ಗ್ಲ್ಯಾನ್ಸ್‌ ಆಪ್‌ : ಸ್ಮಾರ್ಟ್‌ಫೋನಿನಲ್ಲಿ ಮನರಂಜನೆಯ ಡಿಜಿಟಲ್ ಡೋರ್!

|

ಪ್ರಸ್ತುತ ಸ್ಮಾರ್ಟ್‌ಫೋನ್ ಮನರಂಜನೆಯ ಒದಗಿಸುವ ಒಂದು ಅತ್ಯುತ್ತಮ ಡಿವೈಸ್‌ ಎನ್ನುವುದರಲ್ಲಿ ಎರಡು ಮಾತಿಲ್ಲ. ಸ್ಮಾರ್ಟ್‌ಫೋನಿನಲ್ಲಿ ಸಮಾಚಾರ್, ವಿಡಿಯೊ ಕಂಟೆಂಟ್, ಫೋಟೊ ಕಂಟೆಂಟ್, ಮ್ಯೂಸಿಕ್, ಸೇರಿದಂತೆ ಅಗತ್ಯ ಮಾಹಿತಿಗಳು ಸರ್ಚ್ ಮಾಡಿ ಪಡೆಯಬಹುದಾಗಿದೆ. ಆದ್ರೆ, ಸ್ಮಾರ್ಟ್‌ಫೋನ್ ಲಾಕ್ ಸ್ಕ್ರೀನ್ ತೆರೆಯದಿದ್ದರೇ, ಯಾವ ಮನರಂಜನೆಯು ಇರಲ್ಲ ಅಲ್ಲವೇ?.ಆದರೆ ಲಾಕ್‌ಸ್ಕ್ರೀನ್‌ನಲ್ಲಿಯೇ ಮನರಂಜನೆ, ಮಾಹಿತಿ ಪಡೆಯಲು ಸಾಧ್ಯ.

ಸ್ಮಾರ್ಟ್‌ಫೋನ್ ಲಾಕ್‌ಸ್ಕ್ರೀನ್‌

ಹೌದು, ಮಾರುಕಟ್ಟೆಗೆ ಗ್ಲ್ಯಾನ್ಸ್‌ ಆಪ್ ಎಂಟ್ರಿ ಕೊಟ್ಟಿದ್ದು, ಲಾಕ್‌ ಸ್ಕ್ರೀನ್‌ನಲ್ಲಿಯೂ ಸ್ಮಾರ್ಟ್‌ಫೋನ್‌ಗಳಲ್ಲಿ ಫೋಟೊ ಮಾಹಿತಿ ಕಾಣಿಸುವ ಪ್ಲಾಟ್‌ಫಾರ್ಮ್‌ ಇದಾಗಿದೆ. ಗ್ಲ್ಯಾನ್ಸ್‌ AI ಆಧಾರಿಯ ಆಪ್‌ ಆಗಿದ್ದು, ಸ್ಮಾರ್ಟ್‌ಫೋನ್ ಲಾಕ್‌ಸ್ಕ್ರೀನ್‌ನಲ್ಲಿಯೂ ಫೋಟೊ ಕಂಟೆಂಟ್‌, ನ್ಯೂಸ್‌ ಕಂಟೆಂಟ್ ಸೇರಿದಂತೆ ಅಗತ್ಯ ಮನರಂಜನೆಯ ಒದಗಿಸುವ ಸೌಲಭ್ಯ ಹೊಂದಿದೆ. ಸಂಪೂರ್ಣ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಸೆಟ್‌ ಮಾಡಿಕೊಳ್ಳಬಹುದು.

