ನಿಮ್ಮ ಫೋನಿನಲ್ಲಿ ಈ ಆಪ್‌ಗಳಿದ್ದರೆ ಈಗಲೇ ಡಿಲೀಟ್ ಮಾಡಿಬಿಡಿ!!

|

ಗೂಗಲ್ ಸಂಸ್ಥೆ ಮೊನ್ನೆ ಮೊನ್ನೆಯಷ್ಟೇ ಹಲವು ಆಪ್‌ಗಳನ್ನು ತನ್ನ ಪ್ಲೇಸ್ಟೋರ್‌ನಿಂದ ತೆಗೆದು ಹಾಕಲಾಗಿದ್ದ ಸುದ್ದಿಯನ್ನು ನಾವು ಹಿಂದಿನ ಲೇಖನದಲ್ಲಿ ನೀಡಿದ್ದೆವು. ಆದರೆ, ಪ್ರಸ್ತುತ ಈ ಸುದ್ದಿ ನಿಜಕ್ಕೂ ನಿಮಗೆ ಎಚ್ಚರಿಕೆ ನೀಡುವಂತಿದೆ. ಗೂಗಲ್ ಪ್ಲೇಸ್ಟೋರ್‌ನಿಂದ ತೆಗೆದು ಹಾಕಿರುವ ಆಪ್‌ಗಳು ಖಾಸಗಿ ಮಾಹಿತಿ ಕದಿಯುವ ಡೇಂಜರಸ್ ಆಪ್‌ಗಳಾಗಿದ್ದು, ನೀವಿನ್ನು ಈ ಆಪ್‌ಗಳನ್ನು ಅನ್ಇನ್‍ಸ್ಟಾಲ್ ಮಾಡಿಲ್ಲವಾದರೆ ಈಗಲೇ ಡಿಲೀಟ್ ಮಾಡಿಬಿಡಿ.

ನಿಮ್ಮ ಫೋನಿನಲ್ಲಿ ಈ ಆಪ್‌ಗಳಿದ್ದರೆ ಈಗಲೇ ಡಿಲೀಟ್ ಮಾಡಿಬಿಡಿ!!

ಹೌದು, ಗೂಗಲ್ ಪ್ಲೇಸ್ಟೋರ್‌ನಲ್ಲಿ ಮಿಲಿಯನ್‌ಗಳಷ್ಟು ಆಪ್‌ಗಳು ದೊರೆಯುತ್ತವೆ ಆದರೆ ಎಲ್ಲಾ ಆಪ್‌ಗಳು ಬಳಕೆಗೆ ಸುರಕ್ಷಿತವಲ್ಲ. ಬಹುತೇಕ ನಕಲಿ ಆಪ್‌ಗಳು ಬಳಕೆದಾರರು ಆಪ್ ಬಳಸುವ ಮಧ್ಯದಲ್ಲಿ ಅನಗತ್ಯವಾಗಿ ಫುಲ್ ಸ್ರ್ಕೀನ್ ಜಾಹೀರಾತು ನೀಡುವುದು ಮತ್ತು ಅನಗತ್ಯವಾಗಿ ಬಳಕೆದಾರರಿಂದ ರಿಜಿಸ್ಟರ್ ಮಾಡಿಕೊಂಡು ಲಾಗಿನ್‌ಗೆ ಅವಕಾಶ ನೀಡುತ್ತಿವೆ. ಇದರಿಂದ ಆಪ್‌ ಬಳಕೆದಾರರ ಖಾಸಗಿತನಕ್ಕೆ ನಕಲಿ ಆಪ್‌ಗಳು ಕಳ್ಳಗಣ್ಣು ಹಾಕುತ್ತವೆ ಎಂದು ಗೂಗಲ್ ತಿಳಿಸಿದೆ.

ನಿಮ್ಮ ಫೋನಿನಲ್ಲಿ ಈ ಆಪ್‌ಗಳಿದ್ದರೆ ಈಗಲೇ ಡಿಲೀಟ್ ಮಾಡಿಬಿಡಿ!!

