Home
Apps

ಹೋಳಿ ಹಬ್ಬದ ಫೋಟೊಗಳನ್ನು ಎಡಿಟ್ ಮಾಡಲು ಬೆಸ್ಟ್ ಆಪ್ಸ್‌!

ಬಣ್ಣಗಳ ಹಬ್ಬ ಹೋಳಿ ಹಬ್ಬದಲ್ಲಿ ಎಲ್ಲೆಲ್ಲೂ ರಂಗು ರಂಗಿನ ಚಿತ್ತಾರ. ಈ ವೇಳೆ ಫೋಟೊಗ್ರಾಫ್‌ಗೆ ಅತ್ಯುತ್ತಮ ಸಮಯ, ಬಣ್ಣಗಳ ಎರಚಾಟವನ್ನು ಕ್ಯಾಂಡಿಡ್ ದೃಶ್ಯಗಳಲ್ಲಿ ಸೆರೆಹಿಡಿಯುವ ಅವಕಾಶ. ಸಂಭ್ರಮದ ವಾತಾವರಣ, ಎಲ್ಲರ ಮುಖದಲ್ಲಿಯೂ ನಗು ಫೋಟೊಗೆ ಬೆಸ್ಟ್‌ ಅನಿಸಲಿದೆ. ಇನ್ನು ಕೆಲವರು ಹೋಳಿ ಹಬ್ಬದಲ್ಲಿ ಸೆರೆಹಿಡಿದ ಅಪರೂಪದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಬಯಸುತ್ತಾರೆ. ಏನೇ ಆದರು ಫೋಟೊಗಳನ್ನು ಎಡಿಟ್ ಮಾಡಿ ಅಂದವನ್ನು ಇನ್ನಷ್ಟು ಹೆಚ್ಚಿಸಬಹುದು.

ಹೋಳಿ ಹಬ್ಬ

ಹೋಳಿ ಹಬ್ಬದಲ್ಲಿ ನೀವು ಸೆರೆಹಿಡಿದ ಫೋಟೊಗಳನ್ನು ಕ್ವಿಕ್ ಆಗಿ ಎಡಿಟ್ ಮಾಡಲು ಅನೇಕ ಅಪ್ಲಿಕೇಶನ್‌ಗಳು ಲಭ್ಯ ಇವೆ. ಈ ಆಪ್ಸ್‌ ಮೂಲಕ ಬಳಕೆದಾರರು ಸುಲಭವಾಗಿ ಫೋಟೊಗಳನ್ನು ಎಡಿಟ್ ಮಾಡುವ ಮೂಲಕ ಬಣ್ಣಗಳ ರಂಗನ್ನು ಹೆಚ್ಚಿಸಬಹುದು. ಈ ನಿಟ್ಟಿನಲ್ಲಿ ಇಂದಿನ ಈ ಲೇಖನದಲ್ಲಿ ಹೋಳಿ ರಂಗನ್ನು ಹೆಚ್ಚಿಸಲು ಅನುಕೂಲ ಮಾಡುವ ಬೆಸ್ಟ್ ಫೋಟೊ ಎಡಿಟ್ ಅಪ್ಲಿಕೇಶನ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಮುಂದೆ ಓದಿರಿ.

ಅಡೊಬ್ ಲೈಟ್‌ರೂಮ್

ಅಡೊಬ್ ಲೈಟ್‌ರೂಮ್

ಅಡೊಬ್ ಲೈಟ್‌ರೂಮ್ ಫೋಟೊ ಎಡಿಟಿಂಗ್ ಆಪ್ ಫೋಟೊ ಎಡಿಟಿಂಗ್‌ಗೆ ಒಂದು ಅತ್ಯುತ್ತಮ ತಾಣವಾಗಿದೆ. ಇಲ್ಲಿ ಬಳಕೆದಾರರು ಕ್ಲೌಡ್‌ಬೇಸ್‌ ಆವೃತ್ತಿಯಲ್ಲಿ ಸುಲಭವಾಗಿ ಫೋಟೊ ಎಡಿಟ್ ಮಾಡಬಹುದಾಗ ಆಯ್ಕೆಗಳಿವೆ. ಈ ಆಪ್‌ ಆಂಡ್ರಾಯ್ಡ್ ಮತ್ತು ಐಓಎಸ್‌ ಆವೃತ್ತಿಯ ಓಎಸ್‌ಗಳೆರಡರಲ್ಲಿಯೂ ಲಭ್ಯ ವಿದೆ. RAW ಫೋಟೊಗಳನ್ನು ಸಹ ಎಡಿಟ್ ಮಾಡಬಹುದು. ವಾಟರ್‌ಮಾರ್ಕ್, ಎಕ್ಸ್‌ಪೊಜರ್ ಅಡ್ಜಸ್ಟ್‍ಮೆಂಟ್ ಆಯ್ಕೆಗಳಿವೆ.

