ಸ್ಮಾರ್ಟ್‌ಫೋನಿನಲ್ಲಿ ಸಿನಿಮಾ ಮತ್ತು ಟಿವಿ ಶೋ ವೀಕ್ಷಿಸಲು ಈ ಆಪ್ಸ್‌ಗಳು ಬೆಸ್ಟ್!
ಸ್ಮಾರ್ಟ್‌ಫೋನ್‌ಗಳಲ್ಲಿಯೇ ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸುವುದು ಈಗ ಸಾಮಾನ್ಯವೆನಿಸಿದ್ದು, ಇದಕ್ಕೆ ಪೂರಕವೆಂಬಂತೆ ಟೆಲಿಕಾಂ ಸಂಸ್ಥೆಗಳು ಸಹ ಉಚಿತ ಡೇಟಾ ನೀಡುತ್ತಿವೆ. ಈ ನಿಟ್ಟಿನಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಟಿವಿ ವೀಕ್ಷಿಸಲು ಟೆಲಿಕಾಂ ಸಂಸ್ಥೆಗಳು ತಮ್ಮವೇ ಅಪ್ಲಿಕೇಶನ್‌ಗಳನ್ನು ಹೊಂದಿದ್ದು, ಅವುಗಳನ್ನು ಹೊರತುಪಡಿಸಿ ಇನ್ನೂ ಹಲವು ಆಪ್ಸ್‌ಗಳಿದ್ದು, ಅದರಲ್ಲಿ ಕೇಲವು ಉಚಿತವಾಗಿ ಟಿವಿ ಕಾರ್ಯಕ್ರಮಗಳನ್ನು ವೀಕ್ಷಣೆಗೆ ಬೆಂಬಲಿಸಲಿವೆ.

ಹೌದು, ಬಹುತೇಕ ಸ್ಮಾರ್ಟ್‌ಫೋನ್ ಬಳಕೆದಾರರು ಈಗಾಗಲೇ ನೆಟ್‌ಫ್ಲೇಕ್ಸ್, ಅಮೆಜಾನ್ ಪ್ರೈಮ್, ವೂಟ್ ಆಪ್ ಮತ್ತು ಜಿಯೋ ಟಿವಿ, ಏರ್‌ಟೆಲ್ ಟಿವಿ ಆಪ್‌ಗಳನ್ನು ಮೂಲಕ ಸ್ಮಾರ್ಟ್‌ಫೋನಿನಲ್ಲಿಯೇ ಟಿವಿ ವೀಕ್ಷಿಸುತ್ತಿದ್ದಾರೆ. ಆದರೆ ಈ ಅಪ್ಲಿಕೇಶನ್‌ಗಳಷ್ಟೇ ಅಲ್ಲದೇ ಇನ್ನು ಹಲವು ಸ್ಟ್ರಿಮಿಂಗ್ ಆಪ್ಸ್‌ಗಳು ಟಿವಿ ಕಾರ್ಯಕ್ರಮಗಳನ್ನು ಮತ್ತು ಸಿನಿಮಾಗಳನ್ನು ವೀಕ್ಷಿಸಲು ಅನುಕೂಲಕರವಾಗಿವೆ. ಹಾಗಾದರೇ ಸ್ಮಾರ್ಟ್‌ಫೋನ್‌ನಲ್ಲಿ ಟಿವಿ ಮತ್ತು ಸಿನಿಮಾ ಸ್ಟ್ರಿಮಿಂಗ್ ಮಾಡಲು ಬೆಂಬಲಿಸುವ 5 ಬೆಸ್ಟ್ ಆಪ್ಸ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ.

ಸೋನಿ ಕ್ರ್ಯಾಕಲ್ (Sony Crackle)
ಸೋನಿ ಕ್ರ್ಯಾಕಲ್ ಸಿನಿಮಾ ಸ್ಟಿಮಿಂಗ್ ಮಾಡುವ ಅತ್ಯುತ್ತಮ ಅಪ್ಲಿಕೇಶನ್ ಎನಿಸಿದ್ದು, ಸೋನಿ ಪಿಚ್ಚರ್ಸ್‌ನ ಭರ್ಜರಿ ಬ್ಯಾಕ್‌ಬಾಸ್ಟರ್ ಸಿನಿಮಾಗಳ ಕೇಟಗರಿ ಲಿಸ್ಟ್ ಲಭ್ಯವಿರಲಿದೆ. ಲಭ್ಯವಿರುವ ಸಿನಿಮಾಗಳನ್ನು ಮತ್ತು ಟಿವಿ ಕಾರ್ಯಕ್ರಮಗಳನ್ನು ಉಚಿತವಾಗಿ ಸ್ಟಿಮಿಂಗ್ ಮಾಡಬಹುದಾಗಿದೆ. ಈ ಆಪ್ ಆಂಡ್ರಾಯ್ಡ್ ಓಎಸ್ ಆವೃತ್ತಿಯಲ್ಲಿ ಲಭ್ಯವಿದೆ.