ಬಳಕೆದಾರರ ಖಾಸಗಿತನಕ್ಕೆ ಆಪ್‌ಗಳ ಮೂಲಕ ಕನ್ನ ಹಾಕಿ ಅವರ ಖಾಸಗಿ ಮಾಹಿತಿ ಪಡೆದು ದುರುಪಯೋಗ ಮಾಡಿಕೊಳ್ಳುವುದು ಈ ನಕಲಿ ಆಪ್‌ಗಳ ದುರುದ್ದೇಶವಾಗಿರುತ್ತದೆ. ಹೀಗಾಗಿ ಬಳಕೆದಾರರು ಆಪ್‌ಗಳನ್ನು ತಮ್ಮ ಸ್ಮಾರ್ಟ್‌ಫೋನ್‌ಗೆ ಇನ್‌ಸ್ಟಾಲ್ ಮಾಡಿಕೊಳ್ಳುವಾಗ ಬಹಳ ಎಚ್ಚರಿಕೆಯಿಂದ ಆಪ್ ಕುರಿತು ಮಾಹಿತಿ ತಿಳಿದು ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಇದರಿಂದ ಬಳಕೆದಾರರು ತಮ್ಮ ಖಾಸಗಿ ಮಾಹಿತಿ ಸೋರಿಕೆ ತಡೆಯಬಹುದು ಎಂದು ಗೂಗಲ್ ಸಲಹೆ ನೀಡಿದೆ.

ಆಪ್‌ ಇನ್‌ಸ್ಟಾಲ್‌ ಈ ಅಂಶಗಳನ್ನು ಗಮನಿಸಬೇಕುಪ್ಲೇಸ್ಟೋರ್‌ನಿಂದ ಅಗತ್ಯ ಇರುವ ಆಪ್‌ಗಳನ್ನಷ್ಟೆ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ಆಪ್ ಇನ್‌ಸ್ಟಾಲ್‌ಮಾಡುವಾಗ ಆರಂಭದಲ್ಲಿ ನಿಮಗೆ ನಿಮ್ಮ ಸ್ಮಾರ್ಟ್‌ಫೋನಿನ ಕಾಂಟ್ಯಾಕ್ಟ್ಸ್, ಗ್ಯಾಲರಿ, ಮೀಡಿಯಾ, ಇಮೇಲ್, ಪಾಸ್‌ವರ್ಡ್‌ಗಳ ಮಾಹಿತಿ ಆಪ್‌ಗೆ ಪಡೆದುಕೊಳ್ಳಲು ಅನುಮತಿ ಕೇಳಲಾಗುತ್ತದೆ. ಆ ಸಂಧರ್ಬದಲ್ಲಿ ಅಪ್ ಕೇಳುವ ಎಲ್ಲ ಮಾಹಿತಿಗಳನ್ನು ನೀಡುವ ಬದಲು ಆ ಆಪ್‌ ಬಳಕೆಗೆ ಅಗತ್ಯ ಇರುವಷ್ಟೆ ಮಾಹಿತಿ ನೀಡಿದರೆ ಸಾಕು.

ಗೂಗಲ್ ತನ್ನ ಪ್ಲೇಸ್ಟೋರ್‌ನಿಂದ ತೆಗೆದು ಹಾಕಿರುವ ಆಪ್‌ಗಳು ಲೀಸ್ಟ್ ಈ ಕೆಳಕಂಡಂತಿದೆ.
SPORT TV - Prado Parking Simulator 3D -TV WORLD - City Extremepolis 100 - American Muscle Car -- Idle Drift -- Offroad Extreme -- Remote Control -- Moto Racing -- TV Remote -- A/C Remote -- Bus Driver -- Trump Stickers -- Love Stickers -- TV EN ESPAÑOL -- Christmas Stickers -- Parking Game -- TV EN ESPAÑOL -- TV IN SPANISH -- Brasil TV -- Nigeria TV -- WORLD TV -- Drift Car Racing Driving -- BRASIL TV -- Golden -- TV IN ENGLISH -- Racing in Car 3D Game -- Mustang Monster Truck Stunts -- TDT España -- Brasil TV -- Challenge Car Stunts Game -- Prado Car -- UK TV -- POLSKA TV -- Universal TV Remote -- Bus Simulator Pro -- Photo Editor Collage 1 -- Spanish TV -- Kisses -- Prado Parking City -- SPORT TV -- Pirate Story -- Extreme Trucks -- Canais de TV do Brasil -- Prado Car 10 -- TV SPANISH -- Canada TV Channels 1 -- Prado Parking -- 3D Racing -- TV -- USA TV 50,000 -- GA Player -- Real Drone Simulator -- PORTUGAL TV -- SPORT TV 1 -- SOUTH AFRICA TV -- 3d Monster Truck -- ITALIA TV -- Vietnam TV -- Movies Stickers -- Police Chase -- South Africa TV -- Garage Door Remote -- Racing Car 3D -- TV -- TV Colombia -- Racing Car 3D Game -- World Tv -- FRANCE TV -- Hearts -- TV of the World -- WORLD TV -- ESPAÑA TV -- TV IN ENGLISH -- TV World Channel -- Televisão do Brasil -- CHILE TV

Best Mobiles in India

English summary
The fake apps loaded with the adware family were tested and it was revealed that they show similar behaviours, and also have the same code. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X