ಪಿಕ್ಸಲರ್ ಎಕ್ಸ್‌ಪ್ರೆಸ್‌

ಪಿಕ್ಸಲರ್ ಎಕ್ಸ್‌ಪ್ರೆಸ್‌

ಈ ಪಿಕ್ಸಲರ್‌ ಎಕ್ಸ್‌ಪ್ರೆಸ್‌ ಅಪ್ಲಿಕೇಶನ್‌ನಲ್ಲಿ ಸಾಕಷ್ಟು ಎಫೆಕ್ಟ್ ಆಯ್ಕೆಗಳು, ಓವರ್‌ಲೇಯರ್, ಬಾರ್ಡರ್ ಆಯ್ಕೆಗಳು ಲಭ್ಯ ಇವೆ. ಫೋಟೊ ಎಡಿಟ್ ಮುಗಿದ ಬಳಿಕ ಫೋಟೊ ಶೇರ್ ಮಾಡಲು ನೇರ ಆಯ್ಕೆಗಳು ಇವೆ. ಇನ್ನು ಈ ಆಪ್‌ನಲ್ಲಿ ಅಡ್ಜೆಸ್ಟಮೆಂಟ್‌, ಎಫೆಕ್ಸ್ಟ್, ಬಾರ್ಡರ್ ಮತ್ತು ಓವರ್‌ಲೇಯ್ಸ್ ಎಂಬ ನಾಲ್ಕು ಕೇಟಗರಿಗಳು ಇವೆ.

Lens Distortions

Lens Distortions

ಲೆನ್ಸ್‌ ಡಿಸ್ಟೊರೇಷನ್ ಆಪ್ ಸಹ ಫೋಟೊ ಎಡಿಟಿಂಗ್‌ಗೆ ಒಂದು ಉತ್ತಮ ಪ್ಲಾಟ್‌ಫಾರ್ಮ್ ಆಗಿದೆ. ಈ ಆಪ್‌ನಲ್ಲಿ ಕೆಲವು ವಿಶಿಷ್ಟ ಫೋಟೊ ಎಡಿಟಿಂಗ್ ಆಯ್ಕೆಗಳು ಲಭ್ಯ ಇವೆ. ಕಲರ್‌ ಫಿಲ್ಟರ್, ಲೈಟ್‌ ಲೀಕ್ ನಂತಹ ಓವರ್‌ಲೇ-overlay ಎಫೆಕ್ಟ್‌ ಆಯ್ಕೆಗಳನ್ನು ಹೊಂದಿದೆ. ಹಾಗೆಯೇ ಐದು ಫೋಟೊ ಫಿಲ್ಟರ್ ಆಯ್ಕೆಗಳಿವೆ. ಈ ಆಪ್‌ ಅನ್ನು ಉಚಿತವಾಗಿ ಇನ್‌ಸ್ಟಾಲ್‌ ಮಾಡಿಕೊಳ್ಳಬಹುದು.

ಅವಿಯರಿ ಫೋಟೊ ಎಡಿಟರ್-Aviary Photo Editor

ಅವಿಯರಿ ಫೋಟೊ ಎಡಿಟರ್-Aviary Photo Editor

ಈ ಫೋಟೊ ಎಡಿಟಿಂಗ್ ಆಪ್ ಸಹ ಬೇಸಿಕ್ ಎಡಿಟಿಂಗ್ ಸೌಲಭ್ಯಗಳನ್ನು ಒಳಗೊಂಡಿದೆ ಹಾಗೂ ಕೆಲವು ವಿಶೇಷ ಫೀಚರ್ಸ್‌ಗಳನ್ನು ಹೊಂದಿದೆ. ರೆಡ್‌ ಐ ರಿಮೂವಲ್ ಟೂಲ್ ಆಯ್ಕೆ ಸಹ ಇದೆ. ಹಾಗೆಯೇ ಕ್ರಾಪ್, ಕಾಂಟ್ರಾಸ್ಟ್‌ ನಂತಹ ಆಯ್ಕೆಗಳು ಇವೆ.

ಹೈಪೋಕ್ಯಾಮ್-Hypocam

ಹೈಪೋಕ್ಯಾಮ್-Hypocam

ಹೈಪೋಕ್ಯಾಮ್ ಅಪ್ಲಿಕೇಶನ್ ಹಲವು ಭಿನ್ನ ಎಡಿಟಿಂಗ್ ಆಯ್ಕೆಗಳನ್ನು ಹೊಂದಿದ್ದು, ಮುಖ್ಯವಾಗಿ ಬ್ಲ್ಯಾಕ್‌ ಆಂಡ್ ವೈಟ್ ಫೋಟೊಗ್ರಫಿಗಳಿಗೆ ಉತ್ತಮ ಪ್ಲಾಟ್‌ಫಾರ್ಮ್ ಒದಗಿಸಲಿದೆ. ಬಳಕೆದಾರರು ಈ ಆಪ್ ಮೂಲಕ ಸುಲಭವಾಗಿ ಫೋಟೊ ಎಡಿಟ್ ಮಾಡಬಹುದು. ಕಲ್ಪನೆಯ ಚಿತ್ರಗಳ ಎಡಿಟಿಂಗ್‌ಗೆ ಪೂರಕವಾಗಿದೆ.

Best Mobiles in India

English summary
Make your Holi photos more vibrant and colourful with these applications on your phone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+