ಗ್ಲ್ಯಾನ್ಸ್‌ ಆಪ್‌

ಸ್ಯಾಮ್‌ಸಂಗ್ ಮತ್ತು ಶಿಯೋಮಿಯ ಕೆಲವು ಇತ್ತೀಚಿನ ನೂತನ ಸ್ಮಾರ್ಟ್‌ಫೋನ್‌ಗಳು ಇನ್‌ಬಿಲ್ಟ್‌ 'ಗ್ಲ್ಯಾನ್ಸ್‌ ಆಪ್‌' ಆಯ್ಕೆಯನ್ನು ಹೊಂದಿದ್ದು, ಲಾಕ್‌ಸ್ಕ್ರೀನಿನಲ್ಲಿಯೇ ಮಾಹಿತಿಪೂರ್ಣ ಚಿತ್ರಗಳನ್ನು ಮತ್ತು ಸುದ್ದಿಯ ಹೂರಣವನ್ನು ಒದಗಿಸುತ್ತದೆ. ಆ ಕುರಿತು ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಸ್ಯಾಮ್‌ಸಂಗ್‌ನಲ್ಲಾದರೇ ಡೌನ್‌ ಸ್ವಿಪ್ ಮಾಡಬೇಕು. ಅದೇ ಶಿಯೋಮಿ ಸ್ಮಾರ್ಟ್‌ಫೋನ್‌ಗಳಲ್ಲಾದರೇ ಬಲಕ್ಕೆ ಸ್ವಿಪ್‌ ಮಾಡಿಬೇಕು.

ಕಂಟೆಂಟ್‌ ಮತ್ತು ವಿಡಿಯೊ

ಗ್ಲ್ಯಾನ್ಸ್‌ ಆಪ್‌ ಸ್ಮಾರ್ಟ್‌ಫೋನ್‌ ಬಳಕೆದಾರರ ಆಸಕ್ತಿ ಮತ್ತು ಅಭಿರುಚಿಗೆ ಅನುಗುಣವಾಗಿ ಕಂಟೆಂಟ್‌ ಮತ್ತು ವಿಡಿಯೊ ಡಿಸ್‌ಪ್ಲೇ ಮಾಡುತ್ತದೆ. ಪ್ರತಿ ಬಾರಿ ಫೋನ್ ಲಾಕ್ ತೆರೆದಾಗಲೂ ಹೊಸ ಕಂಟೆಂಟ್ ಮತ್ತು ಹೊಸ ಚಿತ್ರ ಬಳಕೆದಾರರಿಗೆ ಮುದ ನೀಡುತ್ತದೆ. ನ್ಯೂಸ್ ಸೇರಿದಂತೆ ಇತರೆ ಕಂಟೆಂಟ್‌ಗಳನ್ನು ತೋರಿಸುವ ರೀತಿ ಸಹಜವಾಗಿ ಬಳಕೆದಾರರನ್ನು ಆಕರ್ಷಿಸುವಂತಿದ್ದು, ಹಾಗೆಯೇ ಕಂಟೆಂಟ್‌ಗೆ ಸೂಕ್ತ ಚಿತ್ರಗಳು ಸಹ ರಿಚ್‌ ಲುಕ್‌ನಲ್ಲಿರುತ್ತವೆ.

19ಕ್ಕೂ ಅಧಿಕ ಕಂಟೆಂಟ್‌ ಕೇಟಗರಿ

ಗ್ರಾಹಕರು ಅವರಿಗೆ ಅಗತ್ಯ ಅನಿಸುವ ವಿಷಯಗಳನ್ನು ಲಾಕ್‌ಸ್ಕ್ರೀನ್‌ನಲ್ಲಿ ಬರುವಂತೆ ಸೆಟ್‌ ಮಾಡಿಕೊಳ್ಳಬಹುದಾದ ಆಯ್ಕೆ ನೀಡಲಾಗಿದೆ. ಗ್ಲ್ಯಾನ್ಸ್‌ ಆಪ್‌ನಲ್ಲಿ ಸ್ಪೋರ್ಟ್ಸ್‌, ಗೇಮ್‌ ಸೇರಿದಂತೆ ಇತರೆ ಒಟ್ಟು 19ಕ್ಕೂ ಅಧಿಕ ಕಂಟೆಂಟ್‌ ಕೇಟಗರಿ ಆಯ್ಕೆಗಳನ್ನು ಒದಗಿಸಲಾಗಿದೆ. ಅವುಗಳಲ್ಲಿ ಮುಖ್ಯವಾಗಿ ಗ್ಲಾಮರ್, ಸಿನಿಮಾ, ಮನರಂಜನೆ, ಟ್ರಾವೆಲ್, ಸ್ಪೋರ್ಟ್ಸ್‌, ಫ್ಯಾಶನ್ ಮತ್ತು ವೈಲ್ಡ್‌ಲೈಫ್ ವಿಷಯಗಳು ಸೇರಿದಂತೆ ಇತರೆ ವಿಷಯಗಳು ಒಳಗೊಂಡಿವೆ. ಬಳಕೆದಾರರು ಒಮ್ಮೆ ತಮಗೆ ಬೇಕಾದ ವಿಷಯ ಸೆಟ್‌ ಮಾಡಿದರೇ ಸಾಕು ಪ್ರತಿ ಬಾರಿ ಲಾಕ್‌ ಸ್ಕ್ರೀನ್‌ನಲ್ಲಿ ಹೊಸ ಬದಲಾವಣೆ ಕಾಣಿಸುತ್ತವೆ.

