ಇಂದಿರಾ ಕ್ಯಾಂಟೀನ್‌ನಲ್ಲಿ ಇಂದಿನ ಸ್ಪೆಷಲ್ ಏನು? ಆಪ್ ನಲ್ಲಿ ಫುಲ್ ಡಿಟೈಲ್ಸ್.!
‘ಇಂದಿರಾ ಕ್ಯಾಂಟೀನ್’ ಸೇವೆಯೂ ಆರಂಭವಾಗಿದ್ದು, ಇನ್ನು ಹಲವು ಕಡೆಗಳಲ್ಲಿ ಶೀಘ್ರವೇ ಸೇವೆ ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಈ ಆಪ್ ನ ಕುರಿತದ ಮಾಹಿತಿಯೂ ಇಲ್ಲಿದೆ.
ಬೆಂಗಳೂರಿನಲ್ಲಿ ರಾಜ್ಯ ಸರಕಾರದ ವತಿಯಿಂದ ಆರಂಭಿಸಲಾಗಿರುವ 'ಇಂದಿರಾ ಕ್ಯಾಂಟೀನ್' ಕುರಿತ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುವ ಆಪ್ ವೊಂದನ್ನು BBMP ಲಾಂಚ್ ಮಾಡಿದೆ. ಇಲ್ಲಿ ಕ್ಯಾಂಟೀನ್ ನಲ್ಲಿ ದೊರೆಯುವ ಮೆನುವಿನಿಂದ ಹಿಡಿದು ಎಲ್ಲಾ ಮಾಹಿತಿಗಳು ದೊರೆಯುತ್ತಿದೆ.

ಓದಿರಿ: ಸೆಪ್ಟೆಂಬರ್ ನಿಂದ ಜಿಯೋ DTH ಶುರು: ಒಂದು ವರ್ಷ ಉಚಿತ ಸೇವೆ?
ಈಗಾಗಲೇ ನಗರದ ಹಲವಾರು ಭಾಗದಲ್ಲಿ 'ಇಂದಿರಾ ಕ್ಯಾಂಟೀನ್' ಸೇವೆಯೂ ಆರಂಭವಾಗಿದ್ದು, ಇನ್ನು ಹಲವು ಕಡೆಗಳಲ್ಲಿ ಶೀಘ್ರವೇ ಸೇವೆ ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಈ ಆಪ್ ನ ಕುರಿತದ ಮಾಹಿತಿಯೂ ಇಲ್ಲಿದೆ.

ಪ್ಲೇ ಸ್ಟೋರಿನಲ್ಲಿ ಲಭ್ಯ:
‘ಇಂದಿರಾ ಕ್ಯಾಂಟೀನ್' ಆಪ್ ಸದ್ಯ ಪ್ಲೇ ಸ್ಟೋರಿನಲ್ಲಿ ಲಭ್ಯವಿದ್ದು, ಇದರಲ್ಲಿ ಕ್ಯಾಂಟೀನ್‌ಗಳ ವಿಳಾಸ, ನಿಮ್ಮ ಸಮೀಪದಲ್ಲಿರುವ ಕ್ಯಾಂಟೀನ್‌ಗಳ ವಿವರ ಸೇರಿದಂತೆ ವಾರದಲ್ಲಿ ಯಾವ ದಿನ ಯಾವ ವಿಶೇಷ ತಿಂಗಳು ದೊರೆಯುತ್ತದೆ ಎಂಬುದರ ಸಂಫೂರ್ಣ ಮಾಹಿತಿ ಇರಲಿದೆ.

ರಿಜಿಸ್ಟರ್ ಆಗಬೇಕು:
ನೀವು ‘ಇಂದಿರಾ ಕ್ಯಾಂಟೀನ್' ಆಪ್ ಡೌನ್ ಲೋಡ್ ಮಾಡಿದ ನಂತರ ಅಲ್ಲಿರುವ ಮಾಹಿತಿಯನ್ನು ಪಡೆಯಬೇಕಾದರೆ ನೀವು ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ ರಿಜಿಸ್ಟರ್ ಆಗಬೇಕು. ಇಲ್ಲವಾದರೆ ಆಪ್ ಒಳಗೆ ಏನೀದೆ ಎಂದು ಇಣಿಕಿನೋಡಲು ಸಾಧ್ಯವಿಲ್ಲ.

ಆಫ್‌ಲೈನ್ ಸೇವೆ ಇಲ್ಲ:
BBMP ಡೆವಲಪ್ ಮಾಡಿಸಿರುವ ಈ ಆಪ್ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಕಾಣಿಸಿಕೊಳ್ಳಲಿದ್ದು, ಆನ್‌ಲೈನ್ ಇದ್ದರೇ ಮಾತ್ರವೇ ಕಾರ್ಯನಿರ್ವಹಿಸಲಿದೆ. ಆಫ್‌ಲೈನಿನಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಅಲ್ಲದೇ ನೀವು ಈ ಆಪ್ ಗೆ ರೇಟಿಂಗ್ ಸಹ ನೀಡಬಹುದಾಗಿದೆ.

ನಿಮ್ಮ ಅಭಿಪ್ರಾಯ ತಿಳಿಸಬಹುದು:
ಇಲ್ಲದೇ ನೀವು ‘ಇಂದಿರಾ ಕ್ಯಾಂಟೀನ್' ಭೇಟಿ ನೀಡಿದ ನಂತರದಲ್ಲಿ ಅಲ್ಲಿನ ಗುಣಮಟ್ಟ, ಸೌಲಭ್ಯಗಳ ಕುರಿತು ಅಭಿಪ್ರಾಯವನ್ನು ದಾಖಲಿಸಬಹುದು. ಅಲ್ಲದೇ ಸೇವೆಯನ್ನು ಇನಷ್ಟು ಉತ್ತಮಗೊಳಿಸಲು ನೀವು ಸಲಹೆಗಳನ್ನು ನೀಡಬಹುದು.


‘ಇಂದಿರಾ ಕ್ಯಾಂಟೀನ್’ ಜೊತೆ ಸೆಲ್ಫಿ:
ಇದಲ್ಲದೇ ನೀವು ‘ಇಂದಿರಾ ಕ್ಯಾಂಟೀನ್' ಭೇಟಿ ನೀಡಿದ ನಂತರದಲ್ಲಿ ಅಲ್ಲಿ ಒಂದು ಸೆಲ್ಫಿ ಕ್ಲಿಕಿಸಿಕೊಂಡು, ಫೋಟೋವನ್ನು ಆಪ್‌ನಲ್ಲಿ ಆಪ್‌ಲೋಡ್ ಮಾಡುವ ಅವಕಾಶವನ್ನು ಸಹ ಮಾಡಿಕೊಡಲಾಗಿದೆ.


Click it and Unblock the Notifications








