"ಭೀಮ್" ಆಪ್ ನಿರೀಕ್ಷೆಗೆ ತಕ್ಕಂತೆ ಇಲ್ಲ!!..ಗ್ರಾಹಕರ ದೂರು!

Written By:

ಡಿಜಿಟಲ್ ವ್ಯವಹಾರಕ್ಕಾಗಿ ಸರ್ಕಾರವೇ ರೂಪಿಸಿರುವ ಭೀಮ್ ಆಪ್ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂದು ಗ್ರಾಹಕರು ದೂರಿದ್ದಾರೆ. "ಭೀಮ್" ಆಪ್ ಸಂಪೂರ್ಣ ಉಚಿತ ಎನ್ನಲಾಗಿದ್ದು, ಮೊಬೈಲ್ ಸಂಖ್ಯೆಯನ್ನು ಧೃಢೀಕರಣದ ನಂತರ 1.50 ರೂಪಾಯಿಯಷ್ಟು ಹಣ ಕಡಿತವಾಗುತ್ತಿದೆ ಎಂದು ವರದಿಯಾಗಿದೆ.

ಇನ್ನು ಗೋಗಲ್‌ ಪ್ಲೇ ಸ್ಟೋರ್‌ನಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಭೀಮ್ ಆಪ್‌ ಯಾವುದು ಎನ್ನುವ ಗೊಂದಲ ಶುರುವಾಗಿದೆ. ನೂರಾರು ಆಪ್‌ಗಳು ನೋಡಲು ಭೀಮ್ ಆಪ್‌ ರಿತಿಯಲ್ಲಿಯೇ ಇದ್ದು, ಯಾವುದನ್ನು ಡೌನ್‌ಲೋಡ್ ಮಾಡುವುದು ಎಂದೇ ತಿಳಿಯುತ್ತಿಲ್ಲ ಎಂದು ಗ್ರಾಹಕರು ದೂರಿದ್ದಾರೆ.

ಎಚ್ಚರ!..."ಭೀಮ್" ಆಪ್ ನಕಲಿಯಾಗಿದೆ!!

ಸರ್ಕಾರವೇ ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರಕ್ಕೆ ಆಪ್‌ ತೆರೆದ ನಂತರ ಸಾಕಷ್ಟು ಒಳ್ಳೆಯ ರೆಸ್ಪಾನ್ಸ್ ಸಿಕ್ಕರೂ ಸಹ "ಭೀಮ್" ಆಪ್ ಉತ್ತಮವಾಗಿ ರಚನೆಯಾಗಿಲ್ಲ ಎಂದು ಹೇಳಲಾಗಿದೆ. ಇನ್ನು ಈ ರೀತಿಯಾದರೆ ಆಪ್‌ನಿಂದ ನಾವು ಹೇಗೆ ಹಣಕಾಸು ವ್ಯವಹಾರ ನಡೆಸುವುದು. ನಮ್ಮ ಹಣಕ್ಕೆ ಸುರಕ್ಷತೆ ದೊರೆಯುತ್ತದೆಯೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಸ್ವತಃ ನರೇಂದ್ರ ಮೋದಿ ಅವರೆ ಬಿಡುಗಡೆ ಮಾಡಿರುವ "ಭೀಮ್" ಆಪ್ ಕೇವಲ ಎರಡು ದಿವಸಗಳಿಲ್ಲಿಯೇ ದಾಖಲೆಯ 10 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ ಆಯಿತು. ಇನ್ನು ಇದನ್ನೆ ಎನ್‌ಕ್ಯಾಶ್ ಮಾಡಿಕೊಳ್ಳಲು ಸ್ಐಬರ್‌ ಕ್ರಿಮಿನಲ್‌ಗಳು ಇದೇ ರೀತಿಯ ಹಲವು ಆಪ್‌ಗಳನ್ನು ಬಿಡುಗಡೆ ಮಾಡಿದ್ದರು.

English summary
BHIM app Failed to sign in second number also to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot