Paytm ಹೋದ್ರೆ ಏನಂತೆ, ಇಲ್ಲಿವೇ ನೋಡಿ ಪರ್ಯಾಯ ಡಿಜಿಟಲ್ ಪೇಮೆಂಟ್ ಆಪ್ಸ್!
ಸದ್ಯ ಡಿಜಿಟಲ್ ಪಾವತಿ ಹೆಚ್ಚು ಮುನ್ನಲೇಯಲ್ಲಿ ಇದ್ದು, ಬಹುತೇಕ ಎಲ್ಲ ಅಂಗಡಿಗಳಲ್ಲಿ, ಸೂಪರ್ ಮಾರ್ಕೆಟ್‌ಗಳಲ್ಲಿ ಸಹ ಡಿಜಿಟಲ್ ಪೇಮೆಂಟ್ ಬಳಕೆ ಮಾಡಲಾಗುತ್ತಿದೆ. ಇನ್ನು ಯಾರಿಗಾದರೂ ಹಣ ವರ್ಗಾವಣೆ ಮಾಡಬೇಕಿದ್ದರು ಡಿಜಿಟಲ್ ಟ್ರಾನ್ಸಾಕ್ಶನ್ ಮಾಡಲಾಗುತ್ತಿದೆ. ಆ ಪೈಕಿ ಜನಪ್ರಿಯ ಪೇಟಿಎಮ್ ಆಪ್‌ಗೆ ಪರ್ಯಾಯವಾಗಿ ಹಲವು ಜನಪ್ರಿಯ ಆಪ್‌ಗಳು ಲಭ್ಯ ಇವೆ.
ಇತ್ತೀಚೆಗೆ ಪೇಟಿಎಮ್ ನಿಯಂತ್ರಕ ಉಲ್ಲಂಘನೆಯ ಕೇಂದ್ರವಾಗಿದೆ. ಪೇಟಿಎಮ್‌ನ PPBL (ಪೇಟಿಎಮ್ ಬ್ಯಾಂಕ್) KYC ಮಾನದಂಡಗಳು, ಡೇಟಾ ಹಂಚಿಕೆ ಮಾನದಂಡಗಳು ಮತ್ತು ಇತರ ನಿಯಂತ್ರಕ ಉಲ್ಲಂಘನೆಗಳನ್ನು ಉಲ್ಲಂಘಿಸುತ್ತಿದೆ ಎಂದು ಆಬಿಐ ತಿಳಿಸಿದೆ. ಹೀಗಾಗಿ ಪೇಟಿಎಮ್ ಬಳಕೆದಾರರು ಪರ್ಯಾಯ ಆಪ್ ಹೋಗುವಂತಾಗಿದೆ. ಅಂತಹ ಕೆಲವು ಆಪ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಗೂಗಲ್ ಪೇ ಆಪ್
ದೇಶದ ಪ್ರಮುಖ ಪೇಮೆಂಟ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿರಿವ ಗೂಗಲ್ ಪೇ ಅಪ್ಲಿಕೇಶನ್ ಬಳಕೆದಾರ ಸ್ನೇಹಿ ಇಂಟರ್ಫೇಸ್ ಅನ್ನು ಹೊಂದಿದೆ. ಈ ಆಪ್ ಟ್ರಾನ್ಸಾಕ್ಷನ್ ಬಳಿಕ ಬಹುಮಾನಗಳು, ಕೂಪನ್‌ಗಳು ಮತ್ತು ಕ್ಯಾಶ್‌ಬ್ಯಾಕ್‌ಗಳ ನೀಡುತ್ತದೆ. ಅಂದಹಾಗೆ ಈ ಆಪ್ 17ನೇ ಸೆಪ್ಟೆಂಬರ್ 2017 ರಂದು ಬಿಡುಗಡೆ ಆಗಿದ್ದು, ಜನಪ್ರಿಯ ಆಪ್ ಆಗಿ ಗುರುತಿಸಿಕೊಂಡಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇದು 1,00,00,00,000+ ಅಧಿಕ ಡೌನ್‌ಲೋಡ್‌ಗಳನ್ನು ಪಡೆದಿದೆ.

