Home
Apps

ಯೂಟ್ಯೂಬ್ ವಿಡಿಯೊವನ್ನು ಸುಲಭವಾಗಿ ಡೌನ್‌ಲೋಡ್ ಮಾಡಲು ಇಲ್ಲಿವೆ ಬೆಸ್ಟ್ ಆಪ್ಸ್‌!

ಗೂಗಲ್ ಸಂಸ್ಥೆ ಒಡೆತನದ ಯೂಟ್ಯೂಬ್ ತಾಣವು ಅತ್ಯುತ್ತಮ ವಿಡಿಯೊ ಕಂಟೆಂಟ್ ಪ್ಲಾಟ್‌ಫಾರ್ಮ್ ಆಗಿ ಗುರುತಿಸಿಕೊಂಡಿದೆ. ನೆಕ್‌ಫ್ಲಿಕ್ಸ್, ಪ್ರೈಮ್ ನಂತಹ ವಿಡಿಯೊ ಸ್ಟ್ರೀಮಿಂಗ್ ತಾಣಗಳು ಜನಪ್ರಿಯವಾಗುತ್ತಿದ್ದರು, ಯೂಟ್ಯೂಬ್ ಇನ್ನೂ ತನ್ನ ಖದರ್ ಉಳಿಸಿಕೊಂಡು ಮುನ್ನಡೆಯುತ್ತಿದೆ. ಬಹುತೇಲ ಬಳಕೆದಾರರು ಯೂಟ್ಯೂಬ್ ತಾಣದಿಂದ ವಿಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಬಯಸುತ್ತಾರೆ. ಡೌನ್‌ಲೋಡ್ ಮಾಡಿಕೊಳ್ಳಲು ಹಲವು ಮಾರ್ಗಗಳಿವೆ.

ಯೂಟ್ಯೂಬ್ ತಾಣ

ಹೌದು, ಯೂಟ್ಯೂಬ್ ತಾಣವು ವಿಡಿಯೊಗಳನ್ನು ಡೌನ್‌ಲೋಡ್ ಮಾಡುವ ಆಯ್ಕೆ ನೀಡಿದ್ದು, ಅದು ಆಫ್‌ಲೈನ್ ವೀಕ್ಷಣೆಗೆ ಅನುಕೂಲವಾಗಿದೆ. ಆದರೆ ವಿಡಿಯೊಗಳನ್ನು ನಿಮ್ಮ ಸ್ಮಾರ್ಟ್‌ಫೋನ್‌ ಗ್ಯಾಲರಿಗೆ ಡೌನ್‌ಲೋಡ್ ಮಾಡಿಕೊಳ್ಳಲು ನೇರವಾಗಿ ಅವಕಾಶ ಹೊಂದಿಲ್ಲ. ಆದರೆ ಥರ್ಡ್‌ಪಾರ್ಟಿ ಅಪ್ಲಿಕೇಶನ್‌ಗಳು ಮೂಲಕ ವಿಡಿಯೊಗಳನ್ನು ನೇರವಾಗಿ ಸ್ಮಾರ್ಟ್‌ಫೋನ್‌ಗೆ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಯೂಟ್ಯೂಬ್ ವಿಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸಫೋರ್ಟ್‌ ಮಾಡುವ ಕೆಲವು ಅತ್ಯುತ್ತಮ ಅಪ್ಲಿಕೇಶನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ವಿಡಿಯೋಡರ್-Videoder

ವಿಡಿಯೋಡರ್-Videoder

ಯೂಟ್ಯೂಬ್ ವಿಡಿಯೊಗಳನ್ನು ಡೌನ್ಲೋಡ್ ಮಾಡಿಕೊಳ್ಳಲು Videoder ಅಪ್ಲಿಕೇಶನ್‌ ಒಂದು ಉತ್ತಮ ತಾಣವಾಗಿದೆ. ಹಾಗೆಯೇ ಈ ಆಪ್ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಸೇರಿದಂತೆ ಇತರೆ ಸೋಶಿಯಲದ ತಾಣಗಳಲ್ಲಿನ ವಿಡಿಯೊಗಳನ್ನು ಡೌನ್‌ಲೋಡ್ ಮಾಡಲು ಸಹಕಾರಿಯಾಗಿದೆ.

ಟ್ಯೂಬ್‌ಮೇಟ್-TubeMate

ಟ್ಯೂಬ್‌ಮೇಟ್-TubeMate

ಟ್ಯೂಬ್‌ಮೇಟ್ ಆಪ್‌ ಸಹ ಯೂಟ್ಯೂಬ್ ವಿಡಿಯೊಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಸಫೋರ್ಟ್ ಮಾಡುತ್ತದೆ. ಡೌನ್‌ಲೋಡ್ ಮಾಡುವಾಗ ವಿಡಿಯೊ ಕ್ವಾಲಿಟಿ ಮತ್ತು ಯಾವ ಫಾರ್ಮೇಟ್‌ನಲ್ಲಿ ಬೇಕು ಎನ್ನುವ ಆಯ್ಕೆಗಳು ಕಾಣಿಸುತ್ತವೆ.

