Home
Apps

ಪ್ರಯಾಣಿಕರಿಗೆ ಬರೆ ಎಳೆದ ಸರಕಾರದ ನಿರ್ಧಾರ: ಓಲಾ-ಉಬರ್ ದರ ಡಬ್ಬಲ್

ಆಪ್ ಆಧಾರಿತ ಟ್ಯಾಕ್ಸಿ ಸೇವೆಗೆ ಬೆಂಗಳೂರಿಗರೂ ಫಿದಾ ಆಗಿದ್ದಲ್ಲದೇ, ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಶುರು ಮಾಡಿದರು. ಆಟೋ ಹಾಗೂ ಬಿಎಂಟಿಸಿ ಪ್ರಯಾಣದಿಂದ ಬೇಸರ ಹೊಂದಿದವರಿಗೆ ಆಪ್ ಟ್ಯಾಕ್ಸಿಗಳು ಆಹ್ಲಾದಕರ ಪ್ರಯಾಣವನ್ನು ನೀಡಿದ್ದವ

By Srinidhi

ಬೆಂಗಳೂರು ಮಹಾನಗರದ ಸಾರಿಗೆ ವ್ಯವಸ್ಥೆಗೆ ಚುರುಕು ಮುಟ್ಟಿಸಿದ್ದ ಆಪ್ ಆಧಾರಿತ ಟ್ಯಾಕ್ಸಿ ಸೇವೆಗೆ ಬೆಂಗಳೂರಿಗರೂ ಫಿದಾ ಆಗಿದ್ದಲ್ಲದೇ, ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಶುರು ಮಾಡಿದರು. ಆಟೋ ಹಾಗೂ ಬಿಎಂಟಿಸಿ ಪ್ರಯಾಣದಿಂದ ಬೇಸರ ಹೊಂದಿದವರಿಗೆ ಆಪ್ ಟ್ಯಾಕ್ಸಿಗಳು ಆಹ್ಲಾದಕರ ಪ್ರಯಾಣವನ್ನು ನೀಡಿದ್ದವು.

ಪ್ರಯಾಣಿಕರಿಗೆ ಬರೆ ಎಳೆದ ಸರಕಾರದ ನಿರ್ಧಾರ: ಓಲಾ-ಉಬರ್ ದರ ಡಬ್ಬಲ್

ಓದಿರಿ: ಜಿಯೋ ಡೇಟಾ ಸಾಲುತ್ತಿಲ್ಲವೇ? ಹೆಚ್ಚು ಡೇಟಾ ಪಡೆಯುವುದು ಹೇಗೆ?

ದಿನೇ ದಿನೇ ಊಬರ್ -ಓಲಾ ಖ್ಯಾತಿ ಹೆಚ್ಚುತ್ತಿದ್ದಂತೆ ಇತರೇ ಟ್ಯಾಕ್ಸಿ ಕಂಪನಿಗಳು ನಷ್ಟ ಅನುಭವಿಸಿದವು. ಈ ಹಿನ್ನಲೆಯಲ್ಲಿ ಮೊಬೈಲ್‌ ಆ್ಯಪ್‌ ಆಧರಿತ ಕಂಪೆನಿಗಳ ಟ್ಯಾಕ್ಸಿಗಳಿಗೆ ಕನಿಷ್ಠ ಹಾಗೂ ಗರಿಷ್ಠ ಪ್ರಯಾಣದರವನ್ನು ನಿಗದಿಪಡಿಸಲು ಸಾರಿಗೆ ಇಲಾಖೆ ಮುಂದಾಗಿದೆ.

ಟ್ಯಾಕ್ಸಿಗಳ ಪ್ರಯಾಣ ದರ ದುಬಾರಿ

ಟ್ಯಾಕ್ಸಿಗಳ ಪ್ರಯಾಣ ದರ ದುಬಾರಿ

ಸಾರಿಗೆ ಇಲಾಖೆಯ ಆಯುಕ್ತರು ಕನಿಷ್ಠ ಹಾಗೂ ಗರಿಷ್ಠ ಪ್ರಯಾಣ ದರವನ್ನು ನಿಗದಿಪಡಿಸಲು ಪ್ರಧಾನ ಕಾರ್ಯದರ್ಶಿಗೆ ಹೊಸದೊಂದು ಪ್ರಸ್ತಾವ ಸಲ್ಲಿಸಿದ್ದು, ಅದಕ್ಕೆ ಒಪ್ಪಿಗೆ ಸಿಕ್ಕರೆ ಟ್ಯಾಕ್ಸಿಗಳ ಪ್ರಯಾಣ ದರ ದುಬಾರಿಯಾಗಲಿದೆ.