ಮನರಂಜನೆಗೆ ಉತ್ತಮ

ಗ್ಲ್ಯಾನ್ಸ್‌ ಆಪ್‌ ಬಳಕೆದಾರರಿಗೆ ಸಂಪೂರ್ಣ ವೈಯಕ್ತಿಕವಾಗಿ ಅನಿಸಲಿದ್ದು, ಅವರ ಆಸಕ್ತಿಗೆ ಅನುಗುಣವಾಗಿ ಕಂಟೆಂಟ್‌ ಮತ್ತು ಚಿತ್ರಗಳ ಜೊತೆಗೆ ಶಾರ್ಟ್‌ ವಿಡಿಯೊ ಕಂಟೆಂಟ್‌ ಸಹ ನೋಡುವ ಆಯ್ಕೆಯನ್ನು ನೀಡಲಾಗಿದೆ. ಬಳಕೆದಾರರ ಆಸಕ್ತಿಯ ವಿಷಯಗಳ ಮೇಲೆ ಕೆಲವು ಸೆಕೆಂಡ್‌ಗಳ ಪುಟ್ಟ ವಿಡಿಯೊ ಕಂಟೆಂಟ್ ಲಭ್ಯವಾಗಲಿವೆ. ಬಳಕೆದಾರರ ಬ್ಯುಸಿ ಕೆಲಸದ ನಡುವೆಯೂ ಮನರಂಜನೆಗೆ ಉತ್ತಮ ಎನಿಸುವಂತೆ ಗ್ಲ್ಯಾನ್ಸ್‌ ಆಪ್ ನೆರವಾಗಲಿದೆ.

ಗ್ಲ್ಯಾನ್ಸ್‌ ಬೇಸರ ಎನಿಸುವುದಿಲ್ಲ

ಗ್ಲ್ಯಾನ್ಸ್‌ ಲಾಕ್‌ ಸ್ಕ್ರೀನ್ ಆಪ್ ಬಗ್ಗೆ ಕೊನೆದಾಗಿ ಹೇಳುವುದಾರೇ ಈ ಆಪ್‌ ಬಳಕೆದಾರರಿಗೆ ಅಗತ್ಯ, ಆಸಕ್ತಿ ಮತ್ತು ಅಭಿರುಚಿಗಳ ಮೇಲೆ ಕಂಟೆಂಟ್‌ ಒದಗಿಸುತ್ತದೆ. ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ ಬೇರೆ ಆಪ್ಸ್‌ಗಳನ್ನು ಮತ್ತು ವೆಬ್‌ಬ್ರೌಸ್‌ ಮಾಡುವ ಕೆಲಸವನ್ನು ದೂರವಾಗಿಸುವಂತಹ ಸೇವೆಗಳನ್ನು ಗ್ಲ್ಯಾನ್ಸ್‌ ಆಪ್‌ ಬಳಕೆದಾರರಿಗೆ ನೀಡುತ್ತದೆ. ಹೀಗಾಗಿ ಗ್ಲ್ಯಾನ್ಸ್‌ ಬೇಸರ ಎನಿಸುವುದಿಲ್ಲ. ಬದಲಾಗಿ ಬಹುಬೇಗನೆ ಫೇವರೇಟ್ ಸ್ಥಾನ ಗಿಟ್ಟಿಸಿಕೊಂಡು ಬಿಡುತ್ತದೆ. ಈ ಆಪ್‌ ಬಳಕೆದಾರರಿಗೆ ಇಷ್ಟವಾಗುತ್ತದೆ.

Best Mobiles in India

English summary
Glance, a one-of-its kind AI-powered Android lock screen service, comes into the picture. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X