ಕೀಪ್ವಿಡ್‌-KeepVid

ಕೀಪ್ವಿಡ್‌-KeepVid

ಈ ಆಪ್‌ ಸಹ ವಿಡಿಯೊ ಡೌನ್‌ಲೋಡ್ ಮಾಡಲು ಬೆಸ್ಟ್ ಆಗಿದ್ದು, ವಿಡಿಯೊಗಳನ್ನು ವೇಗವಾಗಿ ಡೌನ್‌ಲೋಡ್ ಮಾಡಲು ಬೆಂಬಲ ನೀಡುತ್ತದೆ. ಇತರೆ ಸಾಮಾಜಿಕ ತಾಣಗಳ ವಿಡಿಯೊಗಳನ್ನು ಸಹ ಡೌನ್‌ಲೋಡ್ ಮಾಡಲು ಈ ಆಪ್ ಸಫೋರ್ಟ್ ಮಾಡುತ್ತದೆ. ಎಂಪಿ3, ಎಂಪಿ4 ಫಾರ್ಮೇಟ್‌ ಆಯ್ಕೆಗಳು ಸಹ ಇವೆ.

ಸ್ನ್ಯಾಪ್‌ಟ್ಯೂಬ್-Snaptube

ಸ್ನ್ಯಾಪ್‌ಟ್ಯೂಬ್-Snaptube

ಸ್ನ್ಯಾಪ್‌ಟ್ಯೂಬ್ ಆಪ್‌ ಬಳಕೆದಾರ ಸ್ನೇಹಿ ಅನಿಸಲಿದ್ದು, ಯೂಟ್ಯೂಬ್ ವಿಡಿಯೊಗಳನ್ನು ಡೌನ್‌ಲೋಡ್ ಮಾಡಲು ಸಹ ಉತ್ತಮ ಅನಿಸಲಿದೆ. ಕೇವಲ ಯೂಟ್ಯೂಬ್ ಮಾತ್ರವಲ್ಲದೇ ಜನಪ್ರಿಯ ಸಾಮಾಜಿಕ ಜಾಲತಾಣಗಳ ವಿಡಿಯೊಗಳನ್ನು ಸಹ ಡೌನ್‌ಲೋಡ್ ಮಾಡಲು ನೆರವು ನೀಡಲಿದೆ.

ಇನ್ಸ್‌ಟ್ಯೂಬ್‌-InsTube

ಇನ್ಸ್‌ಟ್ಯೂಬ್‌-InsTube

ಇನ್ಸ್‌ಟ್ಯೂಬ್‌ ಸಹ ಯೂಟ್ಯೂಬ್ ವಿಡಿಯೊಗಳನ್ನು ಡೌನ್‌ಲೋಡ್ ಒಂದು ಅತ್ಯುತ್ತಮ ಪ್ಲಾಟ್‌ಫಾರ್ಮ್ ಆಗಿದೆ. ಫಾಸ್ಟ್‌ ಡೌನ್‌ಲೋಡ್ ಆಯ್ಕೆಯು ಈ ಆಪ್‌ನಲ್ಲಿ ಕಾಣಿಸಿಲಿದೆ. ಅದರೊಂದಿಗೆ ಸಾಕಷ್ಟು ಹೊಸ ಆಯ್ಕೆಗಳು ಸಹ ಈ ಆಪ್‌ನಲ್ಲಿ ಕಾಣಬಹುದಾಗಿದೆ.

YT3 ಯೂಟ್ಯೂಬ್ ಡೌನ್‌ಲೋಡರ್-YT3 Youtube Downloader

YT3 ಯೂಟ್ಯೂಬ್ ಡೌನ್‌ಲೋಡರ್-YT3 Youtube Downloader

ಆಂಡ್ರಾಯ್ಡ್‌ ಬಳಕೆದಾರರು ಯೂಟ್ಯೂಬ್ ವಿಡಿಯೋ ಡೌನ್‌ಲೋಡ್ ಮಾಡಿಕೊಳ್ಳಲು ಈ ಆಪ್ ಉತ್ತಮ ಆಯ್ಕೆ ಆಗಿದೆ. ಈ ಆಪ್‌ನಲ್ಲಿ ವಿಡಿಯೊಗಳನ್ನು ಡೌನ್‌ಲೋಡ್ ಮಾಡುವಾಗ ಎಂಪಿ 3 ಮತ್ತು ಎಂಪಿ 4 ಫಾರ್ಮೇಟ್‌ಗಳ ಆಯ್ಕೆಗಳು ಲಭ್ಯವಾಗಲಿವೆ.

Best Mobiles in India

English summary
YouTube allows some of its videos for downloading and offline viewing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+