ನು ತೆಗೆಯುವ ಆಯ್ಕೆ ಇದ್ದು, ಫೋಟೋಗಳನ್ನು ಪೇಂಟಿಂಗ್ ಮಾದರಿಯಂತೆ ಕಾಣಿಸಲು Lomo, Vignette ಆಯ್ಕೆಗಳು ಇವೆ. Dehaze ಟೂಲ್‌ ಆಯ್ಕೆ ಫೋಟೋವನ್ನು ಬ್ರೈಟ್ನೆಸ್‌ ಮಾಡಲು ಸಹಕಾರಿ ಆಗಿದೆ. ನೇರವಾಗಿ ಫೋಟೋ ಸೆರೆಹಿಡಿದು ಎಡಿಟ್‌ ಮಾಡುವ ಆಯ್ಕೆ ಇದ್ದು, ಆಪ್‌ ಮೂಲಕವೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದಾಗಿದೆ.

ಸ್ನ್ಯಾಪ್‌ಸೀಡ್‌

ಸ್ನ್ಯಾಪ್‌ಸೀಡ್‌

ಸ್ನ್ಯಾಪ್‌ಸೀಡ್‌ ಆಪ್‌ ಅನ್ನು ಗೂಗಲ್ ಅಭಿವೃದ್ಧಿ ಪಡಿಸಿದ್ದು, ಆಂಡ್ರಾಯ್ಡ್‌ ಮಾದರಿಯಲ್ಲಿ ಅತ್ಯುತ್ತಮ ಫೋಟೋ ಎಡಿಟಿಂಗ್ ಆಪ್‌ ಎಂದು ಗುರುತಿಸಿಕೊಂಡಿದೆ. ಸ್ಕ್ರೀನ್‌ ಟ್ಯಾಪ್‌ ಮಾಡುವ ಮೂಲಕ ಗ್ಯಾಲರಿಯಿಂದ ಎಡಿಟಿಂಗ್‌ಗೆ ಫೋಟೋ ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, 29 ಎಡಿಟಿಂಗ್ ಟೂಲ್ಸ್‌ಗಳನ್ನು ಒಳಗೊಂಡಿದೆ. ಎಡಿಟ್‌ ಮಾಡಿದ ಫೋಟೋಗಳನ್ನು ಗ್ಯಾಲರಿಗೆ ಸೇವ್‌ ಮಾಡಬಹುದು ಮತ್ತು ಸಾಮಾಜಿಕ ತಾಣಗಳಿಗೆ ನೇರವಾಗಿ ಶೇರ್‌ ಸಹ ಮಾಡಬಹುದಾಗಿದೆ.

ಫೋಟೋ ಲ್ಯಾಬ್

ಫೋಟೋ ಲ್ಯಾಬ್

ಫೋಟೋಮಾಂಟೇಜ್‌, ಪೇಟಿಂಗ್ ಮಾದರಿ ಎಫೆಕ್ಟ್‌, ಕೋಲಾಜ್‌, ಸೈಲಿಶ್‌ ಫೋಟೋ ಫೀಲ್ಟರ್‌ ಮತ್ತು ಫ್ರೆಮ್‌ ಸೇರಿದಂತೆ ಸುಮಾರು 900 ವಿವಿಧ ಎಫೆಕ್ಟ್‌ಗಳನ್ನು ಒಳಗೊಂಡಿರುವ ಈ ಆಪ್‌ ಬಳಕೆ ಸುಲಭವಾಗಿದೆ. ಎಲ್ಲ ಬೇಸಿಕ್ ಎಡಿಟಿಂಗ್ ಫೀಚರ್ಸ್‌ಗಳನ್ನು ಹೊಂದಿದ್ದು, ಫೋಟೋಗಳನ್ನು ಸೇರವಾಗಿ ಶೇರ್‌ಮಾಡುವ ಆಯ್ಕೆಗಳನ್ನು ಸಹ ಒದಗಿಸಲಾಗಿದೆ. ಆದರೆ ಈ ಆಪ್‌ ಎಡಿಟ್‌ ಮಾಡಿದ ಫೋಟೋಗಳಿಗೆ ವಾಟರ್‌ಮಾರ್ಕ್ ನೀಡುತ್ತದೆ.

ಪಿಕ್ಸ್ಲರ್‌

ಪಿಕ್ಸ್ಲರ್‌

ಬೆಸ್ಟ್ ಫೋಟೋ ಎಡಿಟಿಂಗ್ ಆಪ್‌ ಆಗಿದ್ದು, 2ಮಿಲಿಯನ್ ಉಚಿತ ಎಫೆಕ್ಟ್ಸ್‌ಗಳ, ಫೀಲ್ಟರ್ಸ್‌ ಸಹ ದೊರೆಯಲಿದೆ. ಕೋಲಾಜ್‌ ಮಾಡಲು ಹಲವು ಲೈನ್‌ಔಟ್‌ ಮಾದರಿಗಳು ಮತ್ತು ಬ್ಯಾಕ್‌ಗ್ರೌಂಡ್‌ ಲಭ್ಯವಿದ್ದು, ಸುಮಾರು 25 ಫೋಟೋಗಳನ್ನು ಕೋಲಾಜ್‌ಗೆ ಬಳಸಿಕೊಳ್ಳುವ ಆಯ್ಕೆ ಇದೆ. ಫೋಟೋ ಆಟೋ ಬ್ಯಾಲೆನ್ಸ್‌ ಆಯ್ಕೆಗಳನ್ನು ಹೊಂದಿದ್ದು, ಶೇರ್‌ ಮಾಡುವ ಆಯ್ಕೆಗಳು ಇವೆ.

Best Mobiles in India

English summary
Best Android Photo Editor Apps In 2019.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X