ಪ್ರಯಾಣಿಕರ ವಿರೋಧ:

ಪ್ರಯಾಣಿಕರ ವಿರೋಧ:

ಒಂದು ವೇಳೆ ದರ ಹೆಚ್ಚಾಗಿದ್ದರೇ ಕಡಿಮೆ ಮಾಡಲು ಸರಕಾರವೂ ಮುಂದಾಗಬೇಕು. ಆದರೆ ದರಗಳು ಕಡಿಮೆ ಸಂದರ್ಭದಲ್ಲಿ ಅದನ್ನು ಹೆಚ್ಚು ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಯಾಣಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕನಿಷ್ಠ ಪ್ರಯಾಣ ದರದ ಅಗತ್ಯವಿಲ್ಲ. ಗರಿಷ್ಠ ದರವನ್ನು ಮಾತ್ರನಿಗದಿಪಡಿಸಬೇಕು ಎನ್ನುತ್ತಿದ್ದಾರೆ.

ಡಬ್ಬಲ್ ಆಗಲಿದೆ:

ಡಬ್ಬಲ್ ಆಗಲಿದೆ:

ಸದ್ಯ ನಗರದಲ್ಲಿ ಓಲಾ, ಉಬರ್‌, ಹೈ ಕಂಪೆನಿಗಳು ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುತ್ತಿವೆ. ಇವು ಸದ್ಯ ಕಿ.ಮೀ ರೂ.6 ರಿಂದ ಪ್ರಯಾಣಿಕರಿಗೆ ಸೇವೆ ನೀಡುತ್ತಿವೆ ಆದರೆ ಈಗ ಕನಿಷ್ಠ ದರ ರೂ. 12 ಹಾಗೂ ಗರಿಷ್ಠ ರೂ. 25 ಮಾಡಬೇಕು ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ

ಬೆಲೆಯಲ್ಲಿ ಭಾರೀ ವ್ಯತ್ಯಾಸ:

ಬೆಲೆಯಲ್ಲಿ ಭಾರೀ ವ್ಯತ್ಯಾಸ:

  • ಓಲಾ ಮೈಕ್ರೊ - ಉಬರ್‌ ಗೋ ಸೇವೆ:ಹಿಂದೆ ಕಿ.ಮೀಗೆ ರೂ. 6 ಈಗ ಕನಿಷ್ಠ ರೂ. 12 ಹಾಗೂ ಗರಿಷ್ಠ ರೂ. 23 ಮಾಡಲಾಗಿದೆ.
  • ಓಲಾ ಮಿನಿ - ಉಬರ್‌ ಎಕ್ಸ್‌ ಸೇವೆ: ಹಿಂದೆ ಕಿ.ಮೀಗೆ ರೂ.8 ಇದ್ದದ್ದು, ಈಗ ಕನಿಷ್ಠ ರೂ.13 ಮತ್ತು ಗರಿಷ್ಠ ರೂ. 25 ನಿಗದಿಪಡಿಸಲಾಗಿದೆ.
  • ಓಲಾ ಪ್ರೈಮ್‌ - ಉಬರ್‌ ಎಕ್ಸ್‌ಎಲ್‌ ಸೇವೆ: ಮೊದಲು ರೂ.10 ಇದ್ದದ್ದು, ಈಗ ಕನಿಷ್ಠ ರೂ. 14 ಹಾಗೂ ಗರಿಷ್ಠ ರೂ. 26 ಮಾಡಲಾಗಿದೆ.
  • ಐಷಾರಾಮಿ ಟ್ಯಾಕ್ಸಿ: ಪ್ರತಿ ಕಿ.ಮೀ ದರವು ರೂ. 25 ರಿಂದ ರೂ. 30 ನಿಗಧಿಯಾಗಿದೆ.

Best Mobiles in India

English summary
Plagued by protesting drivers across the country, cab aggregators Ola and Uber have hiked fares by 50-70 per cent. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+