ಲಾಕ್‌ಡೌನ್ ಟೈಮ್‌ನಲ್ಲಿ ಸದ್ದು ಮಾಡುತ್ತಿರುವ ಆನ್‌ಲೈನ್ ಗೇಮ್ಸ್ ಯಾವುವು ಗೊತ್ತಾ?
ಮಾಹಾಮಾರಿ ಕೊರನಾ ವೈರಸ್ ಸರಪಳಿ ವ್ಯಾಪಿಸುವುದಕ್ಕೆ ಬ್ರೇಕ್ ಹಾಕಲು ಲಾಕ್‌ಡೌನ್ ಜಾರಿಯಲ್ಲಿದೆ. ಈ ಅವಧಿಯಲ್ಲಿ ಮನೆಯಲ್ಲಿ ಬೇಸರ ಆಗುತ್ತೆ ಅಂತಾ ಬಹುತೇಕರು ತಮ್ಮ ಇಷ್ಟದ ಹವ್ಯಾಸಗಳಲ್ಲಿ ತೊಡಗಿಕೊಂಡಿದ್ದಾರೆ. ಮತ್ತೆ ಕೆಲವರು ಇಂಟರ್ನೆಟನಲ್ಲಿ ಹೊಸ ವಿಷಯಗಳನ್ನು ಕಲಿಯಲು ಮುಂದಾಗಿದ್ದಾರೆ. ಆದ್ರೆ ಇನ್ನು ಕೆಲವರು ಮಾತ್ರ ಆನ್‌ಲೈನ್ ಗೇಮ್ಸ್‌ಗಳನ್ನು ಆಡುವುದರಲ್ಲಿ ಬ್ಯುಸಿ ಆಗಿದ್ದಾರೆ.

ಹೌದು, ಲಾಕ್‌ಡೌನ್ ಬೇಸರ ಕಳೆಯಲು ಅನೇಕರು ಆನ್‌ಲೈನ್ ಗೇಮ್ಸ್‌ಗಳನ್ನು ಆಡುತ್ತಿದ್ದಾರೆ. ಈಗಾಗಲೆ ಜನಪ್ರಿಯವಾಗಿರುವ ಪಬ್‌ಜಿಯಂತಹ ಗೇಮ್ ಜೊತೆಗೆ ಎಷ್ಟೂ ಗೇಮ್ಸ್‌ಗಳಿಗೆ ಈಗ ಶುಕ್ರದೆಸೆ ಬಂದಿದ್ದು, ಹಲವು ಹೊಸ ಗೇಮ್ ಆಪ್ಸ್‌ಗಳು ಹೆಚ್ಚು ಡೌನ್‌ಲೋಡ್ ಕಂಡಿವೆ. ಅವುಗಳಲ್ಲಿ ಮಲ್ಟಿಪ್ಲೇಯರ್ ಸೌಲಭ್ಯ ಪಡೆದ ಆನ್‌ಲೈನ್ ಗೇಮ್ಸ್‌ಗಳಿಗೆ ಡಿಮ್ಯಾಂಡ್ ಸ್ವಲ್ಪ ಹೆಚ್ಚಾಗಿಯೇ ಇದೆ. ಹಾಗಾದರೆ ಈ ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಆನ್‌ಲೈನ್ ಗೇಮ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಲುಡೊ ಕಿಂಗ್ ಗೇಮ್
ಬಹುಬೇಗನೇ ಜನಪ್ರಿಯ ಪಡೆದಿರುವ ಲುಡೊ ಕಿಂಗ್ ಗೇಮ್ ಲಾಕ್‌ಡೌನ್ ಅವಧಿಯಲ್ಲಿ ಭಾರಿ ಡಿಮ್ಯಾಂಡ್ ಕಂಡುಕೊಂಡಿದೆ. ಈ ಆಟವನ್ನು ಆಡುವ ಬಗ್ಗೆ ಹಿರಿಯರಿಗೂ ಗೊತ್ತಿದ್ದು, ಎಲ್ಲ ವಯೋಮಾನದವರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಿಂಗಲ್ ಪ್ಲೇಯರ್, ಮಲ್ಟಿಪ್ಲೇಯರ್, ಹಾಗೂ ಆನ್‌ಲೈನ್ ಪ್ಲೇಯರ್ಸ್ ಜೊತೆಗೆ ಆಟವನ್ನು ಆಡಬಹುದಾದ ಆಯ್ಕೆಗಳಿವೆ.

ಹೌಸ್‌ಪಾರ್ಟಿ ಗೇಮ್
ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಹೌಸ್‌ಪಾರ್ಟಿ ಗೇಮ್ ಸದ್ದಿಲ್ಲದೇ ಲೀಡ್‌ನಲ್ಲಿ ಕಾಣಿಸಿಕೊಂಡಿದೆ. ಈ ಗೇಮ್‌ನಲ್ಲಿ ಆಟಗಾರರು ಫೇಸ್‌ಬುಕ್ ಸೇರಿದಂತೆ ಇತೆರ ಸೋಶಿಯಲ್ ತಾಣಗಳ ಖಾತೆಗಳಿಗೆ ಕನೆಕ್ಟ್ ಮಾಡಿ ಆನ್‌ಲೈನ್ ಗೇಮ್ ಆಡಬಹುದಾಗಿದೆ. ಈ ಗೇಮ್‌ನಲ್ಲಿ ಪ್ರತ್ಯೇಕ ರೋಮ್ ಕ್ರಿಯೆಟ್ ಮಾಡಿ ಗೆಳೆಯರನ್ನು ಆಟಕ್ಕೆ ಆಹ್ವಾನಿಸಬಹುದಾಗಿದೆ. ಅಪರಿಚಿತ ಹೊಸ ಆಟಗಾರರು ಸಹ ಗೇಮಗ ಆಡಲು ಅನುಮತಿಸಬಹುದಾಗಿದೆ.

ಯುನೊ-UNO ಗೇಮ್
ಕಾರ್ಡ್ ಗೇಮ್ ಇಷ್ಟಪಡುವವರಿಗೆ ಯುನೊ ಗೇಮ್ ಅತ್ಯುತ್ತಮ ಪ್ಲಾಟ್‌ಫಾರ್ಮ್ ಆಗಿದೆ. ಈ ಯುನೊ ಕಾರ್ಡ್ ಗೇಮ್‌ನಲ್ಲಿ ಟೊರ್ನಾಮೆಂಟ್, 2 vs 2, ಸೇರಿದಂತೆ ಹಲವು ಗೇಮ್ ಮೋಡ್ ಆಯ್ಕೆಗಳಿವೆ. ಯುನೊ ಗೇಮ್‌ನ ರೂಲ್ಸ್ ಸುಲಭವಾಗಿ ಅರ್ಥೈಸಿಕೊಳ್ಳಬಹುದಾಗಿದೆ. ಆಟಗಾರರು ಟೀಮ್ ರಚಿಸಿಕೊಂಡು ಗೇಮ್ ಆಡಬಹುದಾಗಿದೆ. ಆಪ್/ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಕಾಲ್ ಆಫ್ ಡ್ಯುಟಿ ಗೇಮ್
ಕಾಲ್ ಆಫ್ ಡ್ಯುಟಿ ಗೇಮ್ ಸಹ ಗೇಮ್ಸ್ ಪ್ರಿಯರಿಂದ ಹೆಚ್ಚಿನ ಆಕರ್ಷಣೆ ಪಡೆದಿದೆ. ಲಾಕ್‌ಡೌನ್ ಬೇಸರ ಕಳೆಯಲು ಅನೇಕರು ಈ ಗೇಮ್ ಮೊರೆ ಹೋಗಿದ್ದಾರೆ. ಟೀಮ್ ಡೆತ್‌ಮ್ಯಾಚ್, ಡೊಮಿನೇಶನ್, ಸರ್ಚ್ ಆಂಡ್ ಡಿಸ್ಟ್ರಾಯ್ ಸೇರಿದಂತೆ ಹಲವು ಗೇಮ್ ಮೋಡ್‌ಗಳು ಆ ಆಟದಲ್ಲಿ ಕಾಣಿಸುತ್ತವೆ. ಈ ಗೇಮ್ ಸಹ ಆಂಡ್ರಾಯ್ಡ್ ಹಾಗೂ ಐಓಎಸ್ ಎರಡು ಓಎಸ್‌ನಲ್ಲಿಯೂ ಲಭ್ಯವಿದೆ.

ಪಬ್‌ಜಿ ಗೇಮ್
ಪಬ್‌ಜಿ ಗೇಮ್ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಏಕೆಂದರೇ ಪಬ್‌ಜಿ ಗೇಮ್ ಯುವ ಸಮೂಹವನ್ನು ಎಷ್ಟು ಆವರಿಸಿಕೊಂಡಿದೆ ಎಂಬುದು ತಿಳಿದಿರುವ ಸಂಗತಿಯೇ ಆಗಿದೆ. ಈ ಲಾಕ್‌ಡೌನ್ ಅವಧಿಯಲ್ಲಿಯೂ ಪಬ್‌ಜಿ ಕ್ರೇಜ್ ಇನ್ನು ಅಧಿಕವಾಗಿದೆ. ಪಬ್‌ಜಿಯ ಇತ್ತೀಚಿನ ಹೊಸ ಆವೃತ್ತಿಗಳು ಆಟದ ಸೊಬಗನ್ನು ಹೆಚ್ಚಿಸಿದೆ. ಈ ಗೇಮ್ ಆಂಡ್ರಾಯ್ಡ್ ಹಾಗೂ ಐಓಎಸ್ ಎರಡು ಓಎಸ್‌ನಲ್ಲಿಯೂ ಲಭ್ಯವಿದೆ.


Click it and Unblock the Notifications