ಫೋನ್ ಪೇ ಆಪ್
ಫೋನ್ ಪೇ ಆಪ್ (PhonePe app) ಸಹ ಬಹುತೇಕ ಗೂಗಲ್ ಪೇ ಆಪ್‌ನಂತೆಯೇ ಸೇವೆ ನೀಡುತ್ತದೆ. ಈ ಆಪ್ ಸಹ ಪ್ರಸ್ತುತ ಹೆಚ್ಚಿನ ಬಳಕೆಯಲ್ಲಿ ಇದೆ. ಈ ಫೋನ್ ಪೇ ಆಪ್ ನಲ್ಲಿಯೂ ಪೇಮೆಂಟ್ ಮಾಡಲು ಕೆಲವು ಆಯ್ಕೆಗಳಿವೆ. ತ್ವರಿತ ಪಾವತಿಗಾಗಿ ಕ್ಯೂಆರ್ QR ಕೋಡ್ ಸ್ಕ್ಯಾನ್ ಸೌಲಭ್ಯವು ಸಹ ಲಭ್ಯ. ಫೋನ್ ಪೇ ಹಲವು ಭಾಷೆಗಳ ಆಯ್ಕೆಗಳನ್ನು ಹೊಂದಿದ್ದು, ಗ್ರಾಹಕರ ಕೆಲವು ಟ್ರಾನ್ಸಾಕ್ಶನ್‌ಗಳಿಗೆ ಕ್ಯಾಶ್‌ಬ್ಯಾಕ್ ಕೊಡುಗೆಗಳು ಸಿಗುತ್ತವೆ.
ಗ್ರಾಹಕರು ಬ್ಯಾಂಕ್‌ಗೆ ನೊಂದಾಯಿತ ಮೊಬೈಲ್‌ನಂಬರ್‌ನಿಂದ ಫೋನ್ ಪೇ ಖಾತೆ ತೆರೆಯಬಹುದು. ಸೆಕ್ಯುರಿಟಿಗಾಗಿ ನಾಲ್ಕು ನಂಬರ್‌ನ ಪಿನ್‌ಸೆಟ್ ಮಾಡಿಕೊಳ್ಳುವ (UPI PIN) ಆಯ್ಕೆ ಇದೆ. ಗ್ರಾಹಕರು ತಮ್ಮ ಬ್ಯಾಂಕ್ ಬ್ಯಾಲೆನ್ಸ್ ತಿಳಿಯಬಹುದು, ಟ್ರಾನ್ಸಾಕ್ಶನ್ ಹಿಸ್ಟರಿ ಸಹ ನೋಡಬಹುದಾಗಿದೆ.
ಅಮೆಜಾನ್ ಪೇ ಆಪ್
ದೈತ್ಯ ಇ ಕಾಮರ್ಸ್ ತಾಣ ಅಮೆಜಾನ್ ಸಂಸ್ಥೆಯ ಡಿಜಿಟಲ್ ಪಾವತಿ ಸೇವೆಯೇ ಈ ಅಮೆಜಾನ್ ಪೇ ಆಗಿದೆ. ಈ ಆಪ್ ಕೂಡಾ ಗ್ರಾಹರಿಗೆ ತ್ವರಿತ ಆನ್‌ಲೈನ್ ಪೇಮೆಂಟ್‌ಗೆ ಅವಕಾಶ ಮಾಡಿ ಕೊಡುತ್ತದೆ. ಅಲ್ಲದೇ ಹಲವು ಇತರೆ ಕ್ಯಾಶ್‌ಬ್ಯಾಕ್ ಹಾಗೂ ಇತರೆ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುತ್ತದೆ. ಇನ್ನು ಈ ಸೇವೆಯನ್ನು ಭಾರತದಲ್ಲಿ 14 ನೇ ಫೆಬ್ರವರಿ 2019 ರಂದು ಶುರುವಾಯಿತು.
ಭೀಮ್ ಆಪ್ (BHIM)
ಭೀಮ್ (BHIM) ಆಪ್ ಸಹ ಡಿಜಿಟಲ್ ಪೇಮೆಂಟ್ ಪ್ಲಾಟ್‌ಫಾರ್ಮ್ ಆಗಿದ್ದು, Unified Payments Interface (UPI) ಯುಪಿಐ ಆಧಾರಿತವಾಗಿ ಕೆಲಸ ನಿರ್ವಹಿಸುತ್ತದೆ. ಗೂಗಲ್ ಪೇ ನಂತೆ ಇದು ಕೂಡಾ UPI ID ಮತ್ತು QR ಕೋಡ್ ಬಳಸಿ ಭೀಮ್ ಆಪ್‌ನಲ್ಲಿ ಸಹ ನೇರವಾಗಿ ಖಾತೆಗೆ ಹಣ ಟ್ರಾನ್ಸ್‌ಫರ್ ಮಾಡವ ಸೌಲಭ್ಯ ಪಡೆದುಕೊಂಡಿದೆ.
ಗ್ರಾಹಕರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಭೀಮ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಗ್ರಾಹಕರು ಅವರಿಗೆ ಸೂಕ್ತವಾಗ ಭಾಷೆ ಸೆಟ್ ಮಾಡುವ ಆಯ್ಕೆ ಇದೆ. ನಾಲ್ಕು ನಂಬರ್ ಪಿನ್ ನಂಬರ್ ಸೆಟ್ ಮಾಡುವ ಆಯ್ಕೆ ಸಹ ಇದೆ.


Click it and Unblock the Notifications








