Home
Apps

ಒಂದೇ ಒಂದು ತಪ್ಪು..! 48 ಲಕ್ಷ Youtube ಚಾನೆಲ್‌ ಬಂದ್.. 29 ಲಕ್ಷ ವಿಡಿಯೋ ಡಿಲೀಟ್.. ಯಾಕೆ ಗೊತ್ತಾ?

ಯೂಟ್ಯೂಬರ್‌ಗಳಿಗೆ ಬಿಗ್ ಶಾಕ್! ಬರೋಬ್ಬರಿ 29 ಲಕ್ಷ ವಿಡಿಯೋಗಳು ಡಿಲೀಟ್.. 48 ಲಕ್ಷ ಚಾನೆಲ್‌ಗಳು ಬ್ಯಾನ್.. ಈ ತಪ್ಪು ನೀವು ಮಾಡಿದ್ರೂ, ಶಿಕ್ಷೆ ಕಟ್ಟಿಟ್ಟ ಬುತ್ತಿ. ಹೌದು, ಯೂಟ್ಯೂಬ್ (Youtube) ಬಗ್ಗೆ ತಿಳಿಯದವರು ಯಾರೂ ಇಲ್ಲ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಯೂಟ್ಯೂಬ್ ಬಳಸದವರೇ ಇಲ್ಲ. ಯೂಟ್ಯೂಬ್ ಇತ್ತೀಚೆಗೆ ಭಾರತದಲ್ಲಿ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. 29 ಲಕ್ಷ ವಿಡಿಯೋಗಳು ಮತ್ತು 48 ಲಕ್ಷ ಚಾನೆಲ್‌ಗಳನ್ನು ತೆಗೆದುಹಾಕಲು ನಿರ್ಧಾರ ತೆಗೆದುಕೊಂಡಿದೆ. ಇದಕ್ಕಾ ಕಾರಣ ಗೊತ್ತಾ? ಮುಂದೆ ಓದಿ.

ಹೌದು, ಯೂಟ್ಯೂಬ್ ತನ್ನ ವಿಡಿಯೋ ವಿಷಯ ನೀತಿಗೆ ಸಂಬಂಧಿಸಿದಂತೆ ಒಂದು ದೊಡ್ಡ ಹೆಜ್ಜೆ ಇಟ್ಟಿದೆ. ಯೂಟ್ಯೂಬ್ ತನ್ನ ಪ್ಲಾಟ್‌ಫಾರ್ಮ್‌ನಿಂದ 9.5 ಮಿಲಿಯನ್‌ಗಿಂತಲೂ ಹೆಚ್ಚು ವಿಡಿಯೋಗಳನ್ನು ಡಿಲೀಟ್ ಮಾಡಿದೆ. ವಿಷಯ ಉಲ್ಲಂಘನೆಗಳಿಂದಾಗಿ ಗೂಗಲ್ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಈ ವಿಡಿಯೋಗಳನ್ನು ತೆಗೆದುಹಾಕಿದೆ. 2024ರ ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ, ಯೂಟ್ಯೂಬ್ ತನ್ನ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತದಲ್ಲಿ 29 ಲಕ್ಷ (2.9 ಮಿಲಿಯನ್) ವಿಡಿಯೋಗಳನ್ನು ತೆಗೆದುಹಾಕಿದೆ.

48 ಲಕ್ಷ Youtube ಚಾನೆಲ್‌ ಬಂದ್.. 29 ಲಕ್ಷ ವಿಡಿಯೋ ಡಿಲೀಟ್.. ಯಾಕೆ ಗೊತ್ತಾ?

