ಶಾಕಿಂಗ್... ಭಾರತದಲ್ಲಿ ಬ್ಯಾನ್ ಆಗುತ್ತಾ BGMI? ಕೆಲವೇ ವಾರಗಳಲ್ಲಿ ನಿರ್ಧಾರ ಪ್ರಕಟ
ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI) ಎಂಬುದು ಕ್ರಾಫ್ಟನ್ ಅಭಿವೃದ್ಧಿಪಡಿಸಿದ ಬ್ಯಾಟಲ್ ರಾಯಲ್ ಗೇಮ್ ಆಗಿದ್ದು, ಇದನ್ನು 2021 ರಲ್ಲಿ ಆಂಡ್ರಾಯ್ಡ್ ಮತ್ತು ಐಓಎಸ್ ಡಿವೈಸ್‌ಗಳಿಗಾಗಿ ಬಿಡುಗಡೆ ಮಾಡಲಾಗಿದೆ. ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ವನ್ನು ಹಿಂದೆ ಹಿಂದೆ PUBG ಮೊಬೈಲ್ ಇಂಡಿಯಾ ಎಂದು ಕರೆಯಲಾಗುತ್ತಿತ್ತು. ಆದರೆ, ಈಗ ಭಾರತದಲ್ಲಿ ಇದರ ಭವಿಷ್ಯವನ್ನು ಮುಂದಿನ ಕೆಲವು ವಾರಗಳಲ್ಲಿ ನಿರ್ಧರಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಹೌದು, ಈ ವಿಷಯ ಕೇಳಿ ಸಾಕಷ್ಟು ಗೇಮರ್‌ಗಳಿಗೆ ಶಾಕ್ ಆಗಿರಬಹುದು. ಆದರೆ, ಇದು ನಿರ್ಮಾಣ ಮಾಡುತ್ತಿರುವ ಸಮಸ್ಯೆಗಳನ್ನು ಕೇಂದ್ರೀಕರಿಸಿಕೊಂಡು ಭಾರತ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಇದರಲ್ಲಿ ಕಂಡುಬಂದ ದೋಷಗಳು ಏನು?, ಅಧಿಕಾರಿಗಳು ಈ ಸಂಬಂಧ ನೀಡಿದ ಮಾಹಿತಿ ಏನು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಬ್ಯಾನ್: ಮುಂಬರುವ ಕೆಲವೇ ವಾರಗಳಲ್ಲಿ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI)ದ ಭಾರತದಲ್ಲಿ ಇರಲಿದೆಯೇ ಅಥವಾ ಬ್ಯಾನ್ ಆಗಲಿದೆಯೇ ಅನ್ನೋ ಬಗ್ಗೆ ನಿರ್ಣಾಯಕ ನಿರ್ಧಾರ ಮಾಡಲಾಗುತ್ತದೆ ಎನ್ನಲಾಗಿದೆ. ಸಂಬಂಧಿತ ಅಪರಾಧಗಳು ಮತ್ತು ಸಂಭಾವ್ಯ ಭದ್ರತಾ ಅಪಾಯಗಳ ಬಗೆಗಿನ ಕಳವಳದಿಂದಾಗಿ BGMI ಅನ್ನು ಸ್ಥಗಿತಗೊಳಿಸುವಂತೆ ಸಂಸ್ಥೆ ಶಿಫಾರಸು ಮಾಡಿದೆ ಎಂದು ಕೇಂದ್ರ ಸರ್ಕಾರದ ಸೈಬರ್ ಸೆಕ್ಯುರಿಟಿ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ನ್ಯೂಸ್ ವರದಿ ಮಾಡಿದೆ.
BGMI ಗೆ ಸಂಬಂಧಿಸಿದ ಅಪರಾಧಗಳನ್ನು ಒಳಗೊಂಡ ಘಟನೆಗಳನ್ನು ವರದಿಯಲ್ಲಿ ಹೈಲೈಟ್ ಮಾಡಲಾಗಿದ್ದು, ಇದು ಅಧಿಕಾರಿಗಳಲ್ಲಿ ತೀವ್ರವಾದ ಎಚ್ಚರಿಕೆಯನ್ನು ಉಂಟು ಮಾಡಿದೆ ಎನ್ನಲಾಗಿದೆ. ಈ ವರದಿಯಲ್ಲಿ ಉಲ್ಲೇಖಿಸಲಾದ ಒಂದು ಘಟನೆಯನ್ನು ಈ ವೇಳೆ ತಿಳಿಸುವುದಾದರೆ ಭಾರತಕ್ಕೆ ವಿದೇಶಿ ಪ್ರಜೆಯ ಅಕ್ರಮ ಪ್ರವೇಶಗಳನ್ನು ನಾವು ನೋಡಬಹುದಾಗಿದೆ.
