ಎಚ್ಚರ!..."ಭೀಮ್" ಆಪ್ ನಕಲಿಯಾಗಿದೆ!!

|

ಪ್ರಧಾನಮಂತ್ರಿ ಮೋದಿಯವರು 31 ನೇ ತಾರೀಖು ಬಿಡುಗಡೆ ಮಾಡಿದ "ಭೀಮ್" ಆಪ್ ಕೇವಲ ಎರಡು ದಿವಸಗಳಲ್ಲಿಯೇ ನಕಲಿಯಾಗಿದೆ.! ಹೌದು, ಮೋದಿಯವರು "ಭೀಮ್" ಆಪ್‌ ಬಿಡುಗಡೆ ಮಾಡಿ ಕೇವಲ ಎರಡು ದಿವಸಗಳು ಕಳೆಯುವಷ್ಟರಲ್ಲಿಯೇ ಭೀಮ್ ಆಪ್‌ ರೀತಿಯಲ್ಲಿಯೇ ಫೇಕ್ ಆಪ್‌ಗಳು ಕ್ರಿಯೇಟ್ ಆಗಿವೆ!! ಭೀಮ್ ಅರಪ್ ರೀತಿಯಲ್ಲಿಯೇ ನಕಲಿ ಆಪ್‌ಗಳು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಬಂದಿವೆ.!!

ಡಿಜಿಟಲ್ ವ್ಯವಹಾರಕ್ಕಾಗಿ ಸರ್ಕಾರದಿಂದಲೇ ಭೀಮ್ ಆಪ್‌ನ್ನು ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾದ ಎರಡು ದಿವಸಗಳಲ್ಲಿ ಮೂರು ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗೊಂಡು ಗೂಗಲ್‌ ಪ್ಲೇಸ್ಟೊರ್‌ನಲ್ಲಿ ಮೊದಲ ಸ್ಥಾನವನ್ನು ಭೀಮ್ ಆಪ್‌ ಅಲಂಕರಿಸಿತ್ತು. ಹಾಗಾಗಿ, ಭೀಮ್ ಆಪ್‌ ಅನ್ನು ನಕಲಿಸುವ ಮೂಲಕ ಸಾರ್ವಜನಿಕರನ್ನು ಮೋಸಗೊಳಿಸುವ ಹುನ್ನಾರವನ್ನು ಕ್ರಿಮಿನಲ್‌ಗಳು ಮಾಡಿದ್ದಾರೆ.

ಎಚ್ಚರ!...

ಅಂತರ್ಜಾಲ ಖದೀಮರು "ಭೀಮ್" ಆಪ್‌ ಅನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಉದ್ದೇಶದಿಂದ ಭೀಮ್‌ ಆಪ್‌ ರೀತಿಯಲ್ಲಿಯೇ ಫೇಕ್ ಆಪ್‌ ಅನ್ನು ಕ್ರಿಯೇಟ್ ಮಾಡಿದ್ದಾರೆ. ಮೋದಿ ಭೀಮ್, ಭೀಮ್ ಹೆಲ್ಪ್, ಭೀಮ್ ಮೋದಿ, ಭೀಮ್ ಬ್ಯಾಂಕಿಂಗ್ ಗೈಡ್ ಮತ್ತು #99ಭೀಮ್ ಎಂಬ ಹೆಸರಿನ ಹಲವು ಫೇಕ್ ಆಪ್‌ಗಳು ಗೂಗಲ್ ಪ್ಲೇಸ್ಟೋರ್‌ನಲ್ಲಿ ಕ್ರಿಯೇಟ್ ಆಗಿವೆ.

ಎಚ್ಚರ!...

ನಕಲಿಯಾಗಿರುವ ಕೆಲವು ಆಪ್‌ಗಳಲ್ಲಿ ಕೆಲವು ಭೀಮ್ ಆಪ್‌ ಬಗ್ಗೆ ಮಾರ್ಗದರ್ಶಿ ನೀಡುವಂತಹ ಆಪ್‌ಗಳಿದ್ದು, ಕೆಲವು ಸಂಪೂರ್ಣವಾಗಿ ಜನರನ್ನು ಮೋಸಗೊಳಿಸುವ ಉದ್ದೇಶದಿಂದಲೇ ಕ್ರಿಯೇಟ್ ಆಗಿವೆ. ಭೀಮ್ ಆಪ್‌ ಬಗ್ಗೆ ಸರ್ಕಾರವೇ ಪೂರ್ಣ ಮಾರ್ಗದರ್ಶನವನ್ನು ನೀಡಿದ್ದು, ಈ ರೀತಿಯ ಯಾವುದೇ ನಕಲಿ ಆಪ್‌ಗಳಿಂದ ಉಪಯೋಗವಿಲ್ಲ.

ಹಾಗಾಗಿ, ಜನರು ಭೀಮ್ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕಿದೆ. ಸರ್ಕಾರದಿಂದಲೇ ಬಿಡುಗಡೆಯಾಗಿರುವ ಭೀಮ್ ಆಪ್‌ ಡೌನ್‌ಲೋಡ್ ಮಾಡಿಕೊಳ್ಳುವುದರ ಮೂಲಕ ಮೂಸ ಹೋಗದ ಹಾಗಾಗಿ ಎಚ್ಚರವಹಿಸಬೇಕಿದೆ.

Best Mobiles in India

English summary
BHIM app is at the top of Google charts with more than 3 million downloads, the same platform which is filled with numerous duplicate apps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X