AI ಮೂಲಕ ಲಕ್ಷಾಂತರ ವಿಡಿಯೋಗಳ ಪತ್ತೆ

ಈ ವಿಷಯವು ತನ್ನ ನೀತಿಗೆ ವಿರುದ್ಧವಾಗಿದೆ ಎಂದು ಯೂಟ್ಯೂಬ್ ಹೇಳಿದೆ. ವಿಡಿಯೋ ಹಂಚಿಕೆ ವೇದಿಕೆಯಿಂದ ತೆಗೆದುಹಾಕಲಾದ ವಿಷಯವು ದ್ವೇಷ ಭಾಷಣ, ವದಂತಿಗಳು ಮತ್ತು ಕಿರುಕುಳದ ವಿಡಿಯೋಗಳನ್ನು ಒಳಗೊಂಡಿತ್ತು. ಈ ವಿಡಿಯೋಗಳನ್ನು ತೆಗೆದುಹಾಕಲು ಯೂಟ್ಯೂಬ್ ಯಾವ ವ್ಯವಸ್ಥೆಯನ್ನು ಬಳಸಿದೆ ಗೊತ್ತಾ? ಯಟ್ಯೂಬ್ ತನ್ನ ವೇದಿಕೆಯನ್ನು ಪಾರದರ್ಶಕವಾಗಿಡಲು ಎಐ (AI) ಆಧಾರಿತ ಪತ್ತೆ ವ್ಯವಸ್ಥೆಯನ್ನು ಬಳಸಿದೆ. ಈ ವ್ಯವಸ್ಥೆಯು ಯೂಟ್ಯೂಬ್‌ನ ಮಾರ್ಗಸೂಚಿಗಳನ್ನು ಅನುಸರಿಸದ ವಿಡಿಯೋಗಳನ್ನು ಗುರುತಿಸುತ್ತದೆ. ಡಿಲೀಟ್ ಮಾಡಿರುವ ಬಹುತೇಕ ವಿಡಿಯೋಗಳು ಸಾಹಸ ಮತ್ತು ಕಿರುಕುಳದಂತಹ ಮಕ್ಕಳನ್ನು ಅಪಾಯಕ್ಕೆ ಸಿಲುಕಿಸುವ ವಿಷಯವನ್ನು ಒಳಗೊಂಡಿರುವುದು ಕಂಡುಬಂದಿದೆ.

ಲಕ್ಷಾಂತರ ಯೂಟ್ಯೂಬ್ ಚಾನೆಲ್‌ಗಳು ಬಂದ್!

ಯೂಟ್ಯೂಬ್ ವಿಡಿಯೋಗಳನ್ನು ಮಾತ್ರ ತೆಗೆದುಹಾಕಿಲ್ಲ. ಇದಲ್ಲದೆ, 48 ಲಕ್ಷ (4.8 ಮಿಲಿಯನ್) ಚಾನೆಲ್‌ಗಳನ್ನು ತನ್ನ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಿದೆ. ಈ ಚಾನಲ್‌ಗಳು ಸ್ಪ್ಯಾಮ್ ಅಥವಾ ವಂಚನೆಗೆ ಸಂಬಂಧಿಸಿದ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿವೆ ಎಂದು ಯೂಟ್ಯೂಬ್ ಹೇಳಿದೆ. ವಿಶೇಷವೆಂದರೆ, ಯೂಟ್ಯೂಬ್‌ನಿಂದ ಒಂದು ಚಾನೆಲ್ ಅಳಿಸಿಹೋದರೆ, ಆ ಚಾನೆಲ್‌ಗೆ ಅಪ್ಲೋಡ್ ಮಾಡಲಾದ ಎಲ್ಲಾ ವಿಡಿಯೋಗಳು ಸಹ ಸ್ವಯಂಚಾಲಿತವಾಗಿ ಡಿಲೀಟ್ ಆಗುತ್ತವೆ. ಬಳಕೆದಾರರಿಗೆ ಪಾರದರ್ಶಕ ಮತ್ತು ಸುರಕ್ಷಿತವಾಗಿಡಲು ಯೂಟ್ಯೂಬ್ ಕಾಲಕಾಲಕ್ಕೆ ಈ ಕ್ರಮ ತೆಗೆದುಕೊಳ್ಳುವುದಾಗಿ ಗೂಗಲ್‌ನ ವಿಡಿಯೋ ಪ್ಲಾಟ್‌ಫಾರ್ಮ್ ತಿಳಿಸಿದೆ.