ನ್ಯೂಸ್ 18 ಈ ಸಂಬಂಧ ಕೆಲವು ಗಂಭೀರ ಮಾಹಿತಿಯನ್ನು ಉಲ್ಲೇಖ ಮಾಡಿದೆ. ಅಂದರೆ BGMI ನಿಂದ ಪಡೆದ ಡೇಟಾವು ಸೈಬರ್ ದಾಳಿ ಅಪಾಯಗಳಿಗೆ ಕಾರಣವಾಗುತ್ತದೆ ಎಂದು ಸೂಚಿಸುತ್ತದೆ. ಇದು ದೇಶದ ಭದ್ರತೆಯ ಬಗ್ಗೆ ಕಳವಳವನ್ನು ಮಾಡಲಿದೆ ಎನ್ನಲಾಗಿದೆ. ಗಮನಿಸಬೇಕಾದ ವಿಷಯ ಏನೆಂದರೆ BGMI ಸರ್ವರ್‌ಗಳು ಈಗ ಯುನೈಟೆಡ್ ಸ್ಟೇಟ್ಸ್‌ನಲ್ಲಿದ್ದು, ಕಾನೂನು ಜಾರಿ ಸಂಸ್ಥೆಗಳು ಈ ಸಂಬಂಧದ ಡೇಟಾ ಸುರಕ್ಷಿತವಾಗಿದೆಯಾ ಮತ್ತು ಬೇರೆಡೆ ಇರುವ ಇತರ ಸೇವೆಗಳಿಗೆ ವರ್ಗಾಯಿಸಿಲ್ಲವೇ ಅನ್ನೋದನ್ನು ಪರಿಶೀಲಿಸಲು ಮುಂದಾಗಿವೆ ಎಂದು ತಿಳಿದುಬಂದಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಮುಂದಿನ ವಾರದಲ್ಲಿ ಸಭೆಯನ್ನು ನಿಗದಿಪಡಿಸಲಾಗಿದೆ. ಆ ಸಮಯದಲ್ಲಿ BGMI ಯ ಕೇಂದ್ರೀಯ ಏಜೆನ್ಸಿಗಳ ಜೊತೆಗೆ ಭಾರತದಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಬೇಕೇ ಅಥವಾ ಬೇಡವೇ ಅನ್ನೋದನ್ನು ನಿರ್ಧರಿಸಲಾಗುತ್ತದಂತೆ. ಇದಕ್ಕೂ ಮೊದಲು ವಿವರವಾದ ಪ್ರಶ್ನೆಯನ್ನು ಕ್ರಾಫ್ಟನ್‌ಗೆ ಕಳುಹಿಸಲಾಗಿದ್ದು, ಕಂಪೆನಿಯ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗಿದೆ.
ಮುಂದಿನ ವಾರ ನಿಗದಿಯಾಗಿರುವ ನಿರ್ಣಾಯಕ ಸಭೆಯಲ್ಲಿ ಗಮನಾರ್ಹವಾದ ನಿರ್ಧಾರ ಪ್ರಕಟ ಆಗುವ ಸಾಧ್ಯತೆ ಇದೆ. ಇದರ ಜೊತೆಗೆ ಕಂಪನಿಯು ತನ್ನ ವಾದವನ್ನು ಸಹ ಪ್ರಸ್ತುತಪಡಿಸುತ್ತದೆ ಮತ್ತು ಗೇಮ್‌ನ ಭವಿಷ್ಯವನ್ನು ನಿರ್ಧರಿಸುವ ಮೊದಲು ಕೇಂದ್ರ ಏಜೆನ್ಸಿಗಳು ತಮ್ಮ ನಿಲುವನ್ನು ಸಹ ಪರಿಶೀಲನೆ ಮಾಡುವ ಕೆಲಸ ಮಾಡುತ್ತವೆ ಎಂದು ತಿಳಿದುಬಂದಿದೆ.
ತನ್ನ ಉಳಿವನ್ನು ಖಚಿತಪಡಿಸಿಕೊಳ್ಳಲು ಕಂಪನಿಯು ಹೆಚ್ಚುವರಿ ಕ್ರಮಗಳನ್ನು ಪರಿಚಯಿಸಲು ಮುಂದಾಗಬಹುದು ಎನ್ನಲಾಗಿದೆ. ಅಂದರೆ ಭದ್ರತಾ ಫೀಚರ್ಸ್ ಅನ್ನು ವರ್ಧಿಸುವ ಪ್ರಯತ್ನಗಳನ್ನು ಮಾಡಲಿದೆಯಂತೆ. ಅದಾಗ್ಯೂ ಸೀಮಾ ಹೈದರ್ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ್ದು, ಗೇಮ್‌ಗೆ ಸಂಬಂಧಿಸಿದ ವಿವಾದದ ಮೇಲೆ ಹದಿಹರೆಯದವ ತನ್ನ ತಾಯಿಯನ್ನೇ ಕೊಂದಂತಹ ನಿದರ್ಶನಗಳು ಭಾರತದಲ್ಲಿ ಕಳವಳವನ್ನು ಹೆಚ್ಚಿಸಿವೆ.

ಕಳೆದ ವರ್ಷ BGMI ಅನ್ನು ಭಾರತದಲ್ಲಿ ಶೀಘ್ರದಲ್ಲೇ ರದ್ದುಗೊಳಿಸಲಾಗುವುದು ಎಂಬ ವರದಿಗಳಾಗಿದ್ದವು. ಆದರೆ, ಸರ್ವರ್ ಸಮಸ್ಯೆ ಮತ್ತು ಡೇಟಾ ಭದ್ರತೆ ಇತ್ಯಾದಿಗಳ ಸಮಸ್ಯೆಗಳನ್ನು ಅನುಸರಿಸಿದ ಬಳಿಕ BGMI ಗೆ 3 ತಿಂಗಳ ಪ್ರಾಯೋಗಿಕ ಅನುಮೋದನೆ ನೀಡಲಾಗಿತ್ತು. ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು 3 ತಿಂಗಳುಗಳಲ್ಲಿ ಬಳಕೆದಾರರ ಹಾನಿ, ವ್ಯಸನ ಇತ್ಯಾದಿಗಳ ಇತರ ಸಮಸ್ಯೆಗಳ ಮೇಲೆ ನಾವು ಸೂಕ್ಷ್ಮವಾಗಿ ಗಮನಿಸುತ್ತೇವೆ ಎಂದು ಕೇಂದ್ರ ಐಟಿ ಸಚಿವರು ಮೇ 19 ರಂದು ಟ್ವೀಟ್ ಮಾಡಿ ಹೇಳಿಕೆ ನೀಡಿದ್ದನ್ನು ಈ ವೇಳೆ ನೆನಪಿಸಿಕೊಳ್ಳಬಹುದು.
ಗೃಹ ವ್ಯವಹಾರಗಳ ಸಚಿವಾಲಯ (MHA) ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ (Meity) ಗುಪ್ತಚರ ಸಂಸ್ಥೆ ವರದಿ ನೀಡಿರುವ ಪ್ರಕಾರ, ಉದ್ದೇಶಿತ ಸೈಬರ್ ಅನ್ನು ನಿರ್ವಹಿಸಲು ಬಳಕೆದಾರರ ಡೇಟಾವನ್ನು ಕದಿಯುವ ಕೆಲಸ ಆಗುತ್ತಿದೆಯಂತೆ. ಹಾಗೆಯೇ ಆಪ್ ವಿವಿಧ ಸಮಸ್ಯೆಗಳನ್ನು ಹೊಂದಿದ್ದು, ಮುಖ್ಯವಾಗಿ ಇದು ಚೀನಾದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಸರ್ವರ್‌ಗಳೊಂದಿಗೆ ಸಂವಹನ ನಡೆಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಈ ಕಡೆ ಭಾರತದ ವಿಡಿಯೋ ಗೇಮ್ ಮಾರುಕಟ್ಟೆಯು ದೊಡ್ಡ ಮಟ್ಟದ ಬೆಳವಣಿಗೆಯನ್ನು ಕಂಡಿದೆ. ನೈಜ ಹಣದ ಗೇಮ್‌ಗಳನ್ನು (RMG) ಹೊರತುಪಡಿಸಿ, 2026 ರ ಹೊತ್ತಿಗೆ ಪಿಸಿ ಮತ್ತು ಮೊಬೈಲ್ ಗೇಮ್‌ಗಳಿಂದ ಮಾರುಕಟ್ಟೆಯು $1.4 ಶತಕೋಟಿ ಆದಾಯವನ್ನು ಪಡೆಯಬಹುದು ಎಂಬ ವರದಿಗಳಿವೆ. ಈ ನಡುವೆ 96.8% ಜನರು ಮೊಬೈಲ್ ಡಿವೈಸ್‌ಗಳಲ್ಲಿ ಗೇಮ್ ಆಗುತ್ತಿದ್ದು, BGMI 100 ಮಿಲಿಯನ್ ಡೌನ್‌ಲೋಡ್‌ಗಳನ್ನು ಕಂಡಿದೆ.
ಗಮನಿಸಬೇಕಾದ ವಿಷಯ ಏನೆಂದರೆ BGMI ಅನ್ನು ಸ್ಥಗಿತಗೊಳಿಸುವುದು ದೇಶದಲ್ಲಿ ಗೇಮಿಂಗ್ ಪರಿಸರ ವ್ಯವಸ್ಥೆಗೆ ಭವಿಷ್ಯದಲ್ಲಿ ಕೆಟ್ಟ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಹೇಳಲಾಗಿದೆ. ಬೃಹತ್ ಜನಪ್ರಿಯತೆ ಮತ್ತು ಗಮನಾರ್ಹ ಸಂಖ್ಯೆಯ ಆಟಗಾರರು ಇಸ್ಪೋರ್ಟ್ಸ್‌ನಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ಈ ಗೇಮ್ ಅನ್ನು ಬ್ಯಾನ್ ಮಾಡುವುದರಿಂದ ಭಾರತೀಯ ಗೇಮಿಂಗ್ ಉದ್ಯಮದ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು.


Click it and Unblock the Notifications