ಹಾಟ್‌ಸ್ಟಾರ್
ಭಾರತದಲ್ಲಿ ಹಾಟ್‌ಸ್ಟಾರ್ ಜನಪ್ರಿಯ ಸ್ಟ್ರಿಮಿಂಗ್ ಆಪ್ ಆಗಿದ್ದು, ಜನಪ್ರಿಯ ಸಿನಿಮಾ ಮತ್ತು ಇತ್ತೀಚಿನ ಪಾಪ್ಯುಲರ್ ಟಿವಿ ಶೋಗಳನ್ನು ವೀಕ್ಷಿಸಬಹುದಾಗಿದೆ. ಬಾಲಿವುಡ್ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಯ ಕಾರ್ಯಕ್ರಮಗಳನ್ನು ಒಳಗೊಂಡಿರುವ ಈ ಆಪ್ ಆಂಡ್ರಾಯ್ಡ್ ಮತ್ತು ಐಓಎಸ್ ಡಿವೈಸ್‌ಗಳಲ್ಲಿ ದೊರೆಯಲಿದೆ. ಪ್ರಿಮಿಯಂ ಸಬ್‌ಸ್ಕ್ರಿಪ್ಶನ್ ಆಯ್ಕೆಯನ್ನು ಒಳಗೊಂಡಿದೆ.

ಜೀ5 (ZEE5) ಸ್ಟ್ರಿಮಿಂಗ್ ಆಪ್
ಜೀ5 ಸಹ ಅತ್ಯುತ್ತಮ ಸ್ಟ್ರಿಮಿಂಗ್ ಆಪ್ ಎಂದೆನಿಸಿಕೊಂಡಿದ್ದು, ಭಾರತೀಯ ಹಲವಾರು ಪ್ರಾದೇಶಿಕ ಭಾಷೆಗಳ ಕಾರ್ಯಕ್ರಮಗಳನ್ನು ಒಳಗೊಂಡಿದ್ದು, ಜನಪ್ರಿಯ ಟಿವಿ ಶೋ, ಬ್ಯಾಕ್‌ಬಾಸ್ಟರ್ ಸಿನಿಮಾಗಳನ್ನು ಸಹ ಹೊಂದಿದೆ. ಅಲ್ಲದೇ ಅಂತರಾಷ್ಟ್ರೀಯ ಜನಪ್ರಿಯ ಕಾರ್ಯಕ್ರಮಗಳನ್ನು ಸಹ ವೀಕ್ಷಿಸಬಹುದಾಗಿದೆ. ಆಂಡ್ರಾಯ್ಡ್ ಮತ್ತು ಐಓಎಸ್ ಎರಡು ಮಾದರಿಯ ಓಎಸ್‌ಗಳಲ್ಲಿ ಲಭ್ಯವಿದೆ.

ಸನ್ ನೆಕ್ಸ್ಟ್ (Sun NXT)
ಸನ್‌ಟಿವಿ ಗ್ರೂಪ್‌ಗೆ ಸೇರಿದ ಈ ಸನ್ ನೆಕ್ಸ್ಟ್ ಸ್ಟ್ರಿಮಿಂಗ್ ಆಪ್ ದಕ್ಷಿಣ ಭಾರತದ ಪ್ರಾದೇಶಿಕ ಭಾಷೆಗಳ ಆಯ್ಕೆಯನ್ನು ಹೊಂದಿದ್ದು, ಸನ್ ನೆಟವರ್ಕ್ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. ಹಾಗೆಯೇ ಸೂಪರ್ ಹಿಟ್ ಸಿನಿಮಾಗಳನ್ನು ಸ್ಟ್ರಿಮಿಂಗ್ ಮಾಡಬಹುದಾಗಿದ್ದು, ಹೆಚ್‌ಡಿ ಕ್ವಾಲಿಟಿಯಲ್ಲಿ ಇರಲಿವೆ. ಆಂಡ್ರಾಯ್ಡ್ ಮತ್ತು ಐಓಎಸ್ ಓಎಸ್‌ನಲ್ಲಿ ಲಭ್ಯವಿದೆ.

ವಿಯು ಆಪ್ (Viu)
ವಿಯು ಆಪ್ ಸಹ ಬೆಸ್ಟ್ ಮನರಂಜನಾ ಕಾರ್ಯಕ್ರಮಗಳನ್ನು ಒಳಗೊಂಡಿದ್ದು, ಸುಮಾರು 10,000ಗಂಟೆಗಳ ಸ್ಟ್ರಿಮಿಂಗ್ ಕಂಟೆಂಟ್‌ಗಳನ್ನು ಈ ಆಪ್ ಒಳಗೊಂಡಿದೆ. ಸಿನಿಮಾಗಳು, ವೆಬ್ ಸಿರೀಯಲ್‌ಗಳು, ಅವಾರ್ಡ್ ವಿನ್ನಿಂಗ್ ಹಿಂದಿ ಸಿನಿಮಾಗಳು ಸೇರಿದಂತೆ ಹಲವಾರು ಜನಪ್ರಿಯ ಶೋಗಳನ್ನು ಸ್ಟ್ರಿಮಿಂಗ್ ಮಾಡಬಹುದಾಗಿದೆ. ಶೋಗಳ ಡೌನ್‌ಲೋಡ್‌ಗೂ ಅವಕಾಶವಿದೆ. ಆಂಡ್ರಾಯ್ಡ್ ಮತ್ತು ಐಓಎಸ್‌ಗಳಲ್ಲಿಯೂ ಲಭ್ಯ.


Click it and Unblock the Notifications