48 ಲಕ್ಷ Youtube ಚಾನೆಲ್‌ ಬಂದ್.. 29 ಲಕ್ಷ ವಿಡಿಯೋ ಡಿಲೀಟ್.. ಯಾಕೆ ಗೊತ್ತಾ?

ಕಂಟೆಂಟ್ ಕ್ರಿಯೇಟರ್ಸ್‌ ವಿರುದ್ಧ ಕಠಿಣ ಕ್ರಮ

ಹಲವರ ನೆಚ್ಚಿನ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ ಈಗಾಗಲೇ ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತೀಯ ಕಂಟೆಂಟ್ ಕ್ರಿಯೇಟರ್ಸ್‌ ಮತ್ತು ಬಳಕೆದಾರರಿಗೆ ದೊಡ್ಡ ಶಾಕಿಂಗ್ ಸುದ್ದಿ ನೀಡಿತ್ತು. ಕ್ಲಿಕ್‌ಬೈಟ್ ಶೀರ್ಷಿಕೆ ಅಥವಾ ಥಂಬ್‌ನೇಲ್‌ನೊಂದಿಗೆ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡುವ ಕಂಟೆಂಟ್ ಕ್ರಿಯೇಟರ್ಸ್‌ ಮತ್ತು ಬಳಕೆದಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದೆ. ಥಂಬ್‌ನೇಲ್‌ ಬಳಸುವಾಗ ಎಚ್ಚರದಿಂದರಬೇಕಿದೆ. ತನ್ನ ಬ್ಲಾಗ್ ಪೋಸ್ಟ್‌ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಥಂಬ್‌ನೇಲ್‌ಗಳಿಂದ ಮೋಸ ಹೋಗುತ್ತಿದ್ದಾರೆ

ನೀವು ಅಪ್ಲೋಡ್‌ ಮಾಡುವ ವಿಡಿಯೋಗೆ ಸಂಬಂಧವಿಲ್ಲದ ಶೀರ್ಷಿಕೆ ಅಥವಾ ಥಂಬ್‌ನೇಲ್‌ ಬಳಸಿದರೆ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎನ್ನುವುದನ್ನು ಯೂಟ್ಯೂಬ್‌ ಸ್ಪಷ್ಟವಾಗಿದೆ. ಬ್ರೇಕಿಂಗ್ ನ್ಯೂಸ್ ಅಥವಾ ಇತರೆ ಪ್ರಸ್ತುತ ಘಟನೆಗಳ ಸಮಯದಲ್ಲಿ ಈ ರೀತಿಯ ಸನ್ನಿವೇಶಗಳು ಬಹುತೇಕ ಸಾಮಾನ್ಯವಾಗಿದೆ. ಯಾವುದೇ ತುರ್ತು ಅಥವಾ ಪ್ರಮುಖ ಸಮಯದಲ್ಲಿ ಸಂಪೂರ್ಣ ವಿವರಗಳನ್ನು ತಿಳಿಯಲು ಯೂಟ್ಯೂಬ್‌ಗೆ ಬರುವ ಬಳಕೆದಾರರು ಈ ರೀತಿಯ ಶೀರ್ಷಿಕೆಗಳು ಮತ್ತು ಥಂಬ್‌ನೇಲ್‌ಗಳಿಂದ ಮೋಸ ಹೋಗುತ್ತಾರೆ ಎಂದು ಯೂಟ್ಯೂಬ್‌ ಹೇಳಿದೆ. ಕೆಲವು ಕಂಟೆಂಟ್ ಕ್ರಿಯೇಟರ್ಸ್‌ ಈ ರೀತಿಯ ವಿಷಯದೊಂದಿಗೆ ಬಳಕೆದಾರರನ್ನು ದಾರಿತಪ್ಪಿಸುತ್ತದೆ ಎಂದು ಯೂಟ್ಯೂಬ್‌ ತನ್ನ ಬ್ಲಾಗ್‌ನಲ್ಲಿ ತಿಳಿಸಿದೆ.

Best Mobiles in India

English summary
Big shock: YouTube removed over 29 lakh videos in India, also removed 48 Lakh Channels: what is